Infosys Prize 2022: ಪ್ರೊ.ಸುಧೀರ್‌, ಕಾಕಡೆ ಸೇರಿ 6 ಮಂದಿಗೆ ಇನ್ಫಿ ಪ್ರಶಸ್ತಿ

Published : Nov 16, 2022, 11:31 AM ISTUpdated : Nov 16, 2022, 11:32 AM IST
Infosys Prize 2022: ಪ್ರೊ.ಸುಧೀರ್‌, ಕಾಕಡೆ ಸೇರಿ 6 ಮಂದಿಗೆ ಇನ್ಫಿ ಪ್ರಶಸ್ತಿ

ಸಾರಾಂಶ

ಪ್ರೊ.ಸುಧೀರ್‌, ಕಾಕಡೆ ಸೇರಿ 6 ಮಂದಿಗೆ ಇನ್ಫಿ ಪ್ರಶಸ್ತಿ ಸುಮನ್‌, ನಿಸ್ಸೀಮ್‌, ರೋಹಿಣಿ, ವಿದಿತಾಗೂ ಗೌರವ  ಗಣಿತ ವಿಜ್ಞಾನ ಸಾಧಕರಿಗೆ ಇಸ್ಫೋಸಿಸ್‌ ಪ್ರಶಸ್ತಿ  ಜನವರಿಯಲ್ಲಿ ಬೆಂಗಳೂರಿನಲ್ಲಿ ಪ್ರದಾನ

ಬೆಂಗಳೂರು (ನ.16) : ಗಣಿತ ವಿಜ್ಞಾನ ಕ್ಷೇತ್ರದಲ್ಲಿ ಗಣನೀಯ ಸಾಧನೆ ಮಾಡಿರುವ ಬೆಂಗಳೂರಿನ ಮಹೇಶ್‌ ಕಾಕಡೆ ಮತ್ತು ಮಾನವಿಕ ಕ್ಷೇತ್ರದಲ್ಲಿ ಪ್ರೊ.ಸುಧೀರ್‌ ಕೃಷ್ಣಸ್ವಾಮಿ ಸೇರಿ ಆರು ಜನರು ಇಸ್ಫೋಸಿಸ್‌ ಸೈನ್ಸ್‌ ¶ೌಂಡೇಶನ್‌ ಕೊಡ ಮಾಡುವ ಪ್ರತಿಷ್ಠಿತ ‘2022ರ ಇಸ್ಫೋಸಿಸ್‌ ಪ್ರಶಸ್ತಿ’ಗೆ ಭಾಜನರಾಗಿದ್ದಾರೆ. ಇಸ್ಫೋಸಿಸ್‌ ಸಂಸ್ಥಾಪಕರಲ್ಲಿ ಒಬ್ಬರಾದ ನಾರಾಯಣ ಮೂರ್ತಿ ಹಾಗೂ ¶ೌಂಡೇಶನ್‌ ಟ್ರಸ್ಟಿಗಳು ಮಂಗಳವಾರ ಪ್ರಶಸ್ತಿಗೆ ಆಯ್ಕೆಯಾದವರ ವಿವರ ಪ್ರಕಟಿಸಿದರು.

‘ಎಂಜಿನಿಯರಿಂಗ್‌ ಕಂಪ್ಯೂಟರ್‌ ಸೈನ್ಸ್‌’ನಲ್ಲಿ ಐಐಟಿ ಖರಗಪುರದ ಸುಮನ್‌ ಚಕ್ರವರ್ತಿ, ‘ಜೀವ ವಿಜ್ಞಾನ’ ಕ್ಷೇತ್ರದಲ್ಲಿ ಮುಂಬೈನ ಟಾಟಾ ಇನ್‌ಸ್ಟಿಟ್ಯೂಟ್‌ ಆಫ್‌ ಫಂಡಮೆಂಟಲ್‌ ರಿಸಚ್‌ರ್‍ ಸಂಸ್ಥೆಯ ನರಜೈವಿಕ ಶಾಸ್ತ್ರಜ್ಞೆ ವಿದಿತಾ ವೈದ್ಯ ಆಯ್ಕೆಯಾಗಿದ್ದಾರೆ. ‘ಭೌತ ವಿಜ್ಞಾನ’ ವಿಭಾಗದಲ್ಲಿ ಪುಣೆ ನ್ಯಾಷನಲ್‌ ಸೆಂಟರ್‌ ಫಾರ್‌ ರೇಡಿಯೋ ಅಸ್ಟೊ್ರೕನಾಮಿ ವಿಭಾಗದ ನಿಸ್ಸೀಮ್‌ ಕಾನೇಕರ್‌, ‘ಸಮಾಜ ವಿಜ್ಞಾನ’ ವಿಭಾಗದಲ್ಲಿ ಅಮೆರಿಕದ ಯೇಲ್‌ ಯುನಿವರ್ಸಿಟಿಯ ರೋಹಿಣಿ ಪಾಂಡೆ ಪ್ರಶಸ್ತಿಗೆ ಭಾಜನರಾಗಿದ್ದಾರೆ.

ಭಿಡೆ ಯಾರೆಂದೇ ಗೊತ್ತಿರಲಿಲ್ಲ, ಹಿರಿಯರೆಂದು ನಮಸ್ಕರಿಸಿದೆ: ಸುಧಾಮೂರ್ತಿ

ಪುರಸ್ಕಾರವು 1 ಲಕ್ಷ ಡಾಲರ್‌, ಚಿನ್ನದ ಪದಕ, ಪ್ರಶಸ್ತಿ ಫಲಕವನ್ನು ಒಳಗೊಂಡಿದೆ. ಜನವರಿ ಮಾಸಾಂತ್ಯದಲ್ಲಿ ನಗರದ ಲೀಲಾವತಿ ಪ್ಯಾಲೇಸ್‌ನಲ್ಲಿ ನಡೆಯಲಿರುವ ಕಾರ್ಯಕ್ರಮದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುವುದು ಎಂದು ಟ್ರಸ್ಟಿಗಳು ತಿಳಿಸಿದರು.

ಮಹೇಶ್‌ ಕಾಕಡೆ ಅವರು ಬೆಂಗಳೂರು ಭಾರತೀಯ ವಿಜ್ಞಾನ ಸಂಸ್ಥೆಯಲ್ಲಿ ಪ್ರಾಧ್ಯಾಪಕರಾಗಿದ್ದು, ಬೀಜಗಣಿತ ಸಂಖ್ಯಾಸೂತ್ರಕ್ಕೆ ನೀಡಿದ ಗಮನಾರ್ಹ ಕೊಡುಗೆ ಪರಿಗಣಿಸಿ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ. ಅವರು ನೀಡಿರುವ ಸೂತ್ರ ಗೂಢಲಿಪಿ ಶಾಸ್ತ್ರದಲ್ಲಿ ಹೆಚ್ಚಿನ ಬಳಕೆ ಆಗುತ್ತಿದೆ.

ಬೆಂಗಳೂರಿನ ನ್ಯಾಷನಲ್‌ ಲಾ ಸ್ಕೂಲ್‌ ಆಫ್‌ ಇಂಡಿಯಾ ಯೂನಿವರ್ಸಿಟಿ ಕುಲಪತಿ ಪ್ರೊ. ಸುಧೀರ್‌ ಕೃಷ್ಣಸ್ವಾಮಿ ಅವರಿಗೆ 1973ರಲ್ಲಿ ಸುಪ್ರೀಂ ಕೋರ್ಚ್‌ ರೂಪಿಸಿದ ‘ಸಂವಿಧಾನದ ಮೂಲಸ್ವರೂಪ’ ತಾತ್ವಿಕತೆ ಕುರಿತ ಬರವಣಿಗೆಗೆ ಪ್ರಶಸ್ತಿ ನೀಡಲಾಗುತ್ತಿದೆ.

ಈ ಬಾರಿ ಒಟ್ಟೂ218 ಅರ್ಜಿಗಳು ಪ್ರಶಸ್ತಿಗಾಗಿ ಬಂದಿದ್ದವು. ತೀರ್ಪುಗಾರರಾದ ಪ್ರೊ. ಅರವಿಂದ್‌, ಪ್ರೊ. ಅಕೀಲ್‌ ಬಿಲಗ್ರಾಮಿ, ಪ್ರೊ. ಮೃಗಾಂಕಾ ಸುರ್‌, ಪ್ರೊ. ಚಂದ್ರಶೇಖರ ಖರೆ, ಪ್ರೊ.ಶ್ರೀನಿವಾಸ್‌ ಕುಲಕರ್ಣಿ, ಪ್ರೊ. ಕೌಶಿಕ್‌ ಬಸು ಅವರು ವಿಜೇತರನ್ನು ಆಯ್ಕೆ ಮಾಡಿದ್ದಾರೆ.

ವಿಜ್ಞಾನದಲ್ಲಿ ಇನ್ನಷ್ಟುಸಂಶೋಧನೆ ಅಗತ್ಯ: ಮೂರ್ತಿ

ಬೆಂಗಳೂರು: ವಿಜ್ಞಾನ, ತಂತ್ರಜ್ಞಾನ ಕ್ಷೇತ್ರದಲ್ಲಿ ಸಂಶೋಧನೆಗೆ ಹೆಚ್ಚು ಒತ್ತು ನೀಡುವ ಜತೆಗೆ ಶಾಲಾ ಕಾಲೇಜುಗಳಲ್ಲಿ ವಿದ್ಯಾರ್ಥಿಗಳಿಗೆ ಹೊರಜಗತ್ತು ಎದುರಿಸುವ ಸಮಸ್ಯೆಗಳನ್ನು ಬೇರುಮಟ್ಟದಲ್ಲಿ ಅರ್ಥೈಸಬೇಕಾಗಿದೆ ಎಂದು ಇಸ್ಫೋಸಿಸ್‌ ಸೈನ್ಸ್‌ ¶ೌಂಡೇಶನ್‌ ಟ್ರಸ್ಟಿನಾರಾಯಣ್‌ ಮೂರ್ತಿ ಹೇಳಿದರು.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ದೇಶದ ಸಂಶೋಧನಾ ಕ್ಷೇತ್ರ ಹೆಚ್ಚು ಪ್ರಗತಿ ಸಾಧಿಸುತ್ತಿದೆ. ಕೋವಿಡ್‌ ವ್ಯಾಕ್ಸಿನ್‌ ಕಂಡುಹಿಡಿಯುವಿಕೆ ಗುರುತರÜ ಸಾಧನೆಯಾಗಿದೆ. ಡಾ.ಕಸ್ತೂರಿ ರಂಗನ್‌ ನೇತೃತ್ವದ ವರದಿಯಂತೆ ನೂತನ ಶಿಕ್ಷಣ ನೀತಿ ಜಾರಿ ಆಗುತ್ತಿರುವುದು ಒಳ್ಳೆಯ ನಡೆ. ಆದರೆ, ಸಾಕಷ್ಟುಸಾಧನೆ ಬಳಿಕವೂ ಸವಾಲುಗಳು ನಮ್ಮೆದುರಿವೆ ಎಂದರು.

ಮೂನ್ ಲೈಟಿಂಗ್ ಮಾಡೋರು ರಾಜ್ಯ ಬಿಡಿ, ಟೆಕ್ಕಿಗಳಿಗೆ ಸಚಿವ ಅಶ್ವತ್ಥ ನಾರಾಯಣ್ ಖಡಕ್ ಎಚ್ಚರಿಕೆ

2022ರಲ್ಲಿ ಘೋಷಣೆಯಾದ ಗ್ಲೋಬಲ್‌ ರಾರ‍ಯಂಕಿಂಗ್‌ನಲ್ಲಿ ನಮ್ಮ ಯಾವುದೇ ಉನ್ನತ ಶೈಕ್ಷಣಿಕ ಸಂಸ್ಥೆಗಳು ಮೊದಲ 50ರಾರ‍ಯಂಕ್‌ನಲ್ಲಿ ಸ್ಥಾನ ಪಡೆದಿಲ್ಲ. ಡೆಂಘೀ, ಚಿಕೂನ್‌ಗುನ್ಯಾ ರೋಗಕ್ಕೆ ಈವರೆಗೂ ವ್ಯಾಕ್ಸಿನ್‌ ಕಂಡುಕೊಳ್ಳಲು ಸಾಧ್ಯವಾಗಿಲ್ಲ. ಗ್ಯಾಂಬಿಯಾದಲ್ಲಿ ನಮ್ಮ ದೇಶದಿಂದ ಪೂರೈಕೆಯಾಗಿದ್ದ ಕಾಫ್‌ ಸಿರಪ್‌ ಸೇವಿಸಿ 66 ಮಕ್ಕಳು ಅಸುನೀಗಿದ್ದು ಮುಜುಗರ ತರುವ ವಿಚಾರ. ಇದು ನಮ್ಮ ಫಾರ್ಮಾಸ್ಯೂಟಿಕಲ್‌ ಸಂಸ್ಥೆಗಳ ವಿಶ್ವಾಸಾರ್ಹತೆಗೆ ಧಕ್ಕೆ ತರುತ್ತದೆ. ಇಂಥವುಗಳನ್ನು ಮೀರಲು ಸಂಶೋಧನೆಗೆ ಇನ್ನಷ್ಟುಹೆಚ್ಚು ಒತ್ತು ನೀಡಬೇಕು. ಜಗತ್ತು ಎದುರಿಸುವ ಸಮಸ್ಯೆಗಳನ್ನು ನಿವಾರಿಸುವ ನಿಟ್ಟಿಯಲ್ಲಿ ಶಾಲಾ ಕಾಲೇಜುಗಳ ಬೋಧನೆ ಇರಬೇಕು ಎಂದರು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಡಿಜಿಪಿಯಾಗಿ ಅಲೋಕ್‌ ಕುಮಾರ್ ಮುಂಬಡ್ತಿ, ಸರ್ಕಾರದ ವಿರುದ್ಧ 8 ತಿಂಗಳ ಕಾನೂನು ಹೋರಾಟಕ್ಕೆ ಜಯ!
2.84 ಲಕ್ಷ ಹುದ್ದೆ ಖಾಲಿ ಇದ್ರೂ, ಶೇ.9 ಹುದ್ದೆಗಳ ನೇಮಕಾತಿಯನ್ನೇ ಪ್ರಚಾರಕ್ಕೆ ಬಳಸಿಕೊಂಡ ಸರ್ಕಾರ!