ಒಂದು ಧರ್ಮದ ಮತಕ್ಕಾಗಿ ಕೇಸರಿಗೆ ಕಾಂಗ್ರೆಸ್‌ ವಿರೋಧ; ಬಿ.ಸಿ.ನಾಗೇಶ್

Published : Nov 16, 2022, 01:18 PM IST
ಒಂದು ಧರ್ಮದ ಮತಕ್ಕಾಗಿ ಕೇಸರಿಗೆ ಕಾಂಗ್ರೆಸ್‌ ವಿರೋಧ; ಬಿ.ಸಿ.ನಾಗೇಶ್

ಸಾರಾಂಶ

ಯೋಗ, ಧ್ಯಾನಕ್ಕೂ ಕಾಂಗ್ರೆಸ್‌ ತಗಾದೆ  ಈಗ ಶಾಲೆಗೆ ಕೇಸರಿ ಬಣ್ಣಕ್ಕೂ ವಿರೋಧ ಈ ಬಗ್ಗೆ ನಾವಿನ್ನೂ ಆದೇಶವನ್ನೇ ಹೊರಡಿಸಿಲ್ಲ  ಕೇವಲ ರಾಜಕೀಯ ಕಾರಣಕ್ಕೆ ಹುಚ್ಚುಚ್ಚು ಮಾತು

ಬೆಂಗಳೂರು (ನ.16) : ಶಾಲೆಗಳಲ್ಲಿ ಯೋಗ ಕಲಿಕೆ, ಶಾಲಾ ಕಟ್ಟಡಗಳಿಗೆ ಕೇಸರಿ ಬಣ್ಣ ಬಳಿಯುವ ವಿಷಯದಲ್ಲಿ ಆಕ್ಷೇಪಿಸುತ್ತಿರುವ ಕಾಂಗ್ರೆಸ್‌, ಒಂದು ಧರ್ಮದ ಮತಕ್ಕಾಗಿ ಈ ರೀತಿಯ ವಿರೋಧ ಸರಿಯಲ್ಲ ಎಂದು ಶಾಲಾ ಶಿಕ್ಷಣ ಹಾಗೂ ಸಾಕ್ಷರತಾ ಸಚಿವ ಬಿ.ಸಿ.ನಾಗೇಶ್‌ ಹೇಳಿದ್ದಾರೆ.

ವಿಧಾನಸೌಧದಲ್ಲಿ ಸುದ್ದಿಗಾರರ ಜೊತೆ ಮಾತನಾಡಿದ ಅವರು, ‘ಶಾಲೆಗಳಲ್ಲಿ ಯೋಗ, ಧ್ಯಾನ ಕಲಿಸುವಿಕೆಯಿಂದ ಮಕ್ಕಳಿಗೆ ಏಕಾಗ್ರತೆ ಬರುತ್ತದೆ ಎಂದು ಬೇರೆ ಬೇರೆ ದೇಶಗಳಲ್ಲಿ ಧ್ಯಾನ ಅಳವಡಿಕೆ ಮಾಡಲಾಗಿದೆ. ಹಾಗಾಗಿ ಶಾಲೆಗಳಲ್ಲಿ ಧ್ಯಾನ ಮಾಡಬೇಕೆಂದು ಸೂಚಿಸಲಾಗಿದೆ. ಆದರೆ ಇದಕ್ಕೂ ಕಾಂಗ್ರೆಸ್‌ನವರು ವಿರೋಧ ವ್ಯಕ್ತಪಡಿಸುತ್ತಿದ್ದಾರೆ. ಈಗ ಹೊಸದಾಗಿ ‘ವಿವೇಕ’ ಹೆಸರಿನಲ್ಲಿ ಶಾಲಾ ಕೊಠಡಿ ನಿರ್ಮಿಸಲು ಶಂಕುಸ್ಥಾಪನೆ ಮಾಡಲಾಗಿದೆ. ಹೊಸದಾಗಿ ನಿರ್ಮಿಸುತ್ತಿರುವ ಶಾಲಾ ಕೊಠಡಿಗಳನ್ನು ಬ್ರ್ಯಾಂಡ್‌ ಮಾಡುವ ಉದ್ದೇಶವಿದೆ. ಈ ಶಾಲೆಗಳನ್ನು ಯಾವ ರೀತಿ ಕಟ್ಟಬೇಕು, ಯಾವ ಬಣ್ಣ ಬಳಿಯಬೇಕು ಎಂಬ ಬಗ್ಗೆ ಯಾವುದೇ ಸುತ್ತೋಲೆ ಹೊರಡಿಸಿಲ್ಲ. ವಿವೇಕಾನಂದ ತಮಗೆ ಇಷ್ಟವಿಲ್ಲ ಎಂಬ ಕಾರಣದಿಂದ ಅದರಲ್ಲೂ ಚುನಾವಣೆ ಹತ್ತಿರವಿರುವ ಕಾರಣ ಕೇಸರಿ ಬಣ್ಣ ಮುಂದಿಟ್ಟುಕೊಂಡು ಹೋಗುತ್ತಿದ್ದಾರೆ. ರಾಜಕೀಯ ಮಾಡಲು ಒಂದು ಮಿತಿ ಇದೆ. ಯಾವುದೋ ರಾಜಕೀಯ ಕಾರಣಕ್ಕಾಗಿ ಈ ರೀತಿ ಹುಚ್ಚುಚ್ಚಾಗಿ ಮಾತನಾಡುವುದನ್ನು ಕಾಂಗ್ರೆಸ್‌ನವರು ಬಿಡಬೇಕು’ ಎಂದು ಪ್ರತಿಕ್ರಿಯಿಸಿದರು.

Viveka Scheme Politics: ವಿವೇಕ ಯೋಜನೆ ಅವಿವೇಕದ ಪರಮಾವಧಿ: ಕಾಂಗ್ರೆಸ್‌

ವಿವೇಕ ಶಾಲೆಗಳಲ್ಲಿ ವಿವೇಕಾನಂದರ ಫೋಟೋ

ಬೆಂಗಳೂರು: ‘ವಿವೇಕ’ ಶಾಲೆಗಳಲ್ಲಿ ವಿವೇಕಾನಂದ ಫೋಟೊ ಅಳವಡಿಸಲು ನಿರ್ಧರಿಸಿದ್ದೇವೆ. ಕೇಸರಿ ಬಣ್ಣ ಬಳಿಯುವುದರಿಂದ ಜಾತ್ಯಾತೀತೆಗೆ ಯಾವ ರೀತಿ ತೊಂದರೆಯಾಗುತ್ತದೆ ಎಂಬುದು ಗೊತ್ತಿಲ್ಲ ಎಂದ ಅವರು, ಡಿಕೆಶಿ ಅವರು ಶಾಲೆಗಳಿಗೆ ಮೂಲಭೂತ ಸೌಲಭ್ಯ ನೀಡಿ ಎಂದು ಹೇಳಿದ್ದಾರೆ. ಆದರೆ ಶಿಕ್ಷಕರ ನೇಮಕಾತಿ, ಹೊಸ ಕೊಠಡಿಗಳ ನಿರ್ಮಾಣ ಮಾಡುತ್ತಿರುವುದು ಮೂಲಭೂತ ಸೌಲಭ್ಯ ಎಂದು ತಿಳಿದುಕೊಳ್ಳಲಿ ಎಂದು ತಿರುಗೇಟು ನೀಡಿದರು.

‘ಕಟ್ಟಡ ನಿರ್ಮಾಣವನ್ನು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳಿಗೆ ಉಸ್ತುವಾರಿ ನೀಡಲಾಗಿದೆ. ಆಯಾ ವಾತಾವರಣಕ್ಕೆ ತಕ್ಕಂತೆ ಶಾಲೆ ನಿರ್ಮಿಸಲು ಅವಕಾಶ ಕಲ್ಪಿಸಲಾಗಿದೆ. ಕೇಸರಿ ಬಣ್ಣ ತ್ಯಾಗ, ಜ್ಞಾನ, ಬೆಳಕಿನ ಸಂಕೇತವಾಗಿದೆ. ಇಂತಹ ಬಣ್ಣವನ್ನು ಶಾಲಾ ಕೊಠಡಿಗಳಿಗೆ ಬಳಿಯುವುದರಿಂದ ಮನಸಿನ ಮೇಲೆ ಒಳ್ಳೆಯ ಪರಿಣಾಮ ಬೀರುತ್ತದೆ ಎಂದು ವಾಸ್ತುಶಿಲ್ಪಿಗಳು ಹೇಳಿದರೆ, ಖಂಡಿತವಾಗಿ ಕೇಸರಿ ಬಣ್ಣ ಬಳಿಯಲಾಗುವುದು’ ಎಂದರು. ಆದರೆ, ಖಾಸಗಿ ಸಂಸ್ಥೆಗಳು ತಮ್ಮ ಶಾಲೆಗಳಿಗೆ ಕೇಸರಿ ಬಣ್ಣ ಬಳಿಯುವುದು ಅವರ ವಿವೇಚನೆಗೆ ಬಿಟ್ಟವಿಚಾರ ಎಂದು ಸ್ಪಷ್ಟಪಡಿಸಿದರು.   Viveka Scheme: ವಿವೇಕ ಯೋಜನೆಯಿಂದ ಶಿಕ್ಷಣ ಕ್ರಾಂತಿ: ಸಚಿವ ಮುನೇನಕೊಪ್ಪ

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಡಿಜಿಪಿಯಾಗಿ ಅಲೋಕ್‌ ಕುಮಾರ್ ಮುಂಬಡ್ತಿ, ಸರ್ಕಾರದ ವಿರುದ್ಧ 8 ತಿಂಗಳ ಕಾನೂನು ಹೋರಾಟಕ್ಕೆ ಜಯ!
2.84 ಲಕ್ಷ ಹುದ್ದೆ ಖಾಲಿ ಇದ್ರೂ, ಶೇ.9 ಹುದ್ದೆಗಳ ನೇಮಕಾತಿಯನ್ನೇ ಪ್ರಚಾರಕ್ಕೆ ಬಳಸಿಕೊಂಡ ಸರ್ಕಾರ!