Omicron Variant: ಇನ್ಮುಂದೆ ಶಾಲಾ, ಕಾಲೇಜಲ್ಲಿ ರ‍್ಯಾಂಡಮ್‌ ಟೆಸ್ಟ್‌

Kannadaprabha News   | Asianet News
Published : Nov 28, 2021, 09:30 AM IST
Omicron Variant: ಇನ್ಮುಂದೆ ಶಾಲಾ, ಕಾಲೇಜಲ್ಲಿ ರ‍್ಯಾಂಡಮ್‌ ಟೆಸ್ಟ್‌

ಸಾರಾಂಶ

*   ಪರೀಕ್ಷೆಗೆ ಅವಕಾಶ ನೀಡದ ಖಾಸಗಿ ಶಾಲೆಗಳಿಗೆ ಬಿಸಿ *   ಎಸ್‌ಡಿಎಂನಲ್ಲಿ ಮತ್ತೆ 102 ಕೇಸ್‌ ಪತ್ತೆ *   ಶಾಲಾ- ಕಾಲೇಜುಗಳಲ್ಲಿ ಪಾಲನೆಯಾಗದ ಕೋವಿಡ್‌ ಮಾರ್ಗಸೂಚಿ  

ಧಾರವಾಡ(ನ.28):  ಶಾಲಾ ಮಕ್ಕಳಲ್ಲಿ(School Children) ಕೊರೋನಾ ಪ್ರಕರಣಗಳು ಹೆಚ್ಚೆಚ್ಚು ಪತ್ತೆಯಾಗುತ್ತಿದ್ದರೂ ಕೆಲ ಖಾಸಗಿ ಶಾಲಾ ಆಡಳಿತ ಮಂಡಳಿಗಳು ಮಕ್ಕಳ ಕೋವಿಡ್‌ ಪರೀಕ್ಷೆಗೆ ಅವಕಾಶ ನೀಡದೆ ಉದ್ಧಟತನ ತೋರುತ್ತಿರುವ ಹಿನ್ನೆಲೆಯಲ್ಲಿ ಶಾಲಾ-ಕಾಲೇಜುಗಳು ಅದರಲ್ಲಿಯೂ ವಸತಿ ಶಾಲೆಗಳು, ಹಾಸ್ಟೆಲ್‌ಗಳಲ್ಲಿ ಮತ್ತೆ ಕೋವಿಡ್‌ ಪರೀಕ್ಷೆ ನಡೆಸಲು ರಾಜ್ಯ ಆರೋಗ್ಯ ಇಲಾಖೆ(Department of Health) ಮುಂದಾಗಿದೆ.

ಶಾಲಾ- ಕಾಲೇಜುಗಳು(School-Colleges) ಕೋವಿಡ್‌ ಮಾರ್ಗಸೂಚಿಯನ್ನು(Covid Guidelines) ಕಟ್ಟುನಿಟ್ಟಾಗಿ ಪಾಲಿಸುತ್ತಿಲ್ಲ. ಅದರಲ್ಲಿಯೂ ಪಿಯುಸಿ ಒಳಗಿನ ವಿದ್ಯಾಭ್ಯಾಸ ನೀಡುವ ಸಂಸ್ಥೆಗಳಲ್ಲಿ ಕೋವಿಡ್‌ ಮಾರ್ಗಸೂಚಿಯನ್ನು ಗಾಳಿಗೆ ತೂರಲಾಗುತ್ತಿದೆ. ಇದನ್ನು ಗಂಭೀರವಾಗಿ ಪರಿಗಣಿಸಿರುವ ಆರೋಗ್ಯ ಇಲಾಖೆಯು ಹೈಸ್ಕೂಲ್‌ ಮತ್ತು ಕಾಲೇಜುಗಳಲ್ಲಿ ಮಕ್ಕಳು ಹಾಗೂ ಶಿಕ್ಷಕರನ್ನು(Teachers) ಎರಡು ವಾರಕ್ಕೊಮ್ಮೆ ರ‍್ಯಾಂಡಮ್‌ ಪರೀಕ್ಷೆಗೆ ಒಳಪಡಿಸಬೇಕು. ಪ್ರತಿದಿನ ಎಂಟು ಸಾವಿರ ಮಕ್ಕಳ ಕೋವಿಡ್‌ ಪರೀಕ್ಷೆ(Covid Test) ನಡೆಯಬೇಕು ಮತ್ತು ಶಾಲೆಗಳ ಶೇ.5 ಮಕ್ಕಳ ಕೋವಿಡ್‌ ಪರೀಕ್ಷೆ ಪ್ರತಿ ವಾರ ನಡೆಯಬೇಕು ಎಂದು ಆದೇಶದಲ್ಲಿ ಸೂಚಿಸಿದೆ.

Covid19: ಕೊರೋನಾ ಅಲೆ ಭೀತಿ: 6 ಜಿನೋಮಿಕ್‌ ಲ್ಯಾಬ್‌ ಇನ್ನೂ ಆರಂಭವೇ ಆಗಿಲ್ಲ

ಕೆಲ ಶಿಕ್ಷಣ ಸಂಸ್ಥೆಗಳು ಆರೋಗ್ಯ ಸಿಬ್ಬಂದಿಯ ಜೊತೆ ಅನುಚಿತವಾಗಿ ವರ್ತಿಸುತ್ತಿರುವ ದೂರು ಆರೋಗ್ಯ ಇಲಾಖೆಯನ್ನು ತಲುಪಿತ್ತು. ಆಶಾ ಕಾರ್ಯಕರ್ತರು, ವೈದ್ಯಕೀಯ ಸಿಬ್ಬಂದಿ ಸರ್ಕಾರಿ ಶಾಲೆಗಳಿಗೆ ಯಾವುದೇ ಅಂಜಿಕೆಯಿಲ್ಲದೆ ಪ್ರವೇಶಿಸಿ ಅಲ್ಲಿನ ಸ್ಯಾಂಪಲ್‌ಗಳನ್ನು ತೆಗೆದುಕೊಂಡು ಬರುತ್ತಾರೆ. ಆದರೆ ಅನೇಕ ಖಾಸಗಿ ಶಿಕ್ಷಣ ಸಂಸ್ಥೆಗಳು ನಮ್ಮ ಸಿಬ್ಬಂದಿಯನ್ನು ಗೇಟ್‌ನೊಳಗೆ ಹೋಗಲೂ ಬಿಡುತ್ತಿಲ್ಲ ಎಂದು ಹಿರಿಯ ಅಧಿಕಾರಿಯೊಬ್ಬರು ಅಳಲು ತೋಡಿಕೊಂಡಿದ್ದರು.
ಈ ಹಿನ್ನೆಲೆಯಲ್ಲಿ ಸರ್ಕಾರ ಶಾಲಾ- ಕಾಲೇಜುಗಳಲ್ಲಿ ಕೋವಿಡ್‌ ಪರೀಕ್ಷೆ ನಡೆಸಲು ಮುಂದಾಗಿದೆ. ರ‍್ಯಾಂಡಮ್‌ ಪರೀಕ್ಷೆಯ ಸಂದರ್ಭದಲ್ಲಿ ಬೋರ್ಡಿಂಗ್‌ ಶಾಲೆಗಳತ್ತ ಹೆಚ್ಚಿನ ಗಮನ ನೀಡಲಾಗುವುದು ಎಂದು ಆರೋಗ್ಯ ಇಲಾಖೆ ಅಧಿಕಾರಿಗಳು ಹೇಳಿದ್ದಾರೆ.

ಪರೀಕ್ಷೆ ಪ್ರಮಾಣ ಹೆಚ್ಚಳ

ಇದೇ ವೇಳೆ ಕೋವಿಡ್‌(Covid19) ದೈನಂದಿನ ಪರೀಕ್ಷೆಯ ಗುರಿಯನ್ನು 60 ಸಾವಿರದಿಂದ 80 ಸಾವಿರಕ್ಕೆ ಏರಿಸಲಾಗಿದೆ. ಹೋಟೆಲ್‌, ರೆಸ್ಟೋರೆಂಟ್‌ ಸಿಬ್ಬಂದಿ, ಮಾಲ್‌ಗಳಲ್ಲಿ ಅಂಗಡಿ ಸಿಬ್ಬಂದಿ, ಮಾರುಕಟ್ಟೆಗಳಲ್ಲಿನ ಸಿಬ್ಬಂದಿ, ಕೇಟರಿಂಗ್‌ ಮತ್ತು ಡೋರ್‌ ಡೆಲಿವರಿ ಸಿಬ್ಬಂದಿ, ಫ್ಯಾಕ್ಟರಿ ಕಾರ್ಮಿಕರು, ಕಚೇರಿಗೆ ಹೋಗುವವರು, ಪಬ್‌ ಮತ್ತು ಬಾರ್‌ಗಳಲ್ಲಿನ ಸಿಬ್ಬಂದಿ, ಸಿನಿಮಾ ಹಾಲ್‌ ಮತ್ತು ಮಲ್ಟಿಪ್ಲೆಕ್ಸ್‌ ಸಿಬ್ಬಂದಿ ಸೇರಿದಂತೆ ಜನದಟ್ಟಣೆ ಪ್ರದೇಶದಲ್ಲಿರುವವರನ್ನು ಆದ್ಯತೆಯ ಮೇರೆಗೆ ಕೋವಿಡ್‌ ಪರೀಕ್ಷೆಗೆ ಒಳಪಡಿಸುವಂತೆ ಸೂಚಿಸಲಾಗಿದೆ.

ಎಸ್‌ಡಿಎಂನಲ್ಲಿ ಮತ್ತೆ 102 ಕೇಸ್‌ ಪತ್ತೆ

ಇಲ್ಲಿನ ಎಸ್‌ಡಿಎಂ ವೈದ್ಯಕೀಯ ಕಾಲೇಜಿನಲ್ಲಿ(SDM Medical College) ಸ್ಫೋಟಗೊಂಡಿರುವ ಕೋವಿಡ್‌ ಸೋಂಕು ದಿನದಿಂದ ದಿನಕ್ಕೆ ಏರುಗತಿ ಕಾಣುತ್ತಿದೆ. ಮೊದಲ ದಿನ 66, 2ನೇ ದಿನ 202 ಹಾಗೂ ಇದೀಗ ಶನಿವಾರ ಮತ್ತೆ 102 ಹೊಸ ಪಾಸಿಟಿವ್‌ ಪ್ರಕರಣಗಳು ಪತ್ತೆಯಾಗಿದ್ದು, ಒಟ್ಟಾರೆ ಸೋಂಕಿತರ ಸಂಖ್ಯೆ 306ಕ್ಕೇರಿದೆ.

Omicron Variant: ವಿದೇಶದಿಂದ ಬಂದವರ ಮೇಲೆ ನಿಗಾ ವಹಿಸಿ : ಪ್ರಧಾನಿ ಮೋದಿ ಸೂಚನೆ!

3,973 ಮಂದಿ ಪರೀಕ್ಷೆ ಮಾಡಲಾಗಿದ್ದು, ಇನ್ನೂ ಅರ್ಧಕ್ಕರ್ಧ ಮಂದಿ ವರದಿ ಬರಬೇಕಿದೆ. ಒಟ್ಟು 306 ಪಾಸಿಟಿವ್‌ ಪ್ರಕರಣಗಳಲ್ಲಿ ವಿದ್ಯಾರ್ಥಿಗಳಲ್ಲದೆ(Students) 14 ವೈದ್ಯರೂ ಇದ್ದಾರೆ. ಕೇವಲ 6 ಮಂದಿಗೆ ಮಾತ್ರ ರೋಗದ ಸಾಮಾನ್ಯ ಲಕ್ಷಣಗಳಿವೆ. ಎಲ್ಲರೂ ಆರೋಗ್ಯದಿಂದಿದ್ದಾರೆ. ನ.17ರಂದು ಕಾಲೇಜಲ್ಲಿ ನಡೆದಿದ್ದ ಕಾರ್ಯಕ್ರಮದ ವೇಳೆ ಸೋಂಕು ಸ್ಫೋಟಗೊಂಡಿದೆ.

ಕೊರೋನಾ(Coronavirus) ಬೆನ್ನಲ್ಲೇ ವಿದೇಶಗಳಲ್ಲಿ ಹೊಸತಳಿಯ ಒಮಿಕ್ರಾನ್ ವೈರಸ್(Omicron Virus) ಪತ್ತೆ ಹಿನ್ನೆಲೆ ಕರ್ನಾಟಕದಲ್ಲಿ ಸರ್ಕಾರ(Government of Karnataka) ಅಲರ್ಟ್ ಆಗಿದೆ,

ಈ ಬಗ್ಗೆ  ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ (Basavaraj Bommai) ಅವರು ಇಂದು (ನ.27) ತುರ್ತು ಸಭೆ ನಡೆಸಿದ್ದು, ಕಳೆದ ಒಂದು ವಾರದ ಪಾಸಿಟಿವಿಟಿ ರೇಟ್  ಮಾಹಿತಿ ಪಡೆದುಕೊಂಡಿದ್ದಾರೆ. ಅಲ್ಲದೇ ವಿದೇಶಗಳಲ್ಲಿ ಹೊಸ ತಳಿಯ ಒಮಿಕ್ರಾನ್(Omicron) ವೈರಸ್ ಪತ್ತೆ ಹಿನ್ನೆಲೆ ಅಧಿಕಾರಿಗಳ ಜತೆ ಮಹತ್ವದ ಚರ್ಚೆ ನಡೆಸಿದ್ದು, ವಿದೇಶಗಳಲ್ಲಿ ಹೊಸತಳಿಯ ಒಮಿಕ್ರಾನ್ ವೈರಸ್ ಪತ್ತೆ ಹಿನ್ನೆಲೆ ಗಡಿ ಭಾಗದಲ್ಲಿ ಬಿಗಿ ಕ್ರಮಕೈಗೊಳ್ಳುವ ಬಗ್ಗೆ ಸಭೆಯಲ್ಲಿ ಚರ್ಚೆ ನಡೆದಿವೆ.
 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಶಾಲೆಯಿಂದ ಮರಳುತ್ತಿದ್ದ ವೇಳೆ ಬೀದಿ ನಾಯಿ ದಾಳಿ, 5 ವರ್ಷದ LKG ಬಾಲಕಿಗೆ ಗಂಭೀರ ಗಾಯ
ಕರ್ನಾಟಕದಲ್ಲಿ ನಿಮ್ಹಾನ್ಸ್ ಮಾದರಿಯ ಮತ್ತಷ್ಟು ಸಂಸ್ಥೆಗಳು ಅಗತ್ಯ: ಸಚಿವ ಶರಣ ಪ್ರಕಾಶ್ ಪಾಟೀಲ್