ಶಾಲೆಗಳಲ್ಲಿ ಇನ್ಮುಂದೆ ಮಕ್ಕಳು ನೆಲದ ಮೇಲೆ ಕುಳಿತು ಪಾಠ ಕೇಳುವಂತಿಲ್ಲ! ಏನಿದು ಹೊಸ ರೂಲ್ಸ್!?

By Ravi Janekal  |  First Published Dec 24, 2023, 2:57 PM IST

ಶಾಲೆಗಳಲ್ಲಿ ಇನ್ಮುಂದೆ ಮಕ್ಕಳು ನೆಲದ ಮೇಲೆ ಕುಳಿತು ಪಾಠ ಕೇಳುವಂತಿಲ್ಲ. ಮುಂದಿನ ವರ್ಷದಿಂದಲೇ ಈ ಆದೇಶ ಜಾರಿಗೆ ಬರಲಿದೆ ಎಂದು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಮಧು ಬಂಗಾರಪ್ಪ ತಿಳಿಸಿದರು.


ಶಿವಮೊಗ್ಗ (ಡಿ.24): ಶಾಲೆಗಳಲ್ಲಿ ಇನ್ಮುಂದೆ ಮಕ್ಕಳು ನೆಲದ ಮೇಲೆ ಕುಳಿತು ಪಾಠ ಕೇಳುವಂತಿಲ್ಲ. ಮುಂದಿನ ವರ್ಷದಿಂದಲೇ ಈ ಆದೇಶ ಜಾರಿಗೆ ಬರಲಿದೆ ಎಂದು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಮಧು ಬಂಗಾರಪ್ಪ ತಿಳಿಸಿದರು.

ಇಂದು ಶಿವಮೊಗ್ಗದಲ್ಲಿ ಮಾಧ್ಯಮ ಪ್ರತಿನಿಯೊಂದಿಗೆ ಮಾತನಾಡಿದ ಅವರು, ಸರ್ಕಾರಿ ಮತ್ತು ಖಾಸಗಿ ಸೇರಿದಂತೆ ಯಾವುದೇ ಶಿಕ್ಷಣ ಸಂಸ್ಥೆಯಲ್ಲೂ ಮಕ್ಕಳ ಕೈಯಲ್ಲಿ ಶೌಚ ಸ್ವಚ್ಚತೆ ಮಾಡಿಸುವಂತಿಲ್ಲ. ಹಾಗೆ ಮಾಡಿದರೆ ಶಿಕ್ಷೆಗೆ ಗುರಿಯಾಗಬೇಕಾಗುತ್ತದೆ. ಅಲ್ಲದೇ ಇನ್ಮುಂದೆ ಶಾಲಾ ಸ್ವಚ್ಚತೆಗೆ ಹೆಚ್ಚಿನ ಹಣ ಮೀಸಲಿಡುತ್ತೇವೆ. ಇನ್ನು ಎಲ್ಲಾ ಶಾಲೆಯಲ್ಲೂ ಮುಂದಿನ ವರ್ಷದಿಂದ ಮಕ್ಕಳು ನೆಲದ ಮೇಲೆ ಕೂಳಿತು ಪಾಠ ಕೇಳುವಂತಿಲ್ಲ. 1 ರಿಂದ 10ನೇ ತರಗತಿ ವರೆಗೆ ಮಕ್ಕಳು ತರಗತಿಗಳಲ್ಲಿ ಬೆಂಚ್‌ ಮೇಲೆಯೇ ಕುಳಿತು ಪಾಠ ಕೇಳಬೇಕು. ಶಿಕ್ಷಣ ಇಲಾಖೆಯ ಆದೇಶ ಹೊರಡಿಸಿದೆ ಮುಂದಿನ ವರ್ಷದಿಂದಲೇ ಇದು ಜಾರಿಗೆ ಬರಲಿದೆ ಎಂದರು.

Latest Videos

undefined

3 ವರ್ಷದಲ್ಲಿ 3 ಸಾವಿರ ಕರ್ನಾಟಕ ಪಬ್ಲಿಕ್ ಶಾಲೆ ಪ್ರಾರಂಭ: ಸಚಿವ ಮಧು ಬಂಗಾರಪ್ಪ

ಶಾಲಾ ಮಕ್ಕಳ ಕೈಯಲ್ಲಿ ಕೆಲಸ ಮಾಡಿಸಬಾರದು. ಮಕ್ಕಳಿಂದ ಕ್ಲೀನ್ ಮಾಡಿಸುವುದು ತಪ್ಪು. ಹಾಗೇನಾದರೂ ಮಾಡಿದ್ರೆ ಶಿಕ್ಷೆಗೆ ಗುರಿಯಾಗಬೇಕಾಗುತ್ತೆ. ಸ್ವಚ್ಛತೆಗೆಂದೇ ಡಿ ಗ್ರುಪ್ ನೌಕರರ ನೇಮಕಾತಿ ಮಾಡಿಕೊಳ್ಳುವ ಬಗ್ಗೆ ಚರ್ಚೆಯಾಗುತ್ತಿದೆ. ಗುತ್ತಿಗೆ ಆಧಾರದಲ್ಲಿ ಡಿ-ಗ್ರೂಪ್ ಸಿಬ್ಬಂದಿ ನೇಮಕಕ್ಕೆ ಸಿಎಂ ಜೊತೆ ಚರ್ಚಿಸಿ, ತೀರ್ಮಾನ ಮಾಡ್ತೇವೆ ಎಂದರು.

ಡಿ.26ರಿಂದ 'ಯುವನಿಧಿ' ನೋಂದಣಿ ಆರಂಭ:

ರಾಜ್ಯ ಸರ್ಕಾರ ಐದು ಗ್ಯಾರಂಟಿಯನ್ನು ಘೋಷಣೆ ಮಾಡಿತ್ತು. ಅದರಂತೆ ನಾಲ್ಕನ್ನು ಜಾರಿ ಮಾಡಿದ್ದೇವೆ. ಇದೀಗ ಐದನೇ ಗ್ಯಾರಂಟಿಯಾದ "ಯುವನಿಧಿ' ಡಿ.26 ರಿಂದ ನೋಂದಣಿ ಕೂಡ ಆರಂಭವಾಗಲಿದೆ. ಸ್ವಾಮಿ ವಿವೇಕಾನಂದ ಜಯಂತಿಯ ದಿನವಾದ ಜನವರಿ 12 ರಂದು ಶಿವಮೊಗ್ಗದಲ್ಲಿ ಯುವನಿಧಿ ಗ್ಯಾರಂಟಿಗೆ ಚಾಲನೆ ನೀಡ್ತೇವೆ ಮತ್ತು ಅದೇ ದಿನವೇ ಫಲಾನುಭವಿಗಳ ಖಾತೆಗೆ ಹಣ ಹೋಗಲಿದೆ.

ಮಕ್ಕಳಿಂದ ಶೌಚಾಲಯ ಸ್ವಚ್ಛತೆ ತಪ್ಪಿತಸ್ಥರ ವಿರುದ್ಧ ಕ್ರಮ: ಸಚಿವ ಮಧು ಬಂಗಾರಪ್ಪ

ಶಿವಮೊಗ್ಗದ ಫ್ರೀಡಂ ಪಾರ್ಕ್ ನಲ್ಲಿ ನಡೆಯಲಿರುವ ರಾಜ್ಯಮಟ್ಟದ ಕಾರ್ಯಕ್ರಮದಲ್ಲಿ ಸಿಎಂ ಸಿದ್ದರಾಮಯ್ಯ, ಡಿಸಿಎಂ  ಡಿಕೆ ಶಿವಕುಮಾರ್ ಸೇರಿದಂತೆ ಸಚಿವರು ಭಾಗಿಯಾಗ್ತಾರೆ. ರಾಜ್ಯದ ಎಲ್ಲಾ ಭಾಗದಿಂದಲೂ ಫಲಾನುಭವಿಗಳು ಭಾಗವಹಿಸ್ತಾರೆ. ಯುವಕರು ಅರ್ಜಿ ಹಾಕಿ, ಸರ್ಕಾರದ ಯೋಜನೆಯ ಲಾಭ ಪಡೆಯಬೇಕು. ಅದೇ ರೀತಿ ಬೇರೆ ಗ್ಯಾರಂಟಿ ಸಿಗದಿದ್ದರೆ, ಈಗಲೂ ಅವಕಾಶ ಇದೆ. ಸಂಬಂಧಪಟ್ಟ ಇಲಾಖೆಗೆ ಗ್ರಾ.ಪಂ ಮಟ್ಟದಲ್ಲೂ ಹೋಗಿ ಯೋಜನೆ ತಲುಪಿಸಲು ಹೇಳಿದ್ದಾರೆ. ಶಕ್ತಿ ಯೋಜನೆ ಮತ್ತಷ್ಟು ಅನುಷ್ಠಾನಕ್ಕೆ ಹೊಸ ಬಸ್ ಖರೀದಿ ಮಾಡಲಾಗ್ತಿದೆ ಎಂದರು.

click me!