ಏಷ್ಯಾ ಮಾಲ್‌ಗೆ ನುಗ್ಗಿ ಗಲಾಟೆ ಆರೋಪ; ಪುನೀತ್ ಕೆರೆಹಳ್ಳಿ ವಿರುದ್ಧ ಮತ್ತೊಂದು ಎಫ್‌ಐಆರ್!

By Ravi Janekal  |  First Published Dec 24, 2023, 1:55 PM IST

ಕ್ರಿಸ್‌ಮಸ್ ಹಬ್ಬದ ಅಲಂಕಾರದ ವಿಚಾರಕ್ಕೆ ಮಾಲ್‌ಗೆ ನುಗ್ಗಿ ಗಲಾಟೆ ಮಾಡಿರೋ ಆರೋಪ ಹಿನ್ನೆಲೆ ರಾಷ್ಟ್ರ ರಕ್ಷಣಾ ಪಡೆ ಸಂಘಟನೆ ಮುಖಂಡ ಪುನೀತ್‌ಕುಮಾರ್‌ ಅಲಿಯಾಸ್‌ ಪುನೀತ್‌ ಕೆರೆಹಳ್ಳಿ ಮೇಲೆ ಮತ್ತೊಂದು ಎಫ್‌ಐಆರ್ ದಾಖಲು ಮಾಡಲಾಗಿದೆ.


ಬೆಂಗಳೂರು (ಡಿ.24) : ಕ್ರಿಸ್‌ಮಸ್ ಹಬ್ಬದ ಅಲಂಕಾರದ ವಿಚಾರಕ್ಕೆ ಮಾಲ್‌ಗೆ ನುಗ್ಗಿ ಗಲಾಟೆ ಮಾಡಿರೋ ಆರೋಪ ಹಿನ್ನೆಲೆ ರಾಷ್ಟ್ರ ರಕ್ಷಣಾ ಪಡೆ ಸಂಘಟನೆ ಮುಖಂಡ ಪುನೀತ್‌ಕುಮಾರ್‌ ಅಲಿಯಾಸ್‌ ಪುನೀತ್‌ ಕೆರೆಹಳ್ಳಿ ಮೇಲೆ ಮತ್ತೊಂದು ಎಫ್‌ಐಆರ್ ದಾಖಲು ಮಾಡಲಾಗಿದೆ.

ನಿನ್ನೆ ಏಷ್ಯಾ ಮಾಲ್‌ ಬಳಿ ಹೋಗಿದ್ದ ಪುನೀತ್ ಕೆರೆಹಳ್ಳಿ ಮತ್ತು ಸಂಗಡಿಗರು. ಈ ವೇಳೆ ಯಾಕೆ ಕ್ರಿಸ್ಮಸ್ ಟ್ರೀ ಗಳ ಅಲಂಕಾರ ಮಾಡಿದ್ದೀರ ಅಂತಾ ಮಾಲ್‌ ಸಿಬ್ಬಂದಿಯೊಂದಿಗೆ ಗಲಾಟೆ ಮಾಡಿರುವ ಪುನೀತ್ ಕೆರೆಹಳ್ಳಿ, ಸಹಚರರು. ಕ್ರಿಸ್‌ಮಸ್‌ ಟ್ರೀ ಅಲಂಕಾರ ಮಾಡಿದ್ದಲ್ಲದೇ 200 ರೂ ಎಂಟ್ರಿ ಫೀಸ್ ಬೇರೆ ಇಟ್ಟಿದ್ದೀರಾ? ಇದಕ್ಕೆ ಕಾನೂನು ಇದ್ಯಾ? ಹಿಂದೂ ಹಬ್ಬಗಳಿಗೆ ನೀವು ಇದೇ ರೀತಿಯ ಅಲಂಕಾರ ಮಾಡ್ತೀರ? 22-01-24 ರಂದು ಅಯೋಧ್ಯೆಯಲ್ಲಿ ರಾಮಮಂದಿರ ಉದ್ಘಾಟನೆ ಇದೆ. ಅವತ್ತೂ ಹೀಗೆ ಅಲಂಕಾರ ಮಾಡಬೇಕು. ಮಾಡದಿದ್ರೆ ಮಾಲ್ ಮುಂದೆ ಪ್ರತಿಭಟನೆ ನಡೆಸುವುದಾಗಿ ಬೆದರಿಕೆ ಹಾಕಿದ್ದಾರೆ ಎಂಬ ಆರೋಪ ಹಿನ್ನೆಲೆ ಎಫ್‌ಐಆರ್ ದಾಖಲು.

Tap to resize

Latest Videos

ಹಿಂದೂ ಕಾರ್ಯಕರ್ತ ಪುನೀತ್ ಕೆರೆಹಳ್ಳಿ ವಿರುದ್ಧದ ಗೂಂಡಾ ಕಾಯ್ದೆ ರದ್ದು! ಜೈಲಿನಿಂದ ಬಿಡುಗಡೆ

ನಿನ್ನೆ ಸಹಚರರೊಂದಿಗೆ ಮಾಲ್‌ಗೆ ಬಂದಿರುವ ಪುನೀತ್ ಕೆರೆಹಳ್ಳಿ. ಕ್ರಿಸ್‌ಮಸ್ ಟ್ರೀ ಅಲಂಕಾರದ ವಿಚಾರಕ್ಕೆ ಸಿಬ್ಬಂದಿಯೊಂದಿಗೆ ಕಿರಿಕ್ಕು ಮಾಡಿದ್ದಾರೆ. ಈ ವೇಳೆ ಸೆಕ್ಯುರಿಟಿ ಗಾರ್ಡ್ ಗಳು ಹೊರಗೆ ಹೋಗಿ ಅಂತಾ ಬಲವಂತವಾಗಿ ಪುನೀತ್ ಕೆರೆಹಳ್ಳಿ ಸಹಚರರನ್ನ ಹೊರಗೆ ಕಳಿಸಿದ್ದಾರೆ. ಹೊರಗೆ ಬಂದ ಬಳಿಕ ಮಾಲ್ ಬಳಿ ಜೈ ಶ್ರೀರಾಮ ಘೋಷಣೆ ಕೂಗಿದ್ದಾರೆ ಜೊತೆಗೆ  ಯಾರೂ ಈ ಮಾಲ್ ಗೆ ಹೋಗಬೇಡಿ ಅಂತಾ ಕೂಗ್ತಿದ್ರಂತೆ. ಅಲ್ಲದೆ ಕ್ರಿಸ್ಮಸ್ ಹಾಗು ನ್ಯೂ ಇಯರ್ ದಿನ ಸಹ ಬಂದು ಗಲಾಟೆ ಮಾಡೋದಾಗಿ ಬೆದರಿಕೆ ಹಾಕಿದ್ದಾರೆ. ಮಾಲ್ ನ ಸಿಬ್ಬಂದಿ ಹಾಗು ಗ್ರಾಹಕರಿಗೆ ತೊಂದರೆ ನೀಡಿದ್ದಾರೆ ಎಂದು ಮಾಲ್ ಆಫ್ ಏಶಿಯಾ ಸೆಕ್ಯೂರಿಟಿ ಅಸಿಸ್ಟೆಂಟ್ ಮ್ಯಾನೇಜರ್ ಸ್ಟೀಫನ್ ವಿಕ್ಟರ್ ಎಂಬುವವರಿಂದ ಪುನೀತ್ ಕೆರೆಹಳ್ಳಿ ವಿರುದ್ಧ ದೂರು. ಕೊಡಿಗೆಹಳ್ಳಿ ಪೊಲೀಸ್ ಠಾಣೆಯಲ್ಲಿ ಪುನೀತ್ ಕೆರೆಹಳ್ಳಿ ಹಾಗು ಸಂಗಡಿಗರ ವಿರುದ್ಧ ಎಫ್ ಐ ಆರ್ ದಾಖಲು ಮಾಡಲಾಗಿದೆ.

10 ವರ್ಷಗಳಲ್ಲಿ ಲೆಕ್ಕವಿಲ್ಲದಷ್ಟು ಅಪರಾಧ, ಗೂಂಡಾ ಕಾಯ್ದೆಯಡಿ ಹಿಂದೂ ಕಾರ್ಯಕರ್ತ ಪುನಿತ್‌ ಕೆರೆಹಳ್ಳಿ ಬಂಧನ

click me!