ಹಿಜಾಬ್‌ ನಿಷೇಧ ವಾಪಸ್‌: ಸಿಎಂ ಸಿದ್ದು ಹೇಳಿಕೆಗೆ ಪೇಜಾವರ ಶ್ರೀ ಆಕ್ರೋಶ

By Kannadaprabha News  |  First Published Dec 24, 2023, 6:23 AM IST

ಹಿಜಾಬ್‌ ಧಾರಣೆ ನಿಷೇಧ ಹಿಂಪಡೆಯುವುದಾಗಿ ಸಿಎಂ ಸಿದ್ದರಾಮಯ್ಯ ನೀಡಿರುವ ಹೇಳಿಕೆಗೆ ಉಡುಪಿಯ ಪೇಜಾವರ ಮಠದ ವಿಶ್ವಪ್ರಸನ್ನತೀರ್ಥ ಶ್ರೀಪಾದರು ತೀವ್ರ ಆಕ್ರೋಶ ವ್ಯಕ್ತಪಡಿಸಿದರು. 


ಬೆಳಗಾವಿ (ಡಿ.24): ಹಿಜಾಬ್‌ ಧಾರಣೆ ನಿಷೇಧ ಹಿಂಪಡೆಯುವುದಾಗಿ ಸಿಎಂ ಸಿದ್ದರಾಮಯ್ಯ ನೀಡಿರುವ ಹೇಳಿಕೆಗೆ ಉಡುಪಿಯ ಪೇಜಾವರ ಮಠದ ವಿಶ್ವಪ್ರಸನ್ನತೀರ್ಥ ಶ್ರೀಪಾದರು ತೀವ್ರ ಆಕ್ರೋಶ ವ್ಯಕ್ತಪಡಿಸಿದರು. ಸಾಂಬ್ರಾ ವಿಮಾನ ನಿಲ್ದಾಣದಲ್ಲಿ ಶನಿವಾರ ಸುದ್ದಿಗಾರರರೊಂದಿಗೆ ಮಾತನಾಡಿದ ಅವರು, ಸರ್ಕಾರ ಕಾನೂನು ಮಾಡಲಿ, ಅದು ಎಲ್ಲರಿಗೂ ಅನ್ವಯ ಆಗುವಂತೆ ಇರಬೇಕು. ಒಂದು ಪಂಗಡ, ಒಂದು ಸಮಾಜ ಗುರಿಯಾಗಿಸಿಕೊಂಡು ಕಾನೂನು ಮಾಡುವುದು ಸರಿಯಲ್ಲ. ಒಬ್ಬರಿಗೊಂದು ನ್ಯಾಯ, ಮತ್ತೊಬ್ಬರಿಗೊಂದು ನ್ಯಾಯ. ಒಬ್ಬರಿಗೊಂದು ಕಾನೂನು ಇನ್ನೊಬ್ಬರಿಗೆ ಮತ್ತೊಂದು ಕಾನೂನು ಮಾಡುವುದು ಸರಿಯಲ್ಲ ಎಂದರು.

ಸರ್ಕಾರ, ಮುಖ್ಯಮಂತ್ರಿ ಅವರ ವರ್ತನೆ ಸಮಾಜದಲ್ಲಿ ಶೋಭೆ ತರುವಂಥದ್ದು ಅಲ್ಲ. ಸಿದ್ದರಾಮಯ್ಯ ಕರ್ನಾಟಕದ ಎಲ್ಲ ಸಮುದಾಯಗಳ ಸಿಎಂ ಆಗಿದ್ದಾರೆ. ಯಾವುದೇ ಒಂದು ಪಂಗಡಗಳ ಸಿಎಂ ಅವರಲ್ಲ. ಹೀಗಾಗಿ ಇಂಥ ನಡುವಳಿಕೆ ಸರಿಯಲ್ಲ. ಇತ್ತೀಚೆಗೊಂದು ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಮಂಗಳಸೂತ್ರ, ಕಾಲುಂಗುರ ಹಾಗೂ ಕಿವಿಯೊಲೆ ತೆಗೆದಿಡಬೇಕು ಎಂದು ರೂಲ್ಸ್ ಬಂತು ಎಂದರು. ಒಂದು ಪಂಗಡವರಿಗೆ ಹೀಗೆ ಕಾನೂನು ಮಾಡಲಾಗಿದೆ. ಆದರೆ, ಮತ್ತೊಂದು ಪಂಗಡಕ್ಕೆ ಹಿಜಾಬ್ ಧರಿಸಿ ಎಂದು ಹೇಳುವುದು ಎಷ್ಟು ಸರಿ? ಸಿದ್ದರಾಮಯ್ಯ ಹೀಗೆ ಆಡಳಿತ ಮಾಡಬಾರದು ಎಂದರು.

Tap to resize

Latest Videos

ಭಗವದ್ಗೀತಾ ಅಭಿಯಾನ ಮಹಾಸಮರ್ಪಣೆ: ಸಂಘಜೀವಿಯಾದ ಮಾನವ ಸಮಾಜದಿಂದ ಎಲ್ಲವನ್ನೂ ಪಡೆದುಕೊಂಡಿದ್ದಾನೆ. ಎಲ್ಲರೂ ಪಡೆದುಕೊಳ್ಳುವವರೇ ವಿನಃ ಮರಳಿ ಕೊಡುವವರು ಯಾರೂ ಇಲ್ಲದಿದ್ದರೆ ಅಂಥ ಸಮಾಜ ಬಹಳ ಬೇಗ ಹಾಳಾಗುತ್ತದೆ ಎಂದು ಉಡುಪಿ ಪೇಜಾವರಮಠದ ವಿಶ್ವಪ್ರಸನ್ನ ತೀರ್ಥ ಶ್ರೀಪಾದರು ಹೇಳಿದರು. ನಗರದ ಲಿಂಗರಾಜು ಕಾಲೇಜು ಮೈದಾನದಲ್ಲಿ ಶನಿವಾರ ಶ್ರೀ ಭಗವದ್ಗೀತಾ ಅಭಿಯಾನ-ಕರ್ನಾಟಕ ಹಾಗೂ ಜನಕಲ್ಯಾಣ ಟ್ರಸ್ಟ್‌ ಬೆಳಗಾವಿ ಸಂಯುಕ್ತಾಶ್ರಯದಲ್ಲಿ ಮಹಾಸಮರ್ಪಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಟಿಪ್ಪು ಬಳಿಕ 2ನೇ ಅವತಾರವೇ ಸಿದ್ದರಾಮಯ್ಯ: ಶಾಸಕ ಬಸನಗೌಡ ಯತ್ನಾಳ

ಸೋಂದಾ ಸ್ವರ್ಣವಲ್ಲಿಯ ಗಂಗಾಧರೇಂದ್ರ ಸರಸ್ವತಿ ಸ್ವಾಮೀಜಿ ಮಾತನಾಡಿ, ಭಾರತ ಜಗದ್ಗುರು ಆಗಬೇಕೆಂದು ನಾವೆಲ್ಲ ಬಯಸುತ್ತೇವೆ. ಇದಕ್ಕೆ ನಾವೆಲ್ಲರೂ ಒಂದು ಬಗೆಯಲ್ಲಿ ಸಿದ್ಧರಾಗಬೇಕು. ಭಗವದ್ಗೀತೆಯ ತತ್ವಗಳನ್ನು ನಮ್ಮೊಳಗೆ ಅಳವಡಿಸಿಕೊಳ್ಳಬೇಕಿದೆ. ಈ ಬಾರಿ 10ನೇ ಅಧ್ಯಾಯವನ್ನು ಕಲಿಸಲಾಗಿದೆ ಎಂದರು. ಕೇಂದ್ರ ಸಂಸದೀಯ ವ್ಯವಹಾರಗಳ ಸಚಿವ ಪ್ರಹ್ಲಾದ್‌ ಜೋಶಿ, ಸಂಸದರಾದ ಅಣ್ಣಾಸಾಹೇಬ ಜೊಲ್ಲೆ, ವಿಧಾನಸಭೆ ಮಾಜಿ ಅಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ಇತರರು ಇದ್ದರು.

click me!