ಬಿಲ್ ಬಾಕಿ ಪಾವತಿಸದ ರಾಜ್ಯದ 16 ಸರ್ಕಾರಿ ಕಾಲೇಜುಗಳ ವಿದ್ಯುತ್ ಕಟ್!

By Suvarna NewsFirst Published Nov 10, 2022, 9:51 PM IST
Highlights

ರಾಜ್ಯದ ಸರ್ಕಾರಿ ಇಂಜಿನಿಯರಿಂಗ್ ಕಾಲೇಜು ಹಾಗೂ ಪಾಲಿಟೆಕ್ನಿಕ್ ಕಾಲೇಜುಗಳಿಗೆ ಈಗ ಕತ್ತಲು ಆವರಿಸಿದೆ. ರಾಜ್ಯದ 16 ಸರ್ಕಾರಿ ಇಂಜಿನಿಯರಿಂಗ್ ಕಾಲೇಜುಗಳು ವಿದ್ಯುತ್ ಬಿಲ್ ಬಾಕಿ ಪಾವತಿಸದ ಕಾರಣ  ವಿದ್ಯುತ್ ನಿಗಮ  ಫ್ಯೂಸ್ ಕಟ್ ಮಾಡಿದೆ.

ವರದಿ: ಪುಟ್ಟರಾಜು. ಆರ್.ಸಿ.  ಏಷಿಯಾನೆಟ್  ಸುವರ್ಣ  ನ್ಯೂಸ್ 

ಚಾಮರಾಜನಗರ (ನ.10): ರಾಜ್ಯದ ಸರ್ಕಾರಿ ಇಂಜಿನಿಯರಿಂಗ್ ಕಾಲೇಜು ಹಾಗೂ ಪಾಲಿಟೆಕ್ನಿಕ್ ಕಾಲೇಜುಗಳಿಗೆ ಈಗ ಕತ್ತಲು ಆವರಿಸಿದೆ. ಸರ್ಕಾರಿ ಸೀಟು ಸಿಕ್ಕರೆ ಅದೇ ಪುಣ್ಯ ಎಂದು ರಾಜ್ಯದ ನಾನಾ ಭಾಗಗಳಿಂದ  ನೂರಾರು ಕಿಲೋ ಮೀಟರ್ ದೂರದಿಂದ ವಿದ್ಯಾರ್ಥಿಗಳು ವ್ಯಾಸಂಗಕ್ಕಾಗಿ ಬರ್ತಾರೆ. ಆದ್ರೆ ಕಾಲೇಜಿಗೆ ಕತ್ತಲು ಆವರಿಸಿದರೆ ಅವರು ಏನು ಮಾಡಬೇಕು. ಇದು ಚಾಮರಾಜನಗರದ ಸರ್ಕಾರಿ ಇಂಜಿನಿಯರಿಂಗ್ ಕಾಲೇಜಿನಲ್ಲಿರುವ  ಲ್ಯಾಬ್, ಒಂದು ವಾರದಿಂದ ಬಂದ್ ಆಗಿರುವ ಕಂಪ್ಯೂಟರ್ ಗಳು. ಯಾಕೆಂದರೆ ಉನ್ನತ ಶಿಕ್ಷಣ ಇಲಾಖೆ ಕರೆಂಟ್ ಬಿಲ್ ನ್ನೇ ಪಾವತಿಸಿಲ್ಲ. ಇದು ಗಡಿ ಜಿಲ್ಲೆ ಚಾಮರಾಜನಗರ ಜಿಲ್ಲೆಯ ಒಂದು ಕಾಲೇಜಿನ ಕಥೆಯಲ್ಲ  ರಾಜ್ಯದ 16 ಸರ್ಕಾರಿ ಇಂಜಿನಿಯರಿಂಗ್ ಕಾಲೇಜುಗಳಾದ ಹಾಸನ ಜಿಲ್ಲೆಯ ಎಂ.ಕಾಲೇಜು 5 ಲಕ್ಷ ರೂ, ಮೊಸಳೆ ಹೊಸಹಳ್ಳಿಯ 5.64 ಲಕ್ಷ ರೂ, ಕುಶಾಲನಗರದ ಇಂಜಿನಿಯರಿಂಗ್ ಕಾಲೇಜು 4.25 ಲಕ್ಷ ರೂ ರಾಮನಗರ ಇಂಜಿನಿಯರಿಂಗ್ ಕಾಲೇಜು 4.50 ಲಕ್ಷ ರೂ, ಬೆಂಗಳೂರಿನ ಎಸ್.ಜಿ. ಪಾಲಿಟೆಕ್ನಿಕ್ 6.80 ಲಕ್ಷ ರೂ, ಮಂಡ್ಯ ಜಿಲ್ಲೆಯ ಕೆ.ಆರ್.ಪೇಟೆಯ ಎಂ ಕಾಲೇಜು 5.20 ಲಕ್ಷ ರೂ, ಹಾವೇರಿಯ ಎಂ. ಕಾಲೇಜಿನ 5.70 ಲಕ್ಷ ರೂ ಹೀಗೆ  ಸುಮಾರು 80 ಲಕ್ಷ ರೂ. ವಿದ್ಯುತ್ ಬಿಲ್ ಅನ್ನು ಪಾವತಿಸದ ಹಿನ್ನೆಲೆಯಲ್ಲಿ ವಿದ್ಯುತ್ ಫ್ಯೂಸ್ ಕಟ್ ಮಾಡಲಾಗಿದೆ. ಚಾಮರಾಜನಗರದ ಸರ್ಕಾರಿ ಇಂಜಿನಿಯರಿಂಗ್ ಕಾಲೇಜಿಗೆ 2 ಲಕ್ಷ ಹಾಗೂ ಪಾಲಿಟೆಕ್ನ್ ಗೆ 82 ಸಾವಿರ ರೂಪಾಯಿಯನ್ನು ಸೆಸ್ಕಾಂಗೆ ಪಾವತಿಸಬೇಕಿದೆ.

ವಿದ್ಯುತ್ ಇಲ್ಲದ ಕಾರಣ ಲ್ಯಾಬ್ ಪಾಠವಿಲ್ಲದೆ ಮಕ್ಕಳು ತೊಂದರೆ ಅನುಭವಿಸಬೇಕಾಗಿದೆ. ಸರ್ಕಾರಿ ಕಾಲೇಜುಗಳಿಗೆ ಸೌಲಭ್ಯ ಕಲ್ಪಿಸುವುದು ಸರ್ಕಾರದ ಕರ್ತವ್ಯ. ಇದು ಕೇವಲ ಚಾಮರಾಜನಗರ ಮಾತ್ರವಲ್ಲ ಹಾಸನ, ಮಂಡ್ಯ, ಹಾವೇರಿ, ರಾಮನಗರ ಜಿಲ್ಲೆಯ ಕಾಲೇಜುಗಳ ಸಮಸ್ಯೆಯಾಗಿದೆ. ಅಂತಿಮ ವರ್ಷದ ಇಂಜಿನಿಯರಿಂಗ್ ವಿದ್ಯಾರ್ಥಿಗಳಿಗೆ ಲ್ಯಾಬ್ ಇಲ್ಲದೆ ಬಹಳಷ್ಟು ತೊಂದರೆಯಾಗಿದ್ದು  ಈ ಬಗ್ಗೆ ವಿದ್ಯಾರ್ಥಿಗಳು ಚಾಮರಾಜನಗರ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದ್ದಾರೆ.

UP Elections : 300 ಯುನಿಟ್ ಉಚಿತ ವಿದ್ಯುತ್ ಬೇಕೆ, ಹೀಗೆ ಮಾಡಿ ಅಂದ್ರು ಅಖಿಲೇಶ್ ಯಾದವ್!

ಚಾಮರಾಜನಗರ ಸರ್ಕಾರಿ ಕಾಲೇಜಿನಲ್ಲಿ ಜನರೇಟರ್ ವ್ಯವಸ್ಥೆ ಇದೆಯಾದರೂ ಅದು ಕುಡಿಯುವ ನೀರು ಕಲ್ಪಿಸಲು ನೆರವಾಗುತ್ತದೆ. ಆದರೆ ಮೆಕಾನಿಕಲ್ ವಿಭಾಗ  ಹಾಗು   ಲ್ಯಾಬ್ ತರಗತಿ ನಡೆಯಬೇಕೆಂದರೆ ವಿದ್ಯುತ್ ಬೇಕೆ ಬೇಕು. ಮಕ್ಕಳಿಗೆ ಪರೀಕ್ಷೆ ಸಮೀಪಿಸುತ್ತಿದೆ. ಸಾಕಷ್ಟು ಹೋರಾಟಗಳ ಬಳಿಕ ಗಡಿಜಿಲ್ಲೆಗೆ ಇಂಜಿನಿಯರಿಂಗ್ ಕಾಲೇಜು ಬಂದಿದೆ. ಇಲ್ಲಿ ಏನಾದರೂ ಸಮಸ್ಯೆ ಆದರೆ ತಕ್ಷಣ ಸ್ಪಂದಿಸಲು ಅಧಿಕಾರಿಗಳು ಗಮನ ಹರಿಸುವುದಿಲ್ಲ. ನೂರಾರು ಕಿ.ಮೀ. ದೂರದ ಊರುಗಳಿಂದ ಬಂದಿರುವ ವಿದ್ಯಾರ್ಥಿಗಳು   ಹೀಗೆ ವಾರಗಟ್ಟಲೆ ವಿದ್ಯುತ್ ಇಲ್ಲದೆ ಸುಮ್ಮನೆ ಕಾಲಹರಣ ಮಾಡಿ ಮನೆಗೆ ತೆರಳಬೇಕಾಗುತ್ತದೆ. ಹಾಗಾಗಿ   ಉನ್ನತ ಶಿಕ್ಷಣ ಇಲಾಖೆಯ ಅಧಿಕಾರಿಗಳು ಕೂಡಲೇ ವಿದ್ಯುತ್ ಬಿಲ್ ಪಾವತಿಸಿ ವಿದ್ಯಾರ್ಥಿಗಳಿಗೆ ಅನುಕೂಲ ಮಾಡಿಕೊಡಬೇಕು.

Bescom Alert: ಬೆಂಗಳೂರಿಗರೇ.. ಈ ತಿಂಗಳ ಕರೆಂಟ್‌ ಬಿಲ್‌ ಆನ್‌ಲೈನ್‌ ಪೇಮೆಂಟ್‌ ಮಾಡ್ಬೇಡಿ..!

ಒಟ್ಟಾರೆ ಉನ್ನತ ಶಿಕ್ಷಣಕ್ಕಾಗಿ ಕೋಟ್ಯಾಂತರ ರೂಪಾಯಿ ಮೀಸಲಿಟ್ಟಿದ್ದೇವೆ. ಕಾಲೇಜುಗಳಿಗೆ ಅತ್ಯಾಧುನಿಕ ಸ್ಪರ್ಶ ಕಲ್ಪಿಸಿದ್ದೇವೆ ಎಂದು ನಿರೀಕ್ಷೆ ಮೀರಿ ಪ್ರಚಾರ ಪಡೆಯುವ ಉನ್ನತ ಶಿಕ್ಷಣ ಸಚಿವರು ವಿದ್ಯಾ ದೇಗುಲಕ್ಕೆ ಇನ್ನಾದರೂ ಬೆಳಕು ಕಲ್ಪಿಸಲು ತ್ವರಿತ ಕ್ರಮ ಕೈಗೊಳ್ಳುವರೇ ಎಂಬುದನ್ನು ಕಾದು ನೋಡಬೇಕಿದೆ.

click me!