ಹಿಂದೂ ಪದ ವಿವಾದಕ್ಕೆ ವಿಷಾದ, ಆಕ್ಷೇಪಿಸಿದವರಿಗೆಲ್ಲ ದಾಖಲೆ ಕಳಿಸುವೆ ಎಂದ ಜಾರಕಿಹೊಳಿ

By Suvarna NewsFirst Published Nov 10, 2022, 9:01 PM IST
Highlights

ನನ್ನ ಸಿದ್ಧಾಂತದಿಂದ ಹಿಂದೆ ಸರಿದಿಲ್ಲ. ನನ್ನ ಹೇಳಿಕೆ ಕನ್ವಿಯನ್ಸ್ ಮಾಡಲು ಪ್ರಯತ್ನ. ನಾನು ಹೇಳಿದ್ದು ಬಳಿಕ ಷಡ್ಯಂತ್ರ ನಡೆದದ್ದು ಎಲ್ಲವೂ ತನಿಖೆ ಆಗಲಿ. ನನ್ನ ಮೇಲೆ ಒತ್ತಡ ಇರಲಿಲ್ಲ.. ಸ್ಥಳೀಯ ನಾಯಕರು ಕನ್ವಿಯನ್ಸ್ ಮಾಡಿದ್ದಾರೆ ಎಂದ ಸತೀಶ್ ಜಾರಕಿಹೊಳಿ.

ವರದಿ: ಮಹಾಂತೇಶ ಕುರಬೇಟ್, ಏಷ್ಯಾನೆಟ್ ಸುವರ್ಣನ್ಯೂಸ್

ಬೆಳಗಾವಿ (ನ.10): ಹಿಂದೂ ಪದದ ವಿವಾದಿತ ಹೇಳಿಕೆಗೆ ಎಲ್ಲೆಡೆ ಆಕ್ರೋಶ ವ್ಯಕ್ತವಾಗುತ್ತಿದ್ದಂತೆ ಸಿಎಂ ಬಸವರಾಜ ಬೊಮ್ಮಾಯಿಗೆ ಪತ್ರ ಬರೆದು ವಿಷಾದ ವ್ಯಕ್ತಪಡಿಸಿ ತಮ್ಮ ಹೇಳಿಕೆ ಹಿಂಪಡೆದಿರುವ ಸತೀಶ್ ಜಾರಕಿಹೊಳಿ ಇಂದು ಬೆಳಗಾವಿಯಲ್ಲಿ ಸುದ್ದಿಗೋಷ್ಠಿ ನಡೆಸಿದರು. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸತೀಶ್ ಜಾರಕಿಹೊಳಿ, 'ನಾನು ಹೇಳಿದ ಹೇಳಿಕೆ ವಾಪಸ್ ಪಡೆಯಲು ಬೇರೆ ಬೇರೆ ಕಾರಣಗಳಿಂದ ಸಾಕಷ್ಟು ಒತ್ತಡ ಇತ್ತು. ನನ್ನ ಹೇಳಿಕೆಯನ್ನು ನಿನ್ನೆ ವಾಪಸ್ ಪಡೆದು ವಿಷಾದ ಕೂಡ ವ್ಯಕ್ತಪಡಿಸಿದೀನಿ. ನಿನ್ನೆ ನಮ್ಮ ಎಲ್ಲಾ ನಾಯಕರ ಜೊತೆ ಚರ್ಚೆ ಮಾಡಿ ನನ್ನ ಹೇಳಿಕೆ ವಾಪಸ್ ಪಡೆಯುವ ಕೆಲಸ ಆಗಿದೆ. ನಾನು ಹೇಳಿದಂತಹ ವಿಷಯ ಬಿಟ್ಟು ಬೇರೆ ಬೇರೆ ವಿಷಯ ಹೇಳುವಂತಹ ಚರ್ಚೆ ರಾಷ್ಟ್ರ, ರಾಜ್ಯದಲ್ಲಿ ಎಲ್ಲೆಡೆ ಆಯಿತು. ಹೀಗಾಗಿ ಇದು ನನ್ನ ಹೇಳಿಕೆ ಹಿಂಪಡೆಯಲು ನಿಜವಾದ ಕಾರಣ. ನೈಜ ಸ್ಥಿತಿ ಬಿಟ್ಟು ಬೇರೆ ಎಲ್ಲೆಲ್ಲೋ ಹೊರಟು ಹೋಯಿತು. ಅದು ನಮಗೂ ಡ್ಯಾಮೇಜ್ ಮಾಡುವ ಪ್ರಯತ್ನ ಪಟ್ಟಿತು. ಪಕ್ಷಕ್ಕೆ ಡ್ಯಾಮೇಜ್ ಮಾಡುವ ಪ್ರಯತ್ನ ಆಯ್ತು. ಹೀಗಾಗಿ ಆ ಹೇಳಿಕೆಯನ್ನು ವಾಪಸ್ ಪಡೆದು ಸಿಎಂಗೆ ಪತ್ರ ಬರೆದಿದ್ದೇನೆ. ಹೀಗೆ ನನಗಾಗಿದೆ ನಂತರ ಬೇರೆಯವರಿಗೆ ಆಗಬಾರದು. ನಾನು ಸತೀಶ್ ಜಾರಕಿಹೊಳಿ ಒಬ್ಬನೇ ಇಲ್ಲ. ಒಬ್ಬನದ್ದೇ ಸ್ಟೇಟ್‌ಮೆಂಟ್ ಇದ್ರೆ ಬೇರೆ ಆಗುತ್ತಿತ್ತು. ನಾನು ಪಕ್ಷದಲ್ಲಿ ಇರುವುದರಿಂದ ಪಕ್ಷಕ್ಕೆ ಡ್ಯಾಮೇಜ್ ಆಗಬಾರದು ಎಂಬುದು ನಮ್ಮ ಉದ್ದೇಶ. ಯಾವುದೇ ಸರ್ಕಾರದ ಒತ್ತಡ ಇಲ್ಲ. ನಮ್ಮ ಸಾಕಷ್ಟು ನಾಯಕರ ಜೊತೆ ಚರ್ಚಿಸಿ ನಿರ್ಧಾರಕ್ಕೆ ಬಂದಿದೀನಿ ಅಷ್ಟೇ' ಎಂದು ತಿಳಿಸಿದ್ದಾರೆ.‌ 

'ಎಲ್ಲರೂ ನನ್ನ ಪರವಾಗಿ ಬರಬೇಕು ಅಂತಾ ಆಸೆನೂ ಪಟ್ಟಿಲ್ಲ, ನಿರೀಕ್ಷೆಯೂ ಇರಲಿಲ್ಲ'
ಇನ್ನು ತಮ್ಮ ಹೇಳಿಕೆಯನ್ನು ಯಾರೂ ಸಮರ್ಥನೆ ಮಾಡಿಕೊಳ್ಳಲಿಲ್ಲ ಎಂಬ ಮಾಧ್ಯಮಗಳ ಪ್ರಶ್ನಗೆ ಉತ್ತರಿಸಿದ ಸತೀಶ್ ಜಾರಕಿಹೊಳಿ, 'ಸಮರ್ಥನೆ ಮಾಡುವ ಪ್ರಶ್ನೆಯೇ ಇಲ್ಲ. ನಾನು ಮೊದಲೇ ಹೇಳಿದೀನಿ ಅದು ಖಾಸಗಿ ಕಾರ್ಯಕ್ರಮ. ಕಾಂಗ್ರೆಸ್ ಪಕ್ಷಕ್ಕೂ ಅದಕ್ಕೂ ಸಂಬಂಧ ಇಲ್ಲ. ಎಲ್ಲರೂ ನನ್ನ ಪರವಾಗಿ ಬರಬೇಕು ಅಂತಾ ಆಸೆನೂ ಪಟ್ಟಿಲ್ಲ, ನಿರೀಕ್ಷೆಯೂ ಇರಲಿಲ್ಲ. ಕೆಲವು ನಮ್ಮ ಕಾಂಗ್ರೆಸ್ ಮುಖಂಡರು ಅನೇಕ ಜನರು ಮಾತನಾಡಿದ್ದಾರೆ. ಈ ಘಟನೆ ಬಗ್ಗೆ ಅವರಿಗೆಷ್ಡು Knowledge ಇತ್ತೋ ಮಾತನಾಡಲು ಪ್ರಯತ್ನ ಮಾಡಿದ್ದಾರೆ' ಎಂದು ತಿಳಿಸಿದರು. 

'ಇದು ಇಷ್ಟಕ್ಕೆ ಮುಗಿದಿಲ್ಲ, ಇನ್ನೂ ಸಾಬೀತು ಮಾಡುವಂತಹ ಪ್ರಯತ್ನಕ್ಕೆ ನಾವು ಮುಂದೆ ಕೈ ಹಾಕ್ತೀವಿ'
ಯಾವುದೇ ಕಾರಣಕ್ಕೂ ನನ್ನ ಹೇಳಿಕೆ ವಾಪಸ್ ಪಡೆಯಲ್ಲ ಎಂದು ಪಟ್ಟು ಹಿಡಿದಿದ್ದ ತಾವು ಏಕೆ ಹೇಳಿಕೆ ವಾಪಸ್ ಪಡೆದ್ರಿ ಯಾರದ್ದಾದರೂ ಒತ್ತಡ ಇತ್ತಾ ಎಂಬ ಮಾಧ್ಯಮಗಳ ಪ್ರಶ್ನೆಗೆ ಉತ್ತರಿಸುತ್ತಾ,'ನನ್ನಿಂದ ನನ್ನ ಪಕ್ಷಕ್ಕೆ ಡ್ಯಾಮೇಜ್ ಆಗಬಾರದು. ನನ್ನ ನಿಲುವಿನಿಂದ ಪಕ್ಷಕ್ಕೆ ಹಾನಿಯಾಗಬಾರದೆಂದು ಮುಖ್ಯವಾಗಿ ಈ ನಿರ್ಣಯ ಕೈಗೊಂಡಿದ್ದೇನೆ' ಎಂದು ತಿಳಿಸಿದರು. 

ಇನ್ನು ತಮ್ಮ ಹೇಳಿಕೆ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿದ ಪಕ್ಷದ ನಾಯಕರಿಗೆ, ಆರೋಪ ಮಾಡುವವರಿಗೆ ದಾಖಲೆ ಕಳಿಸುವ ಕೆಲಸ ಮಾಡ್ತೀರಾ ಎಂಬ ಮಾಧ್ಯಮಗಳ ಪ್ರಶ್ನೆಗೆ ಉತ್ತರಿಸುತ್ತಾ, 'ಖಂಡಿತ ಕಳಿಸುತ್ತೇನೆ. ಅದಕ್ಕೆಲ್ಲ ಟೈಮ್ ಬೇಕಾಗುತ್ತೆ. ಸಾಕಷ್ಟು ವಿವಾದ ಆಗಿದೆ. ಆರೋಪ ನನ್ನ ಮೇಲೆ ಬಂದಿದೆ. ನಾನು ಏನೂ ತಪ್ಪು ಮಾಡಿಲ್ಲ ಎಂಬುದು ಸಾಬೀತು ಮಾಡಬೇಕಾದ ಜವಾಬ್ದಾರಿ ಇದೆ. ಇದು ಇಷ್ಟಕ್ಕೆ ಮುಗಿದಿಲ್ಲ. ಇನ್ನೂ ಸಾಬೀತು ಮಾಡುವಂತಹ ಪ್ರಯತ್ನಕ್ಕೆ ನಾವು ಮುಂದೆ ಕೈ ಹಾಕ್ತೀವಿ. ನಮ್ಮ ಪಕ್ಷದವರಿಗೂ ಹೇಳುತ್ತೇವೆ. ವಿರೋಧ ಪಕ್ಷದವರಿಗೂ ಹೇಳುತ್ತೇವೆ. ಮಾಧ್ಯಮಗಳಿಗೂ ಹೇಳುವ ಪ್ರಯತ್ನ ಮಾಡ್ತೀವಿ' ಎಂದು ತಿಳಿಸಿದರು. 

ವಿಕಿಪೀಡಿಯ ಅಧಿಕೃತ ಅಲ್ಲ ಎಂಬ ಸಿಎಂ ಬಸವರಾಜ ಬೊಮ್ಮಾಯಿ ಹೇಳಿಕೆಗೆ ಪ್ರತಿಕ್ರಿಯಿಸಿದ ಸತೀಶ್ ಜಾರಕಿಹೊಳಿ, 'ನೋಡಿ ಅದಕ್ಕೆ ಬಹಳ ಸಮಯ ಬೇಕು. ತಜ್ಞರು ಬೇಕು‌‌. ನಾವು ಅವರಿಗೂ ಆಹ್ವಾನ ಮಾಡ್ತೀವಿ. ಎಲ್ಲ ಪಕ್ಷದವರಿಗೂ ಹೇಳ್ತೀವಿ. ನೋಡಿ ಇದರಲ್ಲಿ ಹೀಗಿದೆ. ಆರೋಪ ಮಾಡುವುದು ಸರಿಯಲ್ಲ ಅಂತಾ ಕನ್ವಿಯನ್ಸ್ ಮಾಡಲು ಪ್ರಯತ್ನ ಮಾಡ್ತೀವಿ' ಅಂತಾ ತಿಳಿಸಿದ್ದಾರೆ. 

ಇನ್ನು ಸತೀಶ್ ಜಾರಕಿಹೊಳಿ ಎಂದೂ ದುಡುಕುವರಲ್ಲ ಎಂಬ ಸಿಎಂ ಬಸವರಾಜ ಬೊಮ್ಮಾಯಿ ಹೇಳಿಕೆಗೆ ಪ್ರತಿಕ್ರಿಯಿಸುತ್ತಾ, 'ನಾನು ದುಡುಕಿಲ್ಲ ಅಂತಾ ಹೇಳೋಕೆ ಇದನ್ನೆಲ್ಲ ಮುಂದೆ ಇಟ್ಟಿದ್ದು. ನಾನು ನೋಡು ಅಂದಿದ್ದು ನೋಡೋಕೆ ತಯಾರಿಲ್ಲ. ನೀವು ಏನು ನೋಡ್ತಿದೀರಿ ಅದನ್ನ ಪ್ರಶ್ನೆ ಮಾಡುತ್ತಿದ್ದೀರಿ. ನೀವು ಏನು ನೋಡುತ್ತಿದ್ದೀರಿ ಅದು ಪ್ರಶ್ನೆ ಬಂದಿದೆ. ಹೀಗಾಗಿ ಸರ್ಕಾರದಲ್ಲಿ ಸಮಾಜದಲ್ಲಿ, ಸಾರ್ವಜನಿಕರಲ್ಲಿ, ಪಕ್ಷಗಳಲ್ಲಿ ಇದು ಗೊಂದಲ ಆಯಿತು. ಹೀಗಾಗಿ ನಾವು ಆಡಿದ ಮಾತುಗಳನ್ನು ಸೂಕ್ಷ್ಮವಾಗಿ ವಿಥ್ ಡ್ರಾ ಮಾಡಿಕೊಳ್ಳುತ್ತಿದ್ದೇವೆ ಎಂದು ಹೇಳಿದ್ದೇವೆ' ಎಂದು ತಿಳಿಸಿದರು. ನನ್ನ Ideologyಯಿಂದ ನಾನು ಹಿಂದೆ ಸರಿದಿಲ್ಲ. ಎಲ್ಲರಿಗೂ ಕನ್ವಿಯನ್ಸ್ ಮಾಡೋದು ಮುಂದಿನ ಸ್ಟೆಪ್ ಈಗ ಅದರ ಅವಶ್ಯಕತೆ ಇಲ್ಲ. 

ಹಿಂದೂ ಅನ್ನೋದು ನಾಗರಿಕ ಸಮಾಜ ಬಳಸದಂತ ಪದವಾಗಿದೆ: ಸಾಹಿತಿ ಸೂಳಿಭಾವಿ

'ನಾಳೆ ಚುನಾವಣೆ ಬಂದಾಗ ಈ ವಿಷಯ ಮುಂದಿಡುತ್ತಾರೆಂದು ನಮಗೆ ಗೊತ್ತಿದೆ‌‌'
ಮುಂದೆ ಸಾರ್ವಜನಿಕರಿಗೆ ಯಾವ ರೀತಿ ಕನ್ವಿಯನ್ಸ್ ಮಾಡಬೇಕೆಂದು ಚರ್ಚಿಸುವುದಾಗಿ ತಿಳಿಸಿರುವ ಸತೀಶ್ ಜಾರಕಿಹೊಳಿ, 'ನಾಳೆ ಚುನಾವಣೆ ಬಂದಾಗ ಈ ವಿಷಯ ಮುಂದಿಡುತ್ತಾರೆಂದು ನಮಗೆ ಗೊತ್ತಿದೆ‌‌. ಚುನಾವಣೆ ಸಂದರ್ಭದಲ್ಲಿ ಈ ವಿಷಯ ಯಾವ ರೀತಿ ತಡೆಯಬೇಕು. ಸಾರ್ವಜನಿಕರಲ್ಲಿ ಏನು ಹೇಳಬೇಕು ಅಂತಾ ವರಿಷ್ಠರ ಜೊತೆ ಚರ್ಚಿಸುತ್ತೇವೆ. ಚರ್ಚೆ ಆಗಲೇಬೇಕು ಪಕ್ಷ ಯಾವುದಾದರೂ ಒಂದು ನಿಲುವಿಗೆ ಬರಲೇಬೇಕು‌‌‌. ಪಕ್ಷದಲ್ಲಿ ಆಂತರಿಕ ಚರ್ಚೆ ಮಾಡ್ತೀವಿ. ಇದು ನನ್ನ ವೈಯಕ್ತಿಕವಾದ ಹೇಳಿಕೆ, ನಾನು ಒಬ್ಬ ಕಾಂಗ್ರೆಸ್ಸಿಗ. ಸಿಎಂ ಹಾಗೂ ಸರ್ಕಾರಕ್ಕೆ ಒತ್ತಡ  ಮಾಡಿ ತನಿಖೆ ಆಗಲಿ ಅಂತಾ ಹೇಳ್ತೇವೆ. ನಾನು ಹೇಳಿದ್ದು ಬಳಿಕ ಷಡ್ಯಂತ್ರ ನಡೆದದ್ದೂ ಎಲ್ಲವೂ ತನಿಖೆ ಆಗಬೇಕು. ಪಕ್ಷದ ವೇದಿಕೆಯಲ್ಲಿ ಚರ್ಚೆ ಮಾಡಿ ಸರ್ಕಾರದ ಮೇಲೆ ಒತ್ತಡ ಹಾಕ್ತೀವಿ‌‌ ಎಂದು ತಿಳಿಸಿರುವ ಸತೀಶ್ ಜಾರಕಿಹೊಳಿ ತಮ್ಮ ಹೇಳಿಕೆ ವಾಪಸ್ ಪಡೆಯಲು ತಮ್ಮ ಮೇಲೆ ಒತ್ತಡ ಇಲ್ಲ, ನಾಯಕರು ಸಲಹೆ ನೀಡಿದ್ದಾರೆ. ಸ್ಥಳೀಯ ನಾಯಕರು ಕನ್ವಿಯನ್ಸ್ ಮಾಡಿದ್ದಾರೆ ಎಂದು ತಿಳಿಸಿದ್ದಾರೆ.

ಹಿಂದೂ ಪದದ ಅರ್ಥ ಅಶ್ಲೀಲ ಎಂದ ಜಾರಕಿಹೊಳಿಗೆ, ಮುತಾಲಿಕ್ ಕ್ಲಾಸ್, ಕಾಂಗ್ರೆಸ್ ಖಂಡನೆ

ಇದನ್ನ ಇಲ್ಲಿಯೇ‌ ಮುಗಿಸಿಬಿಡಿ ಎಂದು ಕೈ ಮುಗಿದು ಮನವಿ ಮಾಡಿದ ಲಕ್ಷ್ಮೀ ಹೆಬ್ಬಾಳ್ಕರ್
ಹಿಂದೂ ಪದದ ಬಗ್ಗೆ ಸತೀಶ್ ಜಾರಕಿಹೊಳಿ ವಿವಾದಿತ ಹೇಳಿಕೆ ವಿಚಾರವಾಗಿ ಪ್ರತಿಕ್ರಿಯಿಸಿದ ಕೆಪಿಸಿಸಿ ವಕ್ತಾರೆ, ಬೆಳಗಾವಿ ಗ್ರಾಮೀಣ ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್, 'ಇದನ್ನ ಇಲ್ಲಿಗೆ ಮುಗಿಸಿಬಿಡಿ ಎಂದು ಕೈ ಮುಗಿದು ಮನವಿ ಮಾಡಿದರು‌. 'ನಿನ್ನೆ ಸಾಯಂಕಾಲ ಈ ಒಂದು ಪ್ರಕರಣಕ್ಕೆ ತೆರೆ ಎಳೆದಿದ್ದಾರೆ. ಹಿಂದೂ ಭಾವನೆ ಧಕ್ಕೆ ಆಗಿದೆ ಎಂಬುವುದು ಸೇರಿ ಎಲ್ಲ ವಿಚಾರ ಪತ್ರದಲ್ಲಿ ಉಲ್ಲೇಖಿಸಿದ್ದಾರೆ. ಕೈ ಮುಗಿದು ಮನವಿ ಮಾಡ್ತೇನೆ ಇದನ್ನ ಇಲ್ಲಿಗೆ ಮುಗಿಸಿಬಿಡಿ. ನಮ್ಮ ಕಾರ್ಯಾಧ್ಯಕ್ಷರು ಮಾತನಾಡಿದ ಹೇಳಿಕೆ ವಾಪಸ್ ಪಡೆದು ವಿಷಾದ ವ್ಯಕ್ತಪಡಿಸಿದ್ದಾರೆ' ಎಂದು ತಿಳಿಸಿದ್ದಾರೆ. ಇನ್ನು ಸತೀಶ್ ಜಾರಕಿಹೊಳಿ ಹಿಂದೂ ಧರ್ಮ ಅಷ್ಟೇ ಅಲ್ಲ ಲಿಂಗಾಯತ ಸಮುದಾಯಕ್ಕೂ ಅಪಮಾನ ಮಾಡಿದ್ದಾರೆ ಎಂಬ ರಾಜ್ಯಸಭಾ ಸದಸ್ಯ ಈರಣ್ಣ ಕಡಾಡಿ ಹೇಳಿಕೆಗೆ ಪ್ರತಿಕ್ರಿಯಿಸಿ, 'ಒಂದೊಂದು ಧರ್ಮಕ್ಕೆ ಒಂದೊಂದು ಜಾತಿಗೆ ಬಣ್ಣ ಕಟ್ಟೋದು ಬೇಡ. ಜಾತಿಗೆ ಬಣ್ಣ ಕಟ್ಟಲು ನಾವು ಬಯಸಲ್ಲ‌. ಅನೇಕ ಜನಪರ ಕಾರ್ಯ ನಮ್ಮ ಕಾರ್ಯಾಧ್ಯಕ್ಷರು ಮಾಡಿದ್ದಾರೆ ಎಂದು ತಿಳಿಸಿದ್ದಾರೆ.

click me!