ಧಾರ್ಮಿಕ ದತ್ತಿ ದೇವಾಲಯದಲ್ಲಿ ಮುದ್ರಾಧಾರಣೆ ನಿಷೇಧ, ಸರ್ಕಾರದ ಆದೇಶಕ್ಕೆ ಮಾಧ್ವರ ವಿರೋಧ

By Gowthami K  |  First Published Nov 10, 2022, 3:36 PM IST

ರಾಜ್ಯ ಸರ್ಕಾರದ ಧಾರ್ಮಿಕ ದತ್ತಿ ಇಲಾಖೆ ಮಾಡಿರುವ ಆದೇಶವೊಂದು ಇದೀಗ ಮಾಧ್ವ ತತ್ವ ಅನುಯಾಯಿಗಳ ವಿರೋಧಕ್ಕೆ ಕಾರಣವಾಗಿದೆ. ಇಲಾಖಾ ವ್ಯಾಪ್ತಿಗೆ ಒಳಪಟ್ಟ ದೇವಾಲಯಗಳಲ್ಲಿ ಮುದ್ರಾಧಾರಣೆ ಸಹಿತ ಕೆಲವು ಆಚರಣೆಗಳಿಗೆ ಅವಕಾಶವಿಲ್ಲ ಎಂದು ಸರಕಾರ ಹೇಳಿದೆ.


ವರದಿ: ಶಶಿಧರ ಮಾಸ್ತಿಬೈಲು, ಏಷ್ಯಾನೆಟ್ ಸುವರ್ಣ ನ್ಯೂಸ್

ಉಡುಪಿ (ನ.10): ರಾಜ್ಯ ಸರ್ಕಾರದ ಧಾರ್ಮಿಕ ದತ್ತಿ ಇಲಾಖೆ ಮಾಡಿರುವ ಆದೇಶವೊಂದು ಇದೀಗ ಮಾಧ್ವ ತತ್ವ ಅನುಯಾಯಿಗಳ ವಿರೋಧಕ್ಕೆ ಕಾರಣವಾಗಿದೆ. ಇಲಾಖಾ ವ್ಯಾಪ್ತಿಗೆ ಒಳಪಟ್ಟ ದೇವಾಲಯಗಳಲ್ಲಿ ಮುದ್ರಾಧಾರಣೆ ಸಹಿತ ಕೆಲವು ಆಚರಣೆಗಳಿಗೆ ಅವಕಾಶವಿಲ್ಲ ಎಂದು ಹೇಳಿರುವುದರ ವಿರುದ್ಧ ಆಕ್ರೋಶ ವ್ಯಕ್ತವಾಗಿದೆ. ಧಾರ್ಮಿಕ ದತ್ತಿ ಇಲಾಖೆಗೆ ಒಳಪಟ್ಟ ದೇವಾಲಯಗಳಲ್ಲಿ ಮುದ್ರಾ ಧಾರಣೆ , ಜಯಂತಿ ಆಚರಣೆಗಳಿಗೆ ಅವಕಾಶವಿಲ್ಲ ಎಂದು ಧಾರ್ಮಿಕ ದತ್ತಿ ಇಲಾಖೆಯ ಆಯುಕ್ತರು ಆದೇಶ ಮಾಡಿದ್ದಾರೆ. ಮುದ್ರ ಧಾರಣೆ ಸಂಪ್ರದಾಯವನ್ನು ಪಾಲಿಸುವ ಮಾಧ್ವ ಸಂಪ್ರದಾಯ ಅನುಯಾಯಿಗಳು ಇದಕ್ಕೆ ವಿರೋಧ ವ್ಯಕ್ತಪಡಿಸಿದ್ದಾರೆ. ಆಯಾ ದೇವಾಲಯಗಳಲ್ಲಿ ಚಾಲ್ತಿಯಲ್ಲಿರುವ ಪದ್ಧತಿ ಸಂಪ್ರದಾಯಗಳಿಗೆ ವಿರುದ್ಧವಾದ ಆಚರಣೆ ನಡೆಸುವಂತಿಲ್ಲ. ಈ ರೀತಿ ಧಾರ್ಮಿಕ ಆಚರಣೆ ನಡೆಸುವುದು ತಪ್ಪು, ಎಂದು ಆದೇಶದಲ್ಲಿ ತಿಳಿಸಲಾಗಿದೆ. ಕರ್ನಾಟಕ ಕರಾವಳಿ ಸೇರಿದಂತೆ ರಾಜ್ಯದ ವಿವಿಧ ಭಾಗಗಳಲ್ಲಿ ಮಾಧ್ವ ತತ್ವ ಅನುಸರಿಸುವವರಿದ್ದಾರೆ. ಈ ಆದೇಶದ ಹಿಂದೆ ತ್ರಿಮತಸ್ಥ ಬ್ರಾಹ್ಮಣ ಪಂಗಡಗಳ ನಡುವೆ ಒಡಕು ಮಾಡುವ ಪಿತೂರಿ ಇದೆ ಎಂದು ಆರೋಪಿಸಲಾಗಿದೆ. ಮಧ್ವಾಚಾರ್ಯರನ್ನು ಗುರುಗಳು ಎಂದು ಸ್ವೀಕರಿಸಿರುವ ದೊಡ್ಡ ಸಮುದಾಯಕ್ಕೆ ಈ ಆದೇಶದಿಂದ ನೋವಾಗಿದೆ. ದೇವಸ್ಥಾನದ ಚಾವಡಿಗಳಲ್ಲಿ ಅನೇಕ ಸಮಯದಿಂದ ಮುದ್ರಾಧಾರಣೆ ನಡೆಸಲಾಗುತ್ತಿದೆ. ಇದು ಭಕ್ತರ ಅನುಕೂಲಕ್ಕೆ ನಡೆದುಕೊಂಡು ಬಂದ ಸಂಪ್ರದಾಯವೇ ಹೊರತು ಯಾರಿಗೂ ಒತ್ತಾಯದ ಮುದ್ರಾಧಾರಣೆ ಮಾಡುವುದಿಲ್ಲ. ಹಾಗಾಗಿ ಈ ಆದೇಶವನ್ನು ತಕ್ಷಣ ವಾಪಸ್ ಪಡೆಯಬೇಕು ಎಂದು ಮಾಧ್ವ ಸಮುದಾಯ ಆಗ್ರಹಿಸಿದೆ.

Latest Videos

undefined

Udupi; ಅಮೇರಿಕಾದ ಆಸ್ಟಿನ್ ನಗರದಲ್ಲಿ ಪುತ್ತಿಗೆ ಶ್ರೀಗಳಿಂದ ಮುದ್ರಾಧಾರಣೆ

ಈ ಬಗ್ಗೆ ಸ್ವತಹ ಮಾಧ್ವ ಸಂಪ್ರದಾಯಕ್ಕೆ ಸೇರಿದ ಉಡುಪಿಯ ಶಾಸಕ ರಘುಪತಿ ಭಟ್ ಕೂಡ ವಿರೋಧ ವ್ಯಕ್ತಪಡಿಸಿದ್ದಾರೆ. ಈ ಕುರಿತು ಈಗಾಗಲೇ ಮುಖ್ಯಮಂತ್ರಿಗಳ ಜೊತೆ ಮಾತನಾಡಿದ್ದೇನೆ. ಧಾರ್ಮಿಕ ದತ್ತಿ ಸಚಿವರನ್ನು ಭೇಟಿಯಾಗಿ ಚರ್ಚಿಸುತ್ತೇನೆ. ಮಾಧ್ಯಪರಂಪರೆ ಇರುವ ದೇವಸ್ಥಾನಗಳಲ್ಲಿ ಮುದ್ರಾ ಧಾರಣೆ ಮಾಡಲಾಗುತ್ತೆ. ಸ್ವಾಮೀಜಿಗಳು ಭಕ್ತರಿಗೆ ಮುದ್ರಾ ಧಾರಣೆ ಮಾಡುತ್ತಾರೆ. ಇದು ಬಹಳ ಕಾಲದಿಂದ ಆಯಾ ಮತಗಳಿಗೆ ಸಂಬಂಧಪಟ್ಟವರು ನಡೆಸುತ್ತಿರುವ ಆಚರಣೆ. ನಾನು ಒಬ್ಬ ಶಾಸಕನಾಗಿ ಈ ನಿರ್ಧಾರವನ್ನು ವಿಮರ್ಶೆ ಮಾಡಿ ವಾಪಸ್ಸು ಪಡೆಯುವಂತೆ ಆಗ್ರಹಿಸುತ್ತಿದ್ದೇನೆ ಎಂದು ಹೇಳಿದ್ದಾರೆ.

ಶ್ರೀ ಕೃಷ್ಣ ಮಠದಲ್ಲಿ ತಪ್ತಮುದ್ರಾ ಧಾರಣೆ; ಯತಿಗಳಿಂದ ಮುದ್ರೆ ಹಾಕಿಸಿಕೊಳ್ಳಲು ಮುಗಿಬಿದ್ದ ಭಕ್ತರು

ಉಡುಪಿಯ ಅಷ್ಟ ಮಠಾಧೀಶರು ಕೂಡಾ ಈ ಬಗ್ಗೆ ಚರ್ಚೆ ನಡೆಸಿ ಸರಕಾರದ ಗಮನ ಸೆಳೆಯಲು ತೀರ್ಮಾನಿಸಿದ್ದಾರೆ. ಪರಸ್ಪರ ಭಿನ್ನ ಸಂಪ್ರದಾಯಗಳನ್ನು ಅನುಸರಿಸುವ ಬ್ರಾಹ್ಮಣ ಸಮುದಾಯದ ನಡುವೆ ಮತ್ತೊಂದು ಸುತ್ತಿನ ಚರ್ಚೆ ಈ ಬೆಳವಣಿಗೆಗಳಿಂದ ಜೀವ ಪಡೆದಂತಾಗಿದೆ.

click me!