ಹುಬ್ಬಳ್ಳಿ (ಅ.26): ರಷ್ಯಾ, ಇಂಗ್ಲೆಂಡ್‌ಗಳಲ್ಲಿ ಮಾತ್ರವಲ್ಲದೆ ದೇಶದ ಮಧ್ಯಪ್ರದೇಶ (Madhya Pradesh), ಮಹಾರಾಷ್ಟ್ರದಲ್ಲೂ ಕೊರೋನಾದ (Corona) ಹೊಸತಳಿ ಪತ್ತೆಯಾಗಿದೆ ಎಂದು ಹೇಳುತ್ತಿದ್ದು ಈ ಬಗ್ಗೆ ರಾಜ್ಯದ ಹಿರಿಯ ತಜ್ಞರು ಹಾಗೂ ತಾಂತ್ರಿಕ ಸಲಹಾ ಸಮಿತಿಯೊಂದಿಗೆ (Expert Committee) ಚರ್ಚೆ ನಡೆಸಿದ್ದೇವೆ.
ಈ ರೀತಿ ಕಂಡು ಬಂದಲ್ಲಿ ಸರ್ಕಾರದ ಗಮನಕ್ಕೆ ತರಬೇಕೆಂದು ಸೂಚನೆಯನ್ನು ಸಹ ನೀಡಿದ್ದೇವೆ ಎಂದು ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಕೆ.ಸುಧಾಕರ್ (Sudhakar) ತಿಳಿಸಿದ್ದಾರೆ.
ರಾಜ್ಯದಲ್ಲಿ ಕೊರೋನಾ ಮತ್ತಷ್ಟು ಇಳಿಕೆ: ನಿಯಂತ್ರಣಕ್ಕೆ ಬಂದ ಸೋಂಕು
ಪ್ರಧಾನ ಮಂತ್ರಿ ನರೇಂದ್ರ ಮೋದಿ (Narendra Modi) ಉತ್ತರ ಪ್ರದೇಶದ ವಾರಣಾಸಿಯಲ್ಲಿ ಭಾಗವಹಿಸಿದ್ದ ಆತ್ಮ ನಿರ್ಭರ ಸ್ವಸ್ಥ ಭಾರತ ನೇರ ಪ್ರಸಾರ ಕಾರ್ಯಕ್ರಮವನ್ನು ನಗರದ ಕಿಮ್ಸ್‌ನಲ್ಲಿ (KIMS) ವೀಕ್ಷಿಸಿದರು. ಬಳಿಕ ಕೊರೋನಾ (Corona) ಎವೈ 4.2 ವೇರಿಯೆಂಟ್ ದೇಶದಲ್ಲಿ ಪತ್ತೆಯಾಗಿದೆ ಎಂದು ಹೇಳಲಾಗುತ್ತಿರುವ ಬಗ್ಗೆ ಸುದ್ದಿಗಾರರ ಪ್ರಶ್ನೆಗೆ ಪ್ರತಿಕ್ರಿಸಿದ ಅವರು, ಕೆಲ ದೇಶಗಳಲ್ಲಿ ಮೂರನೆಯ ಅಲೆಯ ಬಗ್ಗೆ ಮಾತುನಾಡುತ್ತಿದ್ದಾರೆ. ರಷ್ಯಾ (Russia), ಇಂಗ್ಲೆಂಡ್‌ಗಳಲ್ಲಿ (England) ಹೊಸ ತಳಿ ಬಂದಿದೆ ಎಂದು ಹೇಳಲಾಗುತ್ತಿದೆ. ಮಧ್ಯಪ್ರದೇಶ, ಮಹಾರಾಷ್ಟ್ರದಲ್ಲೂ ಹೊಸತಳಿ ಬಂದಿದೆ ಎಂದು ಹೇಳುತ್ತಿದ್ದಾರೆ. ಹೀಗಾಗಿ ರಾಜ್ಯದ ಹಿರಿಯ ತಜ್ಞರು ಹಾಗೂ ತಾಂತ್ರಿಕ ಸಲಹಾ ಸಮಿತಿಯೊಂದಿಗೆ ಚರ್ಚೆ ನಡೆಸಿದ್ದೇವೆ. ಆ ರೀತಿ ಕಂಡು ಬಂದರೆ ಸರ್ಕಾರದ ಗಮನಕ್ಕೆ ತರಬೇಕೆಂದು ಸೂಚನೆ ನೀಡಿದ್ದೇವೆ ಎಂದರು.
ಸದ್ಯಕ್ಕೆ ಭಾರತದಲ್ಲಿ ಬೂಸ್ಟರ್ ಡೋಸ್ ಇಲ್ಲ
ಕೋವಿಡ್ ಬಂದರೆ ಆ ಶಾಲೆ ಬಂದ್
ಎಲ್ಲ ಮುನ್ನೆಚ್ಚರಿಕೆ ಕ್ರಮ ಅನುಸರಿಸಿ ಪ್ರಾಥಮಿಕ ಶಾಲೆ ಆರಂಭಿಸಲಾಗಿದೆ. ಶೇ.1ಕ್ಕಿಂತ ಹೆಚ್ಚಿನ ಪ್ರಮಾಣದಲ್ಲಿ ಕೋವಿಡ್ ಸೋಂಕು ಮಕ್ಕಳಲ್ಲಿ (Children) ಕಂಡು ಬಂದಲ್ಲಿ ಅಂಥ ಶಾಲೆಯನ್ನು (School) ಮುಚ್ಚಲಾಗುವುದು ಎಂದು ಆರೋಗ್ಯ ಸಚಿವ ಡಾ.ಕೆ.ಸುಧಾಕರ ಹೇಳಿದರು. ಕಳೆದ ಒಂದುವರೆ ವರ್ಷದಿಂದ ಶಾಲೆಗಳನ್ನು ಮುಚ್ಚಿದ್ದೇವೆ. ಮಕ್ಕಳ ಶೈಕ್ಷಣಿಕ ಪ್ರಗತಿ ನಿಂತು ಹೋಗಬಾರದಲ್ಲ. ಹೀಗಾಗಿ ಪ್ರಾರಂಭದಲ್ಲಿ ಹೈಸ್ಕೂಲ್, ನಂತರ 6ನೆಯ ತರಗತಿ ಪಾಠಗಳನ್ನು ಪ್ರಾರಂಭಿಸಿದೆವು. 3-4 ತಿಂಗಳು ಶಾಲೆಗಳು ನಡೆದಿವೆ. ಯಾವುದೇ ಆತಂಕ ಎದುರಾಗಿಲ್ಲ. ಮಕ್ಕಳಲ್ಲಿ ರೋಗ ನಿರೋಧಕ ಶಕ್ತಿ (Immunity Power) ಜಾಸ್ತಿ ಇರುತ್ತದೆ. ಇದೆಲ್ಲವನ್ನೂ ಗಮನಿಸಿ, ಮುನ್ನಚ್ಚರಿಕೆ ಕ್ರಮ ಕೈಗೊಂಡು ಪ್ರಾಥಮಿಕ ಹಂತದ ತರಗತಿ ಪ್ರಾರಂಭಿಸಿದ್ದೇವೆ. ಯಾವುದೇ ಶಾಲೆಯಲ್ಲೂ ಶೇ. 1ರಷ್ಟುಮಕ್ಕಳಿಗೆ ಕೋವಿಡ್ ಸೋಂಕು ಕಾಣಿಸಿಕೊಂಡರೆ ಅಂಥ ಶಾಲೆಗಳನ್ನು ಬಂದ್ ಮಾಡಲಾಗುವುದು ಎಂದು ಸ್ಪಷ್ಟಪಡಿಸಿದರು.
3ನೇ ಅಲೆ ಅಲ್ಲಲ್ಲಿ ಆರಂಭ?: ಬ್ರಿಟನ್ ಆಯ್ತು, ರಷ್ಯಾದಲ್ಲೂ ಮತ್ತೆ ಕೊರೋನಾ ಸ್ಫೋಟ!
ಕೇಂದ್ರ ಸರ್ಕಾರದ ಆತ್ಮ ನಿರ್ಭರ ಭಾರತ ಯೋಜನೆಯಡಿ ದೇಶದಲ್ಲಿ ಸುಮಾರು .64 ಸಾವಿರ ಕೋಟಿ ವಿನಿಯೋಗಿಸಲಾಗುತ್ತಿದೆ. ರಾಜ್ಯದಲ್ಲಿ .2,600 ಕೋಟಿಗಿಂತಲೂ ಹೆಚ್ಚು ವೆಚ್ಚದಲ್ಲಿ ಆರೋಗ್ಯ ಕೇಂದ್ರಗಳ ಸ್ಥಾಪಿಸಲಾಗುವುದು ಎಂದರು.
ಪ್ರತಿ ಜಿಲ್ಲೆಯಲ್ಲೂ ಗುಡಿಸಲು ಮತ್ತು ಬಡಜನರು ಇರುವ ಪ್ರದೇಶದಲ್ಲಿ ಹೆಚ್ಚುವರಿಯಾಗಿ ಉಪಯೋಗವಾಗುವಂತಹ ಆರೋಗ್ಯ ಕೇಂದ್ರ ಸ್ಥಾಪಿಸಲಾಗುವುದು. ಮುಂದಿನ 5 ವರ್ಷಗಳಲ್ಲಿ ಆತ್ಮ ನಿರ್ಭರ ಭಾರತ ಯೋಜನೆಯ ಎಲ್ಲ ಕಾರ್ಯಗಳು ಅನುಷ್ಠಾನಗೊಳ್ಳಲಿವೆ. ಒಟ್ಟು ವೆಚ್ಚ .2600 ಕೋಟಿಗಿಂತಲೂ ಹೆಚ್ಚು ಆಗಲಿದ್ದು, ಕೇಂದ್ರ ಸರ್ಕಾರ ಶೇ.60 ರಷ್ಟುಧನ ಸಹಾಯ ಮಾಡಲಿದೆ. 15ನೇ ಹಣಕಾಸಿನ ಆಯೋಗದಿಂದ ಹಣ ಮಂಜೂರಾಗುವುದು. ಉಳಿದ ವೆಚ್ಚವನ್ನು ರಾಜ್ಯ ಸರ್ಕಾರ ಭರಿಸಲಿದೆ ಎಂದರು. ನಗರ ಸಮುದಾಯ ಆರೋಗ್ಯ ಕೇಂದ್ರಗಳು ಕಡಿಮೆಯಿದ್ದು, ಅವುಗಳನ್ನು ಹೆಚ್ಚಿಸಲಾಗುವುದು. ಅದರಲ್ಲೂ ನಗರದಲ್ಲಿ ಗುಡಿಸಲು ನಿವಾಸಿಗಳಿರುವ ಪ್ರದೇಶಗಳಲ್ಲಿ ಆರೋಗ್ಯ ಕೇಂದ್ರ ತೆರೆಯಲಾಗುವುದು ಎಂದ ಅವರು, 17 ವೈದ್ಯಕೀಯ ಕಾಲೇಜುಗಳಲ್ಲಿ ಆರೋಗ್ಯ ಕೇಂದ್ರ ಘಟಕ ಸ್ಥಾಪಿಸಲಾಗುವುದು ಎಂದು ತಿಳಿಸಿದ್ದಾರೆ.