'ಮನುಷ್ಯತ್ವ ಅನ್ನೋದು ಇಲ್ವ ನಿಮಗೆ?' ಬಡರೋಗಿಗೆ ಅಂಬುಲೆನ್ಸ್ ಒದಗಿಸದ ವೈದ್ಯರಿಗೆ ಶಾಸಕ ಹಿಗ್ಗಾಮುಗ್ಗಾ ಕ್ಲಾಸ್!

By Ravi JanekalFirst Published Mar 30, 2024, 8:38 PM IST
Highlights

ಉಸಿರಾಟ ತೊಂದರೆ ಬಳಲುತ್ತಿದ್ದ ರೋಗಿಗೆ ತಕ್ಷಣಕ್ಕೆ ಆಂಬುಲೆನ್ಸ್ ಒದಗಿಸದೇ ನಿರ್ಲಕ್ಷ್ಯ ಮಾಡಿದ ವೈದ್ಯರು, ಸಿಬ್ಬಂದಿಗೆ ಶಾಸಕ ಶರಣಗೌಡ ಹಿಗ್ಗಾಮುಗ್ಗಾ ತರಾಟೆಗೆ ತೆಗೆದುಕೊಂಡ ಘಟನೆ ಯಾದಗಿರಿ ಜಿಲ್ಲಾಸ್ಪತ್ರೆಯಲ್ಲಿ ನಡೆದಿದೆ.

ಯಾದಗಿರಿ (ಮಾ.30): ಉಸಿರಾಟ ತೊಂದರೆ ಬಳಲುತ್ತಿದ್ದ ರೋಗಿಗೆ ತಕ್ಷಣಕ್ಕೆ ಆಂಬುಲೆನ್ಸ್ ಒದಗಿಸದೇ ನಿರ್ಲಕ್ಷ್ಯ ಮಾಡಿದ ವೈದ್ಯರು, ಸಿಬ್ಬಂದಿಗೆ ಶಾಸಕ ಶರಣಗೌಡ ಹಿಗ್ಗಾಮುಗ್ಗಾ ತರಾಟೆಗೆ ತೆಗೆದುಕೊಂಡ ಘಟನೆ ಯಾದಗಿರಿ ಜಿಲ್ಲಾಸ್ಪತ್ರೆಯಲ್ಲಿ ನಡೆದಿದೆ.

ಯಾದಗಿರಿ ತಾಲೂಕಿನ ಬಾಚವಾರ ತಾಂಡಾದ ರೋಗಿಯೊಬ್ಬರಿಗೆ ಉಸಿರಾಟ ತೊಂದರೆ ಕಲಬುರಗಿ ಆಸ್ಪತ್ರೆಗೆ ತೆರಳಲು ತುರ್ತು ಅಂಬುಲೆನ್ಸ್  ವ್ಯವಸ್ಥೆ ಮಾಡದೆ ನಿರ್ಲಕ್ಷ್ಯ ಮಾಡಿರುವ ವೈದ್ಯ ಸಿಬ್ಬಂದಿ. ಈ ಬಗ್ಗೆ ಗುರುಮಠಕಲ್ ಶಾಸಕ ಶರಣಗೌಡ ಕಂದಕೂರುಗೆ ಮಾಹಿತಿ ನೀಡಿದ ಕುಟುಂಬಸ್ಥರು. ಖುದ್ದು ಜಿಲ್ಲಾಸ್ಪತ್ರೆಗೆ ಭೇಟಿ ನೀಡಿದ ಶಾಸಕ, ವೈದ್ಯ ಸಿಬ್ಬಂದಿಯನ್ನ ಕರೆಯಿಸಿ ತರಾಟೆಗೆ ತೆಗೆದುಕೊಂಡರು.

 

ಮೋದಿ ಗ್ಯಾರಂಟಿ ಟಿವಿಯಲ್ಲಿ, ನಮ್ಮ ಗ್ಯಾರಂಟಿ ನಿಮ್ಮ ಕೈಯಲ್ಲಿ: ಪ್ರಿಯಾಂಕ್ ಖರ್ಗೆ

ಒಬ್ಬ ರೋಗಿಯನ್ನು ಅಂಬುಲೆನ್ಸ್ ನಲ್ಲಿ ಕಳುಹಿಸಲು MLA ಆಸ್ಪತ್ರೆಗೆ ಬರಬೇಕಾ? ಬಡವರು ಆಸ್ಪತ್ರೆಗೆ ಬಂದ್ರೆ ಅಂಬುಲೆನ್ಸ್ ಕೊಡಲ್ವಾ MLA ಬಂದ್ರೆ ಮಾತ್ರ ಕೊಡುತ್ತಿರಾ? ನಿಮಗೆ ಮನುಷ್ಯತ್ವ ಅನ್ನೋದೇ ಇಲ್ವಾ? ಬಡವರ ರಕ್ತ ಹೀರಲು ನೀವು ಇಲ್ಲಿದ್ದಿರಿ, ಮನುಷ್ಯತ್ವ ಅನ್ನೋದು ಇದೇನಾ ನಿಮಗೆ? ಈ ಆಸ್ಪತ್ರೆಯಲ್ಲಿ ಹೇಳುವವರು, ಕೇಳುವವರು ಯಾರೂ ಇಲ್ವಾ? ರೋಗಿ ನರಳಿ ನರಳಿ ಸಾಯುತ್ತಿದ್ದಾರೆ ಕಾಮನ್ ಸೆನ್ಸ್ ಇಲ್ವ? ನಾನು ಫೋನ್ ಮಾಡಿ ಬೇಗ ಕಳುಹಿಸಿ ಅಂದ್ರೆ ಕಾಲ್ ಕಟ್ ಮಾಡುತ್ತಿರಾ? ರೋಗಿಗಳನ್ನು ಮುಟ್ಟದೆ ರಾಯಚೂರು, ಕಲಬುರಗಿ ಹೋಗಿ ಅನ್ನುತ್ತೀರಿ ಹಾಗಾದರೆ ಆಸ್ಪತ್ರೆಗೆ ಬೀಗ ಹಾಕಿ ಎಂದು ಗರಂ ಆದರು.

ವಿಜಯಪುರ ಜಿಲ್ಲಾಸ್ಪತ್ರೆ ವೈದ್ಯ ಸಿಬ್ಬಂದಿ ಯಡವಟ್ಟು, ನರಳಿ ನರಳಿ ಪ್ರಾಣಬಿಟ್ಟ ಬಾಣಂತಿ: ಅವಳಿ ಮಕ್ಕಳು ಅನಾಥ..!

ಇನ್ಮುಂದೆ ಈ ರೀತಿ ನಿರ್ಲಕ್ಷ್ಯ ಕಂಡುಬಂದರೆ ಸಹಿಸೊಲ್ಲ. ಬಡ ರೋಗಿಗಳನ್ನು ಕುಟುಂಬದ ಸದಸ್ಯರಂತೆ ಕಾಣಬೇಕೆಂದು ಎಚ್ಚರಿಕೆ ನೀಡಿದರು. ಹಿಗ್ಗಾ ಮುಗ್ಗಾ ಕ್ಲಾಸ್ ಬಳಿಕ ವೈದ್ಯರು ರೋಗಿಗೆ ಅಂಬುಲೆನ್ಸ್ ವ್ಯವಸ್ಥೆ ಮಾಡಿದರು. 

click me!