
ವರದಿ - ಪುಟ್ಟರಾಜು. ಆರ್. ಸಿ. ಏಷಿಯಾನೆಟ್ ಸುವರ್ಣ ನ್ಯೂಸ್, ಚಾಮರಾಜನಗರ.
ಚಾಮರಾಜನಗರ (ಆ.24): ಚುಕ್ಕೆ ರೋಗ ಬಳಿಕ ಚಾಮರಾಜನಗರದಲ್ಲಿ ಮತ್ತೊಂದು ತೀರಾ ಅಪರೂಪದ ರೋಗ ಬೆಳಕಿಗೆ ಬಂದಿದೆ. ಒಂದೇ ಕುಟುಂಬದ ನಾಲ್ಕು ಮಂದಿಯಲ್ಲಿ ರೋಗ ಕಾಣಿಸಿಕೊಂಡಿದೆ. ಇದೀಗ ರೋಗ ಉಲ್ಬಣದಿಂದ ಕಾಲು, ಕೈ ಸ್ವಾಧೀನ ಕಳೆದುಕೊಂಡು ಜೀವನಕ್ಕೆ ಮುಂದೇನು ಅನ್ನೋ ಆತಂಕ ಕುಟುಂಬಸ್ಥರನ್ನು ಕಾಡ್ತಿದೆ. ಚಿಕಿತ್ಸೆ ಕೊಡಿಸಿದ್ರು ಕೂಡ ಯಾವುದೇ ಪ್ರಯೋಜನವಾಗ್ತಿಲ್ಲ. ಜಿಲ್ಲಾಡಳಿತ, ಆರೋಗ್ಯ ಇಲಾಖೆ ಚಿಕಿತ್ಸೆ ನೆರವು ನೀಡಲಿ ಅಂತಾ ಮನವಿ ಮಾಡ್ತಿದ್ದಾರೆ. ಈ ಕುರಿತು ಒಂದು ಸ್ಟೋರಿ ಇಲ್ಲಿದೆ ನೋಡಿ..
ಗಡಿ ಜಿಲ್ಲೆ ಚಾಮರಾಜನಗರದಲ್ಲಿ ಚುಕ್ಕೆ ರೋಗದ ಬಳಿಕ ಮತ್ತೊಂದು ಅಪರೂಪದ ವಿಚಿತ್ರ ರೋಗ ಕಾಣಿಸಿಕೊಂಡಿದೆ. ಒಂದೇ ಕುಟುಂಬದ 10 ಮಂದಿಯ ಪೈಕಿ ನಾಲ್ವರಲ್ಲಿ ಈ ರೋಗ ಉಲ್ಬಣವಾಗಿದೆ. ಚಾಮರಾಜನಗರ ಜಿಲ್ಲೆಯ ಕೊಳ್ಳೇಗಾಲ ಪಟ್ಟಣದ ಆಶ್ರಯ ಬಡಾವಣೆಯ ನಿವಾಸಿಗಳಲ್ಲಿ ಈ ರೋಗ ಕಾಣಿಸಿಕೊಂಡಿದೆ. ಒಂದೇ ಕುಟುಂಬದ ಅಕ್ಕ,ಮೂವರು ತಮ್ಮಂದಿರಲ್ಲಿ ಕಾಯಿಲೆ ಬಂದಿದೆ. ಸಯ್ಯದ್ ರೆಹಮತ್ ಉಲ್ಲಾ ಹಾಗೂ ರಫಿಯಾ ದಂಪತಿಗೆ ಒಟ್ಟಾರೆ 10 ಮಂದಿ ಮಕ್ಕಳಿದ್ದು ತಾಸಿನ್ ತಾಜ್, ಇದಾಯತ್,ಇಮ್ರಾನ್, ನೂರ್ ಅಹಮದ್ ಎಂಬ ನಾಲ್ಕು ಜನ ಅಕ್ಕ ತಮ್ಮಂದಿರಲ್ಲಿ ರೋಗ ಕಾಣಿಸಿಕೊಂಡಿದೆ. ಹುಟ್ಟಿದ 20 ವರ್ಷಗಳ ಬಳಿಕ ಮಸ್ಕ್ಯೂಲಾರ್ ಡಿಸ್ಟ್ರೋಫಿ ರೋಗ ಕಾಣಿಸಿಕೊಂಡಿದ್ದು,
ಈ ಬಾಲಕಿಯ ಕಾಲು ಮುಟ್ಟಿದ್ರೂ ಅಸಾಧ್ಯ ನೋವು, ನಡೆದ್ರೆ ಪ್ರಾಣಾನೇ ಹೋದಂತಾಗುತ್ತೆ: ಇದೆಂತ ವಿಚಿತ್ರ ಕಾಯಿಲೆ!
ಮೊದಲಿಗೆ ನಡೆಯಲು, ಮೆಟ್ಟಿಲು ಹತ್ತಲೂ ಸಮಸ್ಯೆಯಾಗಿದೆ. ನಂತರ ಸಂಪೂರ್ಣವಾಗಿ ಬೇರೆಯರನ್ನೇ ಆಶ್ರಯಿಸಿ ನಡೆಯುವಂತಹ ಪರಿಸ್ಥಿತಿ ಬಂದಿದೆ. ಕಾಲು ಹಾಗೂ ಸೊಂಟದ ಕೆಳಗಿನ ಭಾಗ ಸಂಪೂರ್ಣ ಸ್ವಾಧೀನ ಕಳೆದುಕೊಂಡಿದೆ. ಇದೀಗ ಊಟ ಮಾಡಲೂ ಕೂಡ ಬೇರೆಯವರನ್ನೇ ಆಶ್ರಯಿಸುವ ಪರಿಸ್ಥಿತಿ ಇದೆ. ಚಾಮರಾಜನಗರ, ಮೈಸೂರು, ಬೆಂಗಳೂರಿನಲ್ಲೂ ಕೂಡ ಚಿಕಿತ್ಸೆ ಕೊಡಿಸಿದರು ಪ್ರಯೋಜನವಿಲ್ಲ. ಜಪಾನ್ ಗೂ ಕೂಡ ಅವರ ಮಾಂಸ ಖಂಡವನ್ನು ಕಳಿಸಿ ಪರೀಕ್ಷೆ ನಡೆಸಲಾಗಿದೆ. ಆ ವೇಳೆ ಇದು ಮಸ್ಕ್ಯೂಲಾರ್ ಡಿಸ್ಟ್ರೋಫಿ ರೋಗಲಕ್ಷಣ ಅಂತಾ ಗೊತ್ತಾಗಿದೆ. ಇದೀಗಾ ಚಿಕಿತ್ಸೆ ಕೊಡಿಸಲು ಸಹ ಸಮಸ್ಯೆಯಾಗಿದೆ. ಈ ಕಾಯಿಲೆಗೆ ಸೂಕ್ತವಾದ ಚಿಕಿತ್ಸೆ ಕೊಡಿಸಲಿ ಅಂತಾ ಆರೋಗ್ಯಾಧಿಕಾರಿಗಳಿಗೆ ಮನವಿ ಮಾಡ್ತಿದೆ ಕುಟುಂಬ.
ಇನ್ನೂ ಆರೋಗ್ಯಾಧಿಕಾರಿಗಳೇ ಹೇಳುವಂತೆ ವಂಶವಾಹಿಯಿಂದ ಈ ರೋಗ ಬರುವ ಸಾಧ್ಯತೆಯಿದೆ. ಇದಕ್ಕೆ ಸೂಕ್ತವಾದ ಚಿಕಿತ್ಸೆ ಸೌಲಭ್ಯವಿಲ್ಲ. ಇದರ ಪರಿಣಾಮ ಕಡಿಮೆಗೊಳಿಸಲು ಫಿಜಿಯೋಥೆರಪಿ, ಅಕ್ಯುಫ್ರೆಶರ್ ಥೆರಪಿ ಇದೆ. ಮುಜುಗರಕ್ಕೆ ಒಳಗಾಗುತ್ತೇವೆ ಅಂದು ಇಲ್ಲಿಯವರೆಗೂ ಈ ರೋಗದ ಬಗ್ಗೆ ಕುಟುಂಬಸ್ಥರು ಆರೋಗ್ಯ ಇಲಾಖೆ ಗಮನಕ್ಕೆ ತಂದಿಲ್ಲ. ಇದೊಂದು ಗುಣಪಡಿಸಲಾಗದ ಖಾಯಿಲೆ. ಈ ಖಾಯಿಲೆ ಬಂದಾಗ ಪ್ರಾರಂಭದಲ್ಲಿ ಯಾರಿಗು ತಿಳಿಸಿಲ್ಲ ಈಗ ಇಲಾಖೆ ಗಮನಕ್ಕೆ ಬಂದಿದೆ ಇವರೆಲ್ಲ ಪ್ರಾರಂಭದಲ್ಲಿ ಚೆನ್ನಾಗಿ ಓಡಾಡಿಕೊಂಡು ಇದ್ದವರು, ಇದ್ದಕ್ಕಿದಂತೆ ಕಾಲುನೋವು ಬಂದು ಈ ರೀತಿಯ ಖಾಯಿಲೆಗೆ ತುತ್ತಾಗಿದ್ದಾರೆ. ಇದೀಗ ಅವರ ಚಿಕಿತ್ಸೆಗೆ ಅಗತ್ಯ ನೆರವು ಒದಗಿಸುವ ಭರವಸೆ ನೀಡ್ತಾರೆ ಅಧಿಕಾರಿಗಳು.
ಇದೆಂಥಾ ವಿಚಿತ್ರ ಕಾಯಿಲೆ..ಟಾಯ್ಲೆಟ್‌ನಲ್ಲಿ ಕುಳಿತಿದ್ದಷ್ಟೇ, ಕಾಲಿನ ಮೂಳೆನೇ ಮುರಿದೋಯ್ತು!
ಒಟ್ನಲ್ಲಿ ಇತ್ತಿಚೆಗೆ ಹನೂರು ಭಾಗದಲ್ಲಿ ಮಕ್ಕಳಿಗೆ ಚುಕ್ಕೆ ರೋಗ ಕಾಣಿಸಿಕೊಂಡಿತ್ತು. ಇದೀಗ ಕೊಳ್ಳೇಗಾಲ ಭಾಗದಲ್ಲಿ ಮಸ್ಕ್ಯೂಲಾರ್ ಡಿಸ್ಟ್ರೋಫಿ ಕುಟುಂಬ ತುತ್ತಾಗಿರೋದು ಆತಂಕ ಮೂಡಿಸಿದೆ. ಅಧಿಕಾರಿಗಳು ಹಾಗೂ ಸರ್ಕಾರ ಸೂಕ್ತ ಚಿಕಿತ್ಸೆ ಕೊಡಿಸಲಿ ಅನ್ನೋ ಮೂಲಕ ಕುಟುಂಬಸ್ಥರು ನೆರವಿನ ನಿರೀಕ್ಷೆಯಲ್ಲಿದ್ದಾರೆ..
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ