ಅಪಘಾತ ಸಂತ್ರಸ್ತರನ್ನು ತಮ್ಮ ಕಾರಿನಲ್ಲೇ ಆಸ್ಪತ್ರೆಗೆ ಸೇರಿಸಿದ ಸಂತೋಷ್ ಲಾಡ್; ಸಚಿವರ ನಡೆಗೆ ವ್ಯಾಪಕ ಮೆಚ್ಚುಗೆ

By Kannadaprabha News  |  First Published Jan 7, 2024, 12:04 PM IST

ಧಾರವಾಡ ಹೊರವಲಯದ ಕೆಲಗೇರಿ ಸೇತುವೆ ಬಳಿ ಮೂರು ಬೈಕ್‌ಗಳ ನಡುವೆ ಅಪಘಾತ ಸಂಭವಿಸಿ ಮೂವರು ಯುವಕರು ಹಾಗೂ ಮೂವರು ಯುವತಿಯರು ಗಾಯಗೊಂಡಿದ್ದರು. ಈ ವೇಳೆ ಸ್ಥಳಕ್ಕೆ ಆಗಮಿಸಿದ ಕಾರ್ಮಿಕ ಸಚಿವ ಸಂತೋಷ್ ಲಾಡ್ ಅವರ ನಡೆಗೆ ವ್ಯಾಪಕ ಮೆಚ್ಚುಗೆ ವ್ಯಕ್ತವಾಗಿದೆ. 


ಧಾರವಾಡ (ಜ.7): ಧಾರವಾಡ ಹೊರವಲಯದ ಕೆಲಗೇರಿ ಸೇತುವೆ ಬಳಿ ಮೂರು ಬೈಕ್‌ಗಳ ನಡುವೆ ಅಪಘಾತ ಸಂಭವಿಸಿ ಮೂವರು ಯುವಕರು ಹಾಗೂ ಮೂವರು ಯುವತಿಯರು ಗಾಯಗೊಂಡಿದ್ದರು. ಈ ವೇಳೆ ಸ್ಥಳಕ್ಕೆ ಆಗಮಿಸಿದ ಕಾರ್ಮಿಕ ಸಚಿವ ಸಂತೋಷ್ ಲಾಡ್ ಅವರ ನಡೆಗೆ ವ್ಯಾಪಕ ಮೆಚ್ಚುಗೆ ವ್ಯಕ್ತವಾಗಿದೆ. 

ಧಾರವಾಡದಲ್ಲಿ ಹಲವಾರು ಕಾರ್ಯಕ್ರಮಗಳಲ್ಲಿ ಭಾಗವಹಿಸಿದ ನಂತರ ರಾತ್ರಿ 8 ಗಂಟೆ ಸುಮಾರಿಗೆ ಸಂತೋಷ್ ಲಾಡ್ ಅವರು ಅಳ್ನಾವರ ಕಡೆಗೆ ಹೋಗುತ್ತಿದ್ದರು. ಈ ವೇಳೆ ಕೆಲಗೇರಿ ಬಳಿ, ಮೂವರು ಯುವತಿಯರು ಮತ್ತು ಮೂವರು ಯುವಕರು ಅಪಘಾತಕ್ಕೀಡಾಗಿ ಸಹಾಯಕ್ಕಾಗಿ ಅಂಗಲಾಚುತ್ತಿರುವುದನ್ನು ಕಂಡಿದ್ದಾರೆ.

Tap to resize

Latest Videos

ಧಾರವಾಡದಲ್ಲಿ ಕಾರ್ಮಿಕ ಇಲಾಖೆ ಐತಿಹಾಸಿಕ ಕಾರ್ಯಕ್ರಮ: 550 ತ್ರಿಚಕ್ರ ವಾಹನ ನೀಡಿದ ಸಚಿವ ಸಂತೋಷ್ ಲಾಡ್..!

ಕೂಡಲೇ ತಮ್ಮ ವಾಹನವನ್ನು ನಿಲ್ಲಿಸಿದ ಸಂತೋಷ್ ಲಾಡ್ ಅವರು ತಮ್ಮ ಸಹಾಯಕರ ನೆರವಿನಿಂದ ಸಂತ್ರಸ್ತರನ್ನು ತಮ್ಮ ಕಾರಿನಲ್ಲೇ ಆಸ್ಪತ್ರೆಗೆ ಸ್ಥಳಾಂತರಿಸಿದ್ದಾರೆ. ಸಂತ್ರಸ್ತರಿಗೆ ಸೂಕ್ತ ಚಿಕಿತ್ಸೆ ಸಿಗುವಂತೆಯೂ ನೋಡಿಕೊಂಡಿದ್ದಾರೆ. ಸಚಿವರ ಈ ನಡೆಗೆ ಜನರಿಂದ ವ್ಯಾಪಕ ಪ್ರಶಂಸೆ ವ್ಯಕ್ತವಾಗಿದೆ.

ಈ ಕುರಿತು ಟ್ವೀಟ್ ಮಾಡಿರುವ ಸಂತೋಷ್ ಲಾಡ್ ಅವರು, ಅಳ್ನಾವರದಲ್ಲಿ ವಿವಿಧ ಕಾರ್ಯಕ್ರಮಗಳಲ್ಲಿ ಭಾಗವಹಿಸಿ ಧಾರವಾಡಕ್ಕೆ ಮರಳುತ್ತಿದ್ದಾಗ ಧಾರವಾಡ ಹೊರವಲಯದ ಕೆಲಗೇರಿ ಸೇತುವೆ ಬಳಿ ಮೂರು ಬೈಕ್‌ಗಳ ನಡುವೆ ಅಪಘಾತ ಸಂಭವಿಸಿದೆ. ಈ ವೇಳೆ ಮೂವರು ಯುವಕರು ಹಾಗೂ ಮೂವರು ಯುವತಿಯರು ಗಾಯಗೊಂಡಿದ್ದರು. ತಕ್ಷಣ ಅವರನ್ನು ನನ್ನ ವಾಹನದಲ್ಲೇ ಕರೆದೊಯ್ದು ಧಾರವಾಡ ಸಿವಿಲ್‌ ಆಸ್ಪತ್ರೆಗೆ ದಾಖಲಿಸಿದ್ದೇನೆ ಎಂದು ಬರೆದಿದ್ದಾರೆ. 

ಕುಡುಕ ಪದ ಬ್ಯಾನ್‌, ಡಿ.31 ಮದ್ಯಪ್ರೇಮಿಗಳ ದಿನ, ಮದ್ಯಪ್ರಿಯ ಭವನ.. 'ಎಣ್ಣೆ' ಪ್ರಿಯರ ಬೇಡಿಕೆ ಕೇಳಿ ಶಾಕ್‌ ಆದ ಸಂತೋಷ್‌ ಲಾಡ್‌!

ಗಾಯಾಳುಗಳಿಗೆ ಧೈರ್ಯ ಹೇಳಿ, ಸೂಕ್ತ ಚಿಕಿತ್ಸೆ ನೀಡುವಂತೆ ವೈದ್ಯಕೀಯ ಸಿಬ್ಬಂದಿಗೆ ಸೂಚಿಸಿದ್ದೇನೆ ಎಂದಿದ್ದಾರೆ.  ಜೊತೆಗೆ ಸಂತ್ರಸ್ತರ ಫೋಟೊಗಳನ್ನು ಹಂಚಿಕೊಂಡಿದ್ದಾರೆ.

click me!