ಸಾಮಾಜಿಕ ಜಾಲತಾಣದಲ್ಲಿ ಜನಾಂಗೀಯ ದ್ವೇಷ, ಕೋಮುಗಲಭೆಗೆ ಯತ್ನ ಆರೋಪ ಹಿನ್ನೆಲೆ ಪುನೀತ್ ಕೆರೆಹಳ್ಳಿ ವಿರುದ್ಧ ಬೆಂಗಳೂರು ಕೇಂದ್ರ ಜಿಲ್ಲಾ ಕಾಂಗ್ರೆಸ್ ಸಮಿತಿಯ ಹಿಂದುಳಿದ ವರ್ಗಗಳ ವಿಭಾಗದಿಂದ ಸೈಬರ್ ಕ್ರೈಂಗೆ ದೂರು ದಾಖಲು ಮಾಡಲಾಗಿದೆ.
ಬೆಂಗಳೂರು (ಜ.7): ಸಾಮಾಜಿಕ ಜಾಲತಾಣದಲ್ಲಿ ಜನಾಂಗೀಯ ದ್ವೇಷ, ಕೋಮುಗಲಭೆಗೆ ಯತ್ನ ಆರೋಪ ಹಿನ್ನೆಲೆ ಪುನೀತ್ ಕೆರೆಹಳ್ಳಿ ವಿರುದ್ಧ ಬೆಂಗಳೂರು ಕೇಂದ್ರ ಜಿಲ್ಲಾ ಕಾಂಗ್ರೆಸ್ ಸಮಿತಿಯ ಹಿಂದುಳಿದ ವರ್ಗಗಳ ವಿಭಾಗದಿಂದ ಸೈಬರ್ ಕ್ರೈಂಗೆ ದೂರು ದಾಖಲು ಮಾಡಲಾಗಿದೆ.
ರಾಷ್ಟ್ರರಕ್ಷಣಾ ಪಡೆ ವಾಟ್ಸಪ್ ಗ್ರುಪ್‌ನಲ್ಲಿ ಹರಿದಾಡುತ್ತಿರುವ ಗಲಭೆ ಸೃಷ್ಟಿಸುವ ಸಂದೇಶ. ಜನಾಂಗೀಯ ದ್ವೇಷ ಬಿತ್ತಿ. ಕೋಮುಗಲಭೆ ಸೃಷ್ಟಿಸಲು ಯತ್ನಿಸಿದ್ದಾನೆಂದು ಆರೋಪ ಮಾಡಲಾಗಿದೆ.
ಏಷ್ಯಾ ಮಾಲ್‌ಗೆ ನುಗ್ಗಿ ಗಲಾಟೆ ಆರೋಪ; ಪುನೀತ್ ಕೆರೆಹಳ್ಳಿ ವಿರುದ್ಧ ಮತ್ತೊಂದು ಎಫ್‌ಐಆರ್!
ವಾಟ್ಸಪ್ ಗ್ರುಪ್‌ನಲ್ಲಿ ಏನಿದೆ?
ಕರ್ನಾಟಕದಲ್ಲಿ ಕೋಮುಗಲಭೆ ಎಬ್ಬಿಸೋದಕ್ಕೆ ನಮಗೆ ಬಿಜೆಪಿ ಬೆಂಬಲ ಕೊಟ್ಟಿದೆ. ಆದುದರಿಂದ ಎಲ್ಲಾ ಕಾರ್ಯಕರ್ತರು ರೆಡಿಯಾಗಿ ಪ್ರಿಪೇರ್ ಆಗಿರಿ. ಎಲ್ಲಿ ಏನು ಮಾಡಬೇಕು ಎಂಬುದು ನಾವು ಈ ಗ್ರುಪ್‌ನಲ್ಲಿ ಮಾಹಿತಿ ಕೊಡುತ್ತಾ ಇರುತ್ತೇವೆ. ಜೈ ರಾಷ್ಟ್ರ ರಕ್ಷಣಾ ಪಡೆ.. 2024ಕ್ಕೆ ಮತ್ತೊಮ್ಮೆ ಮೋದಿ ಎಂದು ಬರೆದು ಶೇರ್ ಮಾಡಿಕೊಳ್ಳಲಾಗಿದೆ.
ಹಿಂದೂ ಕಾರ್ಯಕರ್ತ ಪುನೀತ್ ಕೆರೆಹಳ್ಳಿ ವಿರುದ್ಧದ ಗೂಂಡಾ ಕಾಯ್ದೆ ರದ್ದು! ಜೈಲಿನಿಂದ ಬಿಡುಗಡೆ
ವಾಟ್ಸಪ್ ಗ್ರುಪ್‌ನಲ್ಲಿ ಸಂದೇಶ ಹಾಕಿರುವ ನಂಬರ್ ಅನ್ನು ಟ್ರೂ ಕಾಲರ್ ಹಾಕಿದಾಗ ಪುನೀತ್ ಕೆರೆಹಳ್ಳಿ ನಂಬರ್ ಎಂದು ತಿಳಿದುಬಂದಿದೆ. ಹೀಗಾಗಿ ಜನಾಂಗೀಯ ದ್ವೇಷ ಹುಟ್ಟಿಸುವ ಈತನನ್ನ ಕೂಡಲೇ ಬಂಧಿಸಿ ತನಿಖೆಗೊಳಪಡಿಸಬೇಕು. ಅದ್ಯಾವ ಬಿಜೆಪಿ ಮುಖಂಡ ಈತನಿಗೆ ಸುಪಾರಿ ಕೊಟ್ಟಿದ್ದಾನೆಂದು ತನಿಖೆ ಆಗಬೇಕು. ಕೂಡಲೆ ಕ್ರಮ ಆಗಬೇಕೆಂದು ದೂರಿನಲ್ಲಿ ಒತ್ತಾಯಿಸಿರುವ ಕಾಂಗ್ರೆಸ್.