ರೈಲು ದುರಂತದ ಬಳಿಕ ಕೊಲ್ಕತ್ತಾದಲ್ಲಿ ಸಿಲುಕಿರುವ ಕರ್ನಾಟಕದ ಕ್ರೀಡಾರ್ಥಿಗಳಿಗೆ ಸಚಿವ ಸಂತೋಷ್ ಲಾಡ್ ಸಹಾಯ ಹಸ್ತ ಚಾಚಿದ್ದು ಬೆಂಗಳೂರು ತಲುಪಲು ವಿಮಾನ ಟಿಕೆಟ್ ಬುಕ್ ಮಾಡಿದ್ದಾರೆ. ವಿದ್ಯಾರ್ಥಿಗಳು ಧನ್ಯವಾದ ಸಲ್ಲಿಸಿದ್ದಾರೆ.
ಬೆಂಗಳೂರು (ಜೂ.3): ಕೊಲ್ಕತ್ತಾದಲ್ಲಿ ನಡೆಯುತ್ತಿರುವ 16 ವರ್ಷದೊಳಗಿನ ರಾಷ್ಟ್ರೀಯ ವಾಲಿಬಾಲ್ ಪಂದ್ಯಾವಳಿಗೆ ಕರ್ನಾಟಕದ ಬಾಲಕ ಹಾಗೂ ಬಾಲಕಿಯರ ತಂಡ ತೆರಳಿತ್ತು, ಜೂನ್ 2ರಂದು ಒಡಿಸ್ಸಾದಲ್ಲಿ ನಡೆದ ಭೀಕರ ರೈಲು ದುರಂತದ ಪರಿಣಾಮವಾಗಿ ಮರಳಿ ರಾಜ್ಯಕ್ಕೆ ವಾಪಸ್ಸು ಬರಲು ಪರಿತಪಿಸುತ್ತಿದ್ದ ತಂಡಕ್ಕೆ ರಾಜ್ಯ ಕಾರ್ಮಿಕ ಸಚಿವ ಸಂತೋಷ್ ಲಾಡ್ ಸಹಾಯ ಹಸ್ತ ಚಾಚಿದ್ದಾರೆ. ತಂಡದ ತರಬೇತುದಾರರು ಸೇರಿದಂತೆ 32 ಸದಸ್ಯರನ್ನೊಳಗೊಂಡ ತಂಡಕ್ಕೆ ಕಾರ್ಮಿಕ ಸಚಿವ ಸಂತೋಷ್ ಲಾಡ್ ಕೊಲ್ಕತ್ತಾ ದಿಂದ ಬೆಂಗಳೂರಿಗೆ ವಿಮಾನ ಟಿಕೆಟ್ ಹಾಗೂ ಸೂಕ್ತ ವಸತಿ, ಊಟದ ವ್ಯವಸ್ಥೆಯನ್ನು ಮಾಡಿದ್ದಾರೆ.
ಮೇ.24ಕ್ಕೆ ರಾಜ್ಯದಿಂದ ಅವರು ಹೌರಾಗೆ ತೆರಳಿದ್ದರು. ನಿನ್ನೆ ರಾತ್ರಿ ಅಂದರೆ ಜೂನ್ 2ರಂದು ರಾತ್ರಿ 10.55ಕ್ಕೆ ಕರ್ನಾಟಕ ಎಕ್ಸ್‌ಪ್ರೆಸ್ ರೈಲಿನಲ್ಲಿ ವಾಪಸ್ಸು ಬರಬೇಕಿತ್ತು. ರೈಲು ದುರಂತದ ಹಿನ್ನೆಲೆ ರೈಲುಗಳ ಸಂಚಾರ ರದ್ದಾಗಿದ್ದು, ವಾಪಸ್ಸು ರಾಜ್ಯಕ್ಕೆ ಬರಲು ಆಗದ ಕಾರಣ ಹೌರಾದಲ್ಲೇ ಕ್ರೀಡಾಪಟುಗಳು ಉಳಿದಿದ್ದಾರೆ. ಸದ್ಯ ಇವರೆಲ್ಲರಿಗೂ ರಾಜ್ಯ ಕಾರ್ಮಿಕ ಸಚಿವ ಸಂತೋಷ್ ಲಾಡ್ ಸಹಾಯ ಹಸ್ತ ಚಾಚಿದ್ದು ವಿಮಾನದ ಮೂಲಕ ರಾಜ್ಯಕ್ಕೆ ತಲುಪಿದ್ದಾರೆ.
undefined
Odisha Train Accident Reason: ಒಡಿಶಾ ರೈಲು ಅಪಘಾತದ ಕಾರಣ ಬಹಿರಂಗ
ಕನ್ನಡಿಗರನ್ನು ಕಾಪಾಡಲು ಬಾಲಸೋರ್ ನಲ್ಲಿ ಸಂತೋಷ್ ಲಾಡ್:
ಒಡಿಶಾದಲ್ಲಿ ನಿನ್ನೆ ನಡೆದ ಭೀಕರ ರೈಲು ಅಪಘಾತಕ್ಕೆ ಸಂಬಂಧಿಸಿದಂತೆ ಬಾಲಸೋರ್‌ದ ಸರ್ಕಾರಿ ಆಸ್ಪತ್ರೆಗೆ ರಾಜ್ಯ ಕಾರ್ಮಿಕ ಸಚಿವರಾದ ಸಂತೋಷ್ ಲಾಡ್ ಅವರು ಭೇಟಿ ನೀಡಿದರು. ಕರ್ನಾಟಕದ ಅಧಿಕಾರಿಗಳೊಂದಿಗೆ ತೆರಳಿರುವ ಸಂತೋಷ್ ಲಾಡ್ ಅವರು, ಆಸ್ಪತ್ರೆಯಲ್ಲಿರುವ ಪ್ರತಿಯೊಬ್ಬ ಗಾಯಾಳುಗಳ ವಿವರವನ್ನು ಪಡೆದುಕೊಂಡರು, ಅಷ್ಟೇ ಅಲ್ಲದೆ ಅವರ ಯೋಗಕ್ಷೇಮವನ್ನು ವಿಚಾರಿಸಿದರು.
ನೆರವಿಗೆ ಧಾವಿಸಿದ ಮುಖ್ಯಮಂತ್ರಿಗಳಿಗೆ ಧನ್ಯವಾದ ಸಲ್ಲಿಸಿದ ವಾಲಿಬಾಲ್ ಕ್ರೀಡಾಪಟುಗಳು:
ರೈಲು ದುರಂತದ ಪರಿಣಾಮವಾಗಿ ಮರಳಿ ರಾಜ್ಯಕ್ಕೆ ವಾಪಸ್ಸು ಬರಲು ಪರಿತಪಿಸುತ್ತಿದ್ದ ತಂಡಕ್ಕೆ ರಾಜ್ಯ ಸರ್ಕಾರ ನಿಯೋಜಿಸಿದ್ದ ಕಾರ್ಮಿಕ ಸಚಿವ ಸಂತೋಷ್ ಲಾಡ್ ಸಹಾಯ ಹಸ್ತ ಚಾಚಿ ತಂಡ ಸುರಕ್ಷಿತವಾಗಿ ರಾಜ್ಯಕ್ಕೆ ವಾಪಸ್ಸಾಗಲು ನೆರವಾಗಿದ್ದಾರೆ. ತಂಡದ ತರಬೇತುದಾರರು ಸೇರಿದಂತೆ 32 ಸದಸ್ಯರನ್ನೊಳಗೊಂಡ ತಂಡ ತಮ್ಮ ಸಂಕಷ್ಟವನ್ನು ವಿಡಿಯೋ ಮಾಡಿ ಹೇಳಿಕೊಂಡಿದ್ದರು.
Odisha Train Accident: ದುರಂತದ ಸ್ಥಳದಲ್ಲಿ ಸಿಲುಕಿರುವ 30ಕ್ಕೂ ಹೆಚ್ಚು ಮೈಸೂರಿಗರಿಗೆ ಸಿದ್ದರಾಮಯ್ಯ ದೂರವಾಣಿ ಕರೆ
ಈ ವಿಡಿಯೋ ತಲುಪಿದ ತಕ್ಷಣ ಕಾರ್ಯ ಪ್ರವೃತ್ತರಾದ ಸಂತೋಷ್ ಲಾಡ್ ಮತ್ತು ಅಧಿಕಾರಿಗಳ ತಂಡ ಎಲ್ಲರಿಗೂ ಬೆಂಗಳೂರಿಗೆ ವಿಮಾನ ಟಿಕೆಟ್ ಹಾಗೂ ಸೂಕ್ತ ವಸತಿ, ಊಟದ ವ್ಯವಸ್ಥೆ ಒದಗಿಸಿದ್ದಾರೆ. ತಮ್ಮ ನೆರವಿಗೆ ಧಾವಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಮತ್ತು ಕಾರ್ಮಿಕ ಸಚಿವ ಲಾಡ್ ಹಾಗೂ ಅಧಿಕಾರಿಗಳಿಗೆ ಕ್ರೀಡಾ ಪಟುಗಳು ಧನ್ಯವಾದ ಅರ್ಪಿಸಿದ್ದಾರೆ. ತಮ್ಮ ತಂಡ ಕೈಗೊಂಡ ರಕ್ಷಣಾ ಮತ್ತು ನೆರವಿನ ಕಾರ್ಯಗಳ ಕುರಿತು ಸಚಿವ ಸಂತೋಷ್ ಲಾಡ್ ಅವರು ದೂರವಾಣಿ ಮೂಲಕ ಮುಖ್ಯಮಂತ್ರಿಗಳೊಂದಿಗೆ ಚರ್ಚಿಸಿದ್ದಾರೆ.