ರಾಜ್ಯ ಸರ್ಕಾರದಿಂದ ಯುವನಿಧಿ ಯೋಜನೆಯಡಿ ರಾಜ್ಯಾದ್ಯಂತ ಯುವಕರಿಗೆ ನೀಡಲಾಗುತ್ತಿರುವ 3 ಸಾವಿರ ರೂ. ನಿರುದ್ಯೋಗ ಭತ್ಯೆಯನ್ನು ಪಡೆಯಲು ಕೆಲವು ಮಾನದಂಡಗಳನ್ನು ಪ್ರಕಟ ಮಾಡಲಾಗಿದೆ.
ಬೆಂಗಳೂರು (ಜೂ.03): ರಾಜ್ಯ ಸರ್ಕಾರದಿಂದ ಯುವನಿಧಿ ಯೋಜನೆಯಡಿ ರಾಜ್ಯಾದ್ಯಂತ ಯುವಕರಿಗೆ ನೀಡಲಾಗುತ್ತಿರುವ 3 ಸಾವಿರ ರೂ. ನಿರುದ್ಯೋಗ ಭತ್ಯೆಯನ್ನು ಪಡೆಯಲು ಕೆಲವು ಮಾನದಂಡಗಳನ್ನು ಪ್ರಕಟ ಮಾಡಲಾಗಿದೆ. ಯಾರೆಲ್ಲಾ ಅರ್ಜಿ ಸಲ್ಲಿಸಲು ಅರ್ಹರಾಗಿದ್ದು, ಏನೇನು ಮಾನದಂಡಗಳು ಇರಬೇಕು ಎಂದು ತಿಳಿಸಲಾಗಿದೆ.
ಸರ್ಕಾರಿ ಆದೇಶದಲ್ಲಿ ರಾಜ್ಯದಲ್ಲಿ 2022-23 ರಲ್ಲಿ ತೇರ್ಗಡೆಯಾದ ಪದವೀಧರ ನಿರುದ್ಯೋಗಿಗಳಿಗೆ ಪ್ರತಿ ತಿಂಗಳು ರೂ.3000/- (ಮೂರು ಸಾವಿರ ರೂ.ಗಳು ಮಾತ್ರ ಹಾಗೂ ಡಿಪ್ಲೋಮಾ ಹೊಂದಿದ ನಿರುದ್ಯೋಗಿಗಳಿಗೆ ಪ್ರತಿ ತಿಂಗಳು ರೂ.1500/- (ಒಂದು ಸಾವಿರದ ಐದುನೂರು ರೂ.ಗಳು ಮಾತ್ರ ರಂತೆ ನಿರುದ್ಯೋಗ ಭತ್ಯೆ ನೀಡುವ "ಯುವ ನಿಧಿ ಯೋಜನೆ" (Yuva Nidhi Scheme) ಯನ್ನು ಜಾರಿಗೊಳಿಸಲು ಸರ್ಕಾರವು ತಾತ್ಮಕ ಅನುಮೋದನೆ ನೀಡಿ ಆದೇಶಿಸಿದೆ.
undefined
ಕೆಎಸ್ಆರ್‌ಟಿಸಿ ನಡಿಬೇಕಲ್ಲ, ಗಂಡಸ್ರು ಟಿಕೆಟ್ ತಕೊಳ್ರಪ್ಪ: ಡಿಕೆಶಿವಕುಮಾರ್ ಮನವಿ
ಪದವಿ ಮುಗಿದು 6 ತಿಂಗಳಾದಲ್ಲಿ ಮಾತ್ರ ಭತ್ಯೆ: 2023ರ ವರ್ಷದಲ್ಲಿ ತೇರ್ಗಡೆಯಾಗಿ, ತೇರ್ಗಡೆಯಾದ ದಿನಾಂಕದಿಂದ 180 ದಿನಗಳು ಕಳೆದರೂ ಉದ್ಯೋಗ ಲಭಿಸದ ಪದವೀಧರ ನಿರುದ್ಯೋಗಿಗಳಿಗೆ (ವೃತ್ತಿಪರ ಕೋರ್ಸ್‌ಗಳು ಸೇರಿದಂತೆ) ಪ್ರತಿ ತಿಂಗಳು ರೂ.3000/- (ಮೂರು ಸಾವಿರ ರೂ.ಗಳು ಮಾತ್ರ) ನಿರುದ್ಯೋಗ ಭತ್ಯೆ ಹಾಗೂ ಡಿಪ್ಲೋಮಾ ಪಾಸಾದ ನಿರುದ್ಯೋಗಿಗಳಿಗೆ ಪ್ರತಿ ತಿಂಗಳು ರೂ.1500/- (ಒಂದು ಸಾವಿರದ ಐದುನೂರು ರೂ.ಗಳು ಮಾತ್ರ) ನಿರುದ್ಯೋಗ ಭತ್ಯೆಯನ್ನು ಉದ್ಯೋಗ ಸಿಗುವವರೆಗೆ ಅಥವಾ ಗುವ ಎರಡು ವರ್ಷಗಳ ಅವಧಿಗೆ ನೀಡಲು "ಯುವ ನಿಧಿ ಯೋಜನೆ” (Yuvanidhi Yojana) ಯನ್ನು ಈ ಕೆಳಕಂಡ ಷರತ್ತಿಗೊಳಪಟ್ಟು ಅನುಷ್ಟಾನಗೊಳಿಸಲು ಆಡಳಿತಾತ್ಮಕ ಅನುಮೋದನೆ ನೀಡಿ ಆದೇಶಿಸಿದೆ.
ಷರತ್ತು ಮತ್ತು ನಿಬಂಧನೆಗಳು:
1. ಪದವಿ / ಡಿಪ್ಲೋಮಾ ಮುಗಿಸಿ 6 ತಿಂಗಳಾದರೂ ಉದ್ಯೋಗ ಲಭಿಸದೇ ಇರುವ ಕನ್ನಡಿಗರಿಗೆ (Domicile of Karnataka) ಮಾತ್ರ ಈ ಯೋಜನೆಯು ಅನ್ವಯವಾಗುತ್ತದೆ.
2. ಈ ಸೌಲಭ್ಯವು ಎರಡು ವರ್ಷಗಳ ಅವಧಿಗೆ ಮಾತ್ರು ಅನ್ವಯಿಸುತ್ತದೆ. ಎರಡು ವರ್ಷಗಳ ಅವಧಿಯೊಳಗೆ ಉದ್ಯೋಗ ದೊರೆತಲ್ಲಿ ಫಲಾನುಭವಿಗೆ ಈ ಯೋಜನೆಯ ಸೌಲಭ್ಯವನ್ನು ಸ್ವಗಿತಗೊಳಿಸಲಾಗುವುದು.
3. ಭತ್ಯೆಯನ್ನು ಫಲಾನುಭವಿಗಳಿಗೆ ನೇರ ವರ್ಗಾವಣೆ (Direct Benefit Transfer) ಮೂಲಕ ಒದಗಿಸಲು ಉದ್ದೇಶಿಸಲಾಗಿದ್ದು, ಫಲಾನುಭವಿಗಳು ಸೇವಾ ಸಿಂಧು ಪೋರ್ಟಲ್ ಮೂಲಕ ಅರ್ಜಿ ಸಲ್ಲಿಸಬೇಕು.
4. ನಿರುದ್ಯೋಗ ಸ್ಥಿತಿಯ ಬಗ್ಗೆ ಸ್ವತಂತ್ರ ಪರಿಶೀಲನೆ ಇರಬೇಕು ಉದ್ಯೋಗ ಪಡೆದ ನಂತರ ತಪ್ಪು ಘೋಷಣೆ ಅಥವಾ ಘೋಷಿಸಲು ವಿಫಲವಾದರೆ ದಂಡ ವಿಧಿಸಲಾಗುವುದು.
Odisha Train accident: ಬೆಂಗಳೂರಿನ ಮೂರು ಪ್ರಮುಖ ರೈಲುಗಳು ಕ್ಯಾನ್ಸಲ್
ಯೋಜನೆಗೆ ಅರ್ಹರಾಗದೇ ಇರುವವರು:
1. ಉನ್ನತ ವ್ಯಾಸಂಗಕ್ಕೆ ದಾಖಲಾತಿ ಹೊಂದಿ ವಿದ್ಯಾಭ್ಯಾಸ ಮುಂದುವರೆಸುವವರು.
2, ಶಿಶಿಕ್ಷು (Apprentice) ವೇತನವನ್ನು ಪಡೆಯುತ್ತಿರುವವರು.
3. ಸರ್ಕಾರಿ/ಖಾಸಗಿ ವಲಯದಲ್ಲಿ ಉದ್ಯೋಗ ಪಡೆದಿರುವವರು.
4, ರಾಜ್ಯ ಮತ್ತು ಕೇಂದ್ರದ ವಿವಿಧ ಯೋಜನೆಯಡಿ ಹಾಗೂ ಬ್ಯಾಂಕ್‌ಗಳಲ್ಲಿ ಸಾಲ ಪಡೆದು ಸ್ವಯಂ ಉದ್ಯೋಗ ಹೊಂದಿದವರು.