ಪಟ್ಟಣದಲ್ಲಿ ಇತ್ತೀಚೆಗೆ ನಡೆದ ಮಹಾತ್ಮ ಗಾಂಧಿ ಪ್ರತಿಮೆ ಧ್ವಂಸ ಪ್ರಕರಣದ ಆರೋಪಿಗಳನ್ನು ಬಂಧಿಸುವಲ್ಲಿ ಪಟ್ಟಣದ ಸಿಪಿಐ ಆರ್.ಎಲ…. ಲಕ್ಷಿ ್ಮೕಪತಿ ನೇತೃತ್ವದ ತಂಡ ಯಶಸ್ವಿಯಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಜಿ.ಕೆ. ಮಿಥುನ್‌ಕುಮಾರ್ ಹೇಳಿದರು.
ಹೊಳೆಹೊನ್ನೂರು (ಆ.25) : ಪಟ್ಟಣದಲ್ಲಿ ಇತ್ತೀಚೆಗೆ ನಡೆದ ಮಹಾತ್ಮ ಗಾಂಧಿ ಪ್ರತಿಮೆ ಧ್ವಂಸ ಪ್ರಕರಣದ ಆರೋಪಿಗಳನ್ನು ಬಂಧಿಸುವಲ್ಲಿ ಪಟ್ಟಣದ ಸಿಪಿಐ ಆರ್.ಎಲ…. ಲಕ್ಷಿ ್ಮೕಪತಿ ನೇತೃತ್ವದ ತಂಡ ಯಶಸ್ವಿಯಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಜಿ.ಕೆ. ಮಿಥುನ್‌ಕುಮಾರ್ ಹೇಳಿದರು.
ಗುರುವಾರ ಪಟ್ಟಣದ ಠಾಣೆಯಲ್ಲಿ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿ, ಚಿತ್ರದುರ್ಗ ಜಿಲ್ಲೆಯ ಪಂಡರಹಳ್ಳಿ ಗ್ರಾಮದ ವಿನಯ್‌ಕುಮಾರ್ (25) ಹಾಗೂ ಗಣೇಶ್ (24) ಎಂಬವರನ್ನು ಬಂಧಿಸಲಾಗಿದೆ. ಆರೋಪಿಗಳು ಕೃತ್ಯಕ್ಕೆ ಬಳಸಿದ್ದ ಬೈಕ್ ವಶಪಡಿಸಿಕೊಳ್ಳಲಾಗಿದೆ. ಈ ಕೃತ್ಯ ತಾವೇ ಮಾಡಿರುವುದಾಗಿ ಸಹ ಒಪ್ಪಿಕೊಂಡಿದ್ದಾರೆ ಎಂದರು.
ಭದ್ರಾವತಿ: ರಾಷ್ಟ್ರಪಿತ ಮಹಾತ್ಮ ಗಾಂಧಿ ಪ್ರತಿಮೆ ಧ್ವಂಸಗೊಳಿಸಿದ ಕಿಡಿಗೇಡಿಗಳು!
ಸಿಸಿ ಟಿವಿ ಆಧಾರದ ಮೇರೆಗೆ ಆರೋಪಿಗಳನ್ನ ಬಂಧಿಸಲಾಗಿದೆ. ವಾಹನವನ್ನೂ ವಶಕ್ಕೆ ಪಡೆಯಲಾಗಿದೆ. ಇವರಿಗೆ ಯಾವುದಾದರೂ ಸಂಘ ಸಂಸ್ಥೆಗಳ ಜೊತೆ ಕೈಜೋಡಿಸಿರುವ ಬಗ್ಗೆಯೂ ಮಾಹಿತಿ ತನಿಖೆ ನಂತರ ತಿಳಿಯಲಾಗುವುದು. ಚಿತ್ರದುರ್ಗದ ಪಂಡರಹಳ್ಳಿಯ ನಿವಾಸಿಗಳಾಗಿದ್ದು. ಕೃಷಿಕರಾಗಿದ್ದಾರೆ. ಗ್ರೌಂಡ್ ಇಂಟಲಿಜೆನ್ಸಿ, ತಂತ್ರಜ್ಞಾನ ಬಳಕೆಯಿಂದ ಕೃತ್ಯ ಬೇಧಿಸಲಾಗಿದೆ ಎಂದು ತಿಳಿಸಿದರು.
ಕಳೆದ ಮೂರು ದಿನಗಳಿಂದ ಪಟ್ಟಣದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿತ್ತು. ಯಾವುದೇ ಅಹಿತಕರ ಘಟನೆಗಳು ನಡೆಯಬಾರದೆಂದು ಬಿಗಿ ಪೊಲೀಸ್ ಬಂದೋಬಸ್‌್ತ ಏರ್ಪಡಿಸಲಾಗಿತ್ತು. ಜೊತೆಗೆ ಪ್ರತಿಮೆಯನ್ನು ಹಾಳು ಮಾಡಿದ ಆರೋಪಿಗಳನ್ನು ಪತ್ತೆಹಚ್ಚುವಂತಹ ಗುರುತರ ಜವಾಬ್ದಾರಿಯನ್ನು ನಮ್ಮ ಪೊಲೀಸರಿಗೆ ನೀಡಲಾಗಿತ್ತು. ಸುಮಾರು 50 ಜನ ಸಿಬ್ಬಂದಿ, ಐದು ಜನ ಸಬ್ ಇನ್ಸ್ಪೆಕ್ಟರ್, 3 ಜನ ಇನ್ಸ್ಪೆಕ್ಟರ್ ಹಾಗೂ ಡಿವೈಎಸ್‌ಪಿ ನೇತೃತ್ವ ತಂಡ ಹಗಲು- ರಾತ್ರಿಯನ್ನದೇ ನಿರಂತರವಾಗಿ ಕಾರ್ಯಚರಣೆ ಮಾಡಿ ಸವಾಲಾಗಿದ್ದ ಪ್ರಕರಣವನ್ನು ಬೇದಿಸುವಲ್ಲಿ ಸಫಲರಾಗಿದ್ದಾರೆ. ಇವರ ಈ ಕಾರ್ಯಕ್ಕೆ ವೈಯಕ್ತಿಕವಾಗಿ ಅಭಿನಂದಿಸಿದರು. ಜೊತೆಗೆ ಇಲಾಖೆಯಿಂದ ದೊರೆಯಬಹುದಾದ ಗೌರವಕ್ಕೆ ಶಿಫಾರಸು ಮಾಡಲಾಗುವುದು ಎಂದರು.
ಸುದ್ದಿಗೋಷ್ಠಿಯಲ್ಲಿ ಜಿಲ್ಲಾ ಹೆಚ್ಚುವರಿ ರಕ್ಷಣಾಧಿಕಾರಿ ಅನಿಲ್‌ಕುಮಾರ್ ಭೂಮರೆಡ್ಡಿ, ಡಿಸಿಬಿ. ನಾಗರಾಜ್, ಸಿಇಎನ್ ಪಿಐ ಎಂ.ಎಸ್. ದೀಪಕ್, ಸಿಪಿಐ ಎಲ್.ಆರ್. ಲಕ್ಷಿ ್ಮೕಪತಿ, ಮರ್ದನ್, ಸಮಿವುಲ್ಲಾ, ಲಿಂಗೇಗೌಡ, ಹಾಲಪ್ಪ, ರವಿ, ತಮ್ಮಣ್ಣ, ಸಂಗಮೇಶ, ಗುರುನಾಯ್ಕ ಸೇರಿದಂತೆ ಇನ್ನಿತರಿದ್ದರು.
ಪ್ರಕರಣದ ಹಿನ್ನೆಲೆ
ಆರೋಪಿಗಳಾದ ವಿನಯ್ ಹಾಗೂ ಗಣೇಶ್ ಭಾನುವಾರ ಚಿತ್ರದುರ್ಗಕ್ಕೆ ಗಣಪತಿ ಹಬ್ಬದ ಮೆರವಣಿಗೆ ಡಿಜೆ ಬುಕ್ ಮಾಡಿ ವಾಪಸ್ ಊರಿಗೆ ಹೋಗುವಾಗ ಸ್ನೇಹಿತರ ಗುಂಪಿನಿಂದ ಬೇರ್ಪಟ್ಟಿದ್ದರು. ತಮ್ಮ ಬಳಿ ಇದ್ದ .3 ಸಾವಿರಗಳಲ್ಲಿ ಲಾಂಗ್ ಡ್ರೈವ್ ಹೋಗೋಣವೆಂದು ತೀರ್ಮಾನಿಸಿ, ಗಣೇಶನ ಬೈಕ್‌ಗೆ ಪೆಟ್ರೋಲ್ ತುಂಬಿಸಿಕೊಂಡು ಡಾಬಾವೊಂದರಲ್ಲಿ ಪಾರ್ಟಿ ಮಾಡಿಕೊಂಡು ಶಿವಮೊಗ್ಗದತ್ತ ಹೊರಟಿದ್ದರು.
ಹೊಳೆಹೊನ್ನೂರು ಪಟ್ಟಣ ಪ್ರವೇಶಿಸುತ್ತಿದಂತೆ ತಾವು ತಂದಿದ್ದ ಮದ್ಯವನ್ನು ಮತ್ತೊಮ್ಮೆ ಸೇವಿಸಿದ ಈ ಯುವಕರು ಗಾಂಧಿ ಪ್ರತಿಮೆ ಬಳಿ ಹೋಗಿದ್ದಾರೆ. 5 ದಿನ ಹಿಂದೆಷ್ಟೇ ಸ್ವಾತಂತ್ರ್ಯೋತ್ಸವ ಆಚರಣೆಗೆ ವಿದ್ಯುತ್ ದೀಪಗಳಿಂದ ಸಿಂಗಾರಗೊಂಡಿದ್ದ ಗಾಂಧಿ ಪ್ರತಿಮೆ ಬಳಿ ಗಣೇಶ್ ಹೋಗಿ ಅವರ ಕೈಯಲ್ಲಿದ್ದ ಪುಸ್ತಕವನ್ನು ಕಿತ್ತುಕೊಳ್ಳಲು ಪ್ರಯತ್ನಿಸಿದ್ದಾನೆ. ಪುಸ್ತಕ ಬಾರದ ಕಾರಣ ಒಂದೆರೆಡು ಬಾರಿ ಜೋರಾಗಿ ಅಲ್ಲಾಡಿಸಿದ್ದಾನೆ. ಗಾಂಧಿ ಪ್ರತಿಮೆ ಸಿಮೆಂಟ್‌ನಿಂದ ನಿರ್ಮಾಣಗೊಂಡಿದ್ದ ಕಾರಣ ಆಗ ಕೆಳಗೆ ಬಿದ್ದಿದೆ.
ಕೂಡಲೇ ಅಲ್ಲಿಂದ ಪರಾರಿಯಾದ ಅಪರಾಧಿಗಳು ಹೊಳೆಹೊನ್ನೂರು ಸಿದ್ಲೀಪುರ ಮಾರ್ಗವಾಗಿ ಹೊಳಲೂರು ಮಾರ್ಗವಾಗಿ ಶಿವಮೊಗ್ಗಕ್ಕೆ ತಲುಪಿ ಸ್ನೇಹಿತನ ಮನೆಯಲ್ಲಿ ತಂಗಿದ್ದಾರೆ. ಸೋಮವಾರ ಪಟ್ಟಣದ ಮಾರ್ಗವಾಗಿ ಚಿತ್ರದುರ್ಗಕ್ಕೆ ತಿರುಗಿ ಹೋಗುವಾಗ ಪಟ್ಟಣದಲ್ಲಿ ನಡೆಯುತ್ತಿದ್ದ ಗಲಾಟೆಯಲ್ಲಿ ರಸ್ತೆ ತಡೆ ನಡೆಯುವಾಗ ಮಾರ್ಗದಲ್ಲಿ ನಿಂತಿದ್ದಾರೆ. ಆರೋಪಿಗಳಿಗೆ ಪಟ್ಟಣದಲ್ಲಿ ಯಾವ ವಿಷಯಕ್ಕೆ ಗಲಾಟೆ ನಡೆಯುತ್ತಿದೆ ಎಂದು ತಿಳಿಯದೇ ವಾಪಾಸ್ ಚಿತ್ರದುರ್ಗ ತಲುಪಿ ಸಂಬಂಧಿಕರೊಬ್ಬರ ಮನೆಯ ಗೃಹ ಪ್ರವೇಶದಲ್ಲಿ ಭಾಗವಹಿಸಿದ್ದಾರೆ.
ಮಾಧ್ಯಮಗಳಲ್ಲಿ ಪ್ರಸಾರವಾದ ಟಿವಿ ದೃಶ್ಯಾವಳಿಗಳನ್ನು ನೋಡಿದ ನಂತರ ಆರೋಪಿಗಳಿಗೆ ತಾವು ಮಾಡಿರುವ ಕೃತ್ಯದ ಬಗ್ಗೆ ಅರಿವಾಗಿದೆ. ಅಷ್ಟರಲ್ಲೇ ಪಟ್ಟಣದ ಪೊಲೀಸರು ಆರೋಪಿಗಳ ಮನೆಯ ಕದತಟ್ಟಿದ್ದಾರೆ.
ಪೊಲೀಸ್ ವರಿಷ್ಠಾಧಿಕಾರಿಗೆ ಮನವಿ
ಅಕ್ಟೋಬರ್ 2ರಂದು ಮಹಾತ್ಮ ಗಾಂಧಿ ಜಯಂತಿ ಇರುವುದರಿಂದ ಅದಷ್ಟುಬೇಗ ಪ್ರತಿಮೆಯನ್ನು ಪುನಃ ನಿರ್ಮಾಣ ಮಾಡಬೇಕು ಎಂದು ಗ್ರಾಮಸ್ಥರು ಮನವಿ ಸಲ್ಲಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಪೊಲೀಸ್ ವರಿಷ್ಠಾಧಿಕಾರಿ ಈ ವಿಚಾರ ನಮ್ಮ ಇಲಾಖೆ ಸಂಬಂಧಿಸಿದಲ್ಲ. ಆದರೂ ಈಗಾಗಲೇ ಜಿಲ್ಲಾಧಿಕಾರಿ ಹಾಗೂ ಉಪವಿಭಾಗಾಧಿಕಾರಿ ಅವರ ಗಮನಕ್ಕೆ ವಿಷಯ ತರಲಾಗಿದೆ. ಮತ್ತೊಮ್ಮೆ ಇದರ ಬಗ್ಗೆ ಗಮನ ಹರಿಸುವಂತೆ ಮನವಿ ಮಾಡಿಕೊಳ್ಳಲಾಗುವುದು ಎಂದರು ಭರವಸೆ ನೀಡಿದರು.
Breaking news: ಕೆಎಸ್‌ಆರ್‌ಟಿಸಿ ಬಸ್ ಡಿಕ್ಕಿ, ಉರುಳಿಬಿದ್ದ ವೀರ ಸೇನಾನಿ ಜನರಲ್ ತಿಮ್ಮಯ್ಯ ಪ್ರತಿಮೆ!
ಮಾತಿನ ಚಕಮಕಿ
ಸೋಮವಾರ ಬೆಳಗ್ಗೆ ಗಾಂಧಿ ಪ್ರತಿಮೆಯನ್ನು ಧ್ವಂಸಗೊಳಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಮುಸ್ಲಿಂ ಯುವಕರ ವಿರುದ್ಧ ಹಲವರು ವಾಗ್ದಾಳಿ ನಡೆಸಿದ್ದರು. ಆದರೆ, ಬುಧವಾರ ಮುಸ್ಲಿಂ ಯುವಕರು ಠಾಣೆ ಮುಂದೆ ಇದರ ವಿರುದ್ಧ ಧ್ವನಿ ಎತ್ತಿದ್ದರಿಂದ ಕೆಲಕಾಲ ಮುಖಂಡರ ನಡುವೆ ಮಾತಿನ ಚಕಮಕಿ ನಡೆಯಿತು.
ಗಾಂಧಿ ಪ್ರತಿಮೆ ಭಂಜಕರಿಗೆ ಅಪರಾಧಿಗಳಿಗೆ ಗಲ್ಲುಶಿಕ್ಷೆ ವಿಧಿಸಬೇಕು. ಇಂತಹ ಘಟನೆಗಳು ಇನ್ನು ಮುಂದೆ ನಡೆಯಂತೆ ಎಚ್ಚರ ವಹಿಸಬೇಕು. ಕೆಲವು ಸೂಕ್ಷ ್ಮ ಪ್ರದೇಶಗಳಲ್ಲಿ ಸಿಸಿ ಕ್ಯಾಮೆರಾಗಳನ್ನು ಅಳವಡಿಸಬೇಕು. ರಾತ್ರಿ ವೇಳೆಯಲ್ಲಿ ಪೊಲೀಸ್ ಸಿಬ್ಬಂದಿಯನ್ನು ಗಸ್ತು ತಿರುಗುವಂತೆ ನೇಮಿಸಬೇಕು
- ಆರ್.ಉಮೇಶ್, ಕಾಂಗ್ರೆಸ್ ಮುಖಂಡ