ಧಾರವಾಡ ಜಿಲ್ಲೆಯಲ್ಲಿ ಮಹಿಳಾ ಅಧಿಕಾರಿಗಳದ್ದೇ ದರ್ಬಾರ್‌: ಯಾವ ಯಾವ ಇಲಾಖೆಗಳಲ್ಲಿ ಗೊತ್ತಾ?

By Govindaraj SFirst Published Aug 25, 2023, 9:33 AM IST
Highlights

ವಿಧಾನಸಭಾ ಚುಣಾವಣೆ ಮುಗಿದ ಬಳಿಕ ಹೋಸದಾಗಿ ಕಾಂಗ್ರೆಸ್ ಸರಕಾರದ ಅಧಿಕಾರವನ್ನ ಹಿಡಿದುಕ್ಕೊಂಡಿದೆ. ಆದರೆ ರಾಜ್ಯಾದ್ಯಂತ ವಿವಿಧ ಇಲಾಖೆಗಳಲ್ಲಿ ಸಾಕಷ್ಟು ಅಧಿಕಾರಿಗಳ ವರ್ಗಾವಣೆಯ ಪರ್ವ ನಡೆದಿತ್ತು.

ವರದಿ: ಪರಮೇಶ್ ಅಂಗಡಿ‌, ಏಷ್ಯಾನೆಟ್ ಸುವರ್ಣ ನ್ಯೂಸ್, ಧಾರವಾಡ

ಧಾರವಾಡ (ಆ.25): ವಿಧಾನಸಭಾ ಚುಣಾವಣೆ ಮುಗಿದ ಬಳಿಕ ಹೋಸದಾಗಿ ಕಾಂಗ್ರೆಸ್ ಸರಕಾರದ ಅಧಿಕಾರವನ್ನ ಹಿಡಿದುಕ್ಕೊಂಡಿದೆ. ಆದರೆ ರಾಜ್ಯಾದ್ಯಂತ ವಿವಿಧ ಇಲಾಖೆಗಳಲ್ಲಿ ಸಾಕಷ್ಟು ಅಧಿಕಾರಿಗಳ ವರ್ಗಾವಣೆಯ ಪರ್ವ ನಡೆದಿತ್ತು. ಆದರೆ ಸದ್ಯ ವಿದ್ಯಾಕಾಶಿ ಎಂದು ಪ್ರಖ್ಯಾತಿ ಪಡೆದುಕ್ಕೊಂಡಿರುವ ನಮ್ಮ ಧಾರವಾಡ ಜಿಲ್ಲೆಯಲ್ಲಿ ದೊಡ್ಡ‌ ಇಲಾಖೆಯಲ್ಲಿ ಮಹಿಳಾ ಅಧಿಕಾರಿಗಳು ಕಾರ್ಯನಿರ್ವಹಿಸುತ್ತಿದ್ದಾರೆ. ಜಿಲ್ಲೆಯಲ್ಲಿ ಮಹಿಳಾ ಅಧಿಕಾರಿಗಳಿಂದ ದೊಡ್ಡ ದೊಡ್ಡ ಇಲಾಖೆಯಲ್ಲಿ ಕೆಲಸ ಮಾಡುವುತ್ತಿರುವದರಿಂದ ಜಿಲ್ಲೆಯಲ್ಲಿ ಅಭಿವೃದ್ಧಿಯ ಬಗ್ಗೆ ಹೆಗೆಲ್ಲ ಕೆಲಸವನ್ನ ಮಾಡುತ್ತಾರೆ ಎಂಬುದನ್ನ ಜನಸಾಮಾನ್ಯರು ಕಾದು ಕುಳಿತಿದ್ದಾರೆ.

Latest Videos

ಮಹಿಳಾ ಅಧಿಕಾರಿಗಳು ಆಗಿರುವದರಿಂದ ಜಿಲ್ಲೆಯಲ್ಲಿ ಎನೆಲ್ಲ ಕೆಲಸ ಕಾರ್ಯ ಮತ್ತು ಜನರಿಗೆ ಹೇಗೆಲ್ಲ ಕಾರ್ಯವೈಖರಿ ಮಾಡುತ್ತಾರೆ ಎಂದು ಗೊತ್ತಾಗಬೇಕಿದೆ. ಇನ್ನು ಧಾರವಾಡ ಜಿಲ್ಲೆಯಲ್ಲಿ ಯಾವ ಯಾವ ಮಹಿಳಾ ಅಧಿಕಾರಿ ಯಾವ ಯಾವ ಹುದ್ದೆಯಲ್ಲಿದ್ದಾರೆ ಎಂಬದನ್ನ ನೋಡುವುದಾದರೆ ರೇಣುಕಾ ಸುಕುಮಾರ, ಹುಬ್ಬಳ್ಳಿ ಧಾರವಾಡ ಪೋಲಿಸ್ ಕಮಿಷನರ್ ಆಗಿ ಕೆಲಸ ಮಾಡುತ್ತಿದ್ದಾರೆ, ಡಾ ಶಶಿ ಪಾಟೀಲ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಅಧಿಕಾರಿಗಳಾಗಿ ಕೆಲಸ ಮಾಡುತ್ತಿದ್ದಾರೆ, ಟಿಕೆ ಸ್ವರೂಪ ಜಿಲ್ಲಾ ಪಂಚಾಯತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಯಾಗಿ ಅಧಿಕಾರ ಮಾಡುತ್ತಿದ್ದರೆ,ಕೆ ಜಿ ಶಾಂತಿ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧಿಶೆಯಾಗಿದ್ದಾರೆ.

ಲೋಕಸಭೆಗೆ ಸ್ಪರ್ಧಿಸುವ ಹುಚ್ಚಿಲ್ಲ: ಶಾಸಕ ಎಸ್‌.ಟಿ.ಸೋಮಶೇಖರ್‌

ಮಹಾನಗರ ಪಾಲಿಕೆಯ ಮೇಯರ್ ಆಗಿ, ವೀಣಾ, ಭಾರದ್ವಾಡ ಆಯ್ಕೆ ಯಾಗಿ ಅಧಿಕಾರಿ ನಡೆಸುತ್ತಿದ್ದಾರೆ ಇನ್ನು ಧಾರವಾಡ ಅಪರ ಜಿಲ್ಲಾಧಿಕಾರಿಗಳಾಗಿ ಗೀತಾ ಸಿ ಡಿ ಅವರು ಆಡಳಿತ ವನ್ನ ನಡೆಸುತ್ತಿದ್ದಾರೆ. ಜೊತೆಗೆ ಆರ್ ಸಿ ಎಚ್ ಓ ,ಡಾ. ಸುಜಾತಾ ಹಸವಿಮಠ ಕೆಲಸ ಮಾಡುತ್ತಿದ್ದರೆ, ಜಿಲ್ಲಾ ಕೌಟುಂಬಿಕ  ನ್ಯಾಯಾಲಯದ ನ್ಯಾಯಾದೀಶೆಯಾಗಿ ನಾಗವೇಣಿ ಎಸ್ ಅವರು ಸೇವೆ ಸಲ್ಲಿಸುತ್ತಿದ್ದಾರೆ. ಇನ್ನು ಅರಣ್ಯ ಇಲಾಖೆಯ ಡಿಎಪ್ಓ ಆಗಿ  ವೃಷ್ಣಿ ಎನ್ನುವ ಮಹಿಳಾ ಅಧಿಕಾರಿ ಕಾರ್ಯನಿರ್ವಹಣೆ ಮಾಡುತ್ತಿದ್ದಾರೆ ಇನ್ನು ಅಪರ ಆಯುಕ್ತರು ಶಿಕ್ಷಣ ಇಲಾಖೆಯಲ್ಲಿ ಜಯಶ್ರಿ ಶಿಂತ್ರಿ ಮಹಿಳಾ ಅಧಿಕಾರಿಯಾಗಿ ಶಿಕ್ಷಣ ಇಲಾಖೆಯಲ್ಲಿ ಕೆಲಸವನ್ನ ಮಾಡುತ್ತಿದ್ದಾರೆ. ಇನ್ನು ಧಾರವಾಡ ಜಿಲ್ಲೆ ಸದ್ಯ ಮಹಿಳಾ ಅಧಿಕಾರಿಗಳ ಕಪಿಮುಷ್ಟಿಯಲ್ಲಿದೆ.

ಮಂಡ್ಯ ನನ್ನ ಆಯ್ಕೆ, ಅಂತಿಮ ನಿರ್ಧಾರ ಬಿಜೆಪಿಯದ್ದು: ಸಂಸದೆ ಸುಮಲತಾ

ಆದರೆ ಮಹಿಳಾ ಅಧಿಕಾರಿಗಳು ಧಾರವಾಡ ಜಿಲ್ಲೆಯಲ್ಲಿ ಯಾವ ಕ್ರಾಂತಿಯನ್ನ ಮಾಡುತ್ತಾರೆ ಎಂಬುದನ್ನ  ಜನಸಾಮಾನ್ಯರು ನೀರಿಕ್ಷೆ ಮಾಡುತ್ತಿದ್ದಾರೆ. ಒಟ್ಟಿನಲ್ಲಿ ಧಾರವಾಡ ಜಿಲ್ಲೆಯಲ್ಲಿ ಸಾಕಷ್ಟು ಇಲಾಖೆಯಲ್ಲಿ ಅದರಲ್ಲೂ ಪ್ರಮುಖವಾಗಿರುವ ಇಲಾಖೆಗಳಲ್ಲಿ ಮಹಿಳೆಯರೆ ಮೆಲುಗೈ ಸಾಧಿಸಿದ್ದಾರೆ. ಮಹಿಳಾ ಅಧಿಕಾರಿಗಳು ಕೆ ಎ ಎಸ್, ಐಎಎಸ್, ಐಪಿಸ್ ಕೇಡರ್ ನ ಅಧಿಕಾರಿಗಳಿದ್ದು ಸುಮಾರು 10 ಇಲಾಳೆಯಲ್ಲಿ ಮುಖ್ಯ ಹುದ್ದೇಯಲ್ಲಿ ಕೆಲಸ ಮಾಡುತ್ತಿದ್ದಾರೆ. ಇನ್ನು ಈ ಮಹಿಳಾ ಅಧಿಕಾರಿಗಳು ಒಳ್ಳೆಯ ರೀತಿಯಲ್ಲಿ ಕೆಲಸ ಮಾಡಿ ಧಾರವಾಡ ಜಿಲ್ಲೆಗಾಗಿ‌ ಶ್ರಮಿಸಬೇಕು ಬೆಡವರ, ರೋಗಿಗಳು, ನೊಂದವರ, ಬೆಂದವರ ಕಣ್ಣಿರು ಒರೆಸುವ ಕೆಲಸ ಮಾಡಿದರೆ ಮಾತ್ರ ಮಹಿಳಾ ಅಧಿಕಾರಿಗಳಿಗೆ ಒಂದು ಗೌರವ ಸಿಕ್ಕಂತಾಗುತ್ತದೆ. ಆದಷ್ಡು ಬೇಗೆ ಈ ಮಹಿಳಾ ಅಧಿಕಾರಿಗಳು ಧಾರವಾಡ ಜಿಲ್ಲೆಯಲ್ಲಿ ಒಂದು ಚಾಪು ಮೂಡಿಸಲಿ ಎಂಬುದು ಏಷ್ಯಾನೆಟ್ ಸುವರ್ಣ ನ್ಯೂಸ್‌ನ ಕಳಕಳಿ.

click me!