LIVE NOW
Published : May 29, 2026, 07:45 AM ISTUpdated : May 29, 2026, 07:39 PM IST

Karnataka Political Live News: ಮೆಜೆಸ್ಟಿಕ್‌ನಲ್ಲಿ ಮೈ ಮಾರಿಕೊಳ್ಳೋ ಆ ಮಹಿಳೆಯರು; ಕಣ್ಣಿಗೆ ಕಾಣಿಸದ ಸತ್ಯ ತೋರಿಸಿದ ನಟಿ ಕಾವ್ಯಾ ಶಾ!

ಸಾರಾಂಶ

ರಾಜ್ಯಪಾಲ ಥಾವರ್‌ಚಂದ್‌ ಗೆಹಲೋತ್‌ ಅವರು ಗುರುವಾರ ರಾತ್ರಿ ಬೆಂಗಳೂರಿಗೆ ವಾಪಸಾಗಿದ್ದು, ಶುಕ್ರವಾರ ಸಿದ್ದರಾಮಯ್ಯ ಅವರನ್ನು ಕರೆಸಿಕೊಂಡು ರಾಜೀನಾಮೆ ಅಂಗೀಕರಿಸುವ ಸಾಧ್ಯತೆಯಿದೆ ಎನ್ನಲಾಗಿತ್ತು. ಆದರೆ ಇದೀಗ ರಾಜ್ಯಪಾಲರು ರಾಜೀನಾಮೆಯನ್ನು ಅಂಗೀಕರಿಸಿದ್ದಾರೆ ಎಂದು ವರದಿ ತಿಳಿಸಿದೆ. ಇನ್ನೊಂದೆಡೆ ಸಿದ್ದರಾಮಯ್ಯ ಅವರ ರಾಜೀನಾಮೆಯ ನಂತರ ರಾಜ್ಯ ಕಾಂಗ್ರೆಸ್‌ ಸರ್ಕಾರ ಎರಡನೇ ಹಂತಕ್ಕೆ ಮಗ್ಗಲು ಬದಲಿಸಿದ್ದು, ಮುಂದಿನ ಸರ್ಕಾರದ ರೂಪರೇಷೆ ಹಾಗೂ ಸಂಪುಟ ಸರ್ಕಸ್‌ ಆರಂಭಿಸುವ ಸಲುವಾಗಿ ಹೈಕಮಾಂಡ್‌ ಜತೆ ಚರ್ಚೆ ನಡೆಸಲು   ಸಿದ್ದರಾಮಯ್ಯ ಹಾಗೂ ಉಪ ಮುಖ್ಯಯಂತ್ರಿ ಡಿ.ಕೆ. ಶಿವಕುಮಾರ್‌ ಪ್ರತ್ಯೇಕವಾಗಿ ದೆಹಲಿಗೆ ಪ್ರಯಾಣ ಬೆಳೆಸಿದ್ದಾರೆ.

ದೆಹಲಿಯಲ್ಲಿ ಉಭಯ ನಾಯಕರು ವರಿಷ್ಠರನ್ನು ಭೇಟಿ ಮಾಡಲಿದ್ದು, ಈ ಭೇಟಿಯ ವೇಳೆಯೇ ಶಾಸಕಾಂಗ ಪಕ್ಷದ ಸಭೆ ಯಾವಾಗ? ಹೊಸ ಮುಖ್ಯಮಂತ್ರಿ ಪ್ರಮಾಣ ವಚನದ ದಿನ ಯಾವುದು? ಪ್ರಮಾಣ ವಚನದ ವೇಳೆಯೇ ಹೊಸ ಸಿಎಂ ಸೇರಿ ಒಟ್ಟು 9 ಮಂದಿ ಸಂಪುಟ ಸೇರ್ಪಡೆಯಾಗಲಿದ್ದಾರೆಯೇ ಅಥವಾ ಒಂದೇ ಬಾರಿಗೆ ಪರಿಪೂರ್ಣ ಸಂಪುಟ ರಚನೆಯಾಗಲಿದೆಯೇ ಎಂಬಿತ್ಯಾದಿ ವಿಚಾರಗಳ ಬಗ್ಗೆ ಸ್ಪಷ್ಟತೆ ಮೂಡಲಿದೆ.

ಇನ್ನು ಸಿದ್ದರಾಮಯ್ಯ ಅವರಿಗೆ ರಾಹುಲ್ ಭೇಟಿಗೆ ಬೆಳಗ್ಗೆ 9 ಗಂಟೆ ಸಮಯ ನಿಗದಿಯಾಗಿದೆ. ಸೋನಿಯಾ ಗಾಂಧಿ ನಿವಾಸ ಜನಪತ್ -10 ನಲ್ಲಿ ಭೇಟಿಗೆ ಅವಕಾಶ ನೀಡಲಾಗಿದ್ದು, ಇಬ್ಬರನ್ನೂ ಸಿದ್ದರಾಮಯ್ಯ ಒಟ್ಟಿಗೆ ಭೇಟಿಯಾಗಲಿದ್ದಾರೆ.

07:39 PM (IST) May 29

ಮೆಜೆಸ್ಟಿಕ್‌ನಲ್ಲಿ ಮೈ ಮಾರಿಕೊಳ್ಳೋ ಆ ಮಹಿಳೆಯರು; ಕಣ್ಣಿಗೆ ಕಾಣಿಸದ ಸತ್ಯ ತೋರಿಸಿದ ನಟಿ ಕಾವ್ಯಾ ಶಾ!

Actress Kaavya Sha: ಸಂಜೆಯಾಗುತ್ತಿದ್ದಂತೆ ಮೆಜೆಸ್ಟಿಕ್‌ನಲ್ಲಿ ಕೆಲ ಹುಡುಗಿಯರು ಅತಿಯಾಗಿ ಮೇಕಪ್‌ ಮಾಡಿಕೊಂಡು, ಆ ಕಡೆಯಿಂದ ಈ ಕಡೆಗೆ ಓಡಾಡುತ್ತಿರುತ್ತಾರೆ. ಅವರ ನಡವಳಿಕೆ ನೋಡಿದ್ರೆ, ಅವ್ರ ಉದ್ದೇಶ ಏನು ಎನ್ನೋದು ಗೊತ್ತಾಗುತ್ತದೆ. ಸಿಂಗಲ್‌ ಆಗಿ ಓಡಾಡುವ ಹುಡುಗರ ಕಡೆಗೆ ಅವರ ಗಮನ ಹೆಚ್ಚಿರುತ್ತದೆ. 

 

Read Full Story

07:20 PM (IST) May 29

ನೂತನ ಸಿಎಂ ಪ್ರಮಾಣವಚನಕ್ಕೆ ಸ್ಥಳ ಫಿಕ್ಸ್, ಆರ್‌ಸಿಬಿ ನೆನಪಿಟ್ಟುಕೊಂಡು ಎಚ್ಚೆತ್ತ ಅಧಿಕಾರಿ ವರ್ಗ

ರಾಜ್ಯ ರಾಜಕಾರಣದಲ್ಲಿ ಎದ್ದ ಬಿರುಗಾಳಿ ಒಂದು ಹಂತಕ್ಕೆ ತಣ್ಣಗಾಗಿದೆ. ಸಿದ್ದರಾಮಯ್ಯ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ನಾಳೆ ಶಾಸಕಾಂಗ ಪಕ್ಷದ ಸಭೆ ನಡೆಯಲಿದೆ. ಇದರ ಬೆನ್ನಲ್ಲೇ ನೂತನ ಸಿಎಂ ಪ್ರಮಾಣವಚನಕ್ಕೆ ಸ್ಥಳ ನಿಗಧಿಯಾಗಿದೆ.

 

Read Full Story

05:50 PM (IST) May 29

ಇನ್ಮುಂದೆ ಸ್ಮಾರ್ಟ್ ಗ್ಲಾಸ್ ಹಾಕಂಗಿಲ್ಲ! ಆಟಗಾರರಿಗೆ ಬಿಸಿಸಿಐ ಖಡಕ್ ವಾರ್ನಿಂಗ್

ಐಪಿಎಲ್ ಪಂದ್ಯದ ದಿನಗಳಲ್ಲಿ ಆಟಗಾರರು ಮತ್ತು ಸಿಬ್ಬಂದಿ ಸ್ಮಾರ್ಟ್ ಗ್ಲಾಸ್ ಬಳಸುವುದನ್ನು ಬಿಸಿಸಿಐನ ಭ್ರಷ್ಟಾಚಾರ ನಿಗ್ರಹ ಘಟಕ ನಿಷೇಧಿಸಿದೆ. ಪಂದ್ಯದ ಪಾರದರ್ಶಕತೆ ಕಾಪಾಡಲು ಮತ್ತು ಲೈವ್ ಸ್ಟ್ರೀಮಿಂಗ್, ರೆಕಾರ್ಡಿಂಗ್‌ನಂತಹ ತಂತ್ರಜ್ಞಾನದ ದುರ್ಬಳಕೆಯನ್ನು ತಡೆಯಲು ಈ ಕ್ರಮ ಕೈಗೊಳ್ಳಲಾಗಿದ್ದು, ಡ್ರೆಸ್ಸಿಂಗ್ ರೂಮ್ ಮತ್ತು ಡಗೌಟ್‌ನಂತಹ ಪ್ರದೇಶಗಳಲ್ಲಿ ಇವುಗಳ ಬಳಕೆಯನ್ನು ಕಟ್ಟುನಿಟ್ಟಾಗಿ ನಿರ್ಬಂಧಿಸಲಾಗಿದೆ.
Read Full Story

01:36 PM (IST) May 29

ಡಿಕೆಶಿ ಸಿಎಂ ಆಗಲೆಂದು ಒಬ್ಬೊಬ್ಬರದು ಒದೊಂದು ಸರಣಿ ಹರಕೆಗಳು, ಪ್ರಿಯಾಂಕ್ ಖರ್ಗೆ ಸಚಿವರಾಗಲಿ ಎಂದು ಈಡುಗಾಯಿ!

ಸಿದ್ದರಾಮಯ್ಯನವರ ರಾಜೀನಾಮೆ ನಂತರ, ಡಿ.ಕೆ. ಶಿವಕುಮಾರ್ ಮುಖ್ಯಮಂತ್ರಿಯಾಗಲೆಂದು ಅವರ ಬೆಂಬಲಿಗರು ತಿರುಪತಿಯಲ್ಲಿ ಮುಡಿ ನೀಡುವುದು ಸೇರಿದಂತೆ ರಾಜ್ಯದಾದ್ಯಂತ ವಿಶೇಷ ಪೂಜೆಗಳನ್ನು ಸಲ್ಲಿಸುತ್ತಿದ್ದಾರೆ. ಇದೇ ವೇಳೆ, ಪ್ರಿಯಾಂಕ್ ಖರ್ಗೆಗೆ ಉಪಮುಖ್ಯಮಂತ್ರಿ ಸ್ಥಾನಕ್ಕೆ ಪೂಜೆಗಳನ್ನು ನೆರವೇರಿಸುತ್ತಿದ್ದಾರೆ.

Read Full Story

01:33 PM (IST) May 29

ಡಿಕೆಶಿ ಮೌನಕ್ಕೆ ಕೊನೆಗೂ ಸಿಕ್ಕಿತು ಉತ್ತರ - 'ತೋಡಿದ ಬಾವಿಗೆ ಜಲವೇ ಸಾಕ್ಷಿ' ಎಂದದ್ಯಾಕೆ ನೊಣವೆಕೆರೆ ಅಜ್ಜಯ್ಯ

ಮುಂದಿನ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಎನ್ನುವುದು ಬಹುತೇಕ ಖಚಿತವಾಗಿದ್ದರೂ, ಅವರು ಮೌನಕ್ಕೆ ಶರಣಾಗಿದ್ದಾರೆ. ಅವರ ಈ ಮೌನದ ಹಿಂದೆ, ಅವರು ನಂಬುವ ನೊಣವಿನಕೆರೆ ಅಜ್ಜಯ್ಯನವರ ಸಲಹೆಯಿದ್ದು, ಪ್ರಮಾಣ ವಚನ ಸ್ವೀಕರಿಸುವವರೆಗೂ ಮಾತನಾಡದಂತೆ ಶ್ರೀಗಳು ಎಚ್ಚರಿಕೆ ನೀಡಿದ್ದಾರೆ.
Read Full Story

01:05 PM (IST) May 29

₹75 ಲಕ್ಷ ವೆಚ್ಚದಲ್ಲಿ ಈದ್ಗಾ ಮೈದಾನ, ₹4 ಕೋಟಿ ವೆಚ್ಚದಲ್ಲಿ ಏರ್‌ ಕಂಡಿಷನ್ಡ್ ಶಾದಿಮಹಲ್.. ಸರ್ವೇ ಜನಃ ಸುಖಿನೋ ಭವಂತು ಎಂದ ಬಿಜೆಪಿ ಶಾಸಕ

ಹೊಳಲ್ಕೆರೆ ಶಾಸಕ ಡಾ.ಎಂ.ಚಂದ್ರಪ್ಪ ಅವರು 75 ಲಕ್ಷ ರು. ವೆಚ್ಚದ ಈದ್ಗಾ ಮೈದಾನ ಅಭಿವೃದ್ಧಿ ಕಾಮಗಾರಿಗೆ ಚಾಲನೆ ನೀಡಿದರು. ʻಸರ್ವೇ ಜನಃ ಸುಖಿನೋ ಭವಂತುʼ ಧ್ಯೇಯದಡಿ ತಾನು ಎಲ್ಲರನ್ನೂ ಸಮಾನವಾಗಿ ಕಾಣುತ್ತಿದ್ದು, ಕ್ಷೇತ್ರದ ಅಭಿವೃದ್ಧಿಗೆ ಪ್ರಾಮಾಣಿಕವಾಗಿ ಶ್ರಮಿಸುತ್ತಿರುವುದಾಗಿ ತಿಳಿಸಿದರು.
Read Full Story

12:18 PM (IST) May 29

'ಇದು ಬೊಂಬೆಯಾಟವಯ್ಯ..' ನಿಜವಾಯ್ತು ಬೊಂಬೆ ಭವಿಷ್ಯ! ಸಿಎಂ ಕುರ್ಚಿ ಬದಲಾವಣೆಗೆ ಮುಂಚೆಯೇ ನುಡಿದಿತ್ತು ಭವಿಷ್ಯ!

ಧಾರವಾಡದ ಹನುಮನಕೊಪ್ಪ ಗ್ರಾಮದಲ್ಲಿ ಯುಗಾದಿ ದಿನ ಮಣ್ಣಿನ ಬೊಂಬೆ ನೀಡಿದ್ದ ಭವಿಷ್ಯ ಈಗ ನಿಜವಾಗ್ತಿದೆಯಾ? ಸಿಎಂ ಬದಲಾವಣೆ ಚರ್ಚೆ ನಡುವೆ ವೈರಲ್ ಆದ ಭಯಾನಕ ಸಂಪ್ರದಾಯದ ರೋಚಕ ಕಥೆ!

Read Full Story

10:08 AM (IST) May 29

Karnataka's Yuvan Nidhi - ಯುವ ನಿಧಿ ಅನುದಾನ ಗೃಹಲಕ್ಷ್ಮೀಗೆ ವರ್ಗಾವಣೆ? 3ತಿಂಗಳಿನಿಂದ ಪದವೀಧರರಿಗೆ ತಲುಪದ ನಿರುದ್ಯೋಗ ಭತ್ಯೆ!

ಸರ್ಕಾರದ ಐದು ಗ್ಯಾರಂಟಿ ಯೋಜನೆಗಳಲ್ಲಿ ಒಂದಾದ ಯುವ ನಿಧಿ ಯೋಜನೆಯ ಹಣ ಕಳೆದ ಮೂರು ತಿಂಗಳಿಂದ ಪದವೀಧರರಿಗೆ ತಲುಪಿಲ್ಲ. ಕೊಪ್ಪಳ ಜಿಲ್ಲೆಯ ಸಾವಿರಾರು ಫಲಾನುಭವಿಗಳು ನಿರುದ್ಯೋಗ ಭತ್ಯೆಗಾಗಿ ಕಾಯುತ್ತಿದ್ದು, ತಾಂತ್ರಿಕ ಕಾರಣಗಳಿಂದ ವಿಳಂಬವಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
Read Full Story

09:47 AM (IST) May 29

Siddaramaiah - ಸರ್ವ ಸಮುದಾಯದ ನಾಯಕ ಸಿದ್ದರಾಮಯ್ಯ - ಸಚಿವ ಈಶ್ವರ್ ಖಂಡ್ರೆ

ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯನವರ ಜನಪರ ಆಡಳಿತವನ್ನು ಸಚಿವ ಈಶ್ವರ ಖಂಡ್ರೆ ಶ್ಲಾಘಿಸಿದ್ದಾರೆ. ಅನ್ನಭಾಗ್ಯ, ಪಂಚ ಗ್ಯಾರಂಟಿಗಳಂತಹ ಯೋಜನೆಗಳು, ಬಸವತತ್ವಕ್ಕೆ ನೀಡಿದ ಕೊಡುಗೆ ಹಾಗೂ ಕಲ್ಯಾಣ ಕರ್ನಾಟಕದ ಅಭಿವೃದ್ಧಿಗೆ ಅವರ ಬದ್ಧತೆಯನ್ನು ಈ ಲೇಖನ ವಿವರಿಸುತ್ತದೆ.
Read Full Story

09:26 AM (IST) May 29

ವೈಭವ್ ಸೂರ್ಯವಂಶಿ ಎನ್ನುವ ವಜ್ರವನ್ನು ಹುಡುಕಿದ್ದು ದ್ರಾವಿಡ್ ಅಲ್ಲ, ಲಕ್ಷ್ಮಣ್‌ ಕೂಡಾ ಅಲ್ಲ! ಬ್ಯಾಕ್ ಟು ಬ್ಯಾಕ್ ಸಿಕ್ಸರ್ ಕಥೆ ಗೊತ್ತಾ?

2025ರ ಐಪಿಎಲ್ ಮೆಗಾ ಹರಾಜಿನಲ್ಲಿ ರಾಜಸ್ಥಾನ ರಾಯಲ್ಸ್ ಫ್ರಾಂಚೈಸಿ 13 ವರ್ಷದ ಯುವ ಕ್ರಿಕೆಟಿಗ ವೈಭವ್ ಸೂರ್ಯವಂಶಿಯನ್ನು 1.10 ಕೋಟಿ ರುಪಾಯಿಗೆ ಖರೀದಿಸಿತ್ತು. ಇಂದು ವೈಭವ್ ಸೂರ್ಯವಂಶಿ ಆಟಕ್ಕೆ ಕ್ರಿಕೆಟ್ ಫ್ಯಾನ್ಸ್ ಫಿದಾ ಆಗಿದ್ದಾರೆ. ಅಷ್ಟಕ್ಕೂ ವೈಭವ್ ಎನ್ನುವ ವಜ್ರವನ್ನು ಹುಡುಕಿದ್ದು ಯಾರು ಗೊತ್ತಾ?

Read Full Story

08:43 AM (IST) May 29

ರಾಮನಗರಕ್ಕೆ 5ನೇ ಬಾರಿಮುಖ್ಯಮಂತ್ರಿ ಹುದ್ದೆ ಭಾಗ್ಯ? ಮೊದಲ ಐವರು ಯಾರು?

ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಮುಖ್ಯಮಂತ್ರಿಯಾಗುವ ಸಾಧ್ಯತೆಯಿದ್ದು, ಇದು ಬೆಂಗಳೂರು ದಕ್ಷಿಣ ಜಿಲ್ಲೆಗೆ ಐದನೇ ಸಿಎಂ ಕೊಡುಗೆಯಾಗಲಿದೆ. ಈ ಹಿಂದೆ ಕೆಂಗಲ್ ಹನುಮಂತಯ್ಯ, ರಾಮಕೃಷ್ಣ ಹೆಗಡೆ, ದೇವೇಗೌಡ ಹಾಗೂ ಕುಮಾರಸ್ವಾಮಿ ಈ ಜಿಲ್ಲೆಯಿಂದ ಸಿಎಂ ಆಗಿದ್ದರು.
Read Full Story

More Trending News