Published : Sep 18, 2026, 07:15 AM ISTUpdated : Sep 18, 2026, 10:48 PM IST

Karnataka News Live: ಇದು ಹಗಲು ದರೋಡೆ ಅಲ್ಲದೇ ಮತ್ತೇನು? ಬೆಂಗಳೂರಿನ ಆಸ್ತಿ ಮಾಲೀಕರಿಂದ ಸಾಫ್ಟ್‌ವೇರ್‌ ಚಾರ್ಜ್‌ ವಸೂಲಿ ಮಾಡ್ತಿರುವ GBA

ಸಾರಾಂಶ

ಕಲ್ಯಾಣ ಕರ್ನಾಟಕ ಅಭಿವೃದ್ಧಿಗೆ 9 ಅಂಶಗಳ ಹೊಸ ಮಿಷನ್‌ ಆರಂಭಿಸಿದ ಸಿಎಂ ಡಿ.ಕೆ. ಶಿವಕುಮಾರ್

1. ಹೂಡಿಕೆ ಹೆಚ್ಚಳಕ್ಕೆ ಆರ್ಥಿಕ ಮಿಷನ್‌ 2. ಕೃಷಿ ಮೌಲ್ಯವರ್ಧನೆಗೆ ಜೈವಿಕ ಆರ್ಥಿಕ ಮಿಷನ್‌ 3. ರಕ್ತಹೀನತೆ ವಿರುದ್ಧ ಅಭಿಯಾನ 4. ಕಲಬುರಗಿಗೆ ಮೂಲಸೌಕರ್ಯ 5. 50000 ನಿವೇಶನ 6. ಕಲಬುರಗಿಯಲ್ಲಿ ಐಟಿ ಪಾರ್ಕ್‌ 7. ಪ್ರವಾಸೋದ್ಯಮ, ಪಾರಂಪರಿಕ ತಾಣಗಳ ಅಭಿವೃದ್ಧಿ 8. ಕ್ರೀಡಾಭಿವೃದ್ಧಿಗೆ ಸ್ಪೋರ್ಟ್ಸ್‌ ಸಿಟಿ 9. ಹಸಿರು ಹೊದಿಕೆ ಹೆಚ್ಚಳಕ್ಕೆ ಕೋಟಿ ವೃಕ್ಷ ಅಭಿಯಾನ

ಕಲ್ಯಾಣ ನಾಡಿನ ಹೆಬ್ಬಾಗಿಲು ಕಲಬುರಗಿಯಲ್ಲಿ ಗುರುವಾರ ನಡೆದ 79ನೇ ಕಲ್ಯಾಣ ಕರ್ನಾಟಕ ಉತ್ಸವದಲ್ಲಿ ಪಾಲ್ಗೊಂಡು, ರಾಷ್ಟ್ರಧ್ವಜಾರೋಹಣ ನೆರವೇರಿಸಿ ಅವರು ಮಾತನಾಡಿದರು. ಇದೇ ವೇಳೆ, ಕಲ್ಯಾಣ ಕರ್ನಾಟಕ ಭಾಗದ ಏಳು ಜಿಲ್ಲೆಗಳಿಗೆ ಸಂಬಂಧಿಸಿದ 1,917.13 ಕೋಟಿ ರು. ಮೊತ್ತದ 940 ಕಾಮಗಾರಿಗಳಿಗೆ ಚಾಲನೆ ನೀಡಿದರು.

ಇದೇ ಮೊದಲ ಬಾರಿಗೆ ಕರಾವಳಿಯ ‘ಬಿಸಿನೆಸ್‌ ಹಬ್‌’ ಮಂಗಳೂರಿನಲ್ಲಿ ಶುಕ್ರವಾರ ರಾಜ್ಯ ಸಚಿವ ಸಂಪುಟದ ಸಭೆ ನಡೆಯಲಿದ್ದು, ಇದಕ್ಕಾಗಿ ಮಂಗಳೂರು ನಗರ ಸಕಲ ಸಜ್ಜಾಗಿದೆ. ದಕ್ಷಿಣ ಕನ್ನಡ ಜಿಲ್ಲೆಯ ಹೆಸರನ್ನು ‘ಮಂಗಳೂರು ಜಿಲ್ಲೆ’ ಎಂಬುದಾಗಿ ಬದಲಾವಣೆ ಮಾಡುವ ಬಗ್ಗೆ ಚರ್ಚೆ ನಡೆಯುವ ಸಾಧ್ಯತೆಯಿದೆ. ಜೊತೆಗೆ, ಕರಾವಳಿ ಪ್ರವಾಸೋದ್ಯಮ ಅಭಿವೃದ್ಧಿಗೆ ಒತ್ತು ನೀಡಲು ಸಿಆರ್‌ಝೆಡ್‌ ನಿಯಮ ಸಡಿಲಿಕೆ ಘೋಷಣೆ ಮಾಡುವ ನಿರೀಕ್ಷೆಯಿದೆ.

10:48 PM (IST) Sep 18

ಇದು ಹಗಲು ದರೋಡೆ ಅಲ್ಲದೇ ಮತ್ತೇನು? ಬೆಂಗಳೂರಿನ ಆಸ್ತಿ ಮಾಲೀಕರಿಂದ ಸಾಫ್ಟ್‌ವೇರ್‌ ಚಾರ್ಜ್‌ ವಸೂಲಿ ಮಾಡ್ತಿರುವ GBA

ಗ್ರೇಟರ್‌ ಬೆಂಗಳೂರು ಪ್ರಾಧಿಕಾರವು ಆಸ್ತಿ ತೆರಿಗೆದಾರರಿಗೆ ಯಾವುದೇ ಮುನ್ಸೂಚನೆ ನೀಡದೆ ₹200 'ಸಾಫ್ಟ್‌ವೇರ್ ಶುಲ್ಕ'ವನ್ನು ಹೊಸದಾಗಿ ವಿಧಿಸಿದೆ. ಸರ್ಕಾರದ ಈ ನಡೆಯನ್ನು ವಿಪಕ್ಷಗಳು ತೀವ್ರವಾಗಿ ಖಂಡಿಸಿದ್ದು, ಇದೊಂದು ಹಗಲು ದರೋಡೆ ಎಂದು ಆರೋಪಿಸಿವೆ.

Read Full Story

10:06 PM (IST) Sep 18

ಕ್ಷೇತ್ರ ಪುನರ್‌ವಿಂಗಡಣೆ ಹಿಂದುತ್ವವಾದಿಗಳ ಜನಸಂಖ್ಯೆ ಹೆಚ್ಚಳದ ಅಜೆಂಡಾಕ್ಕೆ ಪೂರಕ - ಕನ್ನಡ ಅಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷ ಬಿಳಿಮಲೆ

ಪ್ರಸ್ತಾವಿತ ಕ್ಷೇತ್ರ ಪುನರ್ವಿಂಗಡಣೆಯಿಂದ ಜನಸಂಖ್ಯೆ ನಿಯಂತ್ರಿಸಿದ ಅಭಿವೃದ್ಧಿಶೀಲ ರಾಜ್ಯಗಳಿಗೆ ಅನ್ಯಾಯವಾಗಲಿದೆ ಎಂದು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಪುರುಷೋತ್ತಮ ಬಿಳಿಮಲೆ ಕಳವಳ ವ್ಯಕ್ತಪಡಿಸಿದ್ದಾರೆ.

Read Full Story

09:44 PM (IST) Sep 18

ಬೆಂಗಳೂರು–ಬಳ್ಳಾರಿ ನಡುವೆ KSRTC ಹೊಸ 'ಮಲ್ಟಿ ಆಕ್ಸಲ್' ಬಸ್ ಆರಂಭ - ಪ್ರಯಾಣ ದರ, ಸಮಯದ ವಿವರ ಇಲ್ಲಿದೆ

ಕೆಎಸ್‌ಆರ್‌ಟಿಸಿ ಬೆಂಗಳೂರು ಮತ್ತು ಬಳ್ಳಾರಿ ನಡುವೆ ನೂತನ ಮಲ್ಟಿ ಆಕ್ಸಲ್ ಬಸ್ ಸೇವೆಯನ್ನು ಪ್ರಾರಂಭಿಸಿದೆ. ಅಲ್ಲದೆ, ಆಗಸ್ಟ್ ತಿಂಗಳಲ್ಲಿ ಟಿಕೆಟ್ ರಹಿತವಾಗಿ ಪ್ರಯಾಣಿಸಿದ 4,862 ಪ್ರಯಾಣಿಕರಿಂದ 8.90 ಲಕ್ಷ ರೂ. ದಂಡವನ್ನು ಸಂಗ್ರಹಿಸಿದೆ.
Read Full Story

09:40 PM (IST) Sep 18

ಹೇ ಧನಂಜಯ ಬಾರೋ ಇಲ್ಲಿಗೆ; ಮಸೀದಿ ಎದುರು ಇನ್ಸ್‌ಪೆಕ್ಟರ್‌ಗೆ ಏಕವಚನದಲ್ಲೇ ತರಾಟೆ ತಗೆದುಕೊಂಡ ಪ್ರತಾಪ್ ಸಿಂಹ!

ಮಾಜಿ ಸಂಸದ ಪ್ರತಾಪ್ ಸಿಂಹ ಅವರು ಮಸೀದಿಯೊಂದರ ಮುಂದೆ ಭಾಷಣ ಮಾಡುವಾಗ ಪೊಲೀಸ್ ಇನ್ಸ್‌ಪೆಕ್ಟರ್ ಧನಂಜಯ ವಿರುದ್ಧ ಏಕವಚನದಲ್ಲಿ ತೀವ್ರ ವಾಗ್ದಾಳಿ ನಡೆಸಿದ್ದಾರೆ. ಮುಂದಿನ ಒಂದೂವರೆ ವರ್ಷದಲ್ಲಿ ತಾವು ಅಧಿಕಾರಕ್ಕೆ ಬಂದಾಗ ಲೆಕ್ಕ ಚುಕ್ತಾ ಮಾಡುವುದಾಗಿ ಅವರು ಬಹಿರಂಗ ಎಚ್ಚರಿಕೆ ನೀಡಿದ್ದಾರೆ.

Read Full Story

09:11 PM (IST) Sep 18

TTP Attack; ಪ್ರಾರ್ಥನೆ ವೇಳೆ ಭೀಕರ ಉಗ್ರರ ದಾಳಿ; ಕನಿಷ್ಠ 27 ಸಾವು, ಗಡಿಯಲ್ಲಿ ಹೈ ಅಲರ್ಟ್ ಘೋಷಣೆ!

ಪಖ್ತುಂಖ್ವಾ ಪ್ರಾಂತ್ಯದ ಪೊಲೀಸ್ ಪ್ರಧಾನ ಕಚೇರಿಯ ಮಸೀದಿಯಲ್ಲಿ ಉಗ್ರರು ಭೀಕರ ಆತ್ಮಘಾತಿ ದಾಳಿ ನಡೆಸಿದ್ದಾರೆ. ಈ ರಕ್ತಸಿಕ್ತ ಘಟನೆಯಲ್ಲಿ 15 ಪೊಲೀಸರು ಸೇರಿದಂತೆ 27 ಜನರು ಸಾವನ್ನಪ್ಪಿದ್ದು, 78ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ. ದಾಳಿಯ ಹೊಣೆಯನ್ನು ಟಿಟಿಪಿ (TTP) ಉಗ್ರ ಸಂಘಟನೆ ವಹಿಸಿಕೊಂಡಿದೆ.

Read Full Story

09:03 PM (IST) Sep 18

'ಪರದೆಯ ಮೇಲೆ ಮಹಿಳೆಯರನ್ನು ನೈಜ ವ್ಯಕ್ತಿಗಳಾಗಿ ತೋರಿಸಬೇಕು' - ಅದಿತಿ ಸಾಗರ್ ಮನದ ಮಾತೇನು?

ಕನ್ನಡ ನಟಿ ಹಾಗೂ ಗಾಯಕಿ ಅದಿತಿ ಸಾಗರ್ ‘ಹೆಗ್ಗಣ ಮುದ್ದು’ ಡ್ರಾಮಾ ಥ್ರಿಲ್ಲರ್ ಚಿತ್ರದ ಮೂಲಕ ಮತ್ತೆ ಬೆಳ್ಳಿತೆರೆಗೆ ಮರಳಿದ್ದಾರೆ. ನಟನೆ, ಸಂಗೀತ, ಚಿತ್ರಕಲೆ, ವಿಭಿನ್ನ ಪಾತ್ರಗಳ ಆಸೆ ಹಾಗೂ ಸಿನಿಮಾಗಳಲ್ಲಿನ ಮಹಿಳಾ ಪಾತ್ರಗಳ ಬಗ್ಗೆ ಅದಿತಿ ಸಾಗರ್ ಮನದ ಮಾತು ಹಂಚಿಕೊಂಡಿದ್ದಾರೆ.

Read Full Story

08:51 PM (IST) Sep 18

‘ನನ್ನ ಮಗ ಯಾವಾಗ ಬರುತ್ತಾನೆ?..’ ಕತಾರ್‌ನಲ್ಲಿ ಬಂಧನದಲ್ಲಿರುವ ಮಾಜಿ ನೌಕಾಪಡೆ ಅಧಿಕಾರಿ, ಭಾರತ ಸರ್ಕಾರಕ್ಕೆ ತಾಯಿಯ ಕಣ್ಣೀರಿನ ಪ್ರಾರ್ಥನೆ!

ಕತಾರ್‌ನಲ್ಲಿ ಮರಣದಂಡನೆಗೆ ಗುರಿಯಾಗಿದ್ದ 8 ಭಾರತೀಯ ನೌಕಾಪಡೆಯ ಮಾಜಿ ಅಧಿಕಾರಿಗಳ ಪೈಕಿ 7 ಮಂದಿ ಭಾರತಕ್ಕೆ ಮರಳಿದ್ದಾರೆ. ಆದರೆ ಕಮಾಂಡರ್ ಪೂರ್ಣೇಂದು ತಿವಾರಿ ಮಾತ್ರ ಇನ್ನೂ ದೋಹಾದಲ್ಲೇ ಉಳಿದಿದ್ದು, ಅವರ 88 ವರ್ಷದ ತಾಯಿ ಮಗನ ಬರುವಿಕೆಗಾಗಿ ಕಾಯುತ್ತಿದ್ದಾರೆ.

Read Full Story

08:03 PM (IST) Sep 18

Exclusive - 'ಎಲ್ಲಾ ಭಾಷೆಯನ್ನೂ ನನ್ನದೇ ಎನ್ನುತ್ತೇನೆ' - ಬಹುಭಾಷಾ ಬಗ್ಗೆ ರಶ್ಮಿಕಾ ಓಪನ್ ಟಾಕ್

ನ್ಯಾಷನಲ್ ಕ್ರಶ್ ರಶ್ಮಿಕಾ ಮಂದಣ್ಣ ತಮ್ಮ ಬಹುಭಾಷಾ ಸಿನಿಮಾ ಜರ್ನಿ ಬಗ್ಗೆ ಮನಬಿಚ್ಚಿ ಮಾತನಾಡಿದ್ದಾರೆ. ಕನ್ನಡ, ತೆಲುಗು, ತಮಿಳು ಹಾಗೂ ಹಿಂದಿ ಸಿನಿಮಾಗಳಲ್ಲಿ ನಟಿಸಿರುವ ರಶ್ಮಿಕಾ, ಭಾಷೆ ತಮ್ಮ ವೃತ್ತಿಜೀವನಕ್ಕೆ ಎಂದಿಗೂ ಅಡ್ಡಿಯಾಗಿಲ್ಲ ಎಂದು ಹೇಳಿದ್ದಾರೆ.

Read Full Story

07:48 PM (IST) Sep 18

80's Trend - 'ಕದಿಯೋದು ಇನ್ನೇನಿದೆ' ಎಂದು ಫೋಟೋ ಹಾಕ್ತೀರಾ? ಬ್ಯಾಂಕ್​ ಖಾತೆ ಹುಷಾರ್- ರಾಜ್ಯದ ಜನತೆಗೆ ಖಡಕ್​ ವಾರ್ನಿಂಗ್​

ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿರುವ 80's ಟ್ರೆಂಡ್‌ನಂತಹ ಫೋಟೋ ಆ್ಯಪ್‌ಗಳ ಬಗ್ಗೆ ರಾಜ್ಯ ಪೊಲೀಸರು ಎಚ್ಚರಿಕೆ ನೀಡಿದ್ದಾರೆ. ಈ ಟ್ರೆಂಡ್‌ಗಳ ಮೂಲಕ ಮೂರನೇ ವ್ಯಕ್ತಿಗೆ ನಿಮ್ಮ ಫೋಟೋ ಹಂಚಿಕೊಳ್ಳುವುದರಿಂದ ಡೀಪ್‌ಫೇಕ್ ಅಶ್ಲೀಲ ವಿಡಿಯೋಗಳು ಸೃಷ್ಟಿಯಾಗುವ ಅಪಾಯವಿದೆ. ಅಲ್ಲದೆ, ಅಪರಿಚಿತ ಎಪಿಕೆ (APK) ಫೈಲ್ ಲಿಂಕ್ ಕ್ಲಿಕ್ ಮಾಡುವುದರಿಂದ ಬ್ಯಾಂಕ್ ಖಾತೆಯಲ್ಲಿರುವ ಹಣವೂ ಕಳ್ಳತನವಾಗಬಹುದು.
Read Full Story

07:38 PM (IST) Sep 18

ಸ್ಯಾಂಡಲ್‌ವುಡ್‌ಗೆ ಹೊಸ ನಾಯಕಿ ಎಂಟ್ರಿ - ಮೋನಿಷಾ ವಿಜಯ್ ಮೇಲೆ ಹೆಚ್ಚಾಯ್ತು ನಿರೀಕ್ಷೆ

ದುನಿಯಾ ವಿಜಯ್ ಅವರ ಪುತ್ರಿ ಮೋನಿಷಾ ವಿಜಯ್ ಕುಮಾರ್ ‘ಸಿಟಿಲೈಟ್ಸ್’ ಚಿತ್ರದ ಮೂಲಕ ನಾಯಕಿಯಾಗಿ ಸ್ಯಾಂಡಲ್‌ವುಡ್‌ಗೆ ಎಂಟ್ರಿ ಕೊಡುತ್ತಿದ್ದಾರೆ. ವಿನಯ್ ರಾಜ್‌ಕುಮಾರ್ ನಾಯಕನಾಗಿ ನಟಿಸಿರುವ ಈ ಆಕ್ಷನ್ ಸಿನಿಮಾದಲ್ಲಿ ಮೋನಿಷಾ ನಾಯಕಿಯಾಗಿ ಕಾಣಿಸಿಕೊಂಡಿದ್ದಾರೆ.

Read Full Story

07:31 PM (IST) Sep 18

Viral - ಚಿನ್ನದಂತ ಹೆಂಡ್ತಿಗೆ, ಚಿನ್ನ ಮಾರಿ ಐಪೋನ್‌ 18 ಪ್ರೋ ಖರೀದಿ ಮಾಡಿದ ಗಂಡ!

ಭಾರತದಲ್ಲಿ ಆಪಲ್ ಐಫೋನ್ 18 ಪ್ರೋ ಬಿಡುಗಡೆಯಾಗಿದ್ದು, ಜನರ ಹುಚ್ಚಾಟ ಮಿತಿಮೀರಿದೆ. ದೆಹಲಿಯ ವ್ಯಕ್ತಿಯೊಬ್ಬರು ತಮ್ಮ ಪತ್ನಿಗೆ ಈ ಫೋನ್ ಕೊಡಿಸಲು ಚಿನ್ನವನ್ನೇ ಮಾರಿದ್ದಾರೆ. ಪಂಜಾಬ್‌ನ ಯುವಕನೊಬ್ಬ ನಿಶ್ಚಿತಾರ್ಥಕ್ಕಾಗಿ 3.5 ಲಕ್ಷ ರೂ. ಖರ್ಚು ಮಾಡಿದ್ದು, ಬೆಲೆ ಏರಿಕೆಯ ನಡುವೆಯೂ ಐಫೋನ್ ಕ್ರೇಜ್ ಕಡಿಮೆಯಾಗಿಲ್ಲ.
Read Full Story

07:25 PM (IST) Sep 18

ದರ್ಶನ್​ ಮನವಿ ಪುರಸ್ಕರಿಸಿದ ಹೈಕೋರ್ಟ್​ - ನಟನಿಗೆ ತಾತ್ಕಾಲಿಕ ಬಿಗ್​ ರಿಲೀಫ್​- ನ್ಯಾಯಾಲಯ​ ಹೇಳಿದ್ದೇನು

ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ನಟ ದರ್ಶನ್ ಅವರಿಗೆ ಹೈಕೋರ್ಟ್ ತಾತ್ಕಾಲಿಕ ರಿಲೀಫ್ ನೀಡಿದೆ. ಸಾಕ್ಷಿಗಳ ಪಾಟಿ ಸವಾಲಿನ ವೇಳೆ ನ್ಯಾಯಾಲಯಕ್ಕೆ ಖುದ್ದು ಹಾಜರಾಗಲು ದರ್ಶನ್ ಸಲ್ಲಿಸಿದ್ದ ಮೇಲ್ಮನವಿಯನ್ನು ಕೋರ್ಟ್ ಪುರಸ್ಕರಿಸಿದೆ. ಸೂಕ್ತ ಭದ್ರತೆಯೊಂದಿಗೆ ಅವರನ್ನು ಕರೆತರಲು ಸರ್ಕಾರಕ್ಕೆ ನಿರ್ದೇಶನ ನೀಡಲಾಗಿದೆ.
Read Full Story

06:35 PM (IST) Sep 18

3,536 ಕೋಟಿ ರೂಪಾಯಿ ವೆಚ್ಚದಲ್ಲಿ ಯಶವಂತಪುರ-ಕೆಆರ್‌ ಪುರ ನಡುವೆ 28 ಕಿ.ಮೀ ಟೋಲ್‌ ಕಾರಿಡಾರ್‌

ಬೆಂಗಳೂರಿನ ಪೂರ್ವ ಮತ್ತು ಪಶ್ಚಿಮ ಭಾಗಗಳನ್ನು ಬೆಸೆಯುವ 28 ಕಿ.ಮೀ ಉದ್ದದ 'ಯಶವಂತಪುರ - ಕೆ.ಆರ್. ಪುರಂ ಎಲಿವೇಟೆಡ್ ಕಾರಿಡಾರ್' ಯೋಜನೆಗೆ ರೂಪುರೇಷೆ ಸಿದ್ಧವಾಗಿದೆ. ₹3,536 ಕೋಟಿ ವೆಚ್ಚದ ಈ ಯೋಜನೆಗೆ ಗರಿಷ್ಠ 32.5 ವರ್ಷಗಳ ಟೋಲ್ ಅವಧಿ ನಿಗದಿಪಡಿಸಲಾಗಿದೆ.

Read Full Story

06:02 PM (IST) Sep 18

ಸಿನಿಮಾ ನಟನೆ ನಿಲ್ಲಿಸಿದ್ಯಾಕೆ ಅನಂತ್ ನಾಗ್? ಕೊನೆಗೂ ಸತ್ಯ ಬಿಚ್ಚಿಟ್ಟ ದಾದಾಸಾಹೇಬ್ ಫಾಲ್ಕೆ ಪ್ರಶಸ್ತಿ ವಿಜೇತ ನಟ!

ಕನ್ನಡ ಚಿತ್ರರಂಗದ ಹಿರಿಯ ನಟ ಅನಂತ್ ನಾಗ್ ಅವರು ಇನ್ನು ಮುಂದೆ ಸಿನಿಮಾಗಳಲ್ಲಿ ನಟಿಸುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಆರೋಗ್ಯ ಸಮಸ್ಯೆಯಿಂದ ನಟನೆ ನಿಲ್ಲಿಸಿಲ್ಲ ಎಂದು ಹೇಳಿರುವ ಅವರು..

Read Full Story

05:59 PM (IST) Sep 18

25 ಸಾವಿರ ದುಡಿಯುತ್ತಿದ್ದ ಟ್ರಕ್‌ ಚಾಲಕ ಈಗ ಸ್ಟಾರ್‌ ಯೂಟ್ಯೂಬರ್, ಆತನ ಗಳಿಕೆ ಶೇಕಡಾ 7100 ರಷ್ಟು ಹೆಚ್ಚಾಗಿದೆ

ಇಲ್ಲೊಂದು ಸ್ಫೂರ್ತಿದಾಯಕ ಸ್ಟೋರಿ ಇದೆ. ಎಂಥವರನ್ನೂ ಬಡಿದೆಬ್ಬಿಸಬಹುದಾದ ಕತೆ. ಟ್ರಕ್‌ ಚಾಲಕನಾಗಿದ್ದ ವ್ಯಕ್ತಿಯೊಬ್ಬ ಇವತ್ತು ಸ್ಟಾರ್‌ ಯೂಟ್ಯೂಬರ್‌ ಆಗಿದ್ದಾರೆ. ಆತನ ಆದಾಯ ಕೇಳಿದ್ರೆ ತಲೆ ತಿರುಗಿ ಬೀಳ್ತೀರಿ..

Read Full Story

05:19 PM (IST) Sep 18

ಶ್ರದ್ಧಾ ಶ್ರೀನಾಥ್ ಅವರ ಈ ಲುಕ್ ನೋಡಿದ್ರಾ? ಬ್ಲ್ಯಾಕ್ ಸೀರೆಯಲ್ಲಿ ನಟಿಯ ಅವತಾರವೇ ಬೇರೆ!

ಕನ್ನಡದ ಜನಪ್ರಿಯ ನಟಿ ಶ್ರದ್ಧಾ ಶ್ರೀನಾಥ್ ಅವರ ಲೇಟೆಸ್ಟ್ ಬ್ಲ್ಯಾಕ್ ಸೀರೆ ಲುಕ್ ಸೋಶಿಯಲ್ ಮೀಡಿಯಾದಲ್ಲಿ ಅಭಿಮಾನಿಗಳ ಗಮನ ಸೆಳೆಯುತ್ತಿದೆ. ಕಪ್ಪು ಸೀರೆಯಲ್ಲಿ ಸಖತ್ ಸ್ಟೈಲಿಶ್ ಆಗಿ ಕಾಣಿಸಿಕೊಂಡಿದ್ದಾರೆ.

Read Full Story

05:18 PM (IST) Sep 18

ಲೇಟ್ ನೈಟ್ ಹೊಟ್ಟೆ ಬಿರಿಯುವಷ್ಟು ಊಟ ಮಾಡ್ತೀರಾ? ಹಾಗಿದ್ರೆ ನಿಮ್ಮನ್ನು ಆ ದೇವ್ರೇ ಕಾಪಾಡ್ಬೇಕು.. ಹುಷಾರ್!

ಆರೋಗ್ಯ ಕಾಪಾಡಿಕೊಳ್ಳಲು ಆಹಾರದ ಗುಣಮಟ್ಟದಷ್ಟೇ ಅದರ ಸಮಯಕ್ಕೂ ಗಮನ ನೀಡುವುದು ಮುಖ್ಯ. ತಡರಾತ್ರಿ ಊಟ ಮಾಡುವ ಅಭ್ಯಾಸವನ್ನು ಹೊಂದಿರುವವರು ತಮ್ಮ ದಿನಚರಿಯನ್ನು ಪರಿಶೀಲಿಸಿ, ಸಾಧ್ಯವಾದಷ್ಟು ನಿಯಮಿತ ಸಮಯದಲ್ಲಿ ಊಟ ಮಾಡುವ ಅಭ್ಯಾಸ ಬೆಳೆಸಿಕೊಳ್ಳಿ.. ಇಲ್ಲದಿದ್ದರೆ ಅಪಾಯ ಎದುರಾಗಬಹುದು, ಎಚ್ಚರ!

Read Full Story

05:15 PM (IST) Sep 18

TMC - ಮಮತಾಗೆ ಬಿಗ್ ಶಾಕ್ - ಟಿಎಂಸಿ ಹೆಸರು, ಚಿಹ್ನೆ ಎರಡೂ ಫ್ರೀಜ್; ಹೀನಾಮಾನ ಸ್ಥಿತಿಗೆ ತಲುಪಿದ ದೀದಿ! ಮರುಕಳಿಸಿದ ಮಹಾರಾಷ್ಟ್ರ ನೆನಪು!

ಪಶ್ಚಿಮ ಬಂಗಾಳದಲ್ಲಿ ಟಿಎಂಸಿ ಪಕ್ಷದ ಆಂತರಿಕ ಬಂಡಾಯದ ಹಿನ್ನೆಲೆಯಲ್ಲಿ ಕೇಂದ್ರ ಚುನಾವಣಾ ಆಯೋಗವು ಪಕ್ಷದ ಹೆಸರು ಮತ್ತು ಚಿಹ್ನೆಯನ್ನು ಫ್ರೀಜ್ ಮಾಡಿದೆ. ಮಮತಾ ಬ್ಯಾನರ್ಜಿ ಬಣಕ್ಕೆ ದಶಕಗಳ ಕಾಲವಿದ್ದ 'ಜೋಡ ಹುಲ್ಲು-ಹೂವು' ಗುರುತು ಕೈತಪ್ಪಿರುವುದು ಮಮತಾಗೆ ದೊಡ್ಡ ಹಿನ್ನಡೆಯಾಗಿದೆ.

Read Full Story

05:12 PM (IST) Sep 18

ಡಬಲ್‌ ರಾಯಲ್ಟಿ ವಿವಾದ - ರಾಜ್ಯಾದ್ಯಂತ ಕಲ್ಲು ಗಣಿ, ಜೆಲ್ಲಿ ಕ್ರಷರ್, ಎಂ-ಸ್ಯಾಂಡ್ ಘಟಕ ಬಂದ್

ಸರ್ಕಾರವು ಒಂದೇ ಮೂಲಕ್ಕೆ ಎರಡೆರಡು ಬಾರಿ ರಾಯಲ್ಟಿ ವಸೂಲಿ ಮಾಡುತ್ತಿರುವುದನ್ನು ವಿರೋಧಿಸಿ ರಾಜ್ಯಾದ್ಯಂತ ಕಲ್ಲು ಗಣಿ, ಕ್ರಷರ್ ಮತ್ತು ಎಂ-ಸ್ಯಾಂಡ್ ಮಾಲೀಕರು ಅನಿರ್ದಿಷ್ಟಾವಧಿ ಬಂದ್ ಆರಂಭಿಸಿದ್ದಾರೆ.

Read Full Story

04:45 PM (IST) Sep 18

ದರ್ಗಾ ಶರೀಫ್ ಉರ್ಸ್ ಮತ್ತು ಮುಂಬರುವ ಹಬ್ಬಗಳ ಪ್ರಯುಕ್ತ ನೈಋತ್ಯ ರೈಲ್ವೆಯ ಈ ನಿಲ್ದಾಣಗಳಲ್ಲಿ ಮಹತ್ವದ ಬದಲಾವಣೆ!

ದರ್ಗಾ ಶರೀಫ್ ಉರ್ಸ್ ಮತ್ತು ಮುಂಬರುವ ಹಬ್ಬಗಳ ಪ್ರಯುಕ್ತ ಪ್ರಯಾಣಿಕರ ದಟ್ಟಣೆ ನಿಯಂತ್ರಿಸಲು ರೈಲ್ವೆ ಇಲಾಖೆ ಮಹತ್ವದ ನಿರ್ಧಾರ ಕೈಗೊಂಡಿದೆ. ನಾಗಲಾವಿ ಮತ್ತು ರಾಣಿ ನಿಲ್ದಾಣಗಳಲ್ಲಿ ರೈಲುಗಳಿಗೆ ತಾತ್ಕಾಲಿಕ ನಿಲುಗಡೆ ಕಲ್ಪಿಸಲಾಗಿದೆ. ಅಲ್ಲದೆ, ವಿಶಾಖಪಟ್ಟಣಂ-ಎಸ್‌ಎಂವಿಟಿ ಬೆಂಗಳೂರು ವಿಶೇಷ ರೈಲಿನ ಸೇವೆಯನ್ನು ವಿಸ್ತರಿಸಲಾಗಿದೆ.
Read Full Story

04:44 PM (IST) Sep 18

ಪುನೀತ್‌ ರಾಜ್‌ಕುಮಾರ್‌ ಸಾವಿನ ದಿನ ಬಿಯರ್‌ ಹಿಡಿದು ಪೋಸ್ಟ್‌, ವಿದ್ಯಾರ್ಥಿಗೆ ಎಚ್ಚರಿಕೆ ನೀಡಿ ಕೇಸ್‌ ರದ್ದು ಮಾಡಿದ ಹೈಕೋರ್ಟ್‌

ನಟ ಪುನೀತ್ ರಾಜ್‌ಕುಮಾರ್ ನಿಧನದ ವೇಳೆ ಇನ್‌ಸ್ಟಾಗ್ರಾಮ್‌ನಲ್ಲಿ ಆಕ್ಷೇಪಾರ್ಹ ಪೋಸ್ಟ್ ಮಾಡಿದ್ದ ವಿದ್ಯಾರ್ಥಿಯ ವಿರುದ್ಧದ ಎಫ್‌ಐಆರ್ ಅನ್ನು ಹೈಕೋರ್ಟ್ ರದ್ದುಗೊಳಿಸಿದೆ. ಯುವಕನ ವಯಸ್ಸು ಮತ್ತು ಶೈಕ್ಷಣಿಕ ಭವಿಷ್ಯವನ್ನು ಪರಿಗಣಿಸಿ ಕೋರ್ಟ್‌ ಕರುಣೆ ತೋರಿದೆ.

Read Full Story

04:37 PM (IST) Sep 18

ಈ ರೋಗಕ್ಕೆ ರಾಮಬಾಣ 'ಮಖಾನ'.. ಹೇಗೆ, ಎಷ್ಟು ತಿನ್ನಬೇಕು? ಎಷ್ಟೋ ಜನರಿಗೆ ಈ ಸೀಕ್ರೆಟ್ ಗೊತ್ತಿಲ್ಲ!

ಮಾರುಕಟ್ಟೆಯಲ್ಲಿ ದೊರೆಯುವ ಫ್ಲೇವರ್ಡ್ ಮಖಾನ ಖರೀದಿಸುವಾಗ ಪ್ಯಾಕೆಟ್‌ನಲ್ಲಿರುವ ಪದಾರ್ಥಗಳ ಪಟ್ಟಿಯನ್ನು ಪರಿಶೀಲಿಸಿ. ಹೆಚ್ಚು ಉಪ್ಪು, ಸಕ್ಕರೆ ಅಥವಾ ಅನಗತ್ಯ ಕೊಬ್ಬು ಹೊಂದಿರುವ ಉತ್ಪನ್ನಗಳ ಬದಲು ಸರಳವಾದ ಮಖಾನವನ್ನು ಆಯ್ಕೆ ಮಾಡಬಹುದು. ಇದು ಯಾವ ರೋಗಕ್ಕೆ ಪರಿಹಾರ ಅಂತ ನೋಡಿ..

Read Full Story

04:29 PM (IST) Sep 18

ಡಾ. ರಾಜ್‌ಕುಮಾರ್‌ ಅಭಿಮಾನಿಗಳಿಗೆ ಭರ್ಜರಿ ಸರ್ಪ್ರೈಸ್ - 54 ವರ್ಷಗಳ ಬಳಿಕ ಕಲರ್‌ನಲ್ಲಿ 'ಜಗಮೆಚ್ಚಿದ ಮಗ'

ವರನಟ ಡಾ. ರಾಜ್‌ಕುಮಾರ್‌ ಅಭಿನಯದ 1972ರ ಕ್ಲಾಸಿಕ್ ‘ಜಗಮೆಚ್ಚಿದ ಮಗ’ ಬರೋಬ್ಬರಿ 54 ವರ್ಷಗಳ ಬಳಿಕ ಹೊಸ ರೂಪದಲ್ಲಿ ಮತ್ತೆ ಚಿತ್ರಮಂದಿರಗಳಿಗೆ ಬರಲಿದೆ. ಮೂಲತಃ ಕಪ್ಪು-ಬಿಳುಪಿನಲ್ಲಿ ತೆರೆಕಂಡಿದ್ದ ಈ ಪೌರಾಣಿಕ ಫ್ಯಾಂಟಸಿ ಚಿತ್ರ.

Read Full Story

04:25 PM (IST) Sep 18

ರಾಜ್ಯದ 2ನೇ ಅಧಿಕೃತ ಭಾಷೆಯಾಗಿ ತುಳುವಿಗೆ ಸ್ಥಾನಮಾನ, ಡಿಕೆ ಶಿವಕುಮಾರ್ ಮಹತ್ನದ ಘೋಷಣೆ

ತುಳುನಾಡಿನ ಜನರ ಕಳೆದ ಹಲವು ದಶಕಗಳಿಂದ ನಡೆಸುತ್ತಿದ್ದ ಹೋರಾಟಕ್ಕೆ ಫಲ ಸಿಕ್ಕಿದೆ. ತುಳು ಇದೀಗ ಎರಡನೇ ಭಾಷೆಯಾಗಿ ಮಾಡಲು ತೀರ್ಮಾನ ಮಾಡಲಾಗಿದೆ. ಇಷ್ಟೇ ಅಲ್ಲ ದಕ್ಷಿಣ ಕನ್ನಡ ಹೆಸರು ಬದಲಾವಣೆ ಕುರಿತು ಮಹತ್ವದ ನಿರ್ಧಾರ ತೆಗೆದುಕೊಳ್ಳಲಾಗಿದೆ.

Read Full Story

04:12 PM (IST) Sep 18

ಎತ್ತಿನ ಬಂಡಿಗಳಿಂದ ತುಂಬಿದ್ದ ಬೆಂಗಳೂರಿನ ರಸ್ತೆಗೆ ಇಳಿದ ಮೊದಲ ಕಾರಿನ ಕಥೆ ಗೊತ್ತೇ? ಯಾರಾಗಿದ್ರು ಫಸ್ಟ್ ಓನರ್?

1901ರಲ್ಲಿ ಬೆಂಗಳೂರಿನ ರಸ್ತೆಗೆ ಮೊದಲ ಕಾರು ಪ್ರವೇಶಿಸುವ ಮೂಲಕ ನಗರದ ಸಾರಿಗೆ ಇತಿಹಾಸದಲ್ಲಿ ಹೊಸ ಅಧ್ಯಾಯ ಆರಂಭವಾಯಿತು. ಆರಂಭದಲ್ಲಿ ರಾಜಮನೆತನ ಹಾಗೂ ಶ್ರೀಮಂತರಿಗಷ್ಟೇ ಸೀಮಿತವಾಗಿದ್ದ ಕಾರುಗಳ ಸ್ಥಳೀಯ ಉತ್ಪಾದನೆ 1906ರಲ್ಲಿ ಶುರುವಾಯಿತು. ಬಳಿಕ 1911ರಲ್ಲಿ ಎಂ.ಜಿ. ರಸ್ತೆಯಲ್ಲಿ ನಗರದ ಮೊದಲ ಕಾರು ಶೋರೂಂ ಪ್ರಾರಂಭಗೊಂಡು ಆಟೋಮೊಬೈಲ್ ಕ್ಷೇತ್ರ ಬೃಹತ್ತಾಗಿ ಬೆಳೆಯಿತು.
Read Full Story

03:58 PM (IST) Sep 18

ಕೈಯಲ್ಲಿ ಉದ್ದನೆಯ ಆಯುಧ, ರಗಡ್ ಲುಕ್ - ಹುಟ್ಟುಹಬ್ಬದಂದು ತಲೆಕೆಳಗಾಗಿ ನೇತಾಡಿದ ಉಪೇಂದ್ರ!

ರಿಯಲ್ ಸ್ಟಾರ್ ಉಪೇಂದ್ರ ಹುಟ್ಟುಹಬ್ಬದ ಪ್ರಯುಕ್ತ ‘ಜಾಂಬಿ ರೆಡ್ಡಿ 2 NXT LVL’ ಸಿನಿಮಾದ ಅವರ ಫಸ್ಟ್ ಲುಕ್ ರಿಲೀಸ್ ಆಗಿದೆ. ಪೋಸ್ಟರ್‌ನಲ್ಲಿ ಉಪೇಂದ್ರ ತಲೆಕೆಳಗಾಗಿ ನೇತಾಡುತ್ತಾ, ಕೈಯಲ್ಲಿ ಉದ್ದನೆಯ ಆಯುಧ ಹಿಡಿದು ರಗಡ್ ಅವತಾರದಲ್ಲಿ ಕಾಣಿಸಿಕೊಂಡಿದ್ದಾರೆ.

Read Full Story

03:43 PM (IST) Sep 18

KPSC ಹಗರಣ; ಸರ್ಕಾರದ 'ಇನ್ನೆರಡು ವಿಕೆಟ್' ಪತನ ಖಚಿತ? ವಿಪಕ್ಷ ನಾಯಕನ ಸ್ಫೋಟಕ ಹೇಳಿಕೆ! ಆ ಇಬ್ಬರು ಯಾರು? ಇಲ್ಲಿದೆ ಕಂಪ್ಲೀಟ್‌ ಸ್ಟೋರಿ!

ಕೆಪಿಎಸ್‌ಸಿ ಹಗರಣದಲ್ಲಿ ಸರ್ಕಾರದ ಇಬ್ಬರು ಸಚಿವರ ಆಪ್ತ ಸಹಾಯಕರು ಜೈಲಿನಲ್ಲಿರುವ ಆರೋಪಿಗಳೊಂದಿಗೆ ಸಂಪರ್ಕದಲ್ಲಿದ್ದಾರೆ ಎಂದು ವಿಪಕ್ಷ ನಾಯಕ ಆರ್. ಅಶೋಕ್ ಗಂಭೀರ ಆರೋಪ ಮಾಡಿದ್ದಾರೆ. ಶೀಘ್ರದಲ್ಲೇ ಸೂಕ್ತ ದಾಖಲೆಗಳನ್ನು ಬಿಡುಗಡೆ ಮಾಡುವುದಾಗಿ ತಿಳಿಸಿರುವ ಅವರು, ಸರ್ಕಾರದ ಇನ್ನೆರಡು ವಿಕೆಟ್ ಪತನವಾಗಲಿದೆ ಎಂದು ಎಚ್ಚರಿಸಿದ್ದಾರೆ.
Read Full Story

03:36 PM (IST) Sep 18

ವಿಜಯ್-ರಶ್ಮಿಕಾ ವಿವಾಹಕ್ಕೂ ನಟಿ ನೀನಾ ಗುಪ್ತಾಗೂ ಏನ್ ಸಂಬಂಧ? ಈ ಸುದ್ದಿ ತಿಳಿದು 'ಚೀ.. ಥೂ..' ಅಂತ ಉಗಿಬೇಡಿ!

ನೀನಾ ಗುಪ್ತಾ ಅವರ ಜೀವನದಲ್ಲಿ ಇಂತಹ ಸಾರ್ವಜನಿಕ ಚರ್ಚೆಗಳು ಇದೇ ಮೊದಲೇನಲ್ಲ. ವಿವಿಯನ್ ರಿಚರ್ಡ್ಸ್ ಜೊತೆಗಿನ ಸಂಬಂಧ, ಮಸಾಬಾಳನ್ನು ಏಕಾಂಗಿ ತಾಯಿಯಾಗಿ ಬೆಳೆಸಿದ ನಿರ್ಧಾರ ಹೀಗೆ ಹಲವು ಬಾರಿ ಈ ನಟಿ ಟೀಕೆ ಎದುರಿಸಿದ್ದಾರೆ. ಆದರೆ, ರಶ್ಮಿಕಾ ಮಂದಣ್ಣ-ವಿಜಯ್ ದೇವರಕೊಂಡ ಮದುವೆಗೂ ನೀನಾ ಗುಪ್ತಾಗೂ ಏನು ಸಂಬಂಧ? ನೋಡಿ..

Read Full Story

02:36 PM (IST) Sep 18

Birthday's Special - ಕನ್ನಡದ 3 ದಿಗ್ಗಜರ ಜನ್ಮದಿನ- ವಿಷ್ಣುವರ್ಧನ್-ಉಪೇಂದ್ರ-ಶ್ರುತಿ.. ಈ ತ್ರಿಮೂರ್ತಿಗಳ ಹುಟ್ಟುಹಬ್ಬದಂದು ಇವೆಲ್ಲಾ ವಿಶೇಷತೆಗಳಿವೆ ನೋಡಿ!

ನಟ ವಿಷ್ಣುವರ್ಧನ್ ಅವರ 75ನೇ ಹುಟ್ಟುಹಬ್ಬದ ಸಂಭ್ರಮದಲ್ಲಿ 'ಏಷ್ಯಾನೆಟ್ ಸುವರ್ಣ ಡಿಜಿಟಲ್' ವಿಶೇಷವಾದ ವಿಡಿಯೋ ಸರಣಿಯನ್ನು ಅನಾವರಣ ಮಾಡಿದೆ. 'ನಾ ಕಂಡ ವಿಷ್ಣು' ಶೀರ್ಷಿಕೆಯಡಿಯಲ್ಲಿ ನಟ ವಿಷ್ಣುವರ್ಧನ್ ಕುಟುಂಬ, ಆಪ್ತರು ಹಾಗೂ ಅವರ ಜೊತೆಯಲ್ಲಿ ನಟಿಸಿರುವ ಕಲಾವಿದರು ಮಾತನಾಡಿರು ವಿಡಿಯೋ ಇದಾಗಿದೆ. ಇದನ್ನು ಬೆಂಗಳೂರು ಬಜ್ (Bengaluru Buzz)' ಯೂಟ್ಯೂಬ್ ಲಿಂಕ್ ಮೂಲಕ ನೋಡಬಹುದು.

Read Full Story

02:34 PM (IST) Sep 18

ಎಲೆಕ್ಟ್ರಾನಿಕ್ಸ್ ಕ್ಷೇತ್ರದ ಸಮಸ್ತ ಚಟುವಟಿಕೆಗಳೂ ರಾಜ್ಯದಲ್ಲೇ ನಡೆಯಬೇಕು, ಎಂ ಬಿ ಪಾಟೀಲ

ಕರ್ನಾಟಕವನ್ನು ಎಲೆಕ್ಟ್ರಾನಿಕ್ಸ್ ಉದ್ಯಮದ ಕ್ಲಸ್ಟರ್ ಆಗಿ ಅಭಿವೃದ್ಧಿಪಡಿಸಲಾಗುತ್ತಿದೆ. ಭಾರತದಲ್ಲೇ ಎಲೆಕ್ಟ್ರಾನಿಕ್ಸ್‌ನ ಪ್ರತಿಯೊಂದು ಹಂತವೂ ರಾಜ್ಯದಲ್ಲಿ ಅಭಿವೃದ್ಧಿಯಾಗುವಂತೆ ಮಾಡಲಾಗುತ್ತಿದೆ. ಈ ಕುರಿತು ಸಚಿವರ ಎಂಬಿ ಪಾಟೀಲ್ ಮಹತ್ವದ ಅಪ್‌ಡೇಟ್ ನೀಡಿದ್ದಾರೆ.

Read Full Story

01:36 PM (IST) Sep 18

ಐಫೋನ್ 18 ಪ್ರೊಗಾಗಿ ಮುಗಿಬಿದ್ದ ಜನ - ಬೆಂಗಳೂರು ಮಾಲ್ ಆಫ್ ಏಷ್ಯಾ ಸೇರಿ ದೇಶದಾದ್ಯಂತ ಬೆಳಗ್ಗೆ 5 ಗಂಟೆಯಿಂದಲೇ ಕ್ಯೂ!

ಭಾರತದಲ್ಲಿ ಐಫೋನ್ 18 ಪ್ರೊ ಮತ್ತು ಪ್ರೊ ಮ್ಯಾಕ್ಸ್ ಬಿಡುಗಡೆಯಾಗಿದ್ದು, ಬೆಂಗಳೂರು ಸೇರಿದಂತೆ ದೇಶಾದ್ಯಂತ ಆಪಲ್ ಸ್ಟೋರ್‌ಗಳ ಮುಂದೆ ಗ್ರಾಹಕರು ಮುಗಿಬಿದ್ದಿದ್ದಾರೆ. ನಟ ವಿಕ್ಕಿ ಕೌಶಲ್ ಕೂಡ ಮುಂಬೈನಲ್ಲಿ ಹೊಸ ಫೋನ್ ಖರೀದಿಸಿದ್ದಾರೆ. ಈ ಫೋನ್‌ಗಳು ಸುಧಾರಿತ 'A20 ಪ್ರೊ' ಚಿಪ್ ಮತ್ತು 48MP ಕ್ಯಾಮೆರಾದಂತಹ ಅತ್ಯಾಧುನಿಕ ವೈಶಿಷ್ಟ್ಯಗಳನ್ನು ಹೊಂದಿವೆ.
Read Full Story

01:28 PM (IST) Sep 18

ಮಂಡ್ಯ - ಬೆಂ-ಮೈ ಎಕ್ಸ್‌ಪ್ರೆಸ್ ವೇನಲ್ಲಿ ಭೀಕರ ಅಪಘಾತ - ಫ್ಲೈಓರ್‌ನಿಂದ ಹಾರಿ ಅಂಡರ್ ಪಾಸಿಗೆ ಬಿದ್ದ ಕಾರು! ಒಳಗಿದ್ದವರು ಏನಾದ್ರು?

ಬೆಂಗಳೂರು-ಮೈಸೂರು ಎಕ್ಸ್‌ಫ್ರೆಸ್ನಲ್ಲಿ ಮತ್ತೊಂದು ಭೀಕರ ಅಪಘಾತ ಸಂಭವಿಸಿದ ಘಟನೆ ಮಂಡ್ಯ ಬಳಿಯ ಉಮ್ಮಡಹಳ್ಳಿ ಗೇಟ್ ಸಮೀಪ ನಡೆದಿದೆ. ಫ್ಲೈಓವರ್‌ನಿಂದ ಅಂಡರ್‌ಪಾಸ್‌ ಕೆಳಗೆ ಹಾರಿಬಿದ್ದರು. ಕಾರಿನೊಳಗೆ ಇದ್ದವರು ಬದುಕಿದ್ದೇ ಪವಾಡ.. ಅಪಘಾತದ ಫೋಟೋಗಳು ಇಲ್ಲಿವೆ ನೋಡಿ

Read Full Story

01:13 PM (IST) Sep 18

ಪ್ರಧಾನಿ ನರೇಂದ್ರ ಮೋದಿಯ ಹೈ-ಎನರ್ಜಿ, ಉತ್ತಮ ಆರೋಗ್ಯದ ಸೀಕ್ರೆಟ್ ಹೊರಬಿತ್ತು.. ಇದೊಂದನ್ನು ಮೋದಿ ತಪ್ಪದೇ ತಿಂತಾರೆ!

ಭಾರತದ ಪ್ರಧಾನಿ ನರೇಂದ್ರ ಮೋದಿಯುವರು ತಮ್ಮ ಆರೋಗ್ಯವನ್ನು ನಿರಂತರವಾಗಿ ಕಾಪಾಡಿಕೊಳ್ಳಲು ವರ್ಷದ 365 ದಿನಗಳಲ್ಲಿ ಕನಿಷ್ಠ 300 ದಿನಗಳಲ್ಲಿ ‘ಇದನ್ನು’ ಸೇವಿಸುತ್ತಾರೆ. ಈ ಸೀಕ್ರೆಟ್‌ಅನ್ನು ಅವರೇ ಹಲವು ಪಾಡ್‌ಕಾಸ್ಟ್‌ಗಳಲ್ಲಿ, ಸೋಷಿಯಲ್ ಮೀಡಿಯಾಗಳಲ್ಲಿ ಹಂಚಿಕೊಂಡಿದ್ದಾರೆ. ಹಾಗಿದ್ದರೆ

Read Full Story

12:47 PM (IST) Sep 18

Namma Metro Phase III - ನಮ್ಮ ಮೆಟ್ರೋ 3ನೇ ಹಂತದ ಡಬಲ್ ಡೆಕ್ಕರ್ ಯೋಜನೆ ವಿಳಂಬಕ್ಕೆ ಕಾರಣವೇನು?

ನಮ್ಮ ಮೆಟ್ರೋ 3ನೇ ಹಂತದ ಯೋಜನೆಗೆ ಕೇಂದ್ರದ ಅನುಮೋದನೆ ಸಿಕ್ಕರೂ ಕಾಮಗಾರಿ ಇನ್ನೂ ಆರಂಭವಾಗಿಲ್ಲ. 37 ಕಿ.ಮೀ ಉದ್ದದ ಡಬಲ್ ಡೆಕ್ಕರ್ ಮಾರ್ಗ ನಿರ್ಮಾಣದಿಂದ ಎದುರಾಗುವ ಎಂಜಿನಿಯರಿಂಗ್ ಸವಾಲುಗಳ ಬಗ್ಗೆ RITES ಆತಂಕ ವ್ಯಕ್ತಪಡಿಸಿದೆ.

Read Full Story

12:18 PM (IST) Sep 18

Karnataka Politics - ಸಿದ್ದರಾಮಯ್ಯ ಹವಾ ಮುಗಿಯಿತೇ? ಅಹಿಂದ ಕೋಟೆ ಕೊಲಾಪ್ಸ್‌? ರಾಜಣ್ಣ ಮಾರ್ಮಿಕ ಮಾತು!

ಕರ್ನಾಟಕ ಕಾಂಗ್ರೆಸ್‌ನಲ್ಲಿ ನಾಯಕತ್ವ ಮತ್ತು ಮತಬ್ಯಾಂಕ್ ಕುರಿತು ಹೊಸ ಚರ್ಚೆ ಶುರುವಾಗಿದೆ. ಸಿದ್ದರಾಮಯ್ಯ ಅವರ ಪ್ರಭಾವದ ಬಗ್ಗೆ ಶಾಸಕ ಕೆ.ಎನ್. ರಾಜಣ್ಣ ಅಚ್ಚರಿಯ ಹೇಳಿಕೆ ನೀಡಿದ್ದು, ಡಿ.ಕೆ. ಶಿವಕುಮಾರ್ ಅವರೇ ಈಗ ಪ್ರಬಲ ನಾಯಕ ಎಂದಿದ್ದಾರೆ. ಇದು ಅಹಿಂದ ಮತ್ತು ಒಕ್ಕಲಿಗ ಮತಗಳ ಲೆಕ್ಕಾಚಾರದ ಬಗ್ಗೆ ತೀವ್ರ ಕುತೂಹಲ ಮೂಡಿಸಿದೆ.
Read Full Story

12:15 PM (IST) Sep 18

ಬೆಂಗಳೂರು - ಜಯನಗರದಲ್ಲಿ ಕೃತಕ ಬುದ್ಧಿಮತ್ತೆ (AI) ಆಧಾರಿತ ಸ್ಮಾರ್ಟ್ ಪಾರ್ಕಿಂಗ್! ಹಣ ಪಾವತಿಸೋದು ಹೇಗೆ?

ಬೆಂಗಳೂರಿನ ಜಯನಗರದಲ್ಲಿ ವಾಹನ ದಟ್ಟಣೆ ಮತ್ತು ಪಾರ್ಕಿಂಗ್ ಸಮಸ್ಯೆ ನಿವಾರಿಸಲು ಬಿಬಿಎಂಪಿ ಎಐ ಆಧಾರಿತ ಸ್ಮಾರ್ಟ್ ಪಾರ್ಕಿಂಗ್ ವ್ಯವಸ್ಥೆಯನ್ನು ಜಾರಿಗೆ ತರುತ್ತಿದೆ. ಕ್ಯೂಆರ್ ಕೋಡ್ ಮೂಲಕ ಶುಲ್ಕ ಪಾವತಿ ಮತ್ತು ಓರೆಯಾದ ಪಾರ್ಕಿಂಗ್ ವ್ಯವಸ್ಥೆ ಇದರ ಪ್ರಮುಖ ಅಂಶಗಳಾಗಿವೆ. ನಿಯಮ ಉಲ್ಲಂಘಿಸಿದರೆ ವೀಲ್ ಲಾಕ್ ಮತ್ತು ಕಠಿಣ ದಂಡ ವಿಧಿಸಲಾಗುತ್ತದೆ.

Read Full Story

12:14 PM (IST) Sep 18

BMRCL ಮಾಸ್ಟರ್ ಪ್ಲಾನ್ - ನಮ್ಮ ಮೆಟ್ರೋ ಹಸಿರು ಮಾರ್ಗಕ್ಕೆ 6 ಹೊಸ ರೈಲು ಸೇರ್ಪಡೆ, 2027ಕ್ಕೆ 21 ರೈಲು ಎಂಟ್ರಿ!

ಬಿಎಂಆರ್‌ಸಿಎಲ್ ಹಸಿರು ಮಾರ್ಗದಲ್ಲಿ ಹೊಸ ಆರು ಬೋಗಿಗಳ ಮೆಟ್ರೋ ರೈಲನ್ನು ಸೇರ್ಪಡೆಗೊಳಿಸಿದೆ. ಇದರಿಂದ ಹಳೆಯ ರೈಲುಗಳ ನಿರ್ವಹಣೆಗೆ ಅನುಕೂಲವಾಗಲಿದ್ದು, 2027ರ ವೇಳೆಗೆ 21 ಹೊಸ ರೈಲುಗಳು ಬರಲಿವೆ. ತರುವಾಯ ಹಳೆಯ ರೈಲುಗಳನ್ನು ನೇರಳೆ ಮಾರ್ಗಕ್ಕೆ ವರ್ಗಾಯಿಸಿ ದಟ್ಟಣೆ ಕಡಿಮೆ ಮಾಡಲಾಗುವುದು.
Read Full Story

11:58 AM (IST) Sep 18

₹20 ಲಕ್ಷ ಸಾಲ ವಾಪಸ್ ಕೊಡದ ಭಕ್ತ; ಮನೆ ಬಾಗಿಲಿಗೆ ಬಂದು ಕುಳಿತ ಶ್ರೀ 1008 ಜಗದ್ಗುರು ಬಸವರಾಜ ಪಟ್ಟದಾರ್ಯ ಸ್ವಾಮೀಜಿ!

ಬಾಗಲಕೋಟೆಯ ಗುಳೇದಗುಡ್ಡದ ಸ್ವಾಮೀಜಿಯೊಬ್ಬರು ತಮಗೆ ಬರಬೇಕಾದ 20 ಲಕ್ಷ ರೂ. ಸಾಲಕ್ಕಾಗಿ ಬೆಂಗಳೂರಿನಲ್ಲಿ ಸಾಲಗಾರನ ಮನೆ ಮುಂದೆ ಪ್ರತಿಭಟನೆ ನಡೆಸುತ್ತಿದ್ದಾರೆ. ಹಣ ವಾಪಸ್ ನೀಡದಿದ್ದರೆ ಉಪವಾಸ ಸತ್ಯಾಗ್ರಹ ಮಾಡುವುದಾಗಿ ಮರಣಪತ್ರ ಬರೆದಿಟ್ಟು ಅವರು ಈ ಹೋರಾಟಕ್ಕೆ ಇಳಿದಿದ್ದಾರೆ. ಸಾಲಗಾರ ಮನೆಗೆ ಬೀಗ ಜಡಿದು ತಲೆಮರೆಸಿಕೊಂಡಿದ್ದಾನೆ.

Read Full Story

11:50 AM (IST) Sep 18

Dr Vishnuvardhan 75th Birthday - ವಿಷ್ಣುವರ್ಧನ್ ಬಗ್ಗೆ ನಿಮಗೆ ಇನ್ನೂ ಗೊತ್ತಿಲ್ಲದ ಹಲವು ಸೀಕ್ರೆಟ್‌ಗಳು ಇಲ್ಲಿವೆ ನೋಡಿ!

ಇಂದು ಮೈಸೂರಿನಲ್ಲಿ ನಟ ವಿಷ್ಣುವರ್ಧನ್ ಹುಟ್ಟುಹಬ್ಬದ ಪ್ರಯುಕ್ತ ಅನ್ನದಾನ ಏರ್ಪಡಿಸಲಾಗಿದೆ. ಸಾವಿರಾರು ಸಂಖ್ಯೆಯಲ್ಲಿ ನಟ ವಿಷ್ಣುವರ್ಧನ್ ಅಭಿಮಾನಿಗಳು ಇಂದು ಮೈಸೂರಿನಲ್ಲಿ ಸೇರಿದ್ದು, ಅನ್ನದಾನ, ರಕ್ತದಾನ ಶಿಬಿರಗಳಲ್ಲಿ ಭಾಗಿಯಾಗಲಿದ್ದಾರೆ. ಜೊತೆಗೆ, ಅಭಿಮಾನಿಗಳು ಹಾಗೂ ಕುಟುಂಬಸ್ಥರು ಮೈಸೂರನಲ್ಲಿ ದಿವಂಗತ ನಟ ವಿಷ್ಣುವರ್ಧನ್ ಪ್ರತಿಮೆಗೆ ಮಾಲಾರ್ಪಣೆ, ಪೂಜೆ ಮಾಡಲಿದ್ದಾರೆ.

Read Full Story

11:42 AM (IST) Sep 18

ಬೆಂಗಳೂರಿನ ಅಕ್ರಮ ಪಿಜಿಗಳಿಗೆ ಹೈಕೋರ್ಟ್ ಶಾಕ್, 81 ಕಟ್ಟುನಿಟ್ಟಿನ ಮಾರ್ಗಸೂಚಿ ಪ್ರಕಟ, ಪೂರ್ವ ಭಾಗದಲ್ಲೇ ಅತೀ ಹೆಚ್ಚು!

ಪೂರ್ವ ಬೆಂಗಳೂರಿನಲ್ಲಿ ಕಾರ್ಯಾಚರಿಸುತ್ತಿರುವ ಸುಮಾರು ಅರ್ಧದಷ್ಟು ಪಿಜಿಗಳು ಅಕ್ರಮವಾಗಿವೆ ಎಂದು ಹೈಕೋರ್ಟ್‌ಗೆ ಮಾಹಿತಿ ನೀಡಲಾಗಿದೆ. ಇದರ ಬೆನ್ನಲ್ಲೇ, ಪಿಜಿಗಳ ಸುರಕ್ಷತೆ ಮತ್ತು ನಿಯಂತ್ರಣಕ್ಕಾಗಿ ಹೈಕೋರ್ಟ್ 81 ಅಂಶಗಳ ಸಮಗ್ರ ಮಾರ್ಗಸೂಚಿಯನ್ನು ಪ್ರಕಟಿಸಿದೆ. ನಿಯಮ ಉಲ್ಲಂಘಿಸುವ ಪಿಜಿಗಳನ್ನು ಮುಚ್ಚಿಸಲು ಮತ್ತು ಅಧಿಕಾರಿಗಳನ್ನು ಹೊಣೆಗಾರರನ್ನಾಗಿಸಲು ಕಟ್ಟುನಿಟ್ಟಿನ ಎಚ್ಚರಿಕೆ ನೀಡಲಾಗಿದೆ.
Read Full Story

More Trending News