Published : May 31, 2026, 06:37 AM ISTUpdated : May 31, 2026, 10:46 PM IST

Karnataka News Live: ಸತೀಶ್ ಜಾರಕಿಹೊಳಿ ಭೇಟಿ ಮಾಡಿದ 21 ಮಠಾಧೀಶರು - ಕೆಪಿಸಿಸಿ ಅಧ್ಯಕ್ಷ ಪಟ್ಟಕ್ಕಾಗಿ ಸ್ವಾಮೀಜಿಗಳ ಪಟ್ಟು!

ಸಾರಾಂಶ

ನಿರೀಕ್ಷೆಯಂತೆಯೇ ಕಾಂಗ್ರೆಸ್ ಶಾಸಕಾಂಗ ಪಕ್ಷದ ನೂತನ ನಾಯಕರಾಗಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರು ಶನಿವಾರ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಇದರ ಬೆನ್ನಲ್ಲೇ ರಾಜ್ಯಪಾಲರು ಸರ್ಕಾರ ರಚಿಸಲು ಅವರಿಗೆ ಆಹ್ವಾನ ನೀಡಿದ್ದು, ಜೂ.3ರ ಸಂಜೆ 4.05ಕ್ಕೆ ಲೋಕಭವನದಲ್ಲಿ ಕರ್ನಾಟಕದ 25ನೇ ಮುಖ್ಯಮಂತ್ರಿಯಾಗಿ ಡಿ.ಕೆ.ಶಿವಕುಮಾರ್‌ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ.

satish jarkiholi met 21 Swamiji's

10:46 PM (IST) May 31

ಸತೀಶ್ ಜಾರಕಿಹೊಳಿ ಭೇಟಿ ಮಾಡಿದ 21 ಮಠಾಧೀಶರು - ಕೆಪಿಸಿಸಿ ಅಧ್ಯಕ್ಷ ಪಟ್ಟಕ್ಕಾಗಿ ಸ್ವಾಮೀಜಿಗಳ ಪಟ್ಟು!

ಸಚಿವ ಸತೀಶ್ ಜಾರಕಿಹೊಳಿ ಅವರ ನಿವಾಸದಲ್ಲಿ ಸುಮಾರು 21 ಹಿಂದುಳಿದ ವರ್ಗಗಳ ಸ್ವಾಮೀಜಿಗಳು ಸಭೆ ನಡೆಸಿದರು. ಕೆಪಿಸಿಸಿ ಅಧ್ಯಕ್ಷ ಸ್ಥಾನವನ್ನು ಜಾರಕಿಹೊಳಿ ಅವರಿಗೆ ನೀಡಬೇಕೆಂದು ಒತ್ತಾಯಿಸಿದ ಸ್ವಾಮೀಜಿಗಳು, ಇದೇ ಬೇಡಿಕೆಯನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಮುಂದಿಡಲು ತೆರಳಿದರು.
Read Full Story

08:21 PM (IST) May 31

ನನಗೆ ಹೂವಿನ ಹಾರ ಹಾಕಬೇಡಿ, ಅಲರ್ಜಿಯಾಗುತ್ತೆ! - ಕಾರ್ಯಕರ್ತರಿಗೆ ನಿಯೋಜಿತ ಸಿಎಂ ಡಿ.ಕೆ. ಶಿವಕುಮಾರ್ ಮನವಿ!

ಕರ್ನಾಟಕದ ನೂತನ ಮುಖ್ಯಮಂತ್ರಿಯಾಗಿರುವ ಡಿ.ಕೆ. ಶಿವಕುಮಾರ್, ತಮಗಿರುವ ಅಲರ್ಜಿಯ ಕಾರಣ ಹೂವಿನ ಹಾರಗಳನ್ನು ನಿಷೇಧಿಸಿದ್ದಾರೆ. ತಮ್ಮ ಈ ಗೆಲುವನ್ನು ಪಕ್ಷದ ಕಾರ್ಯಕರ್ತರಿಗೆ ಅರ್ಪಿಸಿ, ಪ್ರಮಾಣವಚನಕ್ಕೆ ಹೆಚ್ಚು ಜನ ಸೇರದೆ ತಮ್ಮ ಜಿಲ್ಲೆಗಳಲ್ಲೇ ಸಂಭ್ರಮಿಸುವಂತೆ ಅವರು ಮನವಿ ಮಾಡಿದ್ದಾರೆ.
Read Full Story

06:17 PM (IST) May 31

ಸತೀಶ್ ಜಾರಕಿಹೊಳಿ ಕುರಿತ ಸುಳ್ಳು ಪೋಸ್ಟ್ ಮಾಡಿದ 'ಕರುನಾಡ ಕುರುಬ ಗೌಡ್ರು' ಫೇಸ್‌ಬುಕ್ ಪೇಜ್ ಮೇಲೆ FIR!

ಮಾಜಿ ಸಚಿವ ಸತೀಶ್ ಜಾರಕಿಹೊಳಿ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಷಡ್ಯಂತ್ರ ನಡೆಸುತ್ತಿದ್ದಾರೆ ಎಂದು ಆರೋಪಿಸಿ ಸಾಮಾಜಿಕ ಜಾಲತಾಣದಲ್ಲಿ ನಕಲಿ ಪೋಸ್ಟ್ ಹಂಚಿಕೊಳ್ಳಲಾಗಿತ್ತು. ಈ ಸುಳ್ಳು ಸುದ್ದಿ ಹರಡಿದವರ ವಿರುದ್ಧ ಬೆಳಗಾವಿ ಸಿಇಎನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Read Full Story

06:12 PM (IST) May 31

ದೇಶದ ನೂತನ ಕುಬೇರ ಸಿಎಂ ಆಗಲಿದ್ದಾರೆ ಡಿಕೆ ಶಿವಕುಮಾರ್ - ಚಂದ್ರಬಾಬು ನಾಯ್ಡು, ದಳಪತಿ ವಿಜಯ್‌ರನ್ನೇ ಹಿಂದಿಕ್ಕಿದ ಬಂಡೆ

ಜೂನ್ 3 ರಂದು ಕರ್ನಾಟಕದ ನೂತನ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಲಿರುವ ಡಿಕೆ ಶಿವಕುಮಾರ್, ₹1,400 ಕೋಟಿಗೂ ಅಧಿಕ ಆಸ್ತಿಯೊಂದಿಗೆ ದೇಶದ ಅತ್ಯಂತ ಶ್ರೀಮಂತ ಸಿಎಂ ಆಗಲಿದ್ದಾರೆ. ವಿದ್ಯಾರ್ಥಿ ನಾಯಕನಾಗಿ ರಾಜಕೀಯ ಪ್ರವೇಶಿಸಿ, ಹಲವು ವಿವಾದಗಳನ್ನು ಎದುರಿಸಿ ಈಗ ದೊಡ್ಡ ಹುದ್ದೆ ಏರುತ್ತಿದ್ದಾರೆ.

Read Full Story

04:56 PM (IST) May 31

ಡಿ.ಕೆ.ಶಿವಕುಮಾರ್​ ಮತ್ತು ಕಾಂಗ್ರೆಸ್​ ಕುರಿತು ನಟ ಚೇತನ್​ ಅಹಿಂಸಾ ಶಾಕಿಂಗ್​ ಸ್ಟೇಟ್​ಮೆಂಟ್​!

ನಟ ಚೇತನ್ ಅಹಿಂಸಾ ಅವರು, ಡಿ.ಕೆ.ಶಿವಕುಮಾರ್ ಮತ್ತು ಕಾಂಗ್ರೆಸ್ ಪಕ್ಷಕ್ಕೆ ಕರ್ನಾಟಕದ ಅಭಿವೃದ್ಧಿಯ ಬಗ್ಗೆ ದೂರದೃಷ್ಟಿ ಇಲ್ಲ ಎಂದು ಆರೋಪಿಸಿದ್ದಾರೆ. ಬಿಡದಿ ಟೌನ್‌ಶಿಪ್ ಹೆಸರಿನಲ್ಲಿ ರೈತರ ಜಮೀನು ಕಬಳಿಸಿ ಕಾಂಕ್ರೀಟ್ ಕಾಡು ಮಾಡಲು ಹೊರಟಿದ್ದಾರೆ ಮತ್ತು ಎಲ್ಲವನ್ನೂ ವ್ಯಾಪಾರದ ದೃಷ್ಟಿಯಿಂದ ನೋಡುತ್ತಿದ್ದಾರೆ ಎಂದು ಅವರು ಟೀಕಿಸಿದ್ದಾರೆ.
Read Full Story

04:41 PM (IST) May 31

ಉಡುಪಿ - ಶ್ರೀಕೃಷ್ಣನ ಸನ್ನಿಧಿಯಲ್ಲಿ ನೆಲಭೋಜನ ಮಾಡಿ ಹರಕೆ ತೀರಿಸಿದ ಹರಿಪ್ರಿಯಾ-ವಸಿಷ್ಠ ಸಿಂಹ ಜೋಡಿ

ನಟ ವಸಿಷ್ಠ ಸಿಂಹ ಮತ್ತು ಹರಿಪ್ರಿಯಾ ದಂಪತಿ ತಮ್ಮ ಪುತ್ರನೊಂದಿಗೆ ಉಡುಪಿ ಶ್ರೀ ಕೃಷ್ಣ ಮಠಕ್ಕೆ ಭೇಟಿ ನೀಡಿದ್ದಾರೆ. ಮಗು ಜನಿಸಿದ್ದಕ್ಕಾಗಿ ಹೊತ್ತಿದ್ದ 'ನೆಲಭೋಜನ' ಹರಕೆಯನ್ನು ಅವರು ಸಾಮಾನ್ಯ ಭಕ್ತರಂತೆ ಸರಳವಾಗಿ ಪೂರೈಸಿದ್ದು, ಅವರ ಈ ನಡೆಗೆ ವ್ಯಾಪಕ ಪ್ರಶಂಸೆ ವ್ಯಕ್ತವಾಗಿದೆ.
Read Full Story

02:54 PM (IST) May 31

ಸ್ವಾಮೀಜಿ, ಫಾದರ್, ಮೌಲ್ವಿ ಸಮ್ಮುಖದಲ್ಲಿ ಡಿಕೆ ಶಿವಕುಮಾರ್ ಪ್ರಮಾವಚನ, ಸರ್ಕಾರದಿಂದ ಆಹ್ವಾನ

ನಿಯೋಜಿತ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಮೇ.3ರಂದು ಪ್ರಮಾಣವಚನ ಸ್ವೀಕರಿಸಲಿದ್ದಾರೆ. ಡಿಕೆಶಿ ಸರ್ವಧರ್ಮ ಸಮುದಾಯಗಳ ಸ್ವಾಮೀಜಿಗಳ ಸಮ್ಮುಖದಲ್ಲಿ ಪ್ರಮಾಣವಚನ ಸ್ವೀಕರಿಸಲು ನಿರ್ಧರಿಸಿದ್ದಾರೆ.

Read Full Story

01:41 PM (IST) May 31

ಮೊದಲ ಲಿಸ್ಟ್‌ನಲ್ಲೇ ಸ್ಥಾನ ಪಡೆಯಲು ಶುರುವಾಯ್ತು ಭರ್ಜರಿ ಲಾಭಿ - ಕೈ ನಾಯಕರ ಈ ಆತುರಕ್ಕೆ ಅಸಲಿ ಕಾರಣವೇನು?

ಕಾಂಗ್ರೆಸ್ ಸರ್ಕಾರದ ಸಂಪುಟ ವಿಸ್ತರಣೆ ಎರಡು ಹಂತಗಳಲ್ಲಿ ನಡೆಯಲಿದೆ. ಮೊದಲ ಹಂತದಲ್ಲಿ ಮುಖ್ಯಮಂತ್ರಿ ಸೇರಿದಂತೆ ಒಂಬತ್ತು ಮಂದಿ ಪ್ರಮಾಣ ವಚನ ಸ್ವೀಕರಿಸುವ ನಿರೀಕ್ಷೆಯಿದೆ. ರಾಜ್ಯಸಭೆ ಮತ್ತು ವಿಧಾನ ಪರಿಷತ್ ಚುನಾವಣೆಗಳ ನಂತರವೇ ಎರಡನೇ ಹಂತದ ವಿಸ್ತರಣೆ ನಡೇYಳೀಡೇ.

Read Full Story

12:53 PM (IST) May 31

ತಂದೆ ಕೊಡುತ್ತಿದ್ದ 70 ರೂಪಾಯಿಯಲ್ಲೇ ₹70 ಕೋಟಿಯ ಸಾಮ್ರಾಜ್ಯ ಕಟ್ಟಿದ ಮಗನ ಕಥೆ..!

ಹೈದರಾಬಾದ್‌ನ ಆಟೋ ಚಾಲಕರೊಬ್ಬರ ಮಗ, ಬಡತನದ ನಡುವೆಯೂ ಕ್ರಿಕೆಟ್ ಕನಸನ್ನು ಬೆನ್ನತ್ತಿದನು. ತಂದೆಯ ಬೆಂಬಲ ಮತ್ತು ತನ್ನ ಕಠಿಣ ಪರಿಶ್ರಮದಿಂದ, ಇಂದು ಆತ ಕೋಟ್ಯಂತರ ರೂಪಾಯಿಗಳ ಒಡೆಯನಾಗಿ, ಯುವ ಕ್ರಿಕೆಟಿಗರಿಗೆ ಸ್ಫೂರ್ತಿಯಾಗಿದ್ದಾನೆ. ಇದು ಮೊಹಮ್ಮದ್ ಸಿರಾಜ್ ಅವರ ಹೃದಯಸ್ಪರ್ಶಿ ಯಶೋಗಾಥೆ.
Read Full Story

12:48 PM (IST) May 31

ಪ್ರಿಯಾಂಕ್ ಖರ್ಗೆ ಡಿಸಿಎಂ ಸ್ಥಾನಕ್ಕಾಗಿ ದೇಗುಲದಲ್ಲಿ 101 ತೆಂಗಿನಕಾಯಿ ಒಡೆದು ವಿಶೇಷ ಪೂಜೆ!

ಪ್ರಿಯಾಂಕ್ ಖರ್ಗೆ ಅವರಿಗೆ ಹೊಸ ಸರ್ಕಾರ ಸರ್ಕಾರದಲ್ಲಿ ಡಿಸಿಎಂ ಸ್ಥಾನ ನೀಡಲೇಬೇಕು ಎಂದು ಬೀದರ್‌ನಲ್ಲಿ ಅಭಿಮಾನಿಗಳು ದೇಗುಲಗಳಲ್ಲಿ 101 ತೆಂಗಿನಕಾಯಿಗಳನ್ನ ಹೊಡೆದು ವಿಶೇಷ ಪ್ರಾರ್ಥನೆ ಸಲ್ಲಿಸಿದರು. ಬಳಿಕ ಹೈಕಮಾಂಡ್‌ಗೆ  ಒತ್ತಾಯಿಸಿದರು.

Read Full Story

11:41 AM (IST) May 31

Pralhad Joshi - ಡಿಕೆ ಶಿವಕುಮಾರ್ ಸಿಎಂ ಆಗುವುದರಿಂದ ಏನೂ ಬದಲಾಗೋಲ್ಲ; ಕಾಂಗ್ರೆಸ್ ವಿರುದ್ಧ ಜೋಶಿ ವಾಗ್ದಾಳಿ

ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಅವರು, ಕಾಂಗ್ರೆಸ್‌ಗೆ ಕರ್ನಾಟಕ ಒಂದು ಎಟಿಎಂ ಇದ್ದಂತೆ ಎಂದು ಟೀಕಿಸಿದ್ದಾರೆ. ಡಿ.ಕೆ.ಶಿವಕುಮಾರ್ ಮುಖ್ಯಮಂತ್ರಿಯಾದರೂ ಈ ಪರಿಸ್ಥಿತಿ ಬದಲಾಗುವುದಿಲ್ಲ ಎಂದ ಅವರು, ಸಿದ್ದರಾಮಯ್ಯನವರನ್ನು ರಾಹುಲ್ ಗಾಂಧಿ ನಡೆಸಿಕೊಂಡ ರೀತಿ ಬಗ್ಗೆಯೂ ಟೀಕಿಸಿದ್ದಾರೆ.

Read Full Story

11:18 AM (IST) May 31

ಸಿಎಲ್‌ಪಿ ನಾಯಕನ ಆಯ್ಕೆ ಬಳಿಕ ಮತ್ತೆ ಹೈಕಮಾಂಡ್ ಬುಲಾವ್, ಡಿಕೆಶಿ, ಸಿದ್ದರಾಮಯ್ಯ ದೆಹಲಿಗೆ ಪ್ರಯಾಣ? ಡಿಸಿಎಂ ಹುದ್ದೆಯೇ ಬೇಡ ಅಂದಿದ್ದು ಯಾರು?

ಸಚಿವ ಸಂಪುಟ ರಚನೆ, ಡಿಸಿಎಂ ಹುದ್ದೆ,  ಕೆಪಿಸಿಸಿ ಅಧ್ಯಕ್ಷರ ಆಯ್ಕೆಯಂತಹ ಪ್ರಮುಖ ವಿಷಯಗಳ ಕುರಿತು ಚರ್ಚಿಸಲು ಸಿದ್ದರಾಮಯ್ಯ  ಡಿಕೆ ಶಿವಕುಮಾರ್ ದೆಹಲಿಗೆ ತೆರಳುತ್ತಿದ್ದಾರೆ. ಈ ಹೈವೋಲ್ಟೇಜ್ ಸಭೆಯಲ್ಲಿ ಹೈಕಮಾಂಡ್ ಜೊತೆ ಕೆಪಿಸಿಸಿ, ಡಿಸಿಎಂ ಆಯ್ಕೆ ಬಗ್ಗೆ ಅಂತಿಮ ಸುತ್ತಿನ ಮಾತುಕತೆ ನಡೆಯಲಿದೆ.

Read Full Story

09:07 AM (IST) May 31

KAAMS app for teachers - ಕರ್ನಾಟಕದ ಸರ್ಕಾರಿ ಶಿಕ್ಷಕರಿಗೆ ಹೊಸ ಹಾಜರಾತಿ ನಿಯಮ; ಫೇಸ್‌, ಲೊಕೇಶನ್‌ ಹಾಜರಾತಿ ಕಡ್ಡಾಯ!

ರಾಜ್ಯ ಶಿಕ್ಷಣ ಇಲಾಖೆಯು ಸರ್ಕಾರಿ ಶಾಲಾ ಶಿಕ್ಷಕರಿಗೆ ಲೊಕೇಶನ್ ಮತ್ತು ಫೇಸ್ ಆಧರಿತ 'ಕೆಎಎಎಂಎಸ್‌' ಆ್ಯಪ್ ಹಾಜರಾತಿ ವ್ಯವಸ್ಥೆಯನ್ನು ಜಾರಿಗೆ ತಂದಿದೆ. ಈ ಹೊಸ ನಿಯಮದ ಪ್ರಕಾರ, ನಿಗದಿತ ಸಮಯಕ್ಕೆ ಶಾಲೆಗೆ ಹಾಜರಾಗದಿದ್ದರೆ ಅಥವಾ ಬೇಗ ನಿರ್ಗಮಿಸಿದರೆ, ಅದನ್ನು ರಜೆ ಎಂದು ಪರಿಗಣಿಸಿ ಕಠಿಣ ಕ್ರಮ!

Read Full Story

09:03 AM (IST) May 31

ಸಂಪುಟ ಬಗ್ಗೆ ಚರ್ಚೆ - ನಾಳೆ ಡಿಕೆಶಿ-ಸಿದ್ದರಾಮಯ್ಯ ದಿಲ್ಲಿಗೆ? ಬುಧವಾರ ಡಿಕೆಶಿ ಒಬ್ಬರೇ ಪ್ರಮಾಣವಚನ?

ನೂತನ ಸಚಿವ ಸಂಪುಟ ರಚನೆಗೆ ಸಂಬಂಧಿಸಿದಂತೆ ಅಂತಿಮ ಚರ್ಚೆಗಾಗಿ ಡಿ.ಕೆ.ಶಿವಕುಮಾರ್ ಮತ್ತು ಸಿದ್ದರಾಮಯ್ಯ ದೆಹಲಿಗೆ ತೆರಳುವ ಸಾಧ್ಯತೆಯಿದೆ. ಪ್ರಮಾಣ ವಚನ ಸಮಾರಂಭದ ಸ್ಥಳ ಬದಲಾವಣೆಯಿಂದಾಗಿ, ಮೊದಲು ಡಿಕೆಶಿ ಮಾತ್ರ ಪ್ರಮಾಣ ವಚನ ಸ್ವೀಕರಿಸುತ್ತಾರೆಯೇ ಅಥವಾ ಹಲವು ಸಚಿವರು ಸೇರುತ್ತಾರೆಯೇ ಎಂಬ ಗೊಂದಲ ಮೂಡಿದ್ದು, ಹೈಕಮಾಂಡ್ ತೀರ್ಮಾನವೇ ಅಂತಿಮವಾಗಲಿದೆ.
Read Full Story

08:44 AM (IST) May 31

Priyank kharge DCM - ಪ್ರಿಯಾಂಕ್‌ ಖರ್ಗೆ ಡಿಸಿಎಂ ಏಕೆ ಆಗಬೇಕು ಗೊತ್ತಾ?

ಚಿತ್ತಾಪುರದ ಶಾಸಕ ಪ್ರಿಯಾಂಕ್ ಖರ್ಗೆಯವರು ತಮ್ಮ ಖಡಕ್ ನಾಯಕತ್ವ, ದಕ್ಷ ಆಡಳಿತ ಹಾಗೂ ಬಿಜೆಪಿ ಸರ್ಕಾರದ ಹಗರಣಗಳನ್ನು ಬಯಲಿಗೆಳೆದ ಹೋರಾಟದಿಂದ ಗುರುತಿಸಿಕೊಂಡಿದ್ದಾರೆ. ಸಚಿವರಾಗಿ ಹಲವು ಜನಪರ ಯೋಜನೆ, ಅವರ ಸಾಮರ್ಥ್ಯ, ಪಕ್ಷ ನಿಷ್ಠೆಗಾಗಿ ಉಪಮುಖ್ಯಮಂತ್ರಿ ಹುದ್ದೆ ನೀಡುವಂತೆ ಕೂಗು ಬಲವಾಗಿ ಕೇಳಿಬರುತ್ತಿದೆ.

Read Full Story

07:50 AM (IST) May 31

ಶಿಕ್ಷಕರಿಗೆ ಫೇಸ್, ಲೊಕೇಶನ್ ಹಾಜರಾತಿ ಕಡ್ಡಾಯ! ಶಾಲೆಗೆ ತಡವಾಗಿ ಬರುವ ಶಿಕ್ಷಕರಿಗೆ ಶಾಕ್

ಕರ್ನಾಟಕ ಶಿಕ್ಷಣ ಇಲಾಖೆಯು ಸರ್ಕಾರಿ ಶಾಲಾ ಶಿಕ್ಷಕರಿಗೆ ಲೊಕೇಶನ್ ಮತ್ತು ಫೇಸ್ ಆಧರಿತ ಹಾಜರಾತಿ ವ್ಯವಸ್ಥೆ (KAAMS ಆ್ಯಪ್) ಜಾರಿಗೆ ತಂದಿದೆ. ಈ ಹೊಸ ನಿಯಮದ ಪ್ರಕಾರ, ನಿಗದಿತ ಸಮಯಕ್ಕೆ ಹಾಜರಾಗದಿದ್ದರೆ ಅಥವಾ ಅವಧಿಗೆ ಮುನ್ನ ನಿರ್ಗಮಿಸಿದರೆ ಅದನ್ನು ರಜೆ ಎಂದು ಪರಿಗಣಿಸಲಾಗುತ್ತದೆ ಮತ್ತು ಶಿಸ್ತು ಕ್ರಮ ಕೈಗೊಳ್ಳಲಾಗುತ್ತದೆ.
Read Full Story

07:39 AM (IST) May 31

Vice Admiral Krishna Swaminathan - ಕನ್ನಡಿಗನಿಗೆ ಸಿಕ್ತು ದೇಶದ ಪ್ರತಿಷ್ಠಿತ ಹುದ್ದೆ! ಭಾರತೀಯ ನೌಕಪಡೆಯ ನೂತನ ಸಾರಥಿಯಾದ ಬಸವನಗುಡಿಯ ಈ ಹುಡುಗ ಯಾರು?

ಬೆಂಗಳೂರಿನ ಬಸವನಗುಡಿಯಲ್ಲಿ ಬೆಳೆದ ವೈಸ್‌ ಅಡ್ಮಿರಲ್‌ ಕೃಷ್ಣ ಸ್ವಾಮಿನಾಥನ್‌ ಭಾರತೀಯ ನೌಕಾಪಡೆಯ ನೂತನ ಮುಖ್ಯಸ್ಥರಾಗಿ ಅಧಿಕಾರ ಸ್ವೀಕರಿಸಲಿದ್ದಾರೆ. ವಿಜಯಪುರದ ಸೈನಿಕ ಶಾಲೆಯಲ್ಲಿ ಶಿಕ್ಷಣ ಪಡೆದ ಇವರು, ಈ ಹಿಂದೆ ಐಎನ್‌ಎಸ್ ವಿಕ್ರಮಾದಿತ್ಯ ಕಮಾಂಡರ್ ಸೇರಿ ಹಲವು ಪ್ರಮುಖ ಹುದ್ದೆಗಳನ್ನು ನಿಭಾಯಿಸಿದ್ದಾರೆ.

Read Full Story

More Trending News