Published : Mar 26, 2025, 07:01 AM ISTUpdated : Mar 26, 2025, 11:33 PM IST

Karnataka News Live 26th March: ಆಗ್ರಾ ಮೊಘಲರಿಗೆ ಹೆಸರುವಾಸಿಯಲ್ಲ,ಛತ್ರಪತಿ ಶಿವಾಜಿ ಮಹಾರಾಜರಿಗೆ: ಸಿಎಂ ಯೋಗಿ

ಸಾರಾಂಶ

ಢಾಕಾ:ಬಾಂಗ್ಲಾದೇಶದಲ್ಲೀಗ ಸೇನಾ ದಂಗೆಯ ವದಂತಿಗಳು ದಟ್ಟವಾಗಿವೆ. ಹಿಂದಿನ ಪ್ರಧಾನಿ ಶೇಖ್ ಹಸೀನಾ ಸರ್ಕಾರ ಪದಚ್ಯುತಿ ಬಳಿಕ ಅಧಿಕಾರಕ್ಕೆ ಬಂದ ಮೊಹಮ್ಮದ್ ಯೂನುಸ್ ನೇತೃತ್ವದ ಮಧ್ಯಂತರ ಸರ್ಕಾರ ದೇಶ ಮುನ್ನಡೆಸಲು ಹಾಗೂ ಹಿಂಸಾಚಾರ ನಿಯಂತ್ರಿಸಲು ವಿಫಲವಾಗಿರುವ ಹಿನ್ನೆಲೆಯಲ್ಲಿ ಸೇನೆಯೇ ದೇಶವನ್ನು ನಿಯಂತ್ರಣಕ್ಕೆ ತೆಗೆದುಕೊಳ್ಳಲು ಮುಂದಾಗಿದೆ ಎಂದು ಹೇಳಲಾಗುತ್ತಿದೆ. ಈ ಸಂಬಂಧ ಸೇನಾ ಮುಖ್ಯಸ್ಥ ವಾಕರ್-ಉಜ್ - ಜಮಾನ್ ಸೋಮವಾರ ತುರ್ತು ಸಭೆ ನಡೆಸಿದ್ದಾರೆ. 

ಸೇನಾದಂಗೆ ಏಕೆ? 
• ಮಾಜಿ ಪ್ರಧಾನಿ ಹಸೀನಾ ವದಚ್ಯುತಿ ಬಳಿಕ ದೇಶ ಮುನ್ನಡೆಸಲು, ಹಿಂಸಾ ಚಾರ ನಿಯಂತ್ರಿಸಲು ಯೂನುಸ್ ವಿಫಲ ಎಂಬ ಆರೋಪ 
• ಯೂನುಸ್ ನೇತೃತ್ವದ ಮಧ್ಯಂತರ ಸರ್ಕಾರದ ವೈಫಲ್ಯ ವಿರುದ್ಧ ದೇಶದ ಹಲವು ಭಾಗಗಳಲ್ಲಿ ಪದೇ ಪದೇ ವಿದ್ಯಾರ್ಥಿಗಳ ಪ್ರತಿಭಟನೆ 
• ಈ ಹಿನ್ನೆಲೆಯಲ್ಲಿ ಹಿರಿಯ ಸೇನಾ ಅಧಿಕಾರಿಗಳ ಜತೆ ಸೇನಾ ಮುಖ್ಯಸ್ಥ ವಾಕರ್-ಉಜ್-ಜಮಾನ್ ಅವರು ಸೋಮವಾರ ತುರ್ತು ಸಭೆ

11:33 PM (IST) Mar 26

ಆಗ್ರಾ ಮೊಘಲರಿಗೆ ಹೆಸರುವಾಸಿಯಲ್ಲ,ಛತ್ರಪತಿ ಶಿವಾಜಿ ಮಹಾರಾಜರಿಗೆ: ಸಿಎಂ ಯೋಗಿ

ಆಗ್ರಾದಲ್ಲಿ ಯೋಗಿ ಆದಿತ್ಯನಾಥ್ ಅಭಿವೃದ್ಧಿ ಉತ್ಸವದಲ್ಲಿ ಭಾಗವಹಿಸಿದರು. 635 ಕೋಟಿ ರೂ.ಗಳ ಯೋಜನೆಗಳನ್ನು ಉದ್ಘಾಟಿಸಿದರು ಮತ್ತು ಹಿಂದಿನ ಸರ್ಕಾರಗಳ ಮೇಲೆ ತೀವ್ರ ವಾಗ್ದಾಳಿ ನಡೆಸಿದರು.

ಪೂರ್ತಿ ಓದಿ

11:11 PM (IST) Mar 26

ಓಲಾ, ಉಬರ್‌ ರೀತಿಯಲ್ಲಿ ದೇಶದಲ್ಲಿ ಕೇಂದ್ರ ಸರ್ಕಾರದಿಂದಲೇ ಸಹಕಾರಿ ಟ್ಯಾಕ್ಸಿ ಸೇವೆ: ಅಮಿತ್ ಶಾ ಘೋಷಣೆ!

ಕೇಂದ್ರ ಸಚಿವ ಅಮಿತ್‌ ಶಾ ಅವರು ಶೀಘ್ರದಲ್ಲಿಯೇ ದೇಶದಲ್ಲಿ ಸಹಕಾರ ಟ್ಯಾಕ್ಸಿ ಸೇವೆ ಆರಂಭವಾಗಲಿದೆ ಎಂದು ಘೋಷಿಸಿದ್ದಾರೆ. ಓಲಾ, ಊಬರ್‌ ಮಾದರಿಯಲ್ಲಿ ಕಾರ್ಯನಿರ್ವಹಿಸುವ ಈ ಸೇವೆಯ ಲಾಭ ನೇರವಾಗಿ ಚಾಲಕರಿಗೆ ಸಿಗಲಿದೆ. ಅಲ್ಲದೆ, ಟ್ಯಾಕ್ಸಿ ಚಾಲಕರಿಗಾಗಿ ರಾಷ್ಟ್ರೀಯ ಮಟ್ಟದ ಸಹಕಾರಿ ಸಂಘಟನೆಯನ್ನು ಸ್ಥಾಪಿಸಲಾಗುವುದು.

ಪೂರ್ತಿ ಓದಿ

10:52 PM (IST) Mar 26

ಶರತ್ ತಾಯಿ ಅಲ್ಲವಾ ಮಾಳವಿಕಾ: ಯಾರು ಈ ದಾಕ್ಷಾಯಿಣಿ? ಸೀರಿಯಲ್‌ನಲ್ಲಿ ಬಿಗ್ ಟ್ವಿಸ್ಟ್

ನಾ ನಿನ್ನ ಬಿಡಲಾರೆ ಸೀರಿಯಲ್‌ನಲ್ಲಿ ಮಾಳವಿಕಾ ಶರತ್‌ನ ಸ್ವಂತ ತಾಯಿಯಲ್ಲ ಎಂಬ ಟ್ವಿಸ್ಟ್ ಸಿಕ್ಕಿದೆ. ದೇವರ ಪ್ರಸಾದ ತಿಂದ ಶರತ್ ತಂದೆ ದಾಕ್ಷಾಯಿಣಿ ಎಂದು ಹೇಳಿದ್ದು, ಮಾಳವಿಕಾಳನ್ನು ಗೊಂದಲಕ್ಕೀಡು ಮಾಡಿದೆ. ಹಾಗಾದರೆ ದಾಕ್ಷಾಯಿಣಿಯೇ ಶರತ್ ತಾಯಿನಾ?

ಪೂರ್ತಿ ಓದಿ

10:36 PM (IST) Mar 26

'ಕನ್ನಡಿಗರು ನಾಲಾಯಕ್' ಎಂದು ಜೈಲು ಸೇರಿದ್ದ ಎಂಇಎಸ್ ಪುಂಡ ಹಿಂಡಲಗಾ ಜೈಲಿನಿಂದ ಬಿಡುಗಡೆ!

ಕನ್ನಡಿಗರನ್ನು ನಿಂದಿಸಿ ಜೈಲು ಸೇರಿದ್ದ MES ಮುಖಂಡ ಶುಭಂ ಶಳಕೆ ಜಾಮೀನಿನ ಮೇಲೆ ಬಿಡುಗಡೆಯಾಗಿದ್ದಾರೆ. ಈ ಘಟನೆಗೆ ಕನ್ನಡಿಗರಲ್ಲಿ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ, ಕೆಲವರು ಅಸಮಾಧಾನ ವ್ಯಕ್ತಪಡಿಸಿದರೆ, ಇನ್ನು ಕೆಲವರು ಕಾನೂನು ಪ್ರಕ್ರಿಯೆಯನ್ನು ಗೌರವಿಸುವುದಾಗಿ ತಿಳಿಸಿದ್ದಾರೆ.

ಪೂರ್ತಿ ಓದಿ

10:28 PM (IST) Mar 26

ಆಶಾ ಕಾರ್ಯಕರ್ತೆಯರ ಗೌರವಧನ 18 ಸಾವಿರಕ್ಕೆ ಏರಿಸಿದ ಸರ್ಕಾರ, ಮುಖ್ಯಮಂತ್ರಿಗೆ ಹೂವಿನ ಮಳೆ ಸುರಿಸಿ ಸನ್ಮಾನ!

ಪುದುಚೇರಿಯ ಎನ್ಡಿಎ ಸರ್ಕಾರವು ಆಶಾ ಕಾರ್ಯಕರ್ತೆಯರ ಗೌರವಧನವನ್ನು 18000 ರೂಪಾಯಿಗೆ ಹೆಚ್ಚಿಸಿದೆ.

ಪೂರ್ತಿ ಓದಿ

08:51 PM (IST) Mar 26

ಯತ್ನಾಳ್ ಉಚ್ಚಾಟನೆ ಬೆನ್ನಲ್ಲೆ ಸಾಲು ಸಾಲು ರಾಜೀನಾಮೆ, ವಿಜಯಪುರ ನಗರ ಮಂಡಲವೇ ಖಾಲಿ ಖಾಲಿ!

ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅವರ ಉಚ್ಚಾಟನೆಯನ್ನು ಖಂಡಿಸಿ ವಿಜಯಪುರ ಜಿಲ್ಲಾ ಬಿಜೆಪಿಯಲ್ಲಿ ಸಾಮೂಹಿಕ ರಾಜೀನಾಮೆ ಪರ್ವ ಆರಂಭವಾಗಿದೆ. ನಗರ ಮಂಡಲದ ಪ್ರಮುಖ ಮುಖಂಡರು ರಾಜೀನಾಮೆ ನೀಡಲು ಮುಂದಾಗಿದ್ದು, ಪಕ್ಷದ ಆಂತರಿಕ ಬಿಕ್ಕಟ್ಟು ತಾರಕಕ್ಕೇರಿದೆ.

ಪೂರ್ತಿ ಓದಿ

08:48 PM (IST) Mar 26

ದೇಶಾದ್ಯಂತ UPI ಸೇವೆ ವ್ಯತ್ಯಯ; ಗೂಗಲ್‌ ಪೇ, ಪೇಟಿಎಂ, ಫೋನ್‌ಪೇ ಯಾವುದೂ ವರ್ಕ್‌ ಆಗ್ತಿಲ್ಲ!

ಭಾರತದಲ್ಲಿ UPI ಸೇವೆಗಳು ಸ್ಥಗಿತಗೊಂಡಿದ್ದು, Google Pay, Paytm ಬಳಕೆದಾರರು ಪೇಮೆಂಟ್ ಫೇಲ್ ಸಮಸ್ಯೆಯನ್ನು ಎದುರಿಸುತ್ತಿದ್ದಾರೆ. ವಹಿವಾಟುಗಳು, ನಿಧಿ ವರ್ಗಾವಣೆ ಮತ್ತು ಲಾಗಿನ್ ಮೇಲೆ ಪರಿಣಾಮ ಬೀರಿದ್ದು, ಕಾರಣ ತಿಳಿದುಬಂದಿಲ್ಲ.

ಪೂರ್ತಿ ಓದಿ

08:13 PM (IST) Mar 26

ಅಮೆಜಾನ್ ಕಾಡಲ್ಲಿ ನಿತ್ಯಾನಂದ ಭೂ ಕಬಳಿಕೆ: ದೆಹಲಿಗಿಂತ 2.6, ಮುಂಬೈಗಿಂತ 6.5, ಬೆಂಗಳೂರಿಗಿಂತ 5.3 ಪಟ್ಟು ದೊಡ್ಡದು!

ಈ ಹಿಂದೆ ಪ್ರತ್ಯೇಕ ಕೈಲಾಸ ದೇಶವನ್ನು ಸೃಷ್ಟಿಸಿ ಜಗತ್ತನ್ನು ವಂಚಿಸಲು ಯತ್ನಿಸಿದ ಕರ್ನಾಟಕದ ರಾಮನಗರ ಜಿಲ್ಲೆಯ ಬಿಡದಿಯ ವಿವಾದಿತ ಸ್ವಯಂ ಘೋಷಿತ ನಿತ್ಯಾನಂದ ಮತ್ತೊಮ್ಮೆ ಸುದ್ದಿಯಲ್ಲಿದ್ದಾರೆ.

ಪೂರ್ತಿ ಓದಿ

08:12 PM (IST) Mar 26

ಯತ್ನಾಳ್‌ರನ್ನು ಹಿಂದೆ ನಾನೇ ಉಚ್ಚಾಟಿಸಿದ್ದೆ, ಈಗ ಎಲ್ಲವೂ ಸರಿಯಾಗಿಲ್ಲ; ಸದಾನಂದ ಗೌಡ ಟಾಂಗ್

ಬಿಜೆಪಿ ಅಶಿಸ್ತನ್ನು ಸಹಿಸಲ್ಲ ಎಂದು ಯತ್ನಾಳ್ ಉಚ್ಚಾಟನೆಯನ್ನು ಹಿರಿಯ ನಾಯಕ ಸದಾನಂದ ಗೌಡ ಸಮರ್ಥಿಸಿದ್ದಾರೆ. ಇದೇ ವೇಳೆ ವಿಜಯೇಂದ್ರ ಬಣಕ್ಕೆ ಪರೋಕ್ಷವಾಗಿ ಟಾಂಗ್ ಕೊಟ್ಟಿದ್ದಾರೆ. ಒಂದೇ ಮಾತಿನಲ್ಲಿ ಎರಡೂ ಬಣಕ್ಕೂ ಗೌಡರು ಕೊಟ್ಟ ಟಾಂಗ್ ಏನು?

ಪೂರ್ತಿ ಓದಿ

08:01 PM (IST) Mar 26

ಏರ್‌ಪೋರ್ಟ್‌ ಶೌಚಾಲಯದ ಡಸ್ಟ್‌ಬಿನ್‌ನಲ್ಲಿ ನವಜಾತ ಶಿಶು ಮೃತದೇಹ ಪತ್ತೆ, ಪ್ರಯಾಣಿಕರ ಹುಡುಕಾಟಕ್ಕೆ ಮುಂದಾದ ಪೊಲೀಸ್‌!

ಏರ್‌ಪೋರ್ಟ್ ಭದ್ರತಾ ವಿಭಾಗವು ತಕ್ಷಣವೇ ಸಹಾರ್ ರಸ್ತೆ ಪೊಲೀಸರಿಗೆ ಮಾಹಿತಿ ನೀಡಿದೆ. ಅವರು ಸ್ಥಳಕ್ಕೆ ಬಂದು ಮಗುವನ್ನು ಹೊರತೆಗೆದು ಹತ್ತಿರದ ಖಾಸಗಿ ಆಸ್ಪತ್ರೆಗೆ ಸಾಗಿಸಿದರೂ, ಮಗು ಮೃತಪಟ್ಟಿತ್ತು.

ಪೂರ್ತಿ ಓದಿ

07:45 PM (IST) Mar 26

ಇಪಿಎಫ್‌ಓ ಅಲ್ಲಿ ಬ್ಯಾಂಕ್‌ ಅಕೌಂಟ್‌ಗಳನ್ನು ಸೇರಿಸೋದು, ಬದಲಾಯಿಸೋದು ಹೇಗೆ?

ಯುಎಎನ್ ಅನ್ನು ಖಾತೆಗೆ ಲಿಂಕ್ ಮಾಡುವುದು ಹೇಗೆ? ಪಿಎಫ್ ಬ್ಯಾಲೆನ್ಸ್ ಮೊತ್ತವನ್ನು ಬೇಗನೆ ತಿಳಿಯಲು ಮತ್ತು ಹಣವನ್ನು ಸುಲಭವಾಗಿ ಹಿಂಪಡೆಯಲು ಯುಎಎನ್ ಅನ್ನು ಬ್ಯಾಂಕ್ ಖಾತೆಗೆ ಲಿಂಕ್ ಮಾಡಬಹುದು.

ಪೂರ್ತಿ ಓದಿ

07:34 PM (IST) Mar 26

ಮೊದಲ ಬಾರಿ ಕನ್ನಡಿ ಇಟ್ಟಾಗ ಪ್ರಾಣಿಗಳು ಮಾಡಿದ್ದೇನು? ಕನ್ನಡಿ ತೆಗೆದಾಗ ಆಗಿದ್ದೇ ಬೇರೆ! ಕುತೂಹಲದ ವಿಡಿಯೊ ವೈರಲ್​

ಪ್ರಸಿದ್ಧ ಛಾಯಾಚಿತ್ರಕಾರರೊಬ್ಬರು ಕಾಡಿನಲ್ಲಿ ಕನ್ನಡಿಯನ್ನು ಅಳವಡಿಸಿ ವಿವಿಧ ವನ್ಯಮೃಗಗಳ ರಿಯಾಕ್ಷನ್​ ಸೆರೆ ಹಿಡಿದಿದ್ದಾರೆ. ಮೊದಲ ಬಾರಿ ಕನ್ನಡಿ ನೋಡಿದಾಗ ಪ್ರಾಣಿಗಳು ಮಾಡಿದ್ದೇನು? ಕನ್ನಡಿ ತೆಗೆದಾಗ ಆಗಿದ್ದೇನು?  
 

ಪೂರ್ತಿ ಓದಿ

07:34 PM (IST) Mar 26

'ಬಿಜೆಪಿ ಆ ಮುತ್ತುರತ್ನಗಳನ್ನ..' ಯತ್ನಾಳ್ ಉಚ್ಚಾಟನೆ ಬಗ್ಗೆ ಡಿಕೆ ಶಿವಕುಮಾರ ಫಸ್ಟ್ ರಿಯಾಕ್ಷನ್!

ಯತ್ನಾಳ್ ಅವರ ಉಚ್ಚಾಟನೆಯ ಬಗ್ಗೆ ಡಿಕೆ ಶಿವಕುಮಾರ್ ಪ್ರತಿಕ್ರಿಯಿಸಿದ್ದಾರೆ. ಇದು ಬಿಜೆಪಿಯ ಆಂತರಿಕ ವಿಚಾರ ಎಂದಿದ್ದಾರೆ. ಈ ಘಟನೆಯು ಕರ್ನಾಟಕ ಬಿಜೆಪಿಯಲ್ಲಿ ಬಿಕ್ಕಟ್ಟನ್ನು ತಂದಿದೆ.

ಪೂರ್ತಿ ಓದಿ

07:23 PM (IST) Mar 26

ಈದ್‌ ಅಲ್‌ ಫಿತ್ರ್‌ಗಾಗಿ 300 ಉತ್ಪನ್ನಗಳ ಬೆಲೆ ಇಳಿಸಿದ ಯೂನಿಯನ್‌ ಕೋಪ್‌!

ಯೂನಿಯನ್ ಕೋಪ್ ಹೈಪರ್‌ಮಾರ್ಕೆಟ್‌ 3000 ಉತ್ಪನ್ನಗಳಿಗೆ 60% ವರೆಗೆ ರಿಯಾಯಿತಿ ಘೋಷಿಸಿದೆ.

ಪೂರ್ತಿ ಓದಿ

06:55 PM (IST) Mar 26

ಲೋಕಸಭೆಯಲ್ಲಿ ಸೋದರಿ ಪ್ರಿಯಾಂಕಾ ಕೆನ್ನೆ ಗಿಂಡಿದ ರಾಹುಲ್‌ ಗಾಂಧಿ, ಶಿಸ್ತಿನ ಪಾಠ ಮಾಡಿದ ಸ್ಪೀಕರ್ ಓಂ ಬಿರ್ಲಾ!

ರಾಹುಲ್ ಗಾಂಧಿ ಅವರ ಹಳೆಯ ವಿಡಿಯೋವೊಂದು ವಿವಾದಕ್ಕೆ ಕಾರಣವಾಗಿದೆ. ಸದನದಲ್ಲಿ ಪ್ರಿಯಾಂಕಾ ಗಾಂಧಿ ವಾದ್ರಾ ಅವರ ಕೆನ್ನೆ ಗಿಂಡಿದ್ದಕ್ಕೆ ಓಂ ಬಿರ್ಲಾ ಅವರು ರಾಹುಲ್ ಗಾಂಧಿಗೆ ಶಿಸ್ತಿನ ಪಾಠ ಮಾಡಿದ್ದಾರೆ.

ಪೂರ್ತಿ ಓದಿ

06:48 PM (IST) Mar 26

ಬೇಸಿಗೆಯಲ್ಲಿ ಹಾವು ಕಡಿತ ಹೆಚ್ಚಳ; ಹಾವು ಕಚ್ಚಿದಾಗ ಕೈಗೊಳ್ಳುವ ಮುಂಜಾಗ್ರತೆ ಮಾರ್ಗಸೂಚಿ ಬಿಡುಗಡೆ!

ಬೇಸಿಗೆಯಲ್ಲಿ ಹಾವು ಕಚ್ಚುವ ಸಾಧ್ಯತೆ ಹೆಚ್ಚಿದ್ದು, ಭಾರತ್ ಸೀರಮ್ ಸಂಸ್ಥೆ ಮಾರ್ಗಸೂಚಿ ಬಿಡುಗಡೆ ಮಾಡಿದೆ. ಹಾವು ಕಡಿತದಿಂದ ಆಗುವ ಅಪಾಯಗಳು ಹಾಗೂ ತಕ್ಷಣ ತೆಗೆದುಕೊಳ್ಳಬೇಕಾದ ಕ್ರಮಗಳ ಬಗ್ಗೆ ಮಾಹಿತಿ ನೀಡಲಾಗಿದೆ.

ಪೂರ್ತಿ ಓದಿ

06:42 PM (IST) Mar 26

ಬಿಜೆಪಿಯಿಂದ ಯತ್ನಾಳ್ ಉಚ್ಚಾಟನೆ ಬೆನ್ನಲ್ಲೆ ಬೆಂಬಲಿಗರ ರಾಜೀನಾಮೆ ಪರ್ವ!

BJP expels MLA Basanagouda Patil Yatnal: ಕರ್ನಾಟಕ ಬಿಜೆಪಿ ನಾಯಕರಿಗೆ ಹೈಕಮಾಂಡ್ ಬಿಗ್ ಶಾಕ್ ನೀಡಿದ್ದು, ಬಸನಗೌಡ ಪಾಟೀಲ್ ಯತ್ನಾಳ್ ಅವರನ್ನು ಪಕ್ಷದಿಂದ ಉಚ್ಛಾಟಿಸಿದೆ. ಇದರ ಬೆನ್ನಲ್ಲೇ ವಿಜಯಪುರದಲ್ಲಿ ಬೆಂಬಲಿಗರು ರಾಜೀನಾಮೆ ನೀಡುತ್ತಿದ್ದು, ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಪೂರ್ತಿ ಓದಿ

06:33 PM (IST) Mar 26

ಸಿಎಂ ಯೋಗಿ ವಿಮಾನದಲ್ಲಿ ತಾಂತ್ರಿಕ ದೋಷದಿಂದ ಎದುರಾದ ಆತಂಕ, ಖೇರಿಯಾದಲ್ಲಿ ತುರ್ತು ಭೂಸ್ಪರ್ಶ

ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಪ್ರಯಾಣಿಸುತ್ತಿದ್ದ ವಿಮಾನದಲ್ಲಿ ತಾಂತ್ರಿಕ ದೋಷ ಎದುರಾಗಿದೆ. ಆಗ್ರಾದಿಂದ ಟೇಕ್ ಆಫ್ ಆದ ಸಿಎಂ ಯೋಗಿ ವಿಮಾನ  ತುರ್ತು ಭೂಸ್ಪರ್ಶ ಮಾಡಿದೆ.

ಪೂರ್ತಿ ಓದಿ

06:28 PM (IST) Mar 26

'ಸತ್ಯವಂತರಿಗಿದು ಕಾಲವಲ್ಲ..' ಉಚ್ಛಾಟನೆ ಬೆನ್ನಲ್ಲೇ ಪುರಂದರದಾಸರ ಕೀರ್ತನೆ ಬರೆದು ಕುಟುಕಿದ ಯತ್ನಾಳ್‌!

ಬಿಜೆಪಿಯಿಂದ ಉಚ್ಛಾಟನೆಯಾದ ಬಳಿಕ ಬಸನಗೌಡ ಪಾಟೀಲ್ ಯತ್ನಾಳ್ ಟ್ವೀಟ್ ಮೂಲಕ ಬಿಜೆಪಿ ನಾಯಕರನ್ನು ಕುಟುಕಿದ್ದಾರೆ. ಕುಟುಂಬ ರಾಜಕಾರಣ, ಭ್ರಷ್ಟಾಚಾರದ ಬಗ್ಗೆ ಮಾತನಾಡಿದ್ದಕ್ಕೆ ನನ್ನನ್ನು ಉಚ್ಛಾಟಿಸಿದ್ದಾರೆ ಎಂದು ಹೇಳಿದ್ದಾರೆ.

ಪೂರ್ತಿ ಓದಿ

06:21 PM (IST) Mar 26

ಛೇ..ಛೇ... ಗೋಣಿಚೀಲನ ಕಾಲು ಒರೆಸಲು ಬಳಸ್ತಿದ್ದೀರಾ? ಈ ವಿಡಿಯೋ ನೋಡಿದ್ರೆ ಹೊಟ್ಟೆ ಉರಿದುಕೊಳ್ತೀರಾ!

ಗೋಣಿಚೀಲವನ್ನು ಬಳಸಿ ಬೀಸಾಕುವುದು, ಕಾಲು ಒರೆಸಲು ಬಳಸಿಕೊಳ್ಳುವುದು ಸಾಮಾನ್ಯ. ಆದರೆ ಇಲ್ಲೊಂದು ವೈರಲ್​ ವಿಡಿಯೋ ನೋಡಿದ್ರೆ ನೀವು ಹೊಟ್ಟೆ ಉರಿದುಕೊಳ್ಳುವುದು ಗ್ಯಾರೆಂಟಿ. ಅಂಥದ್ದೇನಿದೆ ನೋಡಿ
 

ಪೂರ್ತಿ ಓದಿ

06:19 PM (IST) Mar 26

ಎಸ್ಸೆಸ್ಸೆಲ್ಸಿ ಹುಡುಗನ ಜಸ್ಟ್ ಪಾಸ್ ಬೇಡಿಕೆ! ದೇವ್ರೇ ನನ್ನ 35 ಪರ್ಸೆಂಟೇಜ್‌ನಲ್ಲಿ ಪಾಸ್ ಮಾಡಪ್ಪಾ ಸಾಕು!

ಉಡುಪಿಯ ದೇವಸ್ಥಾನದ ಹುಂಡಿಯಲ್ಲಿ ವಿದ್ಯಾರ್ಥಿಯೊಬ್ಬ ಪರೀಕ್ಷೆಯಲ್ಲಿ ಜಸ್ಟ್ ಪಾಸ್ ಆದರೆ ಸಾಕು ಎಂದು ಚೀಟಿ ಹಾಕಿದ್ದಾನೆ. ಆತ ತನಗೆ ಬೇಕಾದ ವಿಷಯವಾರು ಅಂಕಗಳನ್ನು ಸಹ ಉಲ್ಲೇಖಿಸಿದ್ದಾನೆ. ಈ ಚೀಟಿ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಪೂರ್ತಿ ಓದಿ

06:12 PM (IST) Mar 26

ಎಲ್ಲಾ ಸ್ವಯಂ ಘೋಷಿತ ಹಿಂದೂ ಹುಲಿಗಳ ಬಗ್ಗೆ ಕನಿಕರ ಮೂಡುತ್ತಿದೆ: ಪ್ರಿಯಾಂಕ್ ಖರ್ಗೆ ವ್ಯಂಗ್ಯ

ರಂಜಾನ್ ಕಿಟ್ ವಿತರಣೆ ವಿಚಾರವಾಗಿ ಬಿಜೆಪಿ ನಾಯಕರನ್ನು ಸಚಿವ ಪ್ರಿಯಾಂಕ್ ಖರ್ಗೆ ಟೀಕಿಸಿದ್ದಾರೆ. ವಕ್ಫ್, ಹಲಾಲ್ ಬಜೆಟ್ ಬಗ್ಗೆ ಹೋರಾಟ ಮಾಡಿದವರು ಈಗ ಮಸೀದಿ ಮುಂದೆ ನಿಂತಿದ್ದಾರೆ ಎಂದು ವ್ಯಂಗ್ಯವಾಡಿದ್ದಾರೆ.

ಪೂರ್ತಿ ಓದಿ

06:05 PM (IST) Mar 26

ಉದ್ಯೋಗ ಖಾತ್ರಿಯಡಿ ವೇತನ ಪಡೆದ ಮೊಹಮ್ಮದ್ ಶಮಿ ತಂಗಿ ಕುಟುಂಬ, ಹೊಸ ತಲೆನೋವು ಶುರು

ಪತ್ನಿ ಜೊತೆಗೆ ಭಾರಿ ವಿವಾದ, ಆರೋಪ ಪ್ರತ್ಯಾರೋಪ ಬಳಿಕ ಇದೀಗ ಮೊಹಮ್ಮದ್ ಶಮಿಗೆ ಹೊಸ ತಲೆನೋವು ಶುರುವಾಗಿದೆ. ನರೇಗ ಸರ್ಕಾರದ ಉದ್ಯೋಗ ಖಾತ್ರಿ ಯೋಜನೆಯಡಿ ಸಾವಿರಾರು ರೂಪಾಯಿ ವೇತನ ಪಡೆದ ಆರೋಪ ಕೇಳಿಬಂದಿದೆ. ಏನಿದು ಪ್ರಕರಣ?
 

ಪೂರ್ತಿ ಓದಿ

05:58 PM (IST) Mar 26

 ಶಿಸ್ತು ಕ್ರಮವನ್ನು ನಾನು ಸಂಭ್ರಮಿಸಲಾರೆ: ಯತ್ನಾಳ್ ಉಚ್ಛಾಟನೆಗೆ ವಿಜಯೇಂದ್ರ ಮೊದಲ ಪ್ರತಿಕ್ರಿಯೆ

ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಉಚ್ಛಾಟನೆಗೆ ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಪ್ರತಿಕ್ರಿಯಿಸಿದ್ದಾರೆ. ಪಕ್ಷದಲ್ಲಿ ಶಿಸ್ತು ಮತ್ತು ತ್ಯಾಗಕ್ಕೆ ಮೊದಲ ಆದ್ಯತೆ ನೀಡಲಾಗುವುದು ಎಂದು ಅವರು ಹೇಳಿದ್ದಾರೆ. ಈ ಬೆಳವಣಿಗೆಯನ್ನು ದುರದೃಷ್ಟಕರವೆಂದು ಅವರು ದುಃಖಿಸಿದ್ದಾರೆ.

ಪೂರ್ತಿ ಓದಿ

05:24 PM (IST) Mar 26

ಮನೆಯವರಿಗೂ ಸಮಾಧಾನ ಆಗ್ಲಿ ಅಂತ ಬೆಳಗ್ಗೆ ಪ್ರೇಯಸಿ ಸಂಜೆ ಮತ್ತೊಬ್ಬಳ ಮದ್ವೆಯಾದ ಯುವಕ

ಇಲ್ಲೊಂದು ಕಡೆ ಯುವಕನೋರ್ವ ಒಂದೇ ದಿನ ಎರಡೆರಡು ಮದ್ವೆಯಾಗಿದ್ದಾನೆ. ಬೆಳಗ್ಗೆ ಪ್ರೇಯಸಿಯನ್ನು ಮದುವೆಯಾದ ಯುವಕ ಸಂಜೆಯ ವೇಳೆಗೆ ಮತ್ತೊಬ್ಬ ಮಹಿಳೆಯನ್ನು ಮದುವೆಯಾಗಿದ್ದಾನೆ. ಉತ್ತರ ಪ್ರದೇಶದ ಗೋರಖ್‌ಪುರದ ಹರ್‌ಪುರ್ ಬುಧಾತ್ ಪ್ರದೇಶದಲ್ಲಿ ಈ ವಿಚಿತ್ರ ಘಟನೆ ನಡೆದಿದೆ. 

ಪೂರ್ತಿ ಓದಿ

05:23 PM (IST) Mar 26

Breaking: ಬಸನಗೌಡ ಪಾಟೀಲ್ ಯತ್ನಾಳ್ ಬಿಜೆಪಿಯಿಂದ ಉಚ್ಛಾಟನೆ; ಶಾಕ ಸ್ಥಾನಕ್ಕೂ ಬರುತ್ತಾ ಕುತ್ತು!

ವಿಜಯಪುರ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅವರನ್ನು ಬಿಜೆಪಿ ಪ್ರಾಥಮಿಕ ಸದಸ್ಯತ್ವದಿಂದ ಉಚ್ಛಾಟನೆ ಮಾಡಿ ಆದೇಶ ಹೊರಡಿಸಲಾಗಿದೆ.

ಪೂರ್ತಿ ಓದಿ

05:11 PM (IST) Mar 26

Relationship: ಗಂಡ ಹೆಂಡತಿ ಬಾಂಧವ್ಯ ಚೆನ್ನಾಗಿರಲು ಈ 7 ಟಿಪ್ಸ್ ಫಾಲೋ ಮಾಡಿ!

ಗಂಡ ಹೆಂಡತಿ ಸಂಬಂಧದಲ್ಲಿ ಜಗಳಗಳು ಸಹಜ. ಆದರೆ ಇಬ್ಬರ ನಡುವೆ ಪ್ರೀತಿ ಇದ್ದರೆ ಜೀವನ ಪೂರ್ತಿ ಖುಷಿಯಾಗಿರಬಹುದು. ಗಂಡ ಹೆಂಡತಿ ಬಾಂಧವ್ಯ ಗಟ್ಟಿಯಾಗಿರಲು ಕೆಲವು ನಿಯಮಗಳನ್ನು ಪಾಲಿಸಬೇಕು. ಅವುಗಳನ್ನು ಇಲ್ಲಿ ತಿಳಿಯೋಣ.

ಪೂರ್ತಿ ಓದಿ

05:08 PM (IST) Mar 26

ಭಾರತದಲ್ಲಿನ್ನು ಅಮೆರಿಕದ ವಿಸ್ಕಿ, ಹರ್ಲೆ ಡೇವಿಡ್ಸನ್ ಬೈಕ್ ಕಡಿಮೆ ಬೆಲೆಗೆ ಲಭ್ಯ

ಬೊರ್ಬನ್ ವಿಸ್ಕಿ, ಕ್ಯಾಲಿಫೋರ್ನಿಯಾ ವೈನ್ ಜೊತೆಗೆ ಹಾರ್ಲೆ ಡೇವಿಡ್ಸನ್ ಬೈಕ್ ಸೇರಿದಂತೆ ಒಂದಷ್ಟು ವಸ್ತುಗಳ ಬೆಲೆ ಭಾರಿ ಇಳಿಕೆಯಾಗಲಿದೆ. ಭಾರತದಲ್ಲಿ ಇನ್ನು ಕಡಿಮೆ ಬೆಲೆ ಮದ್ಯ ಸವಿಯುವವರು ಅಮೆರಿಕದ ಬ್ರ್ಯಾಂಡ್ ಹಾಗೂ ರೈಡ್ ಹೋಗುವವರು ಅಮೆರಿಕನ್ ಬೈಕ್ ಬಳಸುವ ದಿನ ದೂರವಿಲ್ಲ.

ಪೂರ್ತಿ ಓದಿ

05:04 PM (IST) Mar 26

ಕೊನೆಗೂ ಬಯಲಾಯ್ತು ಚಹಲ್-ಧನಶ್ರೀ ಡಿವೋರ್ಸ್ ಸೀಕ್ರೇಟ್; ಇದೇ ಕಾರಣಕ್ಕೆ ಕುಟುಂಬದಲ್ಲಿ ಮೂಡಿತ್ತು ಬಿರುಕು!

ಟೀಂ ಇಂಡಿಯಾ ಆಟಗಾರ ಚಹಲ್ ಹಾಗೂ ಧನಶ್ರೀ ವರ್ಮಾ ಇತ್ತೀಚೆಗಷ್ಟೇ ವಿಚ್ಛೇದನ ಪಡೆದುಕೊಂಡಿದ್ದಾರೆ. ವಾಸಿಸುವ ಸ್ಥಳದ ಬಗ್ಗೆ ಉಂಟಾದ ಭಿನ್ನಾಭಿಪ್ರಾಯವೇ ಇವರ ವಿಚ್ಛೇದನಕ್ಕೆ ಕಾರಣವೆಂದು ಹೇಳಲಾಗುತ್ತಿದೆ.

ಪೂರ್ತಿ ಓದಿ

04:45 PM (IST) Mar 26

ಹಾಸನ ವರ್ತುಲ ರಸ್ತೆ ಯೋಜನೆಗೆ ಮಾಜಿ ಪ್ರಧಾನಿ ದೇವೇಗೌಡರ ಪ್ರಸ್ತಾವನೆ; ₹750 ಕೋಟಿ ಬಿಡುಗಡೆಗೆ ಮನವಿ

ಮಾಜಿ ಪ್ರಧಾನಿ ದೇವೇಗೌಡ ಅವರು ಹಾಸನ ವರ್ತುಲ ರಸ್ತೆ ಯೋಜನೆಗೆ ಅನುಮೋದನೆ ನೀಡುವಂತೆ ಕೇಂದ್ರ ಸಚಿವ ನಿತಿನ್ ಗಡ್ಕರಿ ಅವರಿಗೆ ಮನವಿ ಸಲ್ಲಿಸಿದರು. ಹಾಸನದಲ್ಲಿ ಹೆಚ್ಚುತ್ತಿರುವ ಸಂಚಾರ ದಟ್ಟಣೆಯನ್ನು ಕಡಿಮೆ ಮಾಡಲು ಈ ಯೋಜನೆಯು ಅತ್ಯಗತ್ಯ ಎಂದು ಅವರು ಪ್ರತಿಪಾದಿಸಿದರು.

ಪೂರ್ತಿ ಓದಿ

04:08 PM (IST) Mar 26

ಭಾರತದ ಅತೀ ದೊಡ್ಡ, ಖ್ಯಾತ ತಿಹಾರ್ ಜೈಲು ಸ್ಥಳಾಂತರ, 67 ವರ್ಷ ಇತಿಹಾಸದ ಜೈಲು ಶಿಫ್ಟ್ ಯಾಕೆ?

ಭಾರತದ ಅತೀ ದೊಡ್ಡ ಜೈಲು, ಭಾರಿ ಖ್ಯಾತಿ ಗಳಿಸಿರುವ ತಿಹಾರ್ ಜೈಲು ಸ್ಥಳಾಂತರಗೊಳ್ಳುತ್ತಿದೆ. 1958ರಲ್ಲಿ ಆರಂಭಗೊಂಡ ಈ ಜೈಲು ಇದೀಗ ಸ್ಥಳಾಂತರಕ್ಕೆ ಕಾರಣವೇನು?

ಪೂರ್ತಿ ಓದಿ

04:05 PM (IST) Mar 26

ಟ್ವಿಟರ್ ಹಕ್ಕಿ ಲೋಗೋ ಹರಾಜಿನಲ್ಲಿ 35,000 ಡಾಲರ್‌ಗೆ ಮಾರಾಟ!

ಎಲಾನ್ ಮಸ್ಕ್ ತೆಗೆದುಹಾಕಿದ ಹಳೆಯ ಟ್ವಿಟರ್‌ನ ನೀಲಿ ಹಕ್ಕಿ ಲೋಗೋವು ಹರಾಜಿನಲ್ಲಿ 35,000 ಡಾಲರ್‌ಗೆ ಮಾರಾಟವಾಗಿದೆ. ಆರ್‌ಆರ್ ಆಕ್ಷನ್ ಕಂಪನಿಯು ಈ ಹರಾಜನ್ನು ನಡೆಸಿತು, ಮತ್ತು ಲೋಗೋವನ್ನು 34 ಲಕ್ಷ ರೂಪಾಯಿಗಳಿಗೆ ಮಾರಾಟ ಮಾಡಿದೆ.

ಪೂರ್ತಿ ಓದಿ

04:00 PM (IST) Mar 26

ಬಾತ್​ರೂಂ​ ಕ್ಲೀನ್​ ಮಾಡಲು ಬಂದೋರಿಗೆ ಕನ್ನಡದಲ್ಲಿ ಮಾತಾಡಿ ಎಂದದ್ದೇ ತಪ್ಪಾಗೋಯ್ತು! ಏನಾಯ್ತು ನೋಡಿ...

ಬಾತ್​ರೂಂ​ ಕ್ಲೀನ್​ ಮಾಡಲು ಬಂದೋರಿಗೆ ಕನ್ನಡದಲ್ಲಿ ಮಾತನಾಡಿ ಎಂದದಕ್ಕೆ ದೊಡ್ಡ ಅವಾಂತರವೇ ಸೃಷ್ಟಿಯಾಗಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ. ಆಗಿದ್ದೇನು? 
 

ಪೂರ್ತಿ ಓದಿ

03:51 PM (IST) Mar 26

5 ಮಹತ್ವದ ಬದಲಾವಣೆಯೂ ಮಾಡಿದರೂ ಮರ್ಯಾದಿ ಕಳೆದುಕೊಂಡ ಪಾಕಿಸ್ತಾನ ಕ್ರಿಕೆಟ್ ತಂಡ!

ಐಸಿಸಿ ಚಾಂಪಿಯನ್ಸ್ ಟ್ರೋಫಿ ಸೋಲಿನ ಬಳಿಕ, ನ್ಯೂಜಿಲೆಂಡ್ ವಿರುದ್ಧದ ಟಿ20 ಸರಣಿಯಲ್ಲೂ ಪಾಕಿಸ್ತಾನ ಹೀನಾಯವಾಗಿ ಸೋತಿದೆ. ಕೊನೆಯ ಪಂದ್ಯದಲ್ಲಿ 8 ವಿಕೆಟ್‌ಗಳಿಂದ ಸೋತು 1-4 ಅಂತರದಿಂದ ಸರಣಿ ಕಳೆದುಕೊಂಡಿದೆ.

ಪೂರ್ತಿ ಓದಿ

03:46 PM (IST) Mar 26

ಗೃಹ ಸಚಿವ ಪರಮೇಶ್ವರ್ ಶೀಘ್ರ ಮುಖ್ಯಮಂತ್ರಿ ಆಗ್ತಾರೆ: ಭವಿಷ್ಯ ನುಡಿದ ಮೈಲಾರಲಿಂಗೇಶ್ವರ ಗೊರವಯ್ಯ!

ಗೃಹ ಸಚಿವ ಡಾ.ಜಿ. ಪರಮೇಶ್ವರ ಅವರು ಶೀಘ್ರದಲ್ಲಿಯೇ ಮುಖ್ಯಮಂತ್ರಿ ಆಗಲಿದ್ದಾರೆ ಎಂದು ಮೈಲಾರ ದೇವರ ಗೊರವಯ್ಯ ಭವಿಷ್ಯ ನುಡಿದಿದ್ದಾರೆ. ಸಿದ್ದರಾಮಯ್ಯ ಅವರ ನಂತರ ಪರಮೇಶ್ವರ್ ಸಿಎಂ ಆಗುವ ಸಾಧ್ಯತೆ ಬಗ್ಗೆ ಚರ್ಚೆಗಳು ನಡೆಯುತ್ತಿವೆ.

ಪೂರ್ತಿ ಓದಿ

03:24 PM (IST) Mar 26

ಹಳದಿ ಹಲ್ಲನ್ನು ಬೆಳ್ಳಗಾಗಿಸಿ ಆಕರ್ಷಕ ನಗು ನಿಮ್ಮದಾಗಿಸಲು ಈ ಪುಡಿ ಬಳಸಿ

ಹಲ್ಲುಗಳ ರಕ್ಷಣೆಗಾಗಿ ಮನೆಮದ್ದು: ಹಲ್ಲುಗಳ ಹಳದಿ ಬಣ್ಣವನ್ನು ಹೋಗಲಾಡಿಸಲು ಮತ್ತು ಕುಳಿಗಳನ್ನು ತಪ್ಪಿಸಲು ಈ ಸುಲಭವಾದ ಮನೆಮದ್ದುಗಳನ್ನು ಬಳಸಿ. 

ಪೂರ್ತಿ ಓದಿ

03:04 PM (IST) Mar 26

ಬೊಕ್ಕ ತಲೆಗೆ ಉಚಿತ ಚಿಕಿತ್ಸೆ ಪಡೆಯಲು ಹೋದವರಿಗೆ ಶಾಕ್, 60 ಮಂದಿಗೆ ಕಣ್ಣಿನ ಸಮಸ್ಯೆ

ಬೊಕ್ಕ ತಲೆಗೆ ಉಚಿತ ಚಿಕಿತ್ಸೆ ಕಾರಣ ಸಾವಿವಾರು ಮಂದಿ ಚಿಕಿತ್ಸೆ ಪಡೆಯಲು ಹಾಜರಾಗಿದ್ದಾರೆ. ಆದರೆ ಚಿಕಿತ್ಸೆ ಪಡೆಯುತ್ತಿದ್ದಂತೆ 60ಕ್ಕೂ ಹೆಚ್ಚಿನ ಮಂದಗೆ ಕಣ್ಣಿನ ಸಮಸ್ಯೆ ಎದುರಾಗಿದೆ. ಇನ್‌ಫೆಕ್ಷನ್, ದೃಷ್ಠಿ ದೋಷ ಸೇರಿದಂತೆ ಹಲವು ಕಾರಣಗಳಿಂದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಪೂರ್ತಿ ಓದಿ

02:59 PM (IST) Mar 26

ಚೆನ್ನೈ: ಆರ್‌ಸಿಬಿ Vs ಸಿಎಸ್‌ಕೆ ಮ್ಯಾಚಿಗೆ ಫ್ರೀ ಮೆಟ್ರೋ ಟಿಕೆಟ್! ನಮ್ಮ ಮೆಟ್ರೋ ನಡೆ ಏನಾಗಬಹುದು?

ಚೆನ್ನೈನಲ್ಲಿ ನಡೆಯಲಿರುವ ಆರ್‌ಸಿಬಿ ಮತ್ತು ಸಿಎಸ್‌ಕೆ ಪಂದ್ಯಕ್ಕೆ ಅಭಿಮಾನಿಗಳಿಗೆ ಸಿಎಮ್‌ಆರ್‌ಎಲ್ ಉಚಿತ ಮೆಟ್ರೋ ಪ್ರಯಾಣದ ವ್ಯವಸ್ಥೆ ಮಾಡಿದೆ. ಪಂದ್ಯದ ಟಿಕೆಟ್ ಹೊಂದಿರುವವರು ಈ ಸೌಲಭ್ಯವನ್ನು ಬಳಸಿಕೊಳ್ಳಬಹುದು.

ಪೂರ್ತಿ ಓದಿ

02:04 PM (IST) Mar 26

ಕಳೆದ 10 ವರ್ಷದಲ್ಲಿ ಜಿಡಿಪಿ ಡಬಲ್ IMF ವರದಿ, 3 ತಿಂಗಳಲ್ಲಿ ಜಪಾನ್ ಹಿಂದಿಕ್ಕಿಲಿದೆ ಭಾರತ

ಕಳೆದ 10 ವರ್ಷದಲ್ಲಿ ಭಾರತ ಆರ್ಥಿಕತೆ ಡಬಲ್ ಆಗಿದೆ. ಬರೋಬ್ಬರಿ ಶೇಕಜಾ 105ರಷ್ಟು ಏರಿಕೆ ಕಂಡಿದೆ. IMF ವರದಿ ಬಿಡುಗಡೆ ಮಾಡಿದ್ದು, ಸ್ಫೋಟಕ ಮಾಹಿತಿ ಬಿಚ್ಚಿಟ್ಟಿದೆ. ಇನ್ನು 3 ತಿಂಗಳಲ್ಲಿ ಭಾರತದ ಆರ್ಥಿಕತೆ ಜಪಾನ್ ಹಿಂದಿಕ್ಕಲಿದೆ. ಇಷ್ಟೇ ಅಲ್ಲ 2027ರಲ್ಲಿ 3ನೇ ಸ್ಥಾನಕ್ಕೇರಲಿದೆ. IMF ನೀಡಿದ ವರದಿಯಲ್ಲಿ ಏನಿದೆ?

ಪೂರ್ತಿ ಓದಿ

01:41 PM (IST) Mar 26

ನಿವೇದಿತಾ ಗೌಡ ರೀಲ್ಸ್ ಮಾಡ್ತಾರೆ, ಆದರೆ ಕಾಮೆಂಟ್ಸ್ ನೋಡಲ್ವಂತೆ? ಅಲ್ಲೇ ಇರೋದು ಮ್ಯಾಟರ್..

ನಿವೇದಿತಾ ಗೌಡ ಅವರು ರೀಲ್ಸ್ ಮಾಡಿ ಸೋಷಿಯಲ್ ಮೀಡಿಯಾಗೆ ಅಪ್ಲೋಡ್ ಮಾಡೋದ್ರಿಂದ ಫ್ಯಾನ್ಸ್ ಕಾಮೆಂಟ್ ನೋಡ್ತಾರೆ ಅಂತ ಅದೆಷ್ಟೋ ಜನರು ಅಂದ್ಕೊಂಡಿರ್ತಾರೆ. ಆದರೆ ಅದು ಸುಳ್ಳು.. ಯಾಕೆ ನಿವೇದಿತಾ ಅವರು ಕಾಮೆಂಟ್ ಓದೋದಿಲ್ಲ..? ಗುಟ್ಟು ರಟ್ಟಾಗಿದೆ.. 

ಪೂರ್ತಿ ಓದಿ

More Trending News