ಪಣಜಿ: ಮಹದಾಯಿ ನದಿ ತಿರುವು ಯೋಜನೆಯಿಂದ ಗೋವಾದ ಮೇಲೆ ಯಾವುದೇ ಹೆಚ್ಚಿನ ಪರಿಣಾಮ ಆಗದು. ಆಗುವ ಸಣ್ಣಪುಟ್ಟ ಪರಿಣಾಮಗಳನ್ನು ಇತರೆ ಉಪಕ್ರಮಗಳ ಮೂಲಕ ಬಗೆಹರಿಸಿಕೊಳ್ಳಬಹುದು ಎಂದು ಕೇಂದ್ರ ಸರ್ಕಾರದ ಅಧೀನದ ಸಿಎಸ್‌ಐಆರ್ (ವೈಜ್ಞಾನಿಕ ಮತ್ತು ಕೈಗಾರಿಕಾ ಸಂಶೋಧನಾ ಮಂಡಳಿ ) ಐಒ (ರಾಷ್ಟ್ರೀಯ ಸಮುದ್ರಶಾಸ್ತ್ರ ಸಂಸ್ಥೆ) ಮಹತ್ವದ ವರದಿ ಯೊಂದನ್ನು ಬಿಡುಗಡೆ ಮಾಡಿವೆ. ಈ ವರದಿ ಮಹದಾಯಿ ಯೋಜನೆಯಿಂದ ತನಗೆ ಭಾರೀ ಅನ್ಯಾಯವಾಗಲಿದೆ ಎಂದು ಆರೋಪಿಸಿ ಯೋಜನೆಗೆ ಅಡ್ಡಿಪಡಿಸುತ್ತಿದ್ದ ಗೋವಾಕ್ಕೆ ಭಾರೀ ಮುಖಭಂಗ ಉಂಟುಮಾಡಿದೆ.
ಮಹದಾಯಿ ಯೋಜನೆ ಕುರಿತು ಅಧ್ಯಯನ ನಡೆಸಿರುವ ಕೇಂದ್ರದ ಸಿಎಸ್ ಐಆರ್ ಹಾಗೂ ಸಮುದ್ರಶಾಸ್ತ್ರಸಂಸ್ಥೆ
ಮಹದಾಯಿ ನದಿ ತಿರುವು ಯೋಜನೆ ಯಿಂದ ಗೋವಾದ ಮೇಲೆ ಹೆಚ್ಚಿನ ಪರಿಣಾಮವೇನೂ ಇಲ್ಲ ಎಂದ ವರದಿ
ಕರ್ನಾಟಕದ ಯೋಜನೆಯಿಂದ ಸಣ್ಣ ಪರಿಣಾಮ ಇವೆಯಾದರೂ ಅವನ್ನು ನಿಭಾಯಿಸಬಹುದು: ಅಧ್ಯಯನ
ಅರ್ಥ್ ಸೈನ್ಸಸ್' ನಿಯತಕಾಲಿಕೆ ಯಲ್ಲಿ ವರದಿ ಪ್ರಕಟ. ಭಾರಿ ತೊಂದರೆ ಎಂಬ ಗೋವಾ ಬಣ್ಣ ಬಯಲು
ವರದಿಯ ಬಗ್ಗೆ ಗೋವಾದಲ್ಲಿ ಭಾರಿ ವಿರೋಧ. ಸಮುದ್ರ ಶಾಸ್ತ್ರ ಸಂಸ್ಥೆಯ ಗೋವಾ ಕಚೇರಿ ಎದುರು ಪ್ರತಿಭಟನೆ
ವಿಜ್ಞಾನಿಗಳು ಕಚೇರಿಯಲ್ಲಿ ಕುಳಿತು ವರದಿ ಸಿದ್ಧಪಡಿಸಿದ್ದಾರೆಂದು ಆಕ್ರೋಶ
10:03 PM (IST) May 16
ಬೆಂಗಳೂರಿನಲ್ಲಿ ಚಾರ್ಟರ್ಡ್ ಅಕೌಂಟೆಂಟ್‌ನ ಚಾಲಕ ₹1.51 ಕೋಟಿ ಕದ್ದು ದೇವಸ್ಥಾನದ ಹುಂಡಿಗೆ ಹಣ ದಾನ ಮಾಡಿದ್ದಾನೆ. ಕದ್ದ ಹಣವನ್ನು ದೇವರಿಗೆ ನೀಡಿದ್ದರಿಂದ ಹಿಂತಿರುಗಿಸಲು ಸಾಧ್ಯವಿಲ್ಲ ಎಂದು ದೇವಾಲಯದ ಅಧಿಕಾರಿಗಳು ತಿಳಿಸಿದ್ದಾರೆ.
ಪೂರ್ತಿ ಓದಿ08:41 PM (IST) May 16
ಬೆಂಗಳೂರು-ತುಮಕೂರು ನಮ್ಮ ಮೆಟ್ರೋ ಯೋಜನೆಯ ಕಾರ್ಯಸಾಧ್ಯತಾ ಅಧ್ಯಯನ ವರದಿ ಸಲ್ಲಿಕೆಯಾಗಿದ್ದು, 25 ಎಲಿವೇಟೆಡ್ ನಿಲ್ದಾಣಗಳನ್ನು ಒಳಗೊಂಡ 56.6 ಕಿಮೀ ಮಾರ್ಗದ ಯೋಜನೆಯನ್ನು ರಾಜ್ಯ ಸರ್ಕಾರ ಪರಿಶೀಲಿಸಲಿದೆ. ಯೋಜನೆಗೆ ಅನುಮೋದನೆ ದೊರೆತರೆ, ಬೆಂಗಳೂರನ್ನು ಮತ್ತೊಂದು ಜಿಲ್ಲೆಗೆ ಸಂಪರ್ಕಿಸುವ ಮೊದಲ ಮೆಟ್ರೋ ಸೇವೆಯಾಗಲಿದೆ.
ಪೂರ್ತಿ ಓದಿ07:53 PM (IST) May 16
ಚಿಕ್ಕಬಳ್ಳಾಪುರದಲ್ಲಿ ಹಿಂದೂ ಹುಡುಗ ಮತ್ತು ಮುಸ್ಲಿಂ ಹುಡುಗಿಯ ಅಂತರ್‌ಧರ್ಮೀಯ ವಿವಾಹ ನಡೆದಿದ್ದು, ಕುಟುಂಬದ ವಿರೋಧದ ಹಿನ್ನೆಲೆಯಲ್ಲಿ ನವವಿವಾಹಿತ ಜೋಡಿ ಪೊಲೀಸ್ ಭದ್ರತೆ ಕೋರಿದೆ. ನಾಲ್ಕು ವರ್ಷಗಳ ಪ್ರೀತಿಯ ನಂತರ ದೇವಸ್ಥಾನವೊಂದರಲ್ಲಿ ಸರಳವಾಗಿ ವಿವಾಹ ನೆರವೇರಿದೆ.
ಪೂರ್ತಿ ಓದಿ06:58 PM (IST) May 16
ಸಕಲೇಶಪುರ-ಸುಬ್ರಹ್ಮಣ್ಯ ರೋಡ್ ಮಾರ್ಗದಲ್ಲಿ ರೈಲ್ವೆ ವಿದ್ಯುದ್ದೀಕರಣ ಕಾಮಗಾರಿಯಿಂದಾಗಿ 2025ರ ಜೂನ್ 1 ರಿಂದ ನವೆಂಬರ್ 1 ರವರೆಗೆ ಕೆಲವು ರೈಲುಗಳ ಸಂಚಾರ ರದ್ದು. ಯಶವಂತಪುರ-ಮಂಗಳೂರು ಮತ್ತು ಯಶವಂತಪುರ-ಕಾರವಾರ ಮಾರ್ಗದ ರೈಲುಗಳು ರದ್ದಾಗಿವೆ.
ಪೂರ್ತಿ ಓದಿ06:28 PM (IST) May 16
ಬೆಂಗಳೂರು ನಗರ ಪೊಲೀಸರು ಆಂತರಿಕ ಸಂವಹನ ಮತ್ತು ಕಾರ್ಯಾಚರಣೆಗಳನ್ನು ಸುಧಾರಿಸಲು 'ಬಿಸಿಪಿ ಚಾಟ್' ಎಂಬ ಹೊಸ ಆ್ಯಪ್ ಅನ್ನು ಅಭಿವೃದ್ಧಿಪಡಿಸಿದ್ದಾರೆ. ಈ ಆ್ಯಪ್, ಇನ್ಸ್‌ಪೆಕ್ಟರ್‌ಗಳಿಂದ ಹಿಡಿದು ಆಯುಕ್ತರವರೆಗಿನ ಎಲ್ಲಾ ಅಧಿಕಾರಿಗಳಿಗೆ ಸುರಕ್ಷಿತ ಮತ್ತು ವೇಗದ ಸಂವಹನ ವೇದಿಕೆಯನ್ನು ಒದಗಿಸುತ್ತದೆ.
ಪೂರ್ತಿ ಓದಿ06:14 PM (IST) May 16
ಮಂಗಳೂರಿನಲ್ಲಿ ಸಿಎಂ ಸಿದ್ಧರಾಮಯ್ಯ ಅವರಿಗೆ ಕಪ್ಪು ಬಾವುಟ ಪ್ರದರ್ಶಿಸಿದ ಬಿಜೆಪಿ ಕಾರ್ಯಕರ್ತರನ್ನು ಪೊಲೀಸರು ಬಂಧಿಸಿದ್ದಾರೆ. ಸುಹಾಸ್ ಶೆಟ್ಟಿ ಕೊಲೆ ಪ್ರಕರಣದ ಎನ್‌ಐಎ ತನಿಖೆಗೆ ಆಗ್ರಹಿಸಿ ಈ ಪ್ರತಿಭಟನೆ ನಡೆದಿದೆ. ಇದು ಕಳೆದ 20 ದಿನಗಳಲ್ಲಿ ಸಿಎಂಗೆ ಕಪ್ಪು ಬಾವುಟ ಪ್ರದರ್ಶಿಸಿದ ಎರಡನೇ ಘಟನೆಯಾಗಿದೆ.
ಪೂರ್ತಿ ಓದಿ05:48 PM (IST) May 16
ಕರ್ನಾಟಕ ಸರ್ಕಾರವು ಮುಗ್ಲಿ-ಅಪ್ಸರಕೊಂಡವನ್ನು ರಾಜ್ಯದ ಮೊದಲ ಸಮುದ್ರ ಸಂರಕ್ಷಿತ ವಲಯವಾಗಿ ಘೋಷಿಸಲು ಸಜ್ಜಾಗಿದೆ. ಈ ಯೋಜನೆಯು ಆಲಿವ್-ರಿಡ್ಲಿ ಆಮೆಗಳು ಸೇರಿದಂತೆ ಅಳಿವಿನಂಚಿನಲ್ಲಿರುವ ಜಾತಿಗಳನ್ನು ರಕ್ಷಿಸುವ ಗುರಿಯನ್ನು ಹೊಂದಿದೆ ಮತ್ತು ಭಾರತದ ಏಳನೇ ಸಮುದ್ರ ಅಭಯಾರಣ್ಯವಾಗಲಿದೆ.
ಪೂರ್ತಿ ಓದಿ05:35 PM (IST) May 16
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಅಕ್ಟೋಬರ್‌ಗೆ ಕುರ್ಚಿ ಖಾಲಿ ಮಾಡ್ತಾರೆ. ಮುಂದೆ ಯಾರು ಬರ್ತಾರೋ ನೋಡಬೇಕು ಎಂದು ಆರ್. ಅಶೋಕ್ ಹೇಳಿದರು.
ಪೂರ್ತಿ ಓದಿ01:58 PM (IST) May 16
ಕರ್ನಾಟಕಕ್ಕೆ ಆಲಮಟ್ಟಿ-ಯಾದಗಿರಿ ಮತ್ತು ಚನ್ನಗಿರಿ-ಭದ್ರಾವತಿ ನಡುವೆ ಎರಡು ಹೊಸ ರೈಲು ಮಾರ್ಗಗಳನ್ನು ನಿರ್ಮಿಸಲು ಕೇಂದ್ರ ಸರ್ಕಾರ ಯೋಜಿಸಿದೆ. ಈ ಯೋಜನೆಗಳು ರಾಜ್ಯದ ರೈಲು ಸಂಪರ್ಕವನ್ನು ಹೆಚ್ಚಿಸುವುದರ ಜೊತೆಗೆ ಪ್ರಾದೇಶಿಕ ವ್ಯಾಪಾರ ಮತ್ತು ಆರ್ಥಿಕ ಚಲನಶೀಲತೆಗೆ ಅನುಕೂಲವಾಗಲಿದೆ.
ಪೂರ್ತಿ ಓದಿ12:52 PM (IST) May 16
ಬೆಂಗಳೂರು ಇಸ್ಕಾನ್ ಮತ್ತು ಮುಂಬೈ ಇಸ್ಕಾನ್ ನಡುವಿನ ದೀರ್ಘಕಾಲದ ಕಾನೂನು ಹೋರಾಟದಲ್ಲಿ ಸುಪ್ರೀಂ ಕೋರ್ಟ್ ಬೆಂಗಳೂರು ಇಸ್ಕಾನ್ ಪರ ತೀರ್ಪು ನೀಡಿದೆ. ಈ ತೀರ್ಪಿನ ಮೂಲಕ ಬೆಂಗಳೂರು ಇಸ್ಕಾನ್ ತನ್ನ ಆಡಳಿತ, ಆಸ್ತಿ ಮತ್ತು ಶೈಕ್ಷಣಿಕ ಸೇವೆಗಳ ಮೇಲೆ ಪೂರ್ಣ ಹಕ್ಕು ಹೊಂದಿದೆ ಎಂದು ಖಚಿತಪಡಿಸಲಾಗಿದೆ.
ಪೂರ್ತಿ ಓದಿ12:05 PM (IST) May 16
ಸರ್ಕಾರಿ ಪ್ರಾಥಮಿಕ, ಪ್ರೌಢಶಾಲಾ ಅತಿಥಿ ಶಿಕ್ಷಕರು ಮತ್ತು ಪಿಯು ಕಾಲೇಜುಗಳ ಅತಿಥಿ ಉಪನ್ಯಾಸಕರ ಮಾಸಿಕ ಗೌರವಧನವನ್ನು ₹2000 ಹೆಚ್ಚಿಸಲಾಗಿದೆ. 2025-26ನೇ ಸಾಲಿನಿಂದ ಈ ಹೆಚ್ಚಳವು ಜಾರಿಗೆ ಬರಲಿದ್ದು, ಬಜೆಟ್‌ನಲ್ಲಿ ಘೋಷಿಸಿದಂತೆ ಈ ಆದೇಶ ಹೊರಬಿದ್ದಿದೆ.
ಪೂರ್ತಿ ಓದಿ11:53 AM (IST) May 16
ಭದ್ರಾಪುರದಲ್ಲಿ 14 ವರ್ಷದ ಮಾತು ಬಾರದ ಮತ್ತು ಕಿವಿ ಕೇಳಿಸದ ಹಕ್ಕಿಪಿಕ್ಕಿ ಸಮುದಾಯದ ಬಾಲಕಿ ಖುಷಿ ಅತ್ಯಾ*ಚಾರ ಮತ್ತು ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರತಿಭಟನೆ ನಡೆದಿದ್ದು, ಡಿಸಿಎಂ ಡಿ.ಕೆ. ಶಿವಕುಮಾರ್ ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವ ಭರವಸೆ ನೀಡಿದ್ದಾರೆ.
ಪೂರ್ತಿ ಓದಿ11:38 AM (IST) May 16
ನಟಿ ರುಕ್ಮಿಣಿ ವಿಜಯಕುಮಾರ್ ಅವರ ಕಾರಿನಿಂದ ವಜ್ರದ ಉಂಗುರಗಳು ಸೇರಿ ₹27 ಲಕ್ಷ ಮೌಲ್ಯದ ವಸ್ತುಗಳನ್ನು ಕದ್ದ ಆರೋಪಿಯನ್ನು ಬಂಧಿಸಲಾಗಿದೆ. ಕ್ಯಾಬ್ ಚಾಲಕನಾಗಿದ್ದ ಆರೋಪಿ ಕಾರನ್ನು ಲಾಕ್ ಮಾಡದ್ದನ್ನು ದುರುಪಯೋಗಪಡಿಸಿಕೊಂಡು ಕಳ್ಳತನ ಮಾಡಿದ್ದಾನೆ.
ಪೂರ್ತಿ ಓದಿ11:33 AM (IST) May 16
ಪ್ರಧಾನಿ ಮೋದಿ ವಿರುದ್ಧ ಅವಹೇಳನಕಾರಿ ಪೋಸ್ಟ್ ಹಾಕಿದ ಆರೋಪದ ಮೇಲೆ ಶಕೀರ್ ಹುಸೇನ್ ವಿರುದ್ಧ ಕಾರ್ಗಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು. ವಾಟ್ಸ್‌ಆ್ಯಪ್ ಗುಂಪಿನಲ್ಲಿ ಪೋಸ್ಟ್ ಮಾಡಿದ್ದ ವ್ಯಂಗ್ಯಚಿತ್ರವು ಸಾರ್ವಜನಿಕ ಶಾಂತಿಗೆ ಭಂಗ ತರುವ ಮತ್ತು ಪ್ರಚೋದನಾತ್ಮಕ ಎಂದು ಪೊಲೀಸರು ಪರಿಗಣಿಸಿದ್ದಾರೆ.
ಪೂರ್ತಿ ಓದಿ10:39 AM (IST) May 16
ಇದ್ರಿಷ್ ಪಾಷಾ ಸಾವಿಗೆ ಪ್ರತೀಕಾರವಾಗಿ ಪುನೀತ್ ಕೆರೆಹಳ್ಳಿಗೆ ಕೊಲೆ ಬೆದರಿಕೆ ಹಾಕಿರುವ ಆರೋಪದ ಮೇಲೆ ಅಕ್ರಮ್ ಖಾನ್ ವಿರುದ್ಧ ಎಫ್‌ಐಆರ್ ದಾಖಲು. ಸಾಮಾಜಿಕ ಜಾಲತಾಣ ಹಾಗೂ ವಾಟ್ಸಾಪ್ ಮೂಲಕ ಬೆದರಿಕೆ ಹಾಕಿದ ಆರೋಪ.
ಪೂರ್ತಿ ಓದಿ09:07 AM (IST) May 16
ಬೆಂಗಳೂರಿನಲ್ಲಿ ಸತತ ನಾಲ್ಕನೇ ದಿನವೂ ಭಾರಿ ಮಳೆಯಾಗಿದ್ದು, ನಗರದ ಹಲವೆಡೆ ಜನಜೀವನ ಅಸ್ತವ್ಯಸ್ತವಾಗಿದೆ. ರಸ್ತೆಗಳಲ್ಲಿ ನೀರು ನಿಂತು ವಾಹನ ಸವಾರರು ಪರದಾಡಿದರು. ಹಲವೆಡೆ ಮರದ ರೆಂಬೆ ಕೊಂಬೆಗಳು ಮುರಿದು ಬಿದ್ದಿವೆ.
ಪೂರ್ತಿ ಓದಿ09:05 AM (IST) May 16
ಕರ್ನಾಟಕದಲ್ಲಿ ಮದ್ಯದ ದರಗಳು ಮತ್ತೊಮ್ಮೆ ಏರಿಕೆಯಾಗಿವೆ. ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ಎರಡು ವರ್ಷಗಳಲ್ಲಿ ಇದು ಮೂರನೇ ಬಾರಿ ದರ ಏರಿಕೆಯಾಗಿದೆ. ಒಂದು ಕ್ವಾರ್ಟರ್ ಮೇಲೆ ಸರಾಸರಿ ₹10 ರಿಂದ ₹25 ದರ ಹೆಚ್ಚಳವಾಗಲಿದೆ. ಹೊಸ ದರ ಏರಿಕೆ ಇಂದಿನಿಂದಲೇ ಅನ್ವಯವಾಗಲಿದೆ.
ಪೂರ್ತಿ ಓದಿ08:34 AM (IST) May 16
ಕರ್ನಾಟಕದಲ್ಲಿ ಪೂರ್ವ ಮುಂಗಾರು ಮಳೆಯ ಅಬ್ಬರ ಮುಂದುವರಿದಿದ್ದು, 9ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಭಾರಿ ಮಳೆಯಾಗಿದೆ. ಕಲಬುರಗಿಯಲ್ಲಿ ಸಿಡಿಲಿಗೆ ಇಬ್ಬರು ಬಲಿಯಾಗಿದ್ದು, ಹಲವೆಡೆ ಮರಗಳು ಧರೆಗುರುಳಿವೆ ಮತ್ತು ಮನೆಗಳಿಗೆ ನೀರು ನುಗ್ಗಿದೆ.
ಪೂರ್ತಿ ಓದಿ07:23 AM (IST) May 16
ಕನಕಪುರದಲ್ಲಿ ಡಿ.ಕೆ.ಶಿವಕುಮಾರ್ ಅವರ 63ನೇ ಹುಟ್ಟುಹಬ್ಬವನ್ನು ಕಾಂಗ್ರೆಸ್ ಕಾರ್ಯಕರ್ತರು ಅದ್ದೂರಿಯಾಗಿ ಆಚರಿಸಿದರು. ದೇವಾಲಯಗಳಲ್ಲಿ ವಿಶೇಷ ಪೂಜೆ ಸಲ್ಲಿಸಿ, ಅವರು ಮುಂದಿನ ಮುಖ್ಯಮಂತ್ರಿಯಾಗಲಿ ಎಂದು ಪ್ರಾರ್ಥಿಸಿದರು. ಸಾರ್ವಜನಿಕರಿಗೆ ಅನ್ನದಾನವನ್ನೂ ಏರ್ಪಡಿಸಲಾಗಿತ್ತು.
ಪೂರ್ತಿ ಓದಿ07:02 AM (IST) May 16
ಮಾಜಿ ಸಚಿವ ಜನಾರ್ದನ ರೆಡ್ಡಿ ಅವರ ಅಕ್ರಮ ಗಣಿಗಾರಿಕೆಯಿಂದ ಸಂಗ್ರಹವಾದ ಆಸ್ತಿಯನ್ನು ಮುಟ್ಟುಗೋಲು ಹಾಕಿಕೊಂಡು ಬಳ್ಳಾರಿ ಮತ್ತು ವಿಜಯನಗರ ಜಿಲ್ಲೆಗಳ ಅಭಿವೃದ್ಧಿಗೆ ಬಳಸಬೇಕೆಂದು ಮಾಜಿ ಸಂಸದ ವಿ.ಎಸ್. ಉಗ್ರಪ್ಪ ಆಗ್ರಹಿಸಿದ್ದಾರೆ. ನ್ಯಾಯಾಲಯದ ತೀರ್ಪಿನಂತೆ ರೆಡ್ಡಿ ₹884 ಕೋಟಿ ಮೌಲ್ಯದ ಅದಿರನ್ನು ಕದ್ದಿರುವುದನ್ನು ಉಲ್ಲೇಖಿಸಿ, ಈ ಆಸ್ತಿಯನ್ನು ಜಿಲ್ಲೆಯ ಅಭಿವೃದ್ಧಿಗೆ ಬಳಸಬೇಕೆಂದು ಅವರು ಒತ್ತಾಯಿಸಿದರು.
ಪೂರ್ತಿ ಓದಿ