ರಾಜ್ಯದ ಸರ್ಕಾರಿ ನೌಕರರ 2025-26ನೇ ಸಾಲಿನ ಸಾರ್ವತ್ರಿಕ ವರ್ಗಾವಣೆಗೆ ರಾಜ್ಯ ಸರ್ಕಾರ ಮಾರ್ಗಸೂಚಿ ಪ್ರಕಟಿಸಿದ್ದು, ಇಲಾಖೆಗಳಲ್ಲಿ ವೃಂದ ಬಲದ ಶೇ.6ರಷ್ಟು ಮೀರದಂತೆ ಪಾರದರ್ಶಕವಾಗಿ ವರ್ಗಾವಣೆ ಪ್ರಕ್ರಿಯೆ ನಡೆಸುವಂತೆ ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆ ತಿಳಿಸಿದೆ. ವರ್ಗಾವಣೆ ವೇಳೆ ಎ ಮತ್ತು ಬಿ ಗ್ರೂಪ್ ಅಧಿಕಾರಿಗಳಿಗೆ 2 ವರ್ಷ, ಸಿ ವೃಂದದ ಸಿಬ್ಬಂದಿಗೆ 4 ವರ್ಷ, ಡಿ ವೃಂದದ ನೌಕರರು 1 ವರ್ಷ ಒಂದು ಸ್ಥಳದಲ್ಲಿ ಸೇವೆ ಸಲ್ಲಿಸಿದರೆ ಮಾತ್ರ ವರ್ಗಾವಣೆಗೆ ಪರಿಗಣಿಸಬಹುದು.
ಏನಿದು ನಿಯಮ?
ಮೇ 15ರಿಂದ ಜೂ.1 4ರವರೆಗೆ ವರ್ಗಕ್ಕೆ ಅವಕಾಶ. ವೃಂದ ಬಲದ ಶೇ.8ರಷ್ಟು ಮೀರದಂತೆ ವರ್ಗಾವಣೆ ಮಾಡಲು ರಾಜ್ಯ ಸರ್ಕಾರದಿಂದ ಸೂಚನೆ
ಎಬಿ ಅಧಿಕಾರಿಗಳು 2 ವರ್ಷ ಕಾಲ ಸೇವೆ ಸಲ್ಲಿಸಿದರೆ ಮಾತ್ರ ವರ್ಗಾವಣೆಗೆ ಪರಿಗಣನೆ
'ಸಿ' ವೃಂದ ಸಿಬ್ಬಂದಿ 4 ವರ್ಷ, 'ಡಿ' ಸಿಬ್ಬಂದಿ 7 ವರ್ಷ ಅವಧಿ ಒಂದೇ ಸ್ಥಳದಲ್ಲಿ ಸೇವೆ ಸಲ್ಲಿಸಿರಬೇಕು
ಈ ಅವಧಿ ಮೀರಿದರೆ ಮಾತ್ರ ವರ್ಗಾವಣೆ. ಆದರೆ ಈ ಷರತ್ತಿನಿಂದ ಅಂಗವಿಕಲರಿಗೆ ವಿನಾಯ್ತಿ ಇದೆ
ಗ್ರೂಪ್-ಎ, ಗ್ರೂಪ್-ಬಿವೃಂದದ ಅಧಿಕಾರಿಗಳಿಗೆ ವರ್ಗಾವಣೆ ಅಧಿಕಾರ ಇಲಾಖಾ ಸಚಿವರಿಗೆ
09:23 PM (IST) May 13
ಹುಬ್ಬಳ್ಳಿಯಲ್ಲಿ ಶಾಲಾ ಮಕ್ಕಳ ನಡುವಿನ ಜಗಳ ಒಂದು ಭೀಕರ ಘಟನೆಯಾಗಿ ಪರಿಣಮಿಸಿದೆ. 6 ನೇ ತರಗತಿಯ ವಿದ್ಯಾರ್ಥಿಯೊಬ್ಬ 8 ನೇ ತರಗತಿಯ ವಿದ್ಯಾರ್ಥಿಯನ್ನು ಚಾಕುವಿನಿಂದ ಇರಿದು ಹತ್ಯೆ ಮಾಡಿದ್ದಾನೆ. ಈ ಘಟನೆ ಮಕ್ಕಳಲ್ಲಿ ಹೆಚ್ಚುತ್ತಿರುವ ಹಿಂಸಾಚಾರದ ಬಗ್ಗೆ ಆತಂಕ ಮೂಡಿಸಿದೆ.
ಪೂರ್ತಿ ಓದಿ08:00 PM (IST) May 13
ಧಾರವಾಡದಲ್ಲಿ ಐದು ದಿನಗಳ ಮಾವು ಪ್ರದರ್ಶನ ಮತ್ತು ಮಾರಾಟ ಮೇಳಕ್ಕೆ ಜಿಲ್ಲಾಧಿಕಾರಿ ದಿವ್ಯ ಪ್ರಭು ಚಾಲನೆ ನೀಡಿದರು. ಸುಮಾರು 30 ಬೆಳೆಗಾರರು ಭಾಗವಹಿಸಿದ್ದು, ವಿವಿಧ ತಳಿಗಳ ಮಾವುಗಳು ಮಾರಾಟಕ್ಕೆ ಲಭ್ಯವಿವೆ. ಹವಾಮಾನ ವೈಪರೀತ್ಯದಿಂದಾಗಿ ಈ ವರ್ಷ ಇಳುವರಿ ಕುಂಠಿತವಾಗಿದೆ.
ಪೂರ್ತಿ ಓದಿ07:47 PM (IST) May 13
ಬೆಂಗಳೂರಿನಲ್ಲಿ ಮನೆಕೆಲಸದವರು, ನೌಕರರು ಮನೆ ಮಾಲೀಕರ ನಂಬಿಕೆಗೆ ದುರುಪಯೋಗಪಡಿಸಿಕೊಂಡು ಕಳ್ಳತನ ಮಾಡುತ್ತಿರುವ ಘಟನೆಗಳು ಹೆಚ್ಚುತ್ತಿವೆ. ಲಕ್ಷಾಂತರ ಮೌಲ್ಯದ ಚಿನ್ನಾಭರಣ ಮತ್ತು ಹಣವನ್ನು ಕದ್ದ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಇದೀಗ ಬಂಧಿತವಾಗಿರುವ 3 ಮಹಿಳೆಯರು ಇಬ್ರು ಪುರುಷರದ್ದು ಒಬ್ಬೊಬ್ಬರದ್ದೂ ಒಂದೊಂದು ನಂಬಿಕೆ ದ್ರೋಹದ ಕಥೆಯಿದೆ.
ಪೂರ್ತಿ ಓದಿ07:40 PM (IST) May 13
ಚಾಮರಾಜನಗರದಲ್ಲಿ ಮನೆ ಮಾಲೀಕರ ಸಾಲದಿಂದಾಗಿ ಎರಡು ಕುಟುಂಬಗಳು ಬೀದಿಗೆ ಬಿದ್ದಿವೆ. ಮನೆಮಾಲೀಕರು ಸಾಲ ತೀರಿಸದ ಕಾರಣ ಬ್ಯಾಂಕ್ ಮನೆಯನ್ನು ಜಪ್ತಿ ಮಾಡಿದೆ, ಇದರಿಂದಾಗಿ ಬಾಡಿಗೆದಾರರ ಬದುಕು ಅತಂತ್ರವಾಗಿದೆ. ಮನೆಯಲ್ಲಿದ್ದ ವಸ್ತುಗಳು ಲಾಕ್ ಆಗಿದ್ದು, ಮಕ್ಕಳ ಶಿಕ್ಷಣಕ್ಕೂ ತೊಂದರೆಯಾಗಿದೆ.
ಪೂರ್ತಿ ಓದಿ04:13 PM (IST) May 13
ಜೋಗ ಜಲಪಾತವನ್ನು ಸರ್ವ ಋತು ಪ್ರವಾಸಿ ತಾಣವನ್ನಾಗಿ ಅಭಿವೃದ್ಧಿಪಡಿಸಲು ಯೋಗ ಅಭಿವೃದ್ಧಿ ಪ್ರಾಧಿಕಾರ ಮುಂದಾಗಿದೆ. ಲಿಂಗನಮಕ್ಕಿ ಜಲಾಶಯದ ಕೆಳಭಾಗದಲ್ಲಿ ಕೆಆರ್‌ಎಸ್ ಮಾದರಿಯ ಉದ್ಯಾನವನ್ನು ನಿರ್ಮಿಸುವ ಚಿಂತನೆಯೂ ಇದೆ. ಹಲವು ಅಭಿವೃದ್ಧಿ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲಾಗಿದ್ದು, ಮೂರು ತಿಂಗಳಲ್ಲಿ ಪೂರ್ಣಗೊಳಿಸಿ ಲೋಕಾರ್ಪಣೆ ಮಾಡಲಾಗುವುದು.
ಪೂರ್ತಿ ಓದಿ03:09 PM (IST) May 13
ಕನ್ನಡ ಚಿತ್ರರಂಗದಲ್ಲಿ ಸಂಗೀತ ನಿರ್ದೇಶಕರಾಗಿ, ಸರಿಗಮಪ ತೀರ್ಪುಗಾರರಾಗಿ, ಈಗ ನಿರ್ದೇಶಕರಾಗಿ ಹೊಸ ಹೆಜ್ಜೆ ಇಟ್ಟಿರುವ ಅರ್ಜುನ್ ಜನ್ಯ ಅವರ ಸಾಧನೆಯ ಹಾದಿ. ಶಿವರಾಜ್ ಕುಮಾರ್ ಅವರೊಂದಿಗೆ 45ನೇ ಸಿನಿಮಾ ಮಾಡುತ್ತಿರುವ ಅವರು, ತಮ್ಮ ಜನ್ಮದಿನವನ್ನು ಶಿವಣ್ಣನ ಮನೆಯಲ್ಲಿ ಆಚರಿಸಿಕೊಂಡರು.
ಪೂರ್ತಿ ಓದಿ03:03 PM (IST) May 13
CBSE 10ನೇ ತರಗತಿ ಫಲಿತಾಂಶ ಇಂದು ಪ್ರಕಟವಾಗಿದ್ದು, ಒಟ್ಟಾರೆ 93.66% ಉತ್ತೀರ್ಣತೆ ದಾಖಲಾಗಿದೆ. ವಿದ್ಯಾರ್ಥಿಗಳು ಅಧಿಕೃತ ವೆಬ್‌ಸೈಟ್‌ಗಳಲ್ಲಿ ಫಲಿತಾಂಶವನ್ನು ಪರಿಶೀಲಿಸಬಹುದು.
ಪೂರ್ತಿ ಓದಿ02:17 PM (IST) May 13
ಕಲಬುರಗಿ ಜಿಮ್ಸ್ ಆಸ್ಪತ್ರೆಯಲ್ಲಿ ಲಿಫ್ಟ್ ತಾಂತ್ರಿಕ ದೋಷದಿಂದ 8 ಸಿಬ್ಬಂದಿ ಸಿಲುಕಿ ಒಂದು ಗಂಟೆಗೂ ಹೆಚ್ಚು ಕಾಲ ಆತಂಕ ಅನುಭವಿಸಿದ್ದಾರೆ. ಮೂರನೇ ಮಹಡಿಯಲ್ಲಿ ಸ್ಥಗಿತಗೊಂಡ ಲಿಫ್ಟ್‌ನಿಂದ ಸಿಬ್ಬಂದಿಯನ್ನು ರಕ್ಷಿಸಲು ಗೋಡೆ ಒಡೆಯಬೇಕಾಯಿತು.
ಪೂರ್ತಿ ಓದಿ01:18 PM (IST) May 13
ಬೆಂಗಳೂರಿನಲ್ಲಿ 10 ವರ್ಷಗಳಿಂದ ಚಾಲಕನಾಗಿದ್ದ ವ್ಯಕ್ತಿಯೊಬ್ಬ ತನ್ನ ಮಾಲೀಕರಿಂದ 1.51 ಕೋಟಿ ರೂ.ಗಳನ್ನು ಕದ್ದ ಘಟನೆ ನಡೆದಿದೆ. ವೈಯಾಲಿಕಾವಲ್ ಪೊಲೀಸರು ಆರೋಪಿಯನ್ನು ಬಂಧಿಸಿ ಹಣವನ್ನು ವಶಪಡಿಸಿಕೊಂಡಿದ್ದಾರೆ. ಇದೇ ವೇಳೆ, ಕೊಡಿಗೆಹಳ್ಳಿಯಲ್ಲಿ ವಿದೇಶಿ ಪ್ರಜೆಯೊಬ್ಬರಿಂದ ದರೋಡೆ ಮಾಡಿದ ಇಬ್ಬರನ್ನು ಬಂಧಿಸಲಾಗಿದೆ.
ಪೂರ್ತಿ ಓದಿ12:30 PM (IST) May 13
ಕುಕ್ಕೆ ಸುಬ್ರಹ್ಮಣ್ಯ ದೇವಾಲಯದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷರಾಗಿ ಹರೀಶ್ ಇಂಜಾಡಿ ಆಯ್ಕೆಯು ವಿವಾದಕ್ಕೆ ಕಾರಣವಾಗಿದೆ. ಅವರ ಮೇಲಿರುವ ಅಪರಾಧ ಆರೋಪಗಳು ಮತ್ತು ರಾಜಕೀಯ ಹಿನ್ನೆಲೆ ಈ ವಿವಾದಕ್ಕೆ ಮತ್ತಷ್ಟು ಗಮನ ಸೆಳೆದಿದೆ. ಸ್ಥಳೀಯರು ಮತ್ತು ವಿಪಕ್ಷಗಳು ಈ ನೇಮಕಾತಿಯನ್ನು ವಿರೋಧಿಸುತ್ತಿದ್ದಾರೆ.
ಪೂರ್ತಿ ಓದಿ08:45 AM (IST) May 13
ಚೌಳಹಿರಿಯೂರು ಸಮೀಪದ ತಮ್ಮಿಹಳ್ಳಿಯಲ್ಲಿ ಹಸುವಿನ ಕೆಚ್ಚಲು ಕತ್ತರಿಸಿರುವ ಘಟನೆ ಬೆಳಕಿಗೆ ಬಂದಿದೆ. ಶೇಖರಪ್ಪ ಎಂಬುವವರ ಹಸುವಿನ ಕೆಚ್ಚಲು ಕಿಡಿಗೇಡಿಗಳು ಕತ್ತರಿಸಿದ್ದಾರೆ. ರೈತರು ಯಗಟಿ ಠಾಣೆಗೆ ದೂರು ನೀಡಿದ್ದಾರೆ.
ಪೂರ್ತಿ ಓದಿ08:09 AM (IST) May 13
ಬೆಂಗಳೂರಿನಲ್ಲಿ ಸಮರ್ಪಕ ಕುಡಿಯುವ ನೀರು ಪೂರೈಕೆಗಾಗಿ ಸಂಚಾರಿ ಕಾವೇರಿ ಮತ್ತು ಸರಳ ಕಾವೇರಿ ಯೋಜನೆ ಜಾರಿಯಲ್ಲಿದೆ. ಪುಲಕೇಶಿನಗರದಲ್ಲಿ 2.50 ಲಕ್ಷ ಜನರಿಗೆ ನೀರು ಪೂರೈಸಲು ಹೊಸ ಜಲಾಗಾರ ನಿರ್ಮಾಣಕ್ಕೆ ಚಾಲನೆ ನೀಡಲಾಗಿದೆ.
ಪೂರ್ತಿ ಓದಿ07:58 AM (IST) May 13
ನೆಲಮಂಗಲದ ಆಯಿಲ್ ಗೋದಾಮಿನಲ್ಲಿ ಭೀಕರ ಬೆಂಕಿ ಅವಘಡ ಸಂಭವಿಸಿದ್ದು, ಸುಮಾರು 30 ಕೋಟಿ ರೂ. ಮೌಲ್ಯದ ಆಯಿಲ್ ಭಸ್ಮವಾಗಿದೆ. ಅಗ್ನಿಶಾಮಕ ದಳದವರು ಬೆಂಕಿ ನಂದಿಸುವ ಕಾರ್ಯದಲ್ಲಿ ನಿರತರಾಗಿದ್ದಾರೆ.
07:36 AM (IST) May 13
ಸೇನಾ ಕಾರ್ಯಾಚರಣೆಯ ಯಶಸ್ಸು ಭಾರತೀಯ ಸೇನೆಗೆ ಮಾತ್ರ ಸಲ್ಲಬೇಕು. ಯಾವ ಪಕ್ಷವೂ ಅದರಲ್ಲಿ ಹಕ್ಕು ಪ್ರತಿಪಾದನೆ ಮಾಡಬಾರದು ಎಂದು ಸಿದ್ದರಾಮಯ್ಯ ಹೇಳಿದ್ದಾರೆ.
ಪೂರ್ತಿ ಓದಿ