LIVE NOW
Published : Feb 10, 2026, 06:59 AM ISTUpdated : Feb 10, 2026, 10:24 PM IST

Karnataka News Live: ಆಗುಂಬೆ ಘಾಟ್ ಭೀಕರ ತಿರುವುಗಳಿಗೆ ಮುಕ್ತಿ - ಪಶ್ಚಿಮ ಘಟ್ಟದ ಸೌಂದರ್ಯ ಹಾಳುಗೆಡವದೇ ಸುರಂಗ ನಿರ್ಮಾಣಕ್ಕೆ ಕೇಂದ್ರ ಸಜ್ಜು!

ಸಾರಾಂಶ

ಬೆಳಗಾವಿ: ಸ್ಥಳೀಯ ಸಂಸ್ಥೆಗಳ ಚುನಾವಣೆಗಳಿಗೆ ಬ್ಯಾಲೇಟ್‌ ಪೇಪರ್‌ ಬಳಸಲು ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ತೆಗೆದುಕೊಂಡ ನಿರ್ಧಾರ ಹಾಸ್ಯಾಸ್ಪದವಾಗಿದೆ ಎಂದು ಸಂಸದ ಜಗದೀಶ್ ಶೆಟ್ಟರ್‌ ಲೇವಡಿ ಮಾಡಿದ್ದಾರೆ. ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿ, ರಾಜ್ಯದ ಮತದಾರರು ಇವಿಎಂಗಳ ಮೂಲಕವೇ 2023ರ ವಿಧಾನಸಭಾ ಚುನಾವಣೆ ಹಾಗೂ 2024ರ ಉಪಚುನಾವಣೆಗಳಲ್ಲಿ ಮತಚಲಾಯಿಸಿದರು. ಆಗ ಫಲಿತಾಂಶಗಳು ಕಾಂಗ್ರೆಸ್ಸಿಗರಿಗೆ ಅನುಕೂಲಕರವಾಗಿದ್ದಾಗ ಇವಿಎಂ ಯಂತ್ರಗಳನ್ನು ಪ್ರಶ್ನಾತೀತವಾಗಿ ಸ್ವೀಕರಿಸಿದ್ದರು. ಆದರೆ, ಏಕಾಏಕಿ ಸ್ಥಳೀಯ ಸಂಸ್ಥೆಗಳ ಚುನಾವಣೆಗಳಲ್ಲಿ ಇವಿಎಂಗಳು ಇದ್ದಕ್ಕಿದ್ದಂತೆ ಹೇಗೆ ವಿಶ್ವಾಸಾರ್ಹವಲ್ಲ ಎನಿಸಿದವು? ಎಂದು ಪ್ರಶ್ನಿಸಿದರು.

ಸುಪ್ರೀಂ ಕೋರ್ಟ್ ಪದೇ ಪದೇ ಇವಿಎಂಗಳ ಭದ್ರತೆ ಮತ್ತು ವಿಶ್ವಾಸಾರ್ಹತೆಯನ್ನು ಎತ್ತಿಹಿಡಿದಿದೆ. ಮತಗಟ್ಟೆ ವಶಪಡಿಸಿಕೊಳ್ಳುವಿಕೆ, ಅಮಾನ್ಯ ಮತಗಳು, ವಿಳಂಬಿತ ಎಣಿಕೆ ಮತ್ತು ಕುಶಲತೆಯಿಂದ ಕೂಡಿದ ಯುಗದಿಂದ ದೂರ ಸರಿಯುವುದು ಭಾರತದ ಉದ್ದೇಶವಾಗಿತ್ತು. ಸಂಪೂರ್ಣ ಜಗತ್ತು ಅಭಿವೃದ್ಧಿಯನ್ನು ಒಪ್ಪಿಕೊಂಡರೆ ಕಾಂಗ್ರೆಸ್ ಮಾತ್ರ ದಿನದಿಂದ ದಿನಕ್ಕೆ ಹಿಂದೆ ಹೋಗುತ್ತಿದೆ ಎಂದು ದೂರಿದರು.

10:24 PM (IST) Feb 10

ಆಗುಂಬೆ ಘಾಟ್ ಭೀಕರ ತಿರುವುಗಳಿಗೆ ಮುಕ್ತಿ - ಪಶ್ಚಿಮ ಘಟ್ಟದ ಸೌಂದರ್ಯ ಹಾಳುಗೆಡವದೇ ಸುರಂಗ ನಿರ್ಮಾಣಕ್ಕೆ ಕೇಂದ್ರ ಸಜ್ಜು!

ಮಲೆನಾಡು ಮತ್ತು ಕರಾವಳಿ ಸಂಪರ್ಕಿಸುವ ಆಗುಂಬೆ ಘಾಟ್ ರಸ್ತೆಯನ್ನು ಮೇಲ್ದರ್ಜೆಗೇರಿಸಲು ಕೇಂದ್ರ ಸರ್ಕಾರ ಮುಂದಾಗಿದೆ. ಸಂಸದ ಬಿ.ವೈ. ರಾಘವೇಂದ್ರ ಅವರ ಪ್ರಯತ್ನದ ಫಲವಾಗಿ, ರಸ್ತೆ ಅಭಿವೃದ್ಧಿ ಹಾಗೂ ಸುರಂಗ ಮಾರ್ಗದ ಕಾರ್ಯಸಾಧ್ಯತಾ ಅಧ್ಯಯನಕ್ಕೆ ಚಾಲನೆ ನೀಡಲಾಗಿದ್ದು, 6 ತಿಂಗಳಲ್ಲಿ DPR ಸಿದ್ಧವಾಗಲಿದೆ.

Read Full Story

10:05 PM (IST) Feb 10

2ನೇ ಮಗುವಿನ ನಿರೀಕ್ಷೆಯಲ್ಲಿ 'ಜೋಶ್‌' ಬೆಡಗಿ ಪೂರ್ಣಾ; ವೈರಲ್ ಆಯ್ತು ನಟಿಯ ಕ್ಯೂಟ್ ಬೇಬಿ ಬಂಪ್ ಫೋಟೋಸ್!

'ಜೋಶ್' ಖ್ಯಾತಿಯ ನಟಿ ಪೂರ್ಣ ಅಲಿಯಾಸ್ ಶಮ್ನಾ ಖಾಸಿಮ್ ಎರಡನೇ ಮಗುವಿನ ನಿರೀಕ್ಷೆಯಲ್ಲಿದ್ದಾರೆ. ಇತ್ತೀಚೆಗೆ ತಮ್ಮ ಪತಿ ಶಾನಿದ್ ಆಸಿಫ್ ಮತ್ತು ಮಗನೊಂದಿಗೆ ಮೆಟರ್ನಿಟಿ ಫೋಟೋಶೂಟ್ ಮಾಡಿಸಿದ್ದಾರೆ.

Read Full Story

09:38 PM (IST) Feb 10

Bengaluru power cut ಬೆಂಗಳೂರಿನ ಹಲವೆಡೆ ಫೆ.11ರಂದು ಕತ್ತಲು ಭಾಗ್ಯ, ನಿಮ್ಮ ಏರಿಯಾ ಇದೆಯಾ ಚೆಕ್ ಮಾಡಿಕೊಳ್ಳಿ

  ಫೆಬ್ರವರಿ 11 ರಂದು ಬೆಂಗಳೂರಿನ ವಿವಿಧ ಪ್ರದೇಶಗಳಲ್ಲಿ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯ ಉಂಟಾಗಲಿದೆ. ಕೋರಮಂಗಲ, ಎಲೆಕ್ಟ್ರಾನಿಕ್ಸ್ ಸಿಟಿ, ಬೊಮ್ಮನಹಳ್ಳಿ ಸೇರಿದಂತೆ ಹಲವು ಕಡೆಗಳಲ್ಲಿ ಬೆಳಿಗ್ಗೆ 10 ರಿಂದ ಸಂಜೆ 5ರವರೆಗೆ ವಿದ್ಯುತ್ ಸರಬರಾಜು ಸ್ಥಗಿತಗೊಳ್ಳಲಿದೆ.

Read Full Story

09:27 PM (IST) Feb 10

ಅಂಕೋಲಾದಲ್ಲಿ 12ನೇ ಶತಮಾನದ ಅಪರೂಪದ ವೀರಗಲ್ಲು ಪತ್ತೆ, ರತಿಕ್ರೀಡೆಯಲ್ಲಿರುವ ದಂಪತಿ ಸಹಿತ ವಿವಿಧ ಚಿತ್ರ!

ಅಂಕೋಲಾ ತಾಲೂಕಿನ ಸಂದ್ಕಣಿ ಗ್ರಾಮದಲ್ಲಿ 12ನೇ ಶತಮಾನದ ನಾಗವರ್ಮರಸನ ಕಾಲದ ಅಪರೂಪದ ವೀರಗಲ್ಲೊಂದು ಪತ್ತೆಯಾಗಿದೆ. ಏಳು ಪಟ್ಟಿಕೆಗಳ ಈ ಶಿಲ್ಪದಲ್ಲಿ ವಾನರರು ಶಿವಲಿಂಗಕ್ಕೆ ಅಭಿಷೇಕ ಮಾಡುತ್ತಿರುವ ವಿಶಿಷ್ಟ ದೃಶ್ಯವಿದ್ದು, ಶಾಸನರಹಿತವಾಗಿದ್ದರೂ ಇದು ಜಿಲ್ಲೆಯ ಇತಿಹಾಸಕ್ಕೆ ಮಹತ್ವದ ದಾಖಲೆಯಾಗಿದೆ.
Read Full Story

09:25 PM (IST) Feb 10

ನಾನು ಠಾಕೂರ್ ನನಗೆ ಆ ಬಗ್ಗೆ ಗರ್ವ ಇದೆ - ವಿವಾದದ ಬಳಿಕ ತನ್ನ ಹೇಳಿಕೆಗೆ ಸ್ಪಷ್ಟನೆ ನೀಡಿದ HDFC ಉದ್ಯೋಗಿ

ಗ್ರಾಹಕರಿಗೆ ತಮ್ಮ ಜಾತಿಯ ದೌಲತ್ತಿನಿಂದ ಧಮ್ಕಿ ಹಾಕಿದ್ದಾರೆ ಎನ್ನಲಾದ ಹೆಚ್‌ಡಿಎಫ್‌ಸಿ ಉದ್ಯೋಗಿ ಆಸ್ತಾ ಸಿಂಗ್ ಅವರ ವೀಡಿಯೋ ವೈರಲ್ ಆಗಿತ್ತು. ಈ ಆರೋಪಕ್ಕೆ ಸ್ಪಷ್ಟನೆ ನೀಡಿರುವ ಅವರು, ಆ ವೀಡಿಯೋದಲ್ಲಿರುವುದು ಗ್ರಾಹಕರಲ್ಲ, ಬದಲಿಗೆ ಸಹೋದ್ಯೋಗಿ ಹಾಗೂ ಅದು ವೈಯಕ್ತಿಕ ಜಗಳವಾಗಿತ್ತು ಎಂದು ಹೇಳಿದ್ದಾರೆ.

Read Full Story

09:03 PM (IST) Feb 10

ಪ್ರಯಾಣಿಕರ ಗಮನಕ್ಕೆ, ಫೆಬ್ರವರಿ 11 ಮತ್ತು 12 ರಂದು ಹುಬ್ಬಳ್ಳಿ-ಉಣಕಲ್ ರೈಲು ಸಂಚಾರದಲ್ಲಿ ವ್ಯತ್ಯಯ

ಹುಬ್ಬಳ್ಳಿ-ಉಣಕಲ್ ನಡುವಿನ ಎಂಜಿನಿಯರಿಂಗ್ ಕಾಮಗಾರಿಯಿಂದಾಗಿ ಕೆಲವು ರೈಲುಗಳ ಸಂಚಾರದಲ್ಲಿ ಬದಲಾವಣೆ ಮಾಡಲಾಗಿದೆ. ಇದೇ ವೇಳೆ, ಕೇಂದ್ರ ಸಚಿವ ವಿ. ಸೋಮಣ್ಣ ಅವರಿಗೆ ಕುಷ್ಟಗಿ-ಘಟಪ್ರಭಾ ರೈಲು ಮಾರ್ಗ ಹಾಗೂ ಅಳ್ನಾವರದಲ್ಲಿ ರೈಲು ನಿಲುಗಡೆ ಮತ್ತು ಪಾರ್ಸಲ್ ಸೇವೆ ಆರಂಭಿಸಲು ಮನವಿ ಸಲ್ಲಿಸಲಾಗಿದೆ.
Read Full Story

07:56 PM (IST) Feb 10

ಹಾಸನದಲ್ಲಿ ಮಾಜಿ ಶಾಸಕ ಪ್ರೀತಂ ಗೌಡ ಬೀದಿ ರಂಪಾಟಕ್ಕೆ ನಿಖಿಲ್ ಕುಮಾರಸ್ವಾಮಿ ಎಚ್ಚರಿಕೆ!

ಬಿಜೆಪಿ-ಜೆಡಿಎಸ್ ಮೈತ್ರಿ ಕುರಿತ ಪ್ರೀತಂಗೌಡ ಹೇಳಿಕೆಗೆ ತಿರುಗೇಟು ನೀಡಿರುವ ನಿಖಿಲ್ ಕುಮಾರಸ್ವಾಮಿ, ಬೀದಿ ರಂಪಾಟ ಮಾಡದಂತೆ ಎಚ್ಚರಿಸಿದ್ದಾರೆ. ಶಾಸಕ ಎ. ಮಂಜು ಕೂಡ ಪ್ರೀತಂ ಗೌಡರ ವಿರುದ್ಧ ಹತಾಶೆಯ ಮಾತುಗಳೆಂದು ಆಕ್ರೋಶ ವ್ಯಕ್ತಪಡಿಸಿದ್ದು, ಶಿವಲಿಂಗೇಗೌಡರ ಅಸಂವಿಧಾನಿಕ ಪದ ಬಳಕೆಯನ್ನು ಖಂಡಿಸಿದ್ದಾರೆ.

Read Full Story

07:53 PM (IST) Feb 10

ಭ್ರಷ್ಟರ ಬೇಟೆ - ರೆಡ್ ಹ್ಯಾಂಡ್‌ ಆಗಿ ಲೋಕಾಯುಕ್ತ ಬಲೆಗೆ ಬಿದ್ದ ಪಿಡಬ್ಲ್ಯೂಡಿ ಎಂಜಿನಿಯರ್ ಹಾಗೂ ಅಕೌಂಟೆಂಟ್!

ವಿಜಯನಗರ ಜಿಲ್ಲೆಯಲ್ಲಿ, ಗುತ್ತಿಗೆದಾರನ ಬಿಲ್ ಪಾವತಿಸಲು ಒಂದು ಲಕ್ಷ ರೂಪಾಯಿ ಲಂಚ ಸ್ವೀಕರಿಸುತ್ತಿದ್ದ ಲೋಕೋಪಯೋಗಿ ಇಲಾಖೆಯ ಸಹಾಯಕ ಎಂಜಿನಿಯರ್ ಮತ್ತು ಅಕೌಂಟೆಂಟ್ ಅವರನ್ನು ಲೋಕಾಯುಕ್ತ ಪೊಲೀಸರು ಬಂಧಿಸಿದ್ದಾರೆ. ಗುತ್ತಿಗೆದಾರರ ದೂರಿನ ಮೇರೆಗೆ ಪಿಡಬ್ಲ್ಯೂಡಿ ಕಚೇರಿಯಲ್ಲಿ ಈ ಕಾರ್ಯಾಚರಣೆ ನಡೆಸಲಾಗಿದೆ.

Read Full Story

07:07 PM (IST) Feb 10

ಮಲೆ ಮಹದೇಶ್ವರ ಪಾದಯಾತ್ರಿಗಳ ಮತ್ತೆ ಮೇಲೆ ಚಿರತೆ ದಾಳಿ; ಬಾಲಕನ ಪ್ರಾಣ ಕಾಪಾಡಿದ ಅರಣ್ಯ ಸಿಬ್ಬಂದಿ!

ಮಹಾ ಶಿವರಾತ್ರಿ ಜಾತ್ರೆಯ ಹಿನ್ನೆಲೆಯಲ್ಲಿ ಮಲೆ ಮಹದೇಶ್ವರ ಬೆಟ್ಟಕ್ಕೆ ಪಾದಯಾತ್ರೆ ಹೊರಟಿದ್ದ ಬಾಲಕನ ಮೇಲೆ ಚಿರತೆ ದಾಳಿ ನಡೆಸಿದೆ. ಅರಣ್ಯ ಇಲಾಖೆ ಸಿಬ್ಬಂದಿಯ ಸಮಯಪ್ರಜ್ಞೆಯಿಂದ ಬಾಲಕ ಪ್ರಾಣಾಪಾಯದಿಂದ ಪಾರಾಗಿದ್ದು, ಭಕ್ತರ ಸುರಕ್ಷತೆಗಾಗಿ ಜಿಲ್ಲಾಡಳಿತವು ಕಟ್ಟುನಿಟ್ಟಿನ ನಿಯಮಗಳನ್ನು ಜಾರಿಗೊಳಿಸಿದೆ.
Read Full Story

07:03 PM (IST) Feb 10

ಬೀದರ್ ಹಾಸ್ಟೆಲ್‌ ನಲ್ಲಿ ವಿಚಿತ್ರ ಆಕೃತಿ ನೋಡಿ ಬೆಚ್ಚಿಬಿದ್ದ ಮಕ್ಕಳು! ವಿದ್ಯಾರ್ಥಿನಿಯರಿಗೆ ಸಾಯಬೇಕೆನ್ನುವ ಕೆಟ್ಟ ಕನಸು!

ಬೀದರ್ ಜಿಲ್ಲೆಯ ಚಿಟಗುಪ್ಪಾದಲ್ಲಿರುವ ಡಾ. ಬಿ.ಆರ್. ಅಂಬೇಡ್ಕರ್ ವಸತಿ ನಿಲಯದ ಗೋಡೆಯ ಮೇಲೆ ವಿಚಿತ್ರ ಆಕೃತಿಯೊಂದು ಕಾಣಿಸಿಕೊಂಡು ವಿದ್ಯಾರ್ಥಿನಿಯರಲ್ಲಿ ಭೀತಿ ಮೂಡಿಸಿದೆ. ನಿರಂತರವಾಗಿ ಕೆಟ್ಟ ಕನಸುಗಳು ಬೀಳುತ್ತಿರುವುದರಿಂದ ಭಯಭೀತರಾದ ವಿದ್ಯಾರ್ಥಿನಿಯರು ಹಾಸ್ಟೆಲ್‌ನಿಂದ ಹೊರಗೆ ಓಡಿ ಬಂದ ಘಟನೆ ನಡೆದಿದೆ.
Read Full Story

06:47 PM (IST) Feb 10

ʻಪ್ಯಾಟೆ ಹುಡ್ಗೀರ್‌ ಹಳ್ಳಿ ಲೈಫುʼಖ್ಯಾತಿಯ ಸುಷ್ಮಾ ರಾಜ್​ಗೆ ಗಂಡು ಮಗು - ಅಪ್ಪನ ಮರುಹುಟ್ಟು ಎಂದ ನಟಿ

'ಪ್ಯಾಟೆ ಹುಡ್ಗೀರ್ ಹಳ್ಳಿ ಲೈಫು' ಖ್ಯಾತಿಯ, 'ಕರಾವಳಿ ಹೆಣ್ಣು ಹುಲಿ' ಎಂದೇ ಪ್ರಸಿದ್ಧರಾದ ನಟಿ ಸುಷ್ಮಾ ರಾಜ್ ಗಂಡು ಮಗುವಿಗೆ ಜನ್ಮ ನೀಡಿದ್ದಾರೆ. ಫೆಬ್ರವರಿಯಲ್ಲಿ ನಿಧನರಾದ ತಮ್ಮ ತಂದೆ ಅಶೋಕ್ ಅವರೇ ಮಗನಾಗಿ ಮರುಹುಟ್ಟು ಪಡೆದಿದ್ದಾರೆ ಎಂದು, 'ಅಶೋಕ್ ರಾಜ್ ಈಸ್ ಬ್ಯಾಕ್' ಎಂದು ಬರೆದುಕೊಂಡಿದ್ದಾರೆ.

Read Full Story

06:32 PM (IST) Feb 10

ಕಿರಣ್ ರಾಜ್ ಅವರ ಸೆಲಿಬ್ರಿಟಿ ಕ್ರಶ್ ಯಾರು? ಕೊನೆಗೂ ಇಂಟ್ರೆಸ್ಟಿಂಗ್ ಡೀಟೈಲ್ಸ್ ಬಿಚ್ಚಿಟ್ಟ 'ಕರ್ಣ'

ಬೆಂಗಳೂರು: ಕರ್ಣ ಸೀರಿಯಲ್ ಮೂಲಕ ಕನ್ನಡಿಗರ ಮನೆಮಗನಾಗಿ ಗುರುತಿಸಿಕೊಂಡಿರುವ ಕಿರಣ್ ರಾಜ್‌ ಅವರಿಗೆ ರಾಜ್ಯದಾದ್ಯಂತ ಅಪಾರ ಅಭಿಮಾನಿಗಳಿದ್ದಾರೆ. ಇದೀಗ ಕಿರಣ್ ರಾಜ್ ತಮ್ಮ ಸೆಲಿಬ್ರಿಟಿ ಕ್ರಶ್ ಬಗ್ಗೆ ಮೊದಲ ಬಾರಿಗೆ ತುಟಿ ಬಿಚ್ಚಿದ್ದಾರೆ. ಕಿರಣ್ ರಾಜ್ ಈ ಬಗ್ಗೆ ಹೇಳಿದ್ದೇನು?

 

Read Full Story

06:12 PM (IST) Feb 10

ಬೆಂಗಳೂರಲ್ಲಿ ಮತ್ತೆ ಜೆಸಿಬಿ ಘರ್ಜನೆ - ಗುಬ್ಬಲಾಳದಲ್ಲಿ ₹3 ಕೋಟಿ ಮೌಲ್ಯದ ಒತ್ತುವರಿ ಆಸ್ತಿ ತೆರವು!

ಬೆಂಗಳೂರು ದಕ್ಷಿಣ ನಗರ ಪಾಲಿಕೆಯು, ಉತ್ತರಹಳ್ಳಿ ಉಪವಿಭಾಗದ ಗುಬ್ಬಲಾಳ ಗ್ರಾಮದಲ್ಲಿ ಪಾರ್ಕ್‌ಗಾಗಿ ಮೀಸಲಿಟ್ಟಿದ್ದ ಜಾಗದ ಒತ್ತುವರಿ ತೆರವುಗೊಳಿಸಿದೆ. ಸುಮಾರು 3,000 ಚದರ ಮೀಟರ್ ವಿಸ್ತೀರ್ಣದ, 3 ಕೋಟಿ ರೂಪಾಯಿ ಮೌಲ್ಯದ ಜಾಗವನ್ನು ಅನಧಿಕೃತ ಬೇಲಿ ತೆಗೆದುಹಾಕುವ ಮೂಲಕ ವಶಕ್ಕೆ ಪಡೆಯಲಾಗಿದೆ.

Read Full Story

05:57 PM (IST) Feb 10

ಸಾಲ ಕೊಡಿಸುವ ನೆಪದಲ್ಲಿ ಉದ್ಯಮಿಗಳೇ ಟಾರ್ಗೆಟ್‌, ಕೋಟ್ಯಂತರ ರೂ ವಂಚನೆ, ಬೆಂಗಳೂರಿನ ಡ್ಯಾಡಿ ನಿವಾಸಕ್ಕೆ ಸಿಐಡಿ ದಾಳಿ!

 ಸಾಲ ಕೊಡಿಸುವ ನೆಪದಲ್ಲಿ ಹಲವು ಉದ್ಯಮಿಗಳಿಗೆ ವಂಚಿಸಿದ ಆರೋಪದ ಮೇಲೆ ಪೀಟರ್ ಡ್ಯಾಡಿ ಎಂಬಾತನ ನಿವಾಸದ ಮೇಲೆ ಸಿಐಡಿ ಆರ್ಥಿಕ ಅಪರಾಧ ದಳ ದಾಳಿ ನಡೆಸಿದೆ. ಆರೋಪಿಯು ಪ್ರೊಸೆಸಿಂಗ್ ಫೀ ಮತ್ತು ಕಮಿಷನ್ ಹೆಸರಿನಲ್ಲಿ ಹಣ ಪಡೆದು, ಹಣ ಕೇಳಿದವರ ಮೇಲೆ ಸುಳ್ಳು ಚೆಕ್ ಬೌನ್ಸ್ ಪ್ರಕರಣ ದಾಖಲಿಸುತ್ತಿದ್ದನು.

Read Full Story

05:42 PM (IST) Feb 10

Bhagyalakshmi Serial - ಎಲ್ಲರ ಅಂದಾಜು ಮೀರಿ ದುಡುಕಿದ ತಾಂಡವ್;‌ ಹೀಗೆ ಮಾಡ್ತಾನೆ ಅಂತ ನಂಬ್ತೀರಾ?

ಮಾಡಿದ್ದುಣ್ಣೋ ಮಾರಾಯ ಅಂತಾರಲ್ಲ ಹಾಗೆ.. ಭಾಗ್ಯಲಕ್ಷ್ಮೀ ಧಾರಾವಾಹಿ ತಾಂಡವ್‌ ಸ್ಥಿತಿ ಆಗಿದೆ. ಅಷ್ಟು ವರ್ಷಗಳ ಕಾಲ ಪತ್ನಿ ಭಾಗ್ಯಗೆ ತೊಂದರೆ ಕೊಟ್ಟು, ಹಿಂಸೆ ಮಾಡಿದ್ದ ತಾಂಡವ್‌, ಈಗ ಅದನ್ನೆಲ್ಲ ಅನುಭವಿಸುತ್ತಿದ್ದಾನೆ. ಶ್ರೇಷ್ಠಳನ್ನು ಬಿಟ್ಟು ಭಾಗ್ಯ ಮನೆಗೆ ಬಂದ ಅವನಿಗೆ ತೊಂದರೆ ಶುರು ಆಗಿದೆ.

 

Read Full Story

05:10 PM (IST) Feb 10

ಮೆಟ್ರೋ ಟಿಕೆಟ್ ದರ ಏರಿಕೆ ಸದ್ಯಕ್ಕಿಲ್ಲ ಅಷ್ಟೇ! ರಾಜಕೀಯ ನಾಯಕರ ಟಾಕ್‌ ವಾರ್‌ ನಿಲ್ಲಿಸಲು BMRCL ಮಹಾಪ್ಲ್ಯಾನ್!

 ಬೆಂಗಳೂರು ಮೆಟ್ರೋ ಟಿಕೆಟ್ ದರ ಏರಿಕೆಯ ಚರ್ಚೆಗಳು ನಡೆಯುತ್ತಿವೆ. ರಾಜಕೀಯ ವಿರೋಧದಿಂದಾಗಿ ತಾತ್ಕಾಲಿಕವಾಗಿ ಸ್ಥಗಿತಗೊಂಡಿರುವ ಈ ಪ್ರಸ್ತಾವನೆಯ ಬಗ್ಗೆ, ಹೊಸ ದರ ನಿಗದಿ ಸಮಿತಿ ರಚನೆ ಸೇರಿದಂತೆ ಅಂತಿಮ ನಿರ್ಧಾರವನ್ನು ಮುಂಬರುವ BMRCL ಬೋರ್ಡ್ ಸಭೆಯಲ್ಲಿ ತೆಗೆದುಕೊಳ್ಳುವ ಸಾಧ್ಯತೆಯಿದೆ.

Read Full Story

05:02 PM (IST) Feb 10

ಯಾರಿಗೆ 3 ಗಂಡಂದಿರು ಇದ್ದಾರೆ? Bigg Boss Kannada ಮಹಿಳಾ ಸ್ಪರ್ಧಿ ಬಗ್ಗೆ ಬಾಂಬ್‌ ಹಾಕಿದ ಚೈತ್ರಾ ಕುಂದಾಪುರ

Bigg Boss Kannada 12: ಬಿಗ್‌ ಬಾಸ್‌ ಆಟ ಮುಗಿದರೂ ಸ್ಪರ್ಧಿಗಳ ನಡುವಿನ ಜಗಳ ಮುಗಿಯುತ್ತಿಲ್ಲ. ಚೈತ್ರಾ ಕುಂದಾಪುರ ಹಾಗೂ ಅಶ್ವಿನಿ ಗೌಡ ಅವರು ಆಟದ ವಿಚಾರವಾಗಿ ಜಗಳ ಆಡುತ್ತಿದ್ದಾರೆ. ಈಗ ಚೈತ್ರಾ ಪೋಸ್ಟ್‌ ಸಿಕ್ಕಾಪಟ್ಟೆ ಕುತೂಹಲ ಮೂಡಿಸಿದೆ.

 

Read Full Story

05:02 PM (IST) Feb 10

ಪ್ರತಿಯೊಂದು ಯಶಸ್ಸಿನ ಹಿಂದಿರೋ ದೇಗುಲದ ಸೀಕ್ರೆಟ್​ ರಿವೀಲ್​ ಮಾಡಿದ ನಟಿ Rukmini Vasanth

'ಸಪ್ತ ಸಾಗರದಾಚೆ ಎಲ್ಲೋ' ಮತ್ತು 'ಕಾಂತಾರ' ಚಿತ್ರಗಳ ಮೂಲಕ ಖ್ಯಾತಿ ಗಳಿಸಿದ ನಟಿ ರುಕ್ಮಿಣಿ ವಸಂತ್, ತಮ್ಮ ಯಶಸ್ಸಿನ ಹಿಂದಿನ ರಹಸ್ಯವನ್ನು ಹಂಚಿಕೊಂಡಿದ್ದಾರೆ. ಬೆಂಗಳೂರಿನ ದೇವಸ್ಥಾನವೇ ತಮ್ಮ ವೃತ್ತಿಜೀವನದ ಯಶಸ್ಸಿಗೆ ಕಾರಣ ಎಂದು ಅವರು ಬಹಿರಂಗಪಡಿಸಿದ್ದಾರೆ.

Read Full Story

04:53 PM (IST) Feb 10

BCCI ಕೇಂದ್ರಿಯ ಗುತ್ತಿಗೆ ಪ್ರಕಟ - ಮುಗಿಯಿತಾ ಈ ಮೂವರ ಕ್ರಿಕೆಟ್ ಬದುಕು? ಈ ಲಿಸ್ಟ್‌ನಲ್ಲಿದೆ ಒಂದು ಅಚ್ಚರಿ ಹೆಸರು

ನವದೆಹಲಿ: 2025-26ನೇ ಸಾಲಿನ ವಾರ್ಷಿಕ ಕೇಂದ್ರಿಯ ಗುತ್ತಿಗೆಯನ್ನು BCCI ಘೋಷಿಸಿದೆ. ಈ ಬಾರಿ ಒಟ್ಟು 30 ಆಟಗಾರರು ಎ, ಬಿ, ಸಿ ದರ್ಜೆಯ ಗುತ್ತಿಗೆ ಪಡೆದಿದ್ದಾರೆ. ಈ ಪಟ್ಟಿಯಲ್ಲಿ ಪ್ರಮುಖ ಮೂವರು ಆಟಗಾರರನ್ನು ಕೈಬಿಡಲಾಗಿದ್ದು, ಇವರ ಕ್ರಿಕೆಟ್ ಭವಿಷ್ಯ ಮುಗಿಯಿತಾ ಎನ್ನುವ ಪ್ರಶ್ನೆ ಕಾಡಲಾರಂಭಿಸಿವೆ.

 

Read Full Story

04:43 PM (IST) Feb 10

ಕಮಲಾಕರ ಭಟ್‌ಗೆ ಸುಚಿತ್ರಾಳನ್ನು ಪರಿಚಯ ಮಾಡಿದ್ದೇ ಈ ಸುಮಾ; ಶನಿಶಾಂತಿ ಮಾಡಿ ಅಂದ್ರೆ, ಶನಿಯಂತೆ ಹೆಗಲೇರಿದ!

ಸಿದ್ಧಾಪುರದ ಸುಮಾ ಎಂಬುವವರು ಕಮಲಾಕರ ಭಟ್ಟನಿಗೆ ಸುಚಿತ್ರಾಳನ್ನು ಪರಿಚಯ ಮಾಡಿಸಿದ್ದರು. ಶನಿಶಾಂತಿ ಪೂಜೆಯ ನೆಪದಲ್ಲಿ ಶುರುವಾದ ಈ ಸಂಬಂಧ, ಭಟ್ಟನು ತನ್ನ ಮೊದಲ ಪತ್ನಿಗೆ 50 ಲಕ್ಷ ಸೆಟಲ್ಮೆಂಟ್ ನೀಡಿ, ಸುಚಿತ್ರಾಳೊಂದಿಗೆ ದಂಪತಿಗಳಂತೆ ಹೋಮ-ಹವನಗಳಲ್ಲಿ ಭಾಗವಹಿಸುವ ಹಂತಕ್ಕೆ ತಲುಪಿತು.
Read Full Story

04:21 PM (IST) Feb 10

Bigg Boss ಮುಗಿದ್ಮೇಲೂ ಕಾವ್ಯ ಹಿಂದೆ ಬಿದ್ದ ಗಿಲ್ಲಿ ನಟ; ಮೆಸೇಜ್‌ ಮೇಲೆ ಮೆಸೇಜ್‌; ಉರ್ಕೊಂಡ ರಕ್ಷಿತಾ!

Bigg Boss Gilli Nata: ಬಿಗ್‌ ಬಾಸ್‌ ಕನ್ನಡ ಸೀಸನ್‌ 12 ಶೋನಲ್ಲಿ ದೊಡ್ಮನೆ ಹಬ್ಬ ಎಂದು ಕಾರ್ಯಕ್ರಮ ಮಾಡಲಾಗಿದೆ. ಆಗ ಭಾಗ್ಯಲಕ್ಷ್ಮೀ ಧಾರಾವಾಹಿ ನಟಿ ಸುಷ್ಮಾ ರಾವ್‌ ಅವರು ಬಿಗ್‌ ಬಾಸ್‌ ಸ್ಪರ್ಧಿಗಳ ಗುಟ್ಟು ರಟ್ಟು ಮಾಡಿದ್ದಾರೆ.

 

Read Full Story

04:11 PM (IST) Feb 10

ಸಾವನದುರ್ಗ ದೇಗುಲದ ಹುಂಡಿಗೆ ಕನ್ನ ಹಾಕಿದ ಸರ್ಕಾರಿ ಅಧಿಕಾರಿ; 10 ಲಕ್ಷ ರೂ. ಗುಳುಂ ಮಾಡಿದ ಆರೋಪ!

ರಾಮನಗರದ ಐತಿಹಾಸಿಕ ಸಾವನದುರ್ಗ ಶ್ರೀ ಲಕ್ಷ್ಮೀ ನರಸಿಂಹಸ್ವಾಮಿ ದೇವಾಲಯದ ಹುಂಡಿ ಹಣದಲ್ಲಿ ಭಾರೀ ಅವ್ಯವಹಾರ ನಡೆದಿದೆ ಎಂದು ಆರೋಪಿಸಲಾಗಿದೆ. ದೇವಾಲಯದ ಕಾರ್ಯನಿರ್ವಾಹಕ ಅಧಿಕಾರಿ ಜಗದೀಶ್ ಅವರು ಸುಮಾರು 10 ಲಕ್ಷಕ್ಕೂ ಅಧಿಕ ನಗದು ಮತ್ತು ಚಿನ್ನಾಭರಣಗಳನ್ನು ದುರ್ಬಳಕೆ ಮಾಡಿದ್ದಾರೆ ಎಂದು ದೂರು ದಾಖಲಾಗಿದೆ.

Read Full Story

04:08 PM (IST) Feb 10

ಗಿಲ್ಲಿ ಪ್ರಾಪರ್ಟಿ ಕಾಮಿಡಿ ದಾಸನಿಗೆ ಬಲು ಇಷ್ಟವಂತೆ! ಆ ಕನಸು ಈಡೇರುತ್ತಾ?

ಬಿಗ್ ಬಾಸ್ ವಿಜೇತ ಗಿಲ್ಲಿ ನಟ, ನಟ ದರ್ಶನ್‌ರ ದೊಡ್ಡ ಅಭಿಮಾನಿಯಾಗಿದ್ದು, ಅವರೊಂದಿಗೆ 'ದಿ ಡೆವಿಲ್' ಚಿತ್ರದಲ್ಲಿ ನಟಿಸಿದ್ದಾರೆ. ಬಿಗ್ ಬಾಸ್ ಮನೆಯಲ್ಲಿದ್ದ ಕಾರಣ ಚಿತ್ರದ ಸಂಭ್ರಮವನ್ನು ತಪ್ಪಿಸಿಕೊಂಡಿದ್ದ ಗಿಲ್ಲಿ, ಇದೀಗ ಜೈಲಿನಲ್ಲಿರುವ ದರ್ಶನ್‌ರನ್ನು ಭೇಟಿಯಾಗಲು ಪ್ರಯತ್ನಿಸುತ್ತಿದ್ದಾರೆ.

Read Full Story

03:49 PM (IST) Feb 10

ಲವ್‌ಗೋಸ್ಕರ ಮತಾಂತರ ಆಗಿ, 2 ತಿಂಗಳ ಹಸುಗೂಸಿನ ಜೊತೆ ಬೀದಿಗೆ ಬಿದ್ದ ಬ್ರಾಹ್ಮಣ ಯುವತಿ!

ಮುಸ್ಲಿಂ ಹುಡುಗನಿಗೋಸ್ಕರ ಹಿಂದು ಯುವತಿಯು ಮತಾಂತರ ಆಗಿದ್ದಾಳೆ. ಕೋಲ್ಕತ್ತಾ ಮೂಲದ ಯುವತಿ ಸೃಷ್ಟಿ ತ್ರಿಪಾಠಿಯು ಬೆಂಗಳೂರಿನ ಬಿಟಿಎಂ ಲೇಔಟ್‌ನ ಹುಡುಗನನ್ನು ಪ್ರೀತಿಸಿ ಮದುವೆಯಾಗಿದ್ದಾಳೆ. ಈಗ ಬೀದಿಗೆ ಬಿದ್ದಿದ್ದಾಳೆ.

 

Read Full Story

03:47 PM (IST) Feb 10

ಇನ್ಮುಂದೆ ಹೋಟೆಲ್‌ಗಳಲ್ಲಿ 10 ರೂ ಕಾಫಿ ಹೀರುತ್ತಾ ಕೂತರೆ ಗ್ರಾಹಕರಿಗೆ ಬೀಳಲಿದೆ 1000 ರೂ.ವರೆಗೆ ದಂಡ!

ಬೆಂಗಳೂರಿನ ಸಣ್ಣ ಹಾಗೂ ಮಧ್ಯಮ ಹೋಟೆಲ್‌ಗಳಲ್ಲಿ ಗ್ರಾಹಕರು ಗಂಟೆಗಟ್ಟಲೆ ಕಾಲಹರಣ ಮಾಡುವುದರಿಂದ ವ್ಯಾಪಾರಕ್ಕೆ ನಷ್ಟವಾಗುತ್ತಿದೆ. ಈ ಸಮಸ್ಯೆಗೆ ಪರಿಹಾರವಾಗಿ,   'ಟೇಬಲ್ ಚಾರ್ಜ್' ಅಥವಾ 500 ರಿಂದ 1000 ರೂ.ವರೆಗೆ ದಂಡ ವಿಧಿಸಲು ಹೋಟೆಲ್ ಮಾಲೀಕರ ಸಂಘ ಚಿಂತನೆ ನಡೆಸಿದೆ.

Read Full Story

03:37 PM (IST) Feb 10

ದೊಡ್ಮನೆ ಸಂಪ್ರದಾಯದ ಹಾದಿ ಹಿಡಿದ ಮನ ಮೆಚ್ಚಿದ ಹುಡುಗಿ, ಕೆಎಂಎಫ್‌ ನಂದಿನಿಗೆ ಸುಧಾರಾಣಿ ರಾಯಭಾರಿ!

ಸ್ಯಾಂಡಲ್‌ವುಡ್ ನಟಿ ಸುಧಾರಾಣಿ ಅವರು ಬೆಂಗಳೂರು ಹಾಲು ಒಕ್ಕೂಟದ (BAMUL) 'ನಂದಿನಿ' ಉತ್ಪನ್ನಗಳ ನೂತನ ಪ್ರಚಾರ ರಾಯಭಾರಿಯಾಗಿ ಆಯ್ಕೆಯಾಗಿದ್ದಾರೆ. ಡಾ.ರಾಜ್‌ಕುಮಾರ್ ಕುಟುಂಬದ ಹಾದಿಯಲ್ಲಿಯೇ ಅವರು ಸಾಗುತ್ತಿದ್ದಾರೆ.

Read Full Story

03:35 PM (IST) Feb 10

ಸಪ್ತಪದಿಯ ಅರ್ಥವನ್ನು ನವವಧುವರರಿಗೆ ಸೊಗಸಾಗಿ ವಿವರಿಸಿದ ಪುರೋಹಿತರು - ವೀಡಿಯೋ ವೈರಲ್

ಹಿಂದೂ ವಿವಾಹದ ಪ್ರಮುಖ ಭಾಗವಾದ ಸಪ್ತಪದಿಯ ನಿಜವಾದ ಅರ್ಥ ಅನೇಕರಿಗೆ ತಿಳಿದಿಲ್ಲ. ಆದರೆ, ಇಲ್ಲೊಬ್ಬರು ಪುರೋಹಿತರು ವಧುವರರಿಗೆ ಏಳು ಹೆಜ್ಜೆಗಳ ಪ್ರತಿಯೊಂದು ಪ್ರತಿಜ್ಞೆ ಮತ್ತು ಅದರ ಮಹತ್ವವನ್ನು ಸೊಗಸಾಗಿ ವಿವರಿಸಿದ್ದು, ಈ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

Read Full Story

03:26 PM (IST) Feb 10

ಧುರಂಧರ್ ಸ್ಟೈಲ್‌ನಲ್ಲಿ ಗನ್ ಹಿಡ್ಕೊಂಡು ಕಾಂಗ್ರೆಸ್ ಮುಖಂಡ ಡ್ಯಾನ್ಸ್ - ಪ್ರಕರಣ ಹೊಸ ತಿರುವು! ಫ್ಯಾಮಿಲಿ ಕಾರ್ಯಕ್ರಮದಲ್ಲಿ ನಡೆದಿದ್ದೇನು?

ಕಲಬುರಗಿ ಕಾಂಗ್ರೆಸ್ ಮುಖಂಡ ಮತೀನ್ ಪಟೇಲ್ ಅವರು ಗನ್ ಹಿಡಿದು ಡ್ಯಾನ್ಸ್ ಮಾಡಿದ ವಿಡಿಯೋ ವೈರಲ್ನಂತರ, ಅದು ಅಸಲಿ ಗನ್ ಅಲ್ಲ, ಮಕ್ಕಳ ಆಟಿಕೆ ಎಂದು ಸ್ಪಷ್ಟನೆ. ತಮ್ಮ ರಾಜಕೀಯ ವರ್ಚಸ್ಸಿಗೆ ಧಕ್ಕೆ ತರಲು ವಿರೋಧಿಗಳು ಈ ವಿಡಿಯೋವನ್ನು ದುರುದ್ದೇಶಪೂರ್ವಕವಾಗಿ ವೈರಲ್ ಮಾಡಿದ್ದಾರೆಂದು ಆರೋಪಿಸಿದ್ದಾರೆ.

Read Full Story

03:12 PM (IST) Feb 10

Sabarimala Gold Theft - ಶಬರಿಮಲೆಯ ಚಿನ್ನ ಕಳ್ಳತನದಲ್ಲಿ ಕಾಂತಾರ ಸಿನಿಮಾ ನಟನಿಗೆ ನೋಟೀಸ್!

Actor Jayaram: ರಾಷ್ಟ್ರಮಟ್ಟದಲ್ಲಿ ಸದ್ದು ಮಾಡಿದ್ದ ಶಬರಿಮಲೆ ಚಿನ್ನ ಕಳ್ಳತನ ಪ್ರಕರಣದಲ್ಲಿ ಜಾರಿ ನಿರ್ದೇಶನಾಲಯ (ಇ.ಡಿ) ಹೊಸದೊಂದು ಹೆಜ್ಜೆ ಇಟ್ಟಿದೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಇ.ಡಿ ಈಗ ಕಾಂತಾರ ಸಿನಿಮಾ ನಟ ಜಯರಾಂ ಅವರನ್ನು ವಿಚಾರಣೆಗೆ ಕರೆದಿದೆ. ಹಾಗಾದರೆ, ಈ ಕೇಸ್‌ನ ಮುಂದಿನ ಭವಿಷ್ಯವೇನು?

Read Full Story

03:05 PM (IST) Feb 10

ಜ್ಯೋತಿಷಿ ಕಮಲಾಕರ ಭಟ್‌ ಪರಿಚಯಕ್ಕೆ ಕಾರಣವಾದ ಮಹಿಳೆ ಸಂಸಾರಕ್ಕೆ ಹುಳಿ ಹಿಂಡಿ ಗಂಡ-ಹೆಂಡತಿ ಬೇರೆ ಮಾಡಿದ ಸುವಿತ್ರಾ!

ಖ್ಯಾತ ಜ್ಯೋತಿಷಿ ಕಮಲಾಕರ ಭಟ್ ಮತ್ತು ಸುಚಿತ್ರಾ ನಡುವಿನ ಸಂಬಂಧದ ಕುರಿತು ಹೊಸ ಮಾಹಿತಿಗಳು ಬಹಿರಂಗಗೊಳ್ಳುತ್ತಿವೆ. ಮಗಳ ಜಾತಕ ತೋರಿಸುವ ನೆಪದಲ್ಲಿ ಆರಂಭವಾದ ಈ ಪರಿಚಯವು ಅಕ್ರಮ ಸಂಬಂಧಕ್ಕೆ ತಿರುಗಿ, ಹಣಕಾಸು ದುರುಪಯೋಗ ಮತ್ತು ಇತರರ ದಾಂಪತ್ಯ ಜೀವನದಲ್ಲಿ ಬಿರುಕು ಮೂಡಿಸಿದ ಆರೋಪಗಳಿಗೆ ಕಾರಣವಾಗಿದೆ. 

Read Full Story

02:08 PM (IST) Feb 10

ಕಲಬುರಗಿ ಕಿದ್ವಾಯಿ ಆಸ್ಪತ್ರೆಯಲ್ಲಿ 'ಕೂಲ್' ಆಗಿ ನಡೆದ ಎಸಿ ಕಳ್ಳತನ - ಸುವರ್ಣ ನ್ಯೂಸ್ ಇಂಪ್ಯಾಕ್ಟ್, ತನಿಖೆ ಚುರುಕು!

ಕಲಬುರಗಿಯ ಕಿದ್ವಾಯಿ ಆಸ್ಪತ್ರೆಯಲ್ಲಿ ನಡೆದಿದೆ ಎನ್ನಲಾದ 24 ಎಸಿಗಳ ಕಳ್ಳತನ ಪ್ರಕರಣ, ಸುವರ್ಣ ನ್ಯೂಸ್ ವರದಿಯ ನಂತರ ಹೊಸ ತಿರುವು ಪಡೆದುಕೊಂಡಿದೆ. ಸಂಸ್ಥೆಯ ನಿರ್ದೇಶಕ ಡಾ. ನವೀನ್ ತನಿಖೆ ಆರಂಭಿಸಿದ್ದು, ಆಸ್ಪತ್ರೆಯ ಮುಖ್ಯಸ್ಥರಾದ ಡಾ. ಗುರುರಾಜ್ ದೇಶಪಾಂಡೆ ಅವರ ಮೇಲೆಯೇ ಗಂಭೀರ ಆರೋಪ ಕೇಳಿಬಂದಿದೆ.
Read Full Story

01:39 PM (IST) Feb 10

Kalaburagi - ಗನ್ ಹಿಡಿದು ಕಾಂಗ್ರೆಸ್ ಮುಖಂಡ ಧರಂಧರ್ ಸ್ಟೈಲ್‌ನಲ್ಲಿ ಡ್ಯಾನ್ಸ್, ವಿಡಿಯೋ ವೈರಲ್!

ಕಲಬುರಗಿ ಜಿಲ್ಲೆಯಲ್ಲಿ ಶಾಸಕ ಎಂ.ವೈ. ಪಾಟೀಲ್ ಅವರ ಆಪ್ತ, ಕಾಂಗ್ರೆಸ್ ಮುಖಂಡ ಮತೀನ್ ಪಟೇಲ್, ಸಿನಿಮಾ ಶೈಲಿಯಲ್ಲಿ ಗನ್ ಪ್ರದರ್ಶಿಸಿರುವ ವಿಡಿಯೋ ವೈರಲ್ ಆಗಿದೆ. ಈ ಘಟನೆ ಸಾರ್ವಜನಿಕ ವಲಯದಲ್ಲಿ ತೀವ್ರ ಆಕ್ರೋಶಕ್ಕೆ ಕಾರಣವಾಗಿದ್ದು, ಗನ್‌ನ ನೈಜತೆ ಮತ್ತು ಕಾನೂನುಬದ್ಧತೆಯ ಬಗ್ಗೆ ಪ್ರಶ್ನೆ ಹುಟ್ಟುಹಾಕಿದೆ.

Read Full Story

01:30 PM (IST) Feb 10

Bigg Boss ನಮ್ರತಾ ಗೌಡ- ಕಾರ್ತಿಕ್​ ಮಹೇಶ್​ ಮದ್ವೆಗೆ ಸಂಗೀತಾ ಶೃಂಗೇರಿ ಗ್ರೀನ್ ಸಿಗ್ನಲ್​ - ನಟಿ ಹೇಳಿದ್ದೇನು?

ಬಿಗ್ ಬಾಸ್ ಖ್ಯಾತಿಯ ನಮ್ರತಾ ಗೌಡ ಮತ್ತು ಕಾರ್ತಿಕ್ ಮಹೇಶ್ ಅವರ ಮದುವೆಯ ವದಂತಿಗಳು ಹರಿದಾಡುತ್ತಿವೆ. ಈ ಬಗ್ಗೆ ಇಬ್ಬರೂ ಸ್ಪಷ್ಟನೆ ನೀಡದಿದ್ದರೂ, ಇದೀಗ ಅವರ ಸ್ನೇಹಿತೆ ಸಂಗೀತಾ ಶೃಂಗೇರಿ ಈ ಜೋಡಿ ಮದುವೆಯಾದರೆ ತನಗೆ ಖುಷಿ, ಅವರಿಬ್ಬರೂ ಚೆನ್ನಾಗಿ ಕಾಣುತ್ತಾರೆ ಎಂದು ಹೇಳುವ ಮೂಲಕ ಕುತೂಹಲ ಹೆಚ್ಚಿಸಿದ್ದಾರೆ

Read Full Story

01:26 PM (IST) Feb 10

ವಿಜಯಲಕ್ಷ್ಮಿಗೆ ನಿಂದನೆ ಪ್ರಕರಣ, ಆರೋಪಿಗಳಿಗೆ ಜಾಮೀನು ಸಿಗದಂತೆ ಚಾರ್ಜ್‌ಶೀಟ್‌ಗೆ ಮುಂದಾದ ಸೈಬರ್ ಪೊಲೀಸರು

ನಟ ದರ್ಶನ್ ಪತ್ನಿ ವಿಜಯಲಕ್ಷ್ಮಿ ವಿರುದ್ಧ ಸಾಮಾಜಿಕ ಜಾಲತಾಣಗಳಲ್ಲಿ ಅವಾಚ್ಯ ಕಾಮೆಂಟ್‌ ಮಾಡಿದ್ದ ಪ್ರಕರಣದಲ್ಲಿ ಸೈಬರ್ ಕ್ರೈಂ ಪೊಲೀಸರು ಚಾರ್ಜ್‌ಶೀಟ್ ಸಲ್ಲಿಕೆಗೆ ಸಿದ್ಧತೆ ನಡೆಸಿದ್ದಾರೆ. ಬಂಧಿತ ಆರು ಆರೋಪಿಗಳಿಗೆ ಜಾಮೀನು ಸಿಗದಂತೆ ತಡೆಯಲು ಈ ಕ್ರಮಕ್ಕೆ ಮುಂದಾಗಿದ್ದಾರೆ.

Read Full Story

01:19 PM (IST) Feb 10

Karna Serial - ಡಿಪ್ರೆಶನ್‌ಗೆ ಹೋದಳಾ ನಿಧಿ? ; ಇನ್ನು ಕರ್ಣ-ನಿತ್ಯಾ ರಿಯಲ್‌ ಮದುವೆ ಆಗಬೇಕು!

Karna Kannada Serial Episode Update: ಕರ್ಣ ಧಾರಾವಾಹಿಯಲ್ಲಿ ಅಪ್ಪ-ಮಗನಿಗೆ ನಿಧಿ-ಕರ್ಣ-ನಿತ್ಯಾ ಬದುಕಿನಲ್ಲಿ ಆಟ ಆಡೋದು ದೊಡ್ಡ ಕೆಲಸವಾಗಿದೆ. ಈಗ ಸಂಜಯ್‌ ಕೂಡ ಅದೇ ಹಾದಿ ಹಿಡಿದಿದ್ದಾನೆ. ಇದರಿಂದ ನಿಧಿ ಕನಸು ಕಮರಿ ಹೋಗಿದೆ. ಹಾಗಾದರೆ ಮುಂದೆ ಏನಾಗುವುದು?

 

Read Full Story

01:07 PM (IST) Feb 10

ಬೆಂಗಳೂರಿನ ಜನತೆಗೆ ಮುದ್ದಾದ ಪ್ರಶ್ನೆ ಕೇಳಿದ ರಕ್ಷಿತಾ ಶೆಟ್ಟಿ - ಬೆಂಗಳೂರಿಗರೇ ನಿಮ್ಮ ಉತ್ತರ ಏನು?

ರಕ್ಷಿತಾ ಶೆಟ್ಟಿ ಅವರ ಮಾತುಗಳು ಟ್ರೋಲ್ ಆಗುತ್ತಿರುತ್ತವೆ. ಇದೀಗ ಬೆಂಗಳೂರಿನ ಜನತೆಗೆ ರಕ್ಷಿತಾ ಶೆಟ್ಟಿ ಪ್ರಶ್ನೆಯೊಂದನ್ನು ಕೇಳಿದ್ದಾರೆ. ರಕ್ಷಿತಾ ವ್ಯಕ್ತಿಯೊಬ್ಬರ ಜೊತೆ ಮಾತನಾಡುತ್ತಾ, ತಮಗಿದ್ದ ತಪ್ಪು ಕಲ್ಪನೆಯ ಬಗ್ಗೆ ಹೇಳಿಕೊಂಡಿದ್ದಾರೆ.

Read Full Story

12:53 PM (IST) Feb 10

ಗದಗ - ರೈತರಿಗೆ ಕನ್ಯಾ ಕೊಡುವವರಿಗೆ ₹2 ಲಕ್ಷ ಸಹಾಯಧನ ನೀಡಿ - ಸರ್ಕಾರಕ್ಕೆ ಸಿದ್ದನಕೊಳ್ಳದ ಶ್ರೀಗಳು ಮನವಿ

ಗದಗ ಜಿಲ್ಲೆಯ ನರಗುಂದ ತಾಲೂಕಿನ ಡಾ. ಶಿವಕುಮಾರ್ ಸ್ವಾಮೀಜಿ, ರೈತ ಯುವಕರಿಗೆ ಕನ್ಯೆಯರು ಸಿಗದಿರುವ ಬಗ್ಗೆ ಕಳವಳ ವ್ಯಕ್ತಪಡಿಸಿದ್ದಾರೆ. ರೈತರಿಗೆ ತಮ್ಮ ಹೆಣ್ಣುಮಕ್ಕಳನ್ನು ಕೊಟ್ಟು ವಿವಾಹ ಮಾಡುವ ಕುಟುಂಬಗಳಿಗೆ ಸರ್ಕಾರವು 2 ಲಕ್ಷ ರೂಪಾಯಿ ಸಹಾಯಧನ ನೀಡಬೇಕು ಎಂದು ಅವರು ಮನವಿ ಮಾಡಿದ್ದಾರೆ.

Read Full Story

12:43 PM (IST) Feb 10

ಬೆಂಗಳೂರು to ಹುಬ್ಬಳ್ಳಿ ವಂದೇ ಭಾರತ್, ಜನಶತಾಬ್ದಿ ಸೇರಿ ಒಟ್ಟು 7 ರೈಲು ರದ್ದು! ಯಾವ ಜಿಲ್ಲೆಗಳಿಗೆ ಎಫೆಕ್ಟ್?

ಬೆಂಗಳೂರು–ಹುಬ್ಬಳ್ಳಿ ರೈಲ್ವೇ ಮಾರ್ಗದಲ್ಲಿ  ಸಂಚರಿಸುವ 7 ರೈಲುಗಳನ್ನು  ಸಂಪೂರ್ಣ ರದ್ದು ಮಾಡಲಾಗುತ್ತಿದೆ. ಫೆಬ್ರವರಿ 16 ಮತ್ತು 17 ರಂದು ವಂದೇ ಭಾರತ್ ಮತ್ತು ಜನಶತಾಬ್ದಿ ಸೇರಿದಂತೆ ಹಲವು ರೈಲುಗಳ ಸಂಚಾರದಲ್ಲಿ ವ್ಯತ್ಯಯ ಉಂಟಾಗಲಿದೆ. 

Read Full Story

12:36 PM (IST) Feb 10

3 ಕೋಟಿ ಆಸ್ತಿ ಒಡತಿ ಆಗ್ತಿದ್ದಂತೆಯೇ ಬದಲಾಯ್ತು Karna Serial ನಿತ್ಯಾ ಲುಕ್​! ನಟಿಯ ಕ್ಯೂಟ್​ ಫೋಟೋಶೂಟ್​

ಕರ್ಣ ಸೀರಿಯಲ್‌ನಲ್ಲಿ, ರಮೇಶ್‌ನ ಯೋಜನೆಗೆ ತಿರುಗೇಟು ನೀಡಿದ ಕರ್ಣ 3 ಕೋಟಿ ಆಸ್ತಿಯನ್ನು ನಿತ್ಯಾ ಹೆಸರಿಗೆ ಬರೆಸಲು ಕೇಳಿದ್ದಾನೆ. ಇದೇ ವೇಳೆ, ನಿತ್ಯಾ ಪಾತ್ರಧಾರಿ ನಮ್ರತಾ ಗೌಡ ಮಾಡರ್ನ್ ಡ್ರೆಸ್‌ನಲ್ಲಿರುವ ಫೋಟೋಗಳನ್ನು ಹಂಚಿಕೊಂಡಿದ್ದಾರೆ. ಫ್ಯಾನ್ಸ್​ ಏನಂದ್ರು ನೋಡಿ. 

Read Full Story

12:21 PM (IST) Feb 10

‌ದೊಡ್ಮನೆ ಹಬ್ಬ ಮಾಡಿ Bigg Boss ಸ್ಪರ್ಧಿಗಳ ಗುಟ್ಟು ರಟ್ಟು ಮಾಡಿದ Bhagyalakshmi Serial ನಟಿ ಸುಷ್ಮಾ ರಾವ್

Bigg Boss Kannada Season 12 Gilli Nata: ಬಿಗ್‌ ಬಾಸ್‌ ಕನ್ನಡ ಸೀಸನ್‌ 12 ಸ್ಪರ್ಧಿಗಳ ಜೊತೆ ಕಲರ್ಸ್‌ ಕನ್ನಡ ದೊಡ್ಮನೆ ಹಬ್ಬ ಆಯೋಜನೆಯಾಗಿದೆ, ಆ ವೇಳೆ ಸುಷ್ಮಾ ರಾವ್‌ ಅವರು ಒಂದಿಷ್ಟು ಗುಟ್ಟುಗಳನ್ನು ರಟ್ಟು ಮಾಡಿದ್ದಾರೆ.

Read Full Story

More Trending News