ಕರ್ನಾಟಕ ಹೈಕೋರ್ಟ್‌ನಲ್ಲಿ ವಿಚ್ಚೇದನ ಅರ್ಜಿ ವಿಚಾರಣೆ ವೇಳೆ ಕೆಲ ಅಚ್ಚರಿ ನಡೆದಿದೆ. ಪತಿಯಿಂದ ತಿಂಗಳಿಗೆ 6 ಲಕ್ಷ ರೂಪಾಯಿ ಜೀವನಾಂಶ ಬೇಡಿಕೆ ನೋಡಿದ ಮಹಿಳೆಗೆ ಜಡ್ಜ್ ಛೀಮಾರಿ ಹಾಕಿದ ಘಟನೆ ನಡೆದಿದೆ. ಇಷ್ಟು ದುಡ್ಡು ಬೇಕಾದರೆ ದುಡಿದು ಸಂಪಾದಿಸಲು ಜಡ್ಜ್ ಸೂಚಿಸಿದ ವಿಡಿಯೋ ವೈರಲ್ ಆಗಿದೆ.
ಬೆಂಗಳೂರು(ಆ.21) ದಂಪತಿ ವಿಚ್ಚೇದನ ವಿಚಾರಣೆ ವೇಳೆ ಜೀವನಾಂಶ ಬೇಡಿಕೆ, ಮಕ್ಕಳ ಪಾಲನೆ, ನೋಡಿಕೊಳ್ಳುವ ಅಧಿಕಾರ ಸೇರಿದಂತೆ ಹಲವು ವಿಚಾರಗಳನ್ನು ಪರಿಗಣಿಸಲಾಗುತ್ತದೆ. ಪ್ರಮುಖವಾಗಿ ವಿಚ್ಚೇದನದ ವೇಳೆ ಜೀವನಾಂಶ ವಿಚಾರ ಚರ್ಚೆಯಾಗಲಿದೆ. ಇದೀಗ ಕರ್ನಾಟಕ ಹೈಕೋರ್ಟ್‌ನಲ್ಲಿ ನಡೆದ ಘಟನೆ ವಿಡಿಯೋ ವೈರಲ್ ಆಗಿದೆ. ವಿಚ್ಚೇದನ ವೇಳೆ ಪತಿಯಿಂದ ತಿಂಗಳಿಗೆ ಬರೋಬ್ಬರಿ 6 ಲಕ್ಷ ರೂಪಾಯಿ ಜೀವನಾಂಶಕ್ಕೆ ಬೇಡಿಕೆ ಇಟ್ಟಿದ್ದಾರೆ. ಈ ಬೇಡಿಕೆ ನೋಡಿದ ನ್ಯಾಯಾಮೂರ್ತಿ ಗರಂ ಆಗಿದ್ದಾರೆ. ಇಷ್ಟೊಂದು ಮೊತ್ತ ಬೇಕಾದಲ್ಲಿ ದುಡಿದು ಸಂಪಾದಿಸಲಿ ಎಂದು ಜಡ್ಜ್ ಖಡಕ್ ಸಂದೇಶ ನೀಡಿದ್ದಾರೆ. ಈ ವಿಡಿಯೋ ಇದೀಗ ಭಾರಿ ಸಂಚಲನ ಸೃಷ್ಟಿಸಿದೆ.
ಪತಿ ಹಾಗೂ ಪತ್ನಿ ನಡುವೆ ವಿಚ್ಚೇದನ ಅರ್ಜಿ ಏಕಸದಸ್ಯ ಪೀಠ ನ್ಯಾಯಮೂರ್ತಿ ಲಲಿತಾ ಕೆನ್ನೆಗಂಟಿ ಬಳಿ ಬಂದಿದೆ. ಅರ್ಜಿ ವಿಚಾರಣೆ ವೇಳೆ ಮಹಿಳೆಯ ಪರ ವಕೀಲರು ವಾದ ಮಂಡಿಸಿದ್ದಾರೆ. ಇದೇ ವೇಳೆ ಮಹಿಳೆಯ ಪ್ರತಿ ತಿಂಗಳ ಖರ್ಚಿನ ಲೆಕ್ಕಾಚಾರವನ್ನು ಮುಂದಿಟ್ಟಿದ್ದಾರೆ. ಪ್ರತಿ ತಿಂಗಳ ಬಟ್ಟೆ, ಚಪ್ಪಲಿ, ಶೂ, ಶೃಂಗಾರ ವಸ್ತುಗಳು ಸೇರಿದಂತೆ 15,000 ರೂಪಾಯಿ, ತಿಂಡಿ, ಊಟ ಸೇರಿದಂತ ಇತರ ಆಹಾರಗಳಿಗೆ ತಿಂಗಳು 60,000 ರೂಪಾಯಿಯ ಅವಶ್ಯಕತೆ ಇದೆ. ಮೊಣಕಾಲು ನೋವು, ಫಿಸಿಯೋಥೆರಪಿ, ಇತರ ಆರೋಗ್ಯ ಕಾಳಜಿ, ವೈದ್ಯಕೀಯ ತಪಾಸಣೆ ಹಾಗೂ ಔಷಧಿ ವೆಚ್ಚಕ್ಕಾಗಿ 4 ರಿಂದ 6 ಲಕ್ಷ ರೂಪಾಯಿ ಅಗತ್ಯವಿದೆ. ಹೀಗಾಗಿ ಒಟ್ಟು 6,16,300 ರೂಪಾಯಿ ಪ್ರತಿ ತಿಂಗಳ ಜೀವನಾಂಶವಾಗಿ ನೀಡಬೇಕು ಎಂದು ಮಹಿಳೆ ಪರ ವಕೀಲರು ವಾದ ಮಂಡಿಸಿದ್ದಾರೆ.
undefined
ವರ್ಷಕ್ಕೊಂದರಂತೆ ಗಂಡ ಚೇಂಜ್, ಜಡ್ಜ್‌ಗೆ ಅಚ್ಚರಿ ತಂದ ಕರ್ನಾಟಕ ಮಹಿಳೆಯ 7ನೇ ಡಿವೋರ್ಸ್ ಪ್ರಕರಣ!
ವಕೀಲರ ವಾದ ಕೇಳಿದ ನ್ಯಾಯಮೂರ್ತಿ ಲಲಿತಾ ಕೆನ್ನೆಗಂಟಿ ಗರಂ ಆಗಿದ್ದಾರೆ. ಮಾಸಿಕ ಜೀವನಾಂಶ ಮೊತ್ತ 6 ಲಕ್ಷ ರೂಪಾಯಿ? ಇಷ್ಟು ಮೊತ್ತ ತಿಂಗಳಿಗೆ ಯಾರಾದರೂ ಖರ್ಚು ಮಾಡುತ್ತಾರಾ? ಇಷ್ಟು ಮೊತ್ತದ ಅನಿವಾರ್ಯತೆ ಇದೆಯಾ? ನಿಮಗೆ ಇಷ್ಟು ದುಡ್ಡ ಜೀವನಾಂಶವಾಗಿ ಬೇಕೆಂದರೆ ದುಡಿದು ಸಂಪಾದಿಸಿ ಎಂದು ಜಡ್ಜ್ ಖಡಕ್ ಸೂಚನೆ ನೀಡಿದ್ದಾರೆ.
ಜೀವನಾಂಶ ಪ್ರಮುಖ ವಿಚಾರ ಹೌದು, ಆದರೆ ಕೊಡುತ್ತಾರೆ ಎಂದು ಈ ರೀತಿ ಕೇಳುವುದೇ? ಮಕ್ಕಳ ನೋಡಿಕೊಳ್ಳಬೇಕಾದ ಜವಾಬ್ದಾರಿ ಮಹಿಳೆಗಿಲ್ಲ, ಸ್ವಂತ ಖರ್ಚಿಗೆ ಇಷ್ಟೊಂದು ದುಡ್ಡು ಕೇಳುತ್ತಿದ್ದೀರಾ? ನೀವು ಕೇಳವ ಮೊತ್ತಕ್ಕೆ ಅರ್ಥವಿರಬೇಕು, ಕಾರಣ ಸಮಂಜಸವಾಗಿರಬೇಕು. ನಿರ್ವಹಣೆಗೆ ಇಷ್ಟು ಮೊತ್ತ ಬೇಕು ಎಂದು ಹೇಳಬೇಡಿ. ಕಾನೂನು ಹಾಗೂ ನ್ಯಾಯಾಲಯದ ಪ್ರಕ್ರಿಯೆಯನ್ನು ದುರ್ಬಳಕೆ ಮಾಡಿಕೊಳ್ಳುತ್ತಿರುವುದು ಇಲ್ಲಿ ಸ್ಪಷ್ಟವಾಗುತ್ತಿದೆ ಎಂದು ನ್ಯಾಯಮೂರ್ತಿ ಹೇಳಿದ್ದಾರೆ.
ಪೋಕ್ಸೋ ಕೇಸಲ್ಲಿ ಬಂಧಿತ ಪತಿ ಪರ ಸತ್ಯ ಹೇಳಲು ಬಂದ ಗರ್ಭಿಣಿಯನ್ನು ಆಸ್ಪತ್ರೆಗೆ ಕಳುಹಿಸಿದ ಜಡ್ಜ್!