ರಾಜ್ಯದಲ್ಲಿ ನಗರ ಮತ್ತು ಪಟ್ಟಣ ಪ್ರದೇಶಗಳ ಒಳಚರಂಡಿ ನೀರು ಹಾಗೂ ಕೈಗಾರಿಕಾ ತ್ಯಾಜ್ಯಗಳು ನದಿಗಳಿಗೆ ಸೇರುತ್ತಿರುವುದರಿಂದ 10 ನದಿಗಳು ಕಲುಷಿತಗೊಂಡಿವೆ ಎಂದು ಸರ್ಕಾರ ಒಪ್ಪಿಕೊಂಡಿದೆ.
ಬೆಂಗಳೂರು (ಆ.21): ರಾಜ್ಯದಲ್ಲಿ ನಗರ ಮತ್ತು ಪಟ್ಟಣ ಪ್ರದೇಶಗಳ ಒಳಚರಂಡಿ ನೀರು ಹಾಗೂ ಆಯಾ ಜಲಾನಯನ ಪ್ರದೇಶಗಳಲ್ಲಿನ ಕೈಗಾರಿಕೆಗಳ ತ್ಯಾಜ್ಯಗಳು ನೇರವಾಗಿ ನದಿಗಳಿಗೆ ಸೇರುತ್ತಿರುವುದರಿಂದ ರಾಜ್ಯದ 10 ನದಿಗಳು ಕಲುಷಿತಗೊಂಡಿವೆ ಎಂದು ರಾಜ್ಯ ಸರ್ಕಾರವೇ ಒಪ್ಪಿಕೊಂಡಿದೆ.
ಈ ಕುರಿತು ಸ್ವಯಂಪ್ರೇರಿತ ಪ್ರಕರಣ ದಾಖಲಿಸಿಕೊಂಡು ವಿಚಾರಣೆ ನಡೆಸುತ್ತಿರುವ ರಾಷ್ಟ್ರೀಯ ಹಸಿರು ನ್ಯಾಯಮಂಡಳಿಗೆ (ಎನ್‌ಜಿಟಿ) ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯಿಂದ ಪ್ರಮಾಣಪತ್ರ ಸಲ್ಲಿಕೆ ಮಾಡಲಾಗಿದೆ. ಒಟ್ಟಾರೆ ರಾಜ್ಯದ 17 ನದಿಗಳು ಕಲುಷಿತಗೊಂಡಿವೆ ಎಂದು ಕೇಂದ್ರ ಮಾಲಿನ್ಯ ನಿಯಂತ್ರಣ ಮಂಡಳಿಯು (ಸಿಪಿಸಿಬಿ) 2022ರಲ್ಲಿ ಜಲಶಕ್ತಿ ಸಚಿವಾಲಯಕ್ಕೆ ವರದಿ ಸಲ್ಲಿಸಿತ್ತು. ಶರಾವತಿ, ಗಂಗಾವಳಿ, ಅಘನಾಶಿನಿ, ಕೃಷ್ಣಾ, ಕಾಗಿನ ಹಾಗೂ ನೇತ್ರಾವತಿ ನದಿಗಳಲ್ಲಿ ಕರಗಿದ ಆಮ್ಲಜನಕದ (ಬಿಒಡಿ) ಪ್ರಮಾಣ 3 ಮಿಲಿಗ್ರಾಂ/ಲೀಟರ್ ದಾಟಿಲ್ಲ.
ಶೂಟಿಂಗ್ ವೇಳೆ ಕಲುಷಿತ ತುಂಗಭದ್ರಾ ನದಿ ನೋಡಿ ಸಿಟ್ಟಿಗೆದ್ದ ನಟ ಅನಿರುದ್ಧ; ಮುಂದೆ ಮಾಡಿದ್ದೇನು ಗೊತ್ತಾ?
ಹೀಗಾಗಿ, ಈ ನದಿಗಳನ್ನು ಕಲುಷಿತ ನದಿಗಳ ಪಟ್ಟಿಯಿಂದ ಕೈಬಿಡಬೇಕು ಎಂದು ಕೇಂದ್ರ ಮಾಲಿನ್ಯ ನಿಯಂತ್ರಣ ಮಂಡಳಿಗೆ ಪತ್ರ ಬರೆಯಲಾಗಿದೆ. 2019ರಿಂದ 2021ರ ನಡುವೆ ನದಿಗಳ ನೀರಿನ ಗುಣಮಟ್ಟ ಪರಿಶೀಲಿಸಿ ಸಿಪಿಸಿಬಿ 2022ರಲ್ಲಿ ವರದಿ ಬಿಡುಗಡೆ ಮಾಡಿತ್ತು. ದೇಶದ 311 ನದಿಗಳು ಮಲಿನಗೊಂಡಿವೆ. ಅದರಲ್ಲಿ ಕರ್ನಾಟಕದ 17 ನದಿಗಳು ಸೇರಿವೆ ಎಂದು ತಿಳಿಸಿತ್ತು. ಕೃಷಿ ತ್ಯಾಜ್ಯ, ಬಯಲು ಬಹಿರ್ದೆಸೆ, ಪಟ್ಟಣ ಮತ್ತು ನಗರ ಪ್ರದೇಶಗಳ ಘನತ್ಯಾಜ್ಯ ಮುಂತಾದವು ನದಿಗಳ ಮಾಲಿನ್ಯದ ಮೂಲಗಳಾಗಿವೆ ಎಂದು ವರದಿ ಸಲ್ಲಿಕೆ ಮಾಡಲಾಗಿತ್ತು.
ಸರ್ಕಾರಿ ಬಸ್ಸಿನಲ್ಲಿ ಜನಿಸಿದ ಮಗುವಿಗೆ ಜೀವನಪೂರ್ತಿ ಉಚಿತ ಪ್ರಯಾಣದ ಕೊಡುಗೆ ಕೊಟ್ಟ ಸಾರಿಗೆ ಸಂಸ್ಥೆ!
ನದಿಗಳ ಹೆಸರು - ಕಲುಷಿತಗೊಂಡಿರುವ ಸ್ಥಳಗಳು ಎಲ್ಲಿ - ಗರಿಷ್ಠ ಬಿಒಡಿ (ಮಿಗ್ರಾಂ/ಲೀ)
ಅರ್ಕಾವತಿ - ಹೆಸರಘಟ್ಟದಿಂದ ಕನಕಪುರ - 39
ಭದ್ರಾ - ಭದ್ರಾವತಿಯಿಂದ ಹೊಳೆಹೊನ್ನೂರು - 7
ಭೀಮಾ - ಗಂಗಾಪುರದಿಂದ ಯಾದಗಿರಿ - 4
ಕಾವೇರಿ - ಶ್ರೀರಂಗಪಟ್ಟಣ ಸೇರಿ ಬೆಂಗಳೂರು - 6
ದಕ್ಷಿಣ ಪಿನಾಕಿನಿ - ಆನೇಕಲ್ ಮುಗಳೂರಿನ ಉದ್ದಕ್ಕೂ - 111
ಕಬಿನಿ - ನಂಜನಗೂಡಿನ ಉದ್ದಕ್ಕೂ - 3.8
ಲಕ್ಷ್ಮಣತೀರ್ಥ - ಹುಣಸೂರು ಸೇರಿ - 5.6
ಶಿಂಷಾ - ಯಡಿಯೂರಿನಿಂದ ಮದ್ದೂರು - 9.5
ತುಂಗಾ - ಶಿವಮೊಗ್ಗ ಸೇರಿ - 6
ತುಂಗಾಭದ್ರಾ - ಕೂಡ್ಲಿಯಿಂದ ಮೈಲಾರ - 6.2