ಕರ್ನಾಟಕ ಮಹಿಳೆಯ ವಿಚ್ಛೇದನ ಪ್ರಕರಣ ವಿಚಾರಣೆಯ ವಿಡಿಯೋ ಒಂದು ಭಾರಿ ವೈರಲ್ ಆಗಿದೆ. ಈ ಮಹಿಳೆ ವರ್ಷಕ್ಕೆ ಒಂದರಂತೆ ಗಂಡನ ಬದಲಾಯಿಸಿದ್ದಾರೆ. ಇಷ್ಟೇ ಅಲ್ಲ ಕಳೆದ 6 ಮಾಜಿ ಪತಿಗಳಿಂದ ನಿರ್ವಹಣೆ ವೆಚ್ಚ ಪಡೆಯುತ್ತಿದ್ದಾಳೆ. ಇದೀಗ 7ನೇ ಪ್ರಕರಣ ಕೂಡ ಸೆಕ್ಷನ್ 498ಎ. ಈ ಕುರಿತು ಕನ್ನಡದಲ್ಲಿ ಜಡ್ಜ್ ಕೇಳಿದ ಪ್ರಶ್ನೆ ಹಾಗೂ ಉತ್ತರ ಇದೀಗ ಎಚ್ಚರಿಕೆ ಸಂದೇಶ ನೀಡುತ್ತಿದೆ.
ಬೆಂಗಳೂರು(ಜು.28) ಮದುವೆ ಬಳಿಕ ಮನಸ್ತಾಪ, ಜೊತೆಗೆ ಡಿವೋರ್ಸ್ ಪ್ರಕರಣಗಳು ಇದೀಗ ಹೆಚ್ಚಾಗುತ್ತಿದೆ. ಜನಸಾಮಾನ್ಯರಿಂದ ಹಿಡಿದು ಸೆಲೆಬ್ರೆಟಿಗಳ ಜೀವನದಲ್ಲಿ ಇದೀಗ ಹೆಚ್ಚಿನ ವ್ಯತ್ಯಾಸಗಳಿಲ್ಲ. ಆದರೆ ಕೆಲವೊಂದು ಪ್ರಕರಣ ಅಚ್ಚರಿಗೂ ಕಾರಣವಾಗಿದೆ. ಇದೀಗ ಕರ್ನಾಟಕ ಮಹಿಳೆಯ 7ನೇ ಡಿವೋರ್ಸ್ ಪ್ರಕರಣ ನ್ಯಾಯಾಧೀಶರನ್ನೇ ಚಕಿತಗೊಳಿಸಿದೆ. ಕಳೆದ 6 ಡಿವೋರ್ಸ್ ಪ್ರಕರಣದಲ್ಲಿ ಈ ಮಹಿಳೆ ಮಾಜಿ ಪತಿಗಳಿಂದ ನಿರ್ವಹಣೆ ವೆಚ್ಚ ಪಡೆಯುತ್ತಿದ್ದಾಳೆ. ಇದೀಗ 7ನೇ ಪತಿ ವಿರುದ್ದವೂ ಇದೇ ಪ್ರಕರಣ. ಕಾನೂನನ್ನು ದುರ್ಬಳಕೆ ಮಾಡಿಕೊಳ್ಳುತ್ತಿದ್ದೀರಿ ಎಂದು ನ್ಯಾಯಾಧೀಶರು ಕನ್ನಡದಲ್ಲೇ ಎಚ್ಚರಿಸಿದ್ದಾರೆ. ಈ ವಿಚಾರಣೆಯ ವಿಡಿಯೋ ಇದೀಗ ವೈರಲ್ ಆಗಿದೆ.
ಮಹಿಳೆಯೊಬ್ಬರು ವರ್ಷಕ್ಕೆ ಒಂದರಂತೆ ಗಂಡಂದಿರನ್ನು ಬದಲಾಯಿಸಿದ್ದಾಳೆ. ಮದುವೆಯಾದ ಬಳಿಕ 6 ತಿಂಗಳು ಸಂಸಾರ. ಮುಂದಿನ 6 ತಿಂಗಳಲ್ಲಿ ಪತಿ ವಿರುದ್ದ ದೈಹಿಕ ಹಾಗೂ ಹಿಂಸೆ, ಕ್ರೌರ್ಯ ಸೇರಿದಂತೆ ಇನ್ನಿತರ ಪ್ರಕರಣ ದಾಖಲಿಸಿ ಕಠಿಣ ಶಿಕ್ಷೆಗೆ ಆಗ್ರಹಿಸಿದ್ದಾಳೆ. ಎಲ್ಲಾ ಪತಿಯರ ವಿರುದ್ದ ಈಕೆ ಸಕ್ಷನ್ 498ಎ ಪ್ರಕರಣ ದಾಖಲಿಸಿದ್ದಾಳೆ. ಕಳೆದ 6 ಪ್ರಕರಣಗಳಲ್ಲಿ ಗಂಡಂದಿರು ಕೋರ್ಟ್, ಪ್ರಕರಣಕ್ಕೆ ಬೆಚ್ಚಿ ಬಿದ್ದು ಸೆಟ್ಲ್ ಮಾಡಿಕೊಂಡಿದ್ದಾರೆ. ದುಬಾರಿ ಮೊತ್ತವನ್ನು ಈಕೆ ಪಡೆದಿದ್ದಾಳೆ. ಆದರೆ ಏಳನೇ ಪ್ರಕರಣದಲ್ಲಿ ಈ ಮಹಿಳೆಯ ಕಪಟವನ್ನು ಬಯಲಿಗೆಳೆಯಲು ಮುಂದಾಗಿದ್ದಾನೆ. ಹೀಗಾಗಿ ಪತ್ನಿಯ 498ಎ ವಿರುದ್ದ ಈತ ಕೂಡ ಪ್ರಕರಣ ದಾಖಲಿಸಿದ್ದಾನೆ. ಈ ಅರ್ಜಿಯನ್ನು ಕೈಗೆತ್ತಿಕೊಂಡ ನ್ಯಾಯಧೀಶರು ವಿಚಾರಣೆ ಆರಂಭಿಸಿದ್ದಾರೆ. ಈ ವಿಚಾರಣೆಯ ವಿಡಿಯೋ ಲಭ್ಯವಾಗಿದೆ.
ಡಿವೋರ್ಸ್ ಸುದ್ದಿ ನಡುವೆ ಮಗನನ್ನು ಹೊಗಳಿದ ಬಿಗ್ ಬಿ., ಒಂಟಿಯಾಗಿ ಕಾಣಿಸಿಕೊಂಡ ಅಭಿಷೇಕ್!
6 ಡಿವೋರ್ಸ್ ಪ್ರಕರಣದ ಕೇಸ್ ಇದು ಎಂದು 7ನೇ ಗಂಡನ ಪರ ವಕೀಲರು ನ್ಯಾಯಾಧೀಶರ ಮುಂದೆ ಹೇಳಿದ್ದಾರೆ. ಓಹ್, ಮತ್ತೆ ಈ ಪ್ರಕರಣ ಎಂದಾಗ ಇದೀಗ 7ನೇ ಕೇಸ್ ದಾಖಲಾಗಿದೆ ಎಂದು ವಿವರಿಸಿದ್ದಾರೆ. ಇದಕ್ಕೆ ನೀವು 7ನೇ ಪತಿ? ಸರಿ ಸರಿ ಎಂದು ವಿಚಾರಣೆ ಆರಂಭಿಸಿದ್ದರೆ. 6 ವಿಚ್ಚೇದನ ಪ್ರಕರಣ ಗೊತ್ತಿದೆ. ಆದರೆ 7ನೇ ಪತಿಗೂ ಡಿವೋರ್ಸ್ ನೀಡಿರುವ ವಿಚಾರ ಗೊತ್ತಿರಲಿಲ್ಲ ಎಂದು ನ್ಯಾಯಾಧೀಶರು ಹೇಳಿದ್ದಾರೆ.
ಎಲ್ಲಾ ಪತಿಗಳ ವಿರುದ್ದೂ 498ಎ ಪ್ರಕರಣವೇ ಇದೆಯಾ? ಅನ್ನೋ ಜಡ್ಜ್ ಪ್ರಶ್ನೆಗೆ ಉತ್ತರಿಸಿದ ವಕೀಲರು, ಹೌದು, ಎಲ್ಲವೂ 498ಎ ಪ್ರಕರಣ, ಎಲ್ಲಾ ಪತಿಗಳಿಂದ ಸೆಟ್ಲಮೆಂಟ್ ಹಣ ಪಡೆದಿದ್ದಾರೆ. ಕ್ರಿಮಿನಲ್ ಕೇಸ್ ಹಾಕಿ ಬಳಿಕ ಸೆಟ್ಲ್ ಮಾಡಿ ಹಣ ವಸೂಲಿ ಮಾಡಿದ್ದಾರೆ ಎಂದು ವಕೀಲರು ಹೇಳಿದ್ದಾರೆ. ಪ್ರತಿ ಮದುವೆಯಾದ ಬಳಿಕ 6 ತಿಂಗಳು ಆಗುತ್ತಿದ್ದಂತೆ ಪ್ರಕರಣ ದಾಖಲಿಸಲಾಗುತ್ತೆ. ಬಳಿಕ ಪತಿಯರು ಸೆಟ್ಲ್‌ಮೆಂಡ್ ಮಾಡಿದ್ದಾರೆ. ಇದು ಕಾನೂನಿನ ದುರ್ಬಳಕೆ. ಇಲ್ಲಿ ಕಾನೂನು ಜೊತೆ ಆಟವಾಡುತ್ತಿದ್ದೀರಿ ಎಂದು ಜಡ್ಜ್ ಹೇಳಿದ್ದಾರೆ.
ಹಿಂದಿನ 6 ಪತಿಗಳು ಇದ್ದಾರೆ. ಅವರ ಫೋಟೋಗಳು ಇವೆ. ಎಲ್ಲಾ ಪತಿಗಳ ವಿವರ ಕಲೆ ಹಾಕಿ ತನ್ನಿ. ಎಲ್ಲಾ ಪ್ರಕರಣದಲ್ಲೂ ಸೆಟ್ಲ್‌ಮೆಂಟ್ ಆಗಿದೆ. ನೀವು ಯಾಕೆ ಸೆಟ್ಲ್‌ಮೆಂಟ್ ಮಾಡಿಕೊಂಡಿಲ್ಲಾ ಎಂದು ಜಡ್ಜ್ ತಮಾಷೆ ಮಾಡಿದ್ದಾರೆ.
ವಿಚ್ಛೇದಿತ ಮಹಿಳೆಗೆ ಮದುವೆಯಾಗೋದಾಗಿ ನಂಬಿಸಿ ಲಕ್ಷ ಲಕ್ಷ ಹಣ ದೋಚಿದ ನಕಲಿ ಪೊಲೀಸ್!
