Bengaluru: ಡಿ.ಜೆ.ಹಳ್ಳಿ, ಕೆ.ಜಿ.ಹಳ್ಳಿ ಬೆಂಕಿ ಹಚ್ಚಿದ ಕೇಸ್‌ ವಾಪಸ್‌?: ಗೃಹ ಸಚಿವರ ಸ್ಪಷ್ಟನೆ ಇಲ್ಲಿದೆ

By Sathish Kumar KH  |  First Published Jul 26, 2023, 11:36 AM IST

ಬೆಂಗಳೂರಿನಲ್ಲಿ ನಡೆದ ಡಿ.ಜೆ.ಹಳ್ಳಿ, ಕೆ.ಜಿ. ಹಳ್ಳಿ ಗಲಭೆಗಳ ಮೊಕದ್ದಮೆಗಳನ್ನು ವಾಪಸ್‌ ಪಡೆದು ಕೆಲವು ಯುವಕರನ್ನು ಆರೋಪ ಮುಕ್ತಗೊಳಿಸಲು ಕಾಂಗ್ರೆಸ್‌ ಸರ್ಕಾರ ಮುಂದಾಗಿದೆ. 


ಬೆಂಗಳೂರು (ಜು.26): ರಾಜ್ಯದಲ್ಲಿ ಕಳೆದ ಸರ್ಕಾರದ ಅವಧಿಯಲ್ಲಿ ನಡೆದ ಡಿ.ಜೆ.ಹಳ್ಳಿ ಮತ್ತು ಕೆ.ಜಿ. ಹಳ್ಳಿಯ ಬೆಂಕಿ ಹಚ್ಚಿದ ಗಲಭೆಗಳಲ್ಲಿ ಅಮಾಯಕ ಯುವಕರು ಹಾಗೂ ವಿದ್ಯಾರ್ಥಿಗಳು ಸುಳ್ಳು ಮೊಕದ್ದಮೆಗಳಲ್ಲಿ ಬಂಧಿತರಾಗಿದ್ದಾರೆ. ಮೊಕದ್ದಮೆ ಮರು ಪರಿಶೀಲನೆ ಮಾಡಿ ಬಂಧಿತರನ್ನು ಬಿಡುಗಡೆ ಮಾಡುವಂತೆ ಹಲವು ಶಾಸಕರು ಮನವಿ ಮಾಡಿದ್ದಾರೆ. ಆದರೆ, ಪತ್ರವನ್ನು ಬರೆದ ನಂತರ ಕೇಸ್‌ ವಾಪಸ್‌ ತೆಗೆದುಕೊಳ್ಳಲು ಸಾಧ್ಯವಿಲ್ಲ ಎಂದು ಗೃಹ ಸಚಿವ ಡಾ.ಜಿ. ಪರಮೇಶ್ವರ್‌ ಮಾಹಿತಿ ನೀಡಿದ್ದಾರೆ. 

ಈ ಕುರಿತು ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಗಲಭೆಯಲ್ಲಿ ಭಾಗಿಯಾದವರ ಕೇಸ್ ವಾಪಾಸ್ ಪಡೆಯುವ ಬಗ್ಗೆ ಶಾಸಕರು ಮನವಿ ಮಾಡಿದ್ದಾರೆ. ಬೇರೆ ಬೇರೆ ಶಾಸಕರು ಬೇರೆ ಬೇರೆ ಪ್ರಕರಣದಲ್ಲಿ ಹಾಕಿರೋ‌ ಕೇಸ್ ನಲ್ಲಿ ‌ಸತ್ಯಾಂಶ ಇಲ್ಲದಿದ್ರೆ ವಾಪಸ್ ಪಡೆಯಿರಿ ಅಂತ ಪತ್ರ ಬರೆದಿದ್ದಾರೆ. ಅವರು ಪತ್ರವನ್ನು ಬರೆದ ತಕ್ಷಣವೇ ನಾವು ಕೇಸ್‌ ವಾಪಾಸ್ ತಗಳ್ಳೊಕೆ ಆಗೋದಿಲ್ಲ. ಇದನ್ನ ಕ್ಯಾಬಿನೆಟ್ ಸಬ್ ಕಮಿಟಿ ಮುಂದೆ ಮಂಡನೆ ಮಾಡಬೇಕು. ಗೃಹ ಸಚಿವರ ನೇತೃತ್ವದಲ್ಲಿ ರಚಿಸಲಾಗಿರುವ ಸಚಿವ ಸಂಪುಟದ ಉಪ ಸಮಿತಿ ಮುಂದೆ ಬಿಡುಗಡೆ ಮಾಡುವ ಬಗ್ಗೆ ತೀರ್ಮಾನ ಮಾಡಲಾಗುತ್ತದೆ ಎಂದು ಮಾಹಿತಿ ನೀಡಿದರು.

Latest Videos

undefined

Bengaluru: ಕನಕಪುರ ರಸ್ತೆಯಲ್ಲಿ 2000 ರೂ. ಮುಖಬೆಲೆಯ ಕಂತೆ ಕಂತೆ ನೋಟುಗಳು ಪತ್ತೆ

ಶಾಸಕರು ಬರೆದ ಪತ್ರದ ಆಧಾರದಲ್ಲಿ ಪ್ರಕ್ರಿಯೆ ಆರಂಭ: ಶಾಸಕರು ಪತ್ರವನ್ನು ಬರೆದ ನಂತರವೇ ಕ್ಯಾಬಿನೆಟ್‌ ಉಪಸಮಿತಿ ಮುಂದೆ ಇಡುವ ಪ್ರಕ್ರಿಯೆ ಮಾಡಿದ್ದೆವೆ ಅಷ್ಟೇ. ಆಮೇಲೆ ಕ್ಯಾಬಿನೆಟ್ ಮುಂದೆ ಬರುತ್ತೆ. ಕ್ಯಾಬಿನೆಟ್ ನಲ್ಲಿ ಅದು ಅಪ್ರೂವಲ್ ಆಗುತ್ತದೆ ಅಂತ ಅಲ್ಲ. ಕಾನೂನಾತ್ಮಕವಾಗಿ ಇದೆಯಾ  ಅದನ್ನ ನೋಡಿ ತೀರ್ಮಾನ ಮಾಡುತ್ತೆವೆ. ಸತ್ಯಾಂಶವನ್ನು ನೋಡಿ ಕಾನೂನಾತ್ಮಕ ಅವಕಾಶ ಇದ್ದರೆ ವಾಪಸ್ ತೆಗೆದುಕೊಳ್ತೇವೆ. ಬಿಜೆಪಿಯವರು ಯಾಕೆ ರಾಜಕಾರಣ ಮಾಡ್ತಿದ್ದಾರೆ.  ಸಣ್ಣ ಸಣ್ಣ ವಿಷಯಗಳಲ್ಲಿ ರಾಜಕೀಯ ಮಾಡ್ತಿದ್ದಾರೆ. ಅವರಿಗೆ ಬೇರೆ ಕೆಲಸ ಇಲ್ಲ ಅಂತ ಕಾಣಿಸುತ್ತದೆ. ಬರದ ಬಗ್ಗೆ ಪ್ರವಾಹದ ಬಗ್ಗೆ ಬಿಜೆಪಿಯವರು ಮಾತಾಡ್ತಿಲ್ಲ. ಬೇರೆ ಕೆಲಸ ಇಲ್ಲ ಅಂತ ಕಾಣಿಸುತ್ತದೆ. ಶಾಸಕರು ಪತ್ರ ಬರೆದಿರುವುದರಲ್ಲಿ ತಪ್ಪೇನಿದೆ? ಇದೆಲ್ಲ ಯಾಕೆ ಇಷ್ಟು ಜಾಸ್ತಿ ಮಹತ್ವ ಕೊಡಲಾಗ್ತಿದೆ? ಎಂದು ಬಿಜೆಪಿ ಟೀಕೆಯ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದರು.

ತನ್ವೀರ್‌ ಸೇಠ್‌ ಅವರ ಪತ್ರ ಇಲ್ಲಿದೆ ನೋಡಿ.. : ಮೈಸೂರು ಜಿಲ್ಲೆಯ ಶಾಸಕ ತನ್ವೀರ್‌ ಸೇಠ್‌ ಅವರು, ಗಲಭೆಗಳಲ್ಲಿ ಭಾಗಿಯಾದ ಅಮಾಯಕರನ್ನು ಬಿಡುಗಡೆ ಮಾಡುವಂತೆ ಸರ್ಕಾರಕ್ಕೆ ಮನವಿ ಮಾಡಿದ್ದಾರೆ. ಇನ್ನು ಪತ್ರದಲ್ಲಿ "ಡಿ.ಜೆ.ಹಳ್ಳಿ ಮತ್ತು ಕೆ.ಜಿ. ಹಳ್ಳಿ, ಶಿವಮೊಗ್ಗ, ಹುಬ್ಬಳ್ಳಿ ಹಾಗೂ ಇತರೆಡೆ ನಡೆದ ಗಲಾಟೆ, ಪ್ರತಿಭಟನೆ ಹಾಗೂ ಗಲಭೆಗಳಲ್ಲಿ ಅಮಾಯಕ ಯುವಕರು ಹಾಗೂ ವಿದ್ಯಾರ್ಥಿಗಳು ಸುಳ್ಳು ಮೊಕದ್ದಮೆಗಳಲ್ಲಿ ಬಂಧಿತರಾಗಿದ್ದಾರೆ. ಮೊಕದ್ದಮೆ ಮರು ಪರಿಶೀಲನೆ ಮಾಡಿ ಬಂಧಿತರನ್ನು ಬಿಡುಗಡೆ ಮಾಡಬೇಕು" ಎಂದು ಗೃಹ ಸಚಿವ ಡಾ.ಜಿ. ಪರಮೇಶ್ವರ್‌ ಅವರಿಗೆ ಪತ್ರವನ್ನು ಬರೆದಿದ್ದಾರೆ. 

ಡಿಜೆ-ಕೆ.ಜಿ.ಹಳ್ಳಿ ಗಲಭೆ ಕೇಸ್‌: 29 ಆರೋಪಿಗಳು ಬಿಡುಗಡೆ

26 ಆರೋಪಿಗಳು ಜೈಲಿನಿಂದ ಬಿಡುಗಡೆ: ಬೆಂಗಳೂರಿನ ಡಿ.ಜೆ.ಹಳ್ಳಿ ಹಾಗೂ ಕೆ.ಜಿ.ಹಳ್ಳಿ ಗಲಭೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬಳ್ಳಾರಿಯ ಕೇಂದ್ರ ಕಾರಾಗೃಹದಲ್ಲಿ 6 ತಿಂಗಳು ಜೈಲು ಶಿಕ್ಷೆ ಅನುಭವಿಸಿದ್ದ 29 ಆರೋಪಿಗಳು 2021ರ ಮಾರ್ಚ್‌ನಲ್ಲಿ ರಾತ್ರಿ ಬಿಡುಗಡೆಯಾಗಿದ್ದರು. ಈ ವೇಳೆ ಮಾಧ್ಯಮ ಪ್ರತಿನಿಧಿಗಳಿಗೆ ಹೆಚ್ಚಿನ ಪ್ರತಿಕ್ರಿಯೆ ನೀಡಲು ನಿರಾಕರಿಸಿದ ಆರೋಪಿಗಳು, ‘ಪ್ರಕರಣದಲ್ಲಿ ನಾವು ಭಾಗಿಯಾಗಿಲ್ಲ. ನಾವು ನಿರಪರಾಧಿಗಳಾಗಿದ್ದೇವೆ. ಅಮಾಯಕರಾದ ನಮ್ಮನ್ನು ಬಂಧಿಸಲಾಯಿತು’ ಎಂದಷ್ಟೇ ಹೇಳಿದ್ದರು. ಆರೋಪಿಗಳನ್ನು ಕರೆದೊಯ್ಯಲು ಬಂದಿದ್ದ ಪೋಷಕರು ಹಾಗೂ ಸಂಬಂಧಿಕರು ಸಂಭ್ರಮ ಪಟ್ಟರು. ಮೂರು ಸ್ಲೀಪರ್‌ ಕೋಚ್‌ ಬಸ್‌ನಲ್ಲಿ ಆರೋಪಿಗಳನ್ನು ಕರೆದೊಯ್ಯಲು ಆಗಮಿಸಿದ್ದ ಕುಟುಂಬ ಸದಸ್ಯರು, ಊಟ, ಸಿಹಿ ತಿಂಡಿಗಳನ್ನು ತಂದಿದ್ದರು. ಬಸ್‌ ಹತ್ತುತ್ತಿದ್ದಂತೆಯೇ ಆರೋಪಿಗಳನ್ನು ಖುಷಿಯಿಂದ ಸ್ವಾಗತ ಮಾಡಿಕೊಳ್ಳುತ್ತಿರುವ ದೃಶ್ಯ ಇಲ್ಲಿನ ಕೇಂದ್ರ ಕಾರಾಗೃಹದ ಆವರಣದಲ್ಲಿ ರಾತ್ರಿ ಕಂಡು ಬಂತು.

click me!