ಗಂಡಸರಿಗೂ ಫ್ರೀ ಟಿಕೆಟ್ ಕೊಟ್ರೆ ಕೆಎಸ್‌ಆರ್‌ಟಿಸಿ ಮುಚ್ಚಬೇಕಾಗುತ್ತೆ: ಸಿಎಂ ಸಿದ್ದರಾಮಯ್ಯ

By Ravi Janekal  |  First Published Dec 7, 2024, 8:08 PM IST

ಗಂಡಸರಿಗೆ ಫ್ರೀ ಮಾಡಿದ್ರೆ ಕೆಎಸ್ಆರ್ ಟಿಸಿ ಮುಚ್ಚಬೇಕಾಗುತ್ತೆ. ಗಂಡಸರಿಗೆ ಉಚಿತ ಪ್ರಯಾಣ ಮಾಡಲು ಯಾವುದೇ  ಇಲ್ಲ ಎಂದು ಸಿಎಂ ಸಿದ್ದರಾಮಯ್ಯ ಸ್ಪಷ್ಟಪಡಿಸಿದ್ದಾರೆ. 


ಚಾಮರಾಜನಗರ (ಡಿ.7): ರಾಜ್ಯದಲ್ಲಿ ಮಹಿಳೆಯರಿಗೆ ಸರ್ಕಾರಿ ಬಸ್‌ಗಳಲ್ಲಿ ಉಚಿತ ಪ್ರಯಾಣಕ್ಕೆ ಅನುಕೂಲ ಮಾಡಿಕೊಡುವ ಉದ್ದೇಶದಿಂದ ರಾಜ್ಯ ಸರ್ಕಾರ 'ಶಕ್ತಿ ಯೋಜನೆ' ಜಾರಿಗೆ ತಂದಿದೆ. ಆದರೆ ಶಕ್ತಿ ಯೋಜನೆ ಜಾರಿ ಬಳಿಕ ಗಂಡಸರು ಸಹ 'ನಮಗೂ ಉಚಿತ ಪ್ರಯಾಣಕ್ಕೆ ಅನುಕೂಲ ಮಾಡಿಕೊಡಿ' ಎಂದು ಬೇಡಿಕೆ ಇಡುತ್ತಲೇ ಬಂದಿದ್ದಾರೆ. ಗಂಡುಮಕ್ಕಳ ಉಚಿತ ಪ್ರಯಾಣಕ್ಕೆ ಇದುವರೆಗೆ ಯಾವುದೇ ಪ್ರತಿಕ್ರಿಯೆ ನೀಡದೇ ಮೌನವಾಗಿದ್ದ ಸಿಎಂ ಸಿದ್ದರಾಮಯ್ಯ ಅವರು ಇದೀಗ ಗಂಡಸರಿಗೆ ಉಚಿತ ಪ್ರಯಾಣದ ವಿಚಾರಕ್ಕೆ ಪ್ರತಿಕ್ರಿಸಿದ್ದು, 'ಗಂಡಸರಿಗೂ ಫ್ರೀ ಟಿಕೆಟ್ ಮಾಡಿದರೆ ಕೆಎಸ್‌ಆರ್‌ಟಿಸಿ ಮುಚ್ಚಬೇಕಾಗುತ್ತೆ' ಎಂದಿದ್ದಾರೆ

ಇಂದು ಚಾಮರಾಜನಗರದ ಯಳಂದೂರು ತಾಲ್ಲೂಕು ಆಸ್ಪತ್ರೆ ಕಾಮಗಾರಿಗೆ ಶಂಕುಸ್ಥಾಪನೆ ನೆರವೇರಿಸಿ ಮಾತನಾಡಿದ ಸಿಎಂ ಸಿದ್ದರಾಮಯ್ಯ ಅವರು, ಶಕ್ತಿ ಯೋಜನೆಯಿಂದ ಮಹಿಳೆಯರಿಗಾಗಿರುವ ಅನುಕೂಲಗಳ ಬಗ್ಗೆ ಮಾತನಾಡಿದರು. ಹಿಂದೆ ಮಹಿಳೆಯರು ಅನಾರೋಗ್ಯವಾದ್ರೆ ಟಿಕೆಟ್‌ಗೆ ಹಣವಿಲ್ಲದೆ ಜಿಲ್ಲಾಸ್ಪತ್ರೆಗೆ ಹೋಗುತ್ತಿರಲಿಲ್ಲ. ಆದರೆ ಈಗ ಶಕ್ತಿ ಯೋಜನೆಯಿಂದ ಮಹಿಳೆಯರು ಆಸ್ಪತ್ರೆಗೆ ಹೋಗುತ್ತಿದ್ದಾರೆ. ಹಣ ಉಳಿಸುತ್ತಿದ್ದಾರೆ. ಆ ಹಣದಿಂದ ಬೇರೆನಾದರೂ ಖರೀದಿಸುತ್ತಿದ್ದಾರೆ. ಶಕ್ತಿ ಯೋಜನೆಯಿಂದ ರಾಜ್ಯದ ಮಹಿಳೆಯರಿಗೆ ಅನುಕೂಲವಾಗಿದೆ ಎಂದ ಸಿಎಂ. ಇದೇ ವೇಳೆ ನಮಗೂ ಯಾಕೆ ಫ್ರೀ ಟಿಕೆಟ್ ಕೊಡಬಾರದು ಎಂದು ಸ್ಥಳೀಯ ವ್ಯಕ್ತಿಯೊಬ್ಬರು ಕೇಳಿದ್ದಾರೆ. ಇದಕ್ಕೆ ಪ್ರತಿಕ್ರಿಯಿಸಿದ ಸಿಎಂ,'ಗಂಡಸರಿಗೆ ಬಸ್‌ನಲ್ಲಿ ಫ್ರೀ ಕೊಟ್ರೆ ಕೆಎಸ್ಆರ್‌ಟಿಸಿ ಮುಚ್ಚಬೇಕಾಗುತ್ತೆ' ಎಂದಿದ್ದಾರೆ.

Tap to resize

Latest Videos

ಶಕ್ತಿ ಯೋಜನೆ ಜಾರಿ ನಂತರ ಸಾರಿಗೆ ಸಿಬ್ಬಂದಿ ಮೇಲೆ ಹಲ್ಲೆ ಹೆಚ್ಚಾಯ್ತು; ಡ್ಯೂಟಿನೇ ಬೇಡ ಎಂತಿರೋ ನೌಕರರು! 

ಪುರುಷರಿಗೂ ಉಚಿತ ಬಸ್ ಪ್ರಯಾಣ ಎಂದಿದ್ದ ಡಿಸಿಎಂ:

ಬೆಂಗಳೂರಿನಲ್ಲಿ ಮಕ್ಕಳ ದಿನಾಚರಣೆ ಕಾರ್ಯಕ್ರಮದ ಹಿನ್ನೆಲೆಯಲ್ಲಿ ನಡೆದ ಸಂವಾದ ವೊಂದರಲ್ಲಿ ವಿದ್ಯಾರ್ಥಿ ಕೇಳಿದ ಪ್ರಶ್ನೆಗೆ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು 'ವಯೋಮಿತಿ ಆಧಾರದಲ್ಲಿ ಶಕ್ತಿ ಯೋಜನೆಯನ್ನು ಪುರುಷರಿಗೂ ವಿಸ್ತರಿಸುವ ಕುರಿತು ಚರ್ಚಿಸಿ, ನಿರ್ಧಾರ ಮಾಡುತ್ತೇವೆ ಎಂದಿದ್ದರು.

ನೀವು ಐದು ಗ್ಯಾರಂಟಿಗಳನ್ನು ಮಹಿಳೆಯರಿಗೇ ಮಾಡಿದ್ದೀರಿ, ಮಹಿಳೆಯರಿಗೆ ಉಚಿತ ಬಸ್ ಪ್ರಯಾಣದ ವ್ಯವಸ್ಥೆ ಮಾಡಿದ್ದೀರಿ. ನಮ್ಮ ಅಮ್ಮ, ಅಕ್ಕ, ತಂಗಿಯರನ್ನ ಮಾತ್ರ ಊರಿಗೆ ಕರೆದುಕೊಂಡು ಹೋಗುತ್ತಾರೆ. ಗಂಡುಮಕ್ಕಳಿಗೆ ಉಚಿತ ಪ್ರಯಾಣ ಇಲ್ಲದಿರುವುದರಿಂದ ನಾವೂ ಎಲ್ಲಿಗೂ ಹೋಗದಂತಾಗಿದೆ, ನಮಗೂ ಉಚಿತ ಪ್ರಯಾಣ ಏಕಿಲ್ಲ? ಎಂದು ಮುಗ್ದವಾಗಿ ಪ್ರಶ್ನಿಸಿದ್ದ ಚರಣ್ ಎಂಬ ವಿದ್ಯಾರ್ಥಿ, ಅದಕ್ಕೆ ಡಿಸಿಎಂ ಡಿಕೆ ಶಿವಕುಮಾರ ಅವರು ಅಷ್ಟೇ ಸಮಾಧಾನವಾಗಿ, 'ಗಂಡಸರಿಗೂ ವಯೋಮಿತಿ ಆಧಾರದಲ್ಲಿ ಶಕ್ತಿ ಯೋಜನೆಯನ್ನು ಪುರುಷರಿಗೂ ವಿಸ್ತರಿಸುವ ಕುರಿತು ಚರ್ಚಿಸಿ ನಿರ್ಧಾರ ಮಾಡುವ ಹೇಳಿದ್ದು ಇಲ್ಲಿ ಸ್ಮರಿಸಬಹುದು.

click me!