ಡ್ರಗ್ಸ್‌ ಫ್ರೀ ಕರ್ನಾಟಕಕ್ಕೆ ಪೊಲೀಸರ ಪಣ: ಮಾಹಿತಿ ಸಂಗ್ರಹಿಸಲು ಪ್ರತ್ಯೇಕ ಆ್ಯಪ್!

By Kannadaprabha News  |  First Published Dec 7, 2024, 8:55 AM IST

'ಡ್ರಗ್ಸ್‌ ಫ್ರೀ ಕರ್ನಾಟಕ' ಹೆಸರಿನ ಆ್ಯಪ್ ಇದಾಗಿದ್ದು, ಗೂಗಲ್ ಪ್ಲೇ ಸ್ಟೋರ್‌ನಲ್ಲಿ ಆ್ಯಪ್ ಅನ್ನು ಡೌನ್ ಲೋಡ್ ಮಾಡಿಕೊಂಡು ಮಾಹಿತಿ ನೀಡುವಂತೆ ಇಲಾಖೆ ಕೋರಿದೆ. ಈ ಆ್ಯಪ್‌ನಲ್ಲಿ ಡ್ರಗ್ಸ್ ಬೇಸಾಯ, ಮಾರಾಟಗಾರರ, ಗ್ರಾಹಕರು, ಸಿಂಥೆಟಿಕ್ ಡ್ರಗ್ಸ್‌ಗಳನ್ನು ತಯಾರಿಸುತ್ತಿರುವ ಲ್ಯಾಬ್ ಗಳು, ಸಂಗ್ರಹಣೆ ಗೋದಾಮು, ಸಾರಿಗೆ ವ್ಯವಸ್ಥೆ ಸೇರಿದಂತೆ ಯಾವುದೇ ರೀತಿಯ ಮಾಹಿತಿ ಇದ್ದರೂ ಸಾರ್ವಜನಿಕರು ಹಂಚಿಕೊಳ್ಳಬಹುದು. 


ಬೆಂಗಳೂರು(ಡಿ.07): 'ಡ್ರಗ್ಸ್ ಮುಕ್ತ ಕರುನಾಡ'ನ್ನಾಗಿಸುವ ನಿಟ್ಟಿನಲ್ಲಿ ಮುಂದಾಗಿರುವ ರಾಜ್ಯ ಪೊಲೀಸ್‌ ಇಲಾಖೆ, ಈಗ ಡ್ರಗ್ಸ್‌ ಮಾರಾಟ ಜಾಲದ ಕುರಿತು ಸಾರ್ವಜನಿಕರಿಂದ ಮಾಹಿತಿ ಸಂಗ್ರಹಿಸಲು ಪ್ರತ್ಯೇಕ ಆ್ಯಪ್ ಅಭಿವೃದ್ಧಿಪಡಿಸಿದೆ. 

'ಡ್ರಗ್ಸ್‌ ಫ್ರೀ ಕರ್ನಾಟಕ' ಹೆಸರಿನ ಆ್ಯಪ್ ಇದಾಗಿದ್ದು, ಗೂಗಲ್ ಪ್ಲೇ ಸ್ಟೋರ್‌ನಲ್ಲಿ ಆ್ಯಪ್ ಅನ್ನು ಡೌನ್ ಲೋಡ್ ಮಾಡಿಕೊಂಡು ಮಾಹಿತಿ ನೀಡುವಂತೆ ಇಲಾಖೆ ಕೋರಿದೆ. ಈ ಆ್ಯಪ್‌ನಲ್ಲಿ ಡ್ರಗ್ಸ್ ಬೇಸಾಯ, ಮಾರಾಟಗಾರರ, ಗ್ರಾಹಕರು, ಸಿಂಥೆಟಿಕ್ ಡ್ರಗ್ಸ್‌ಗಳನ್ನು ತಯಾರಿಸುತ್ತಿರುವ ಲ್ಯಾಬ್ ಗಳು, ಸಂಗ್ರಹಣೆ ಗೋದಾಮು, ಸಾರಿಗೆ ವ್ಯವಸ್ಥೆ ಸೇರಿದಂತೆ ಯಾವುದೇ ರೀತಿಯ ಮಾಹಿತಿ ಇದ್ದರೂ ಸಾರ್ವಜನಿಕರು ಹಂಚಿಕೊಳ್ಳಬಹುದು.  ಅಲ್ಲದೆ ಮಾಹಿತಿ ಕೊಟ್ಟವರ ಹೆಸರು, ವಿಳಾಸವನ್ನು ಗೌಪ್ಯವಾಗಿಡಲಾಗುತ್ತದೆ. ಡ್ರಗ್ಸ್ ಕುರಿತು ಇಂಗ್ಲೀಷ್ ಅಥವಾ ಕನ್ನಡದಲ್ಲಿ ವರದಿ ಮಾಡಲು ಅವಕಾಶ ಕಲ್ಪಿಸಲಾಗಿದೆ. 

Tap to resize

Latest Videos

ಅಂಡಮಾನಲ್ಲಿ 25000 ಕೋಟಿ ಮೌಲ್ಯದ ಡ್ರಗ್ಸ್ ವಶ: ಇಬ್ಬರು ಮ್ಯಾನ್ಮಾರ್ ಪ್ರಜೆಗಳ ಸೆರೆ

ಹೀಗೆ ಸಂಗ್ರಹಿಸುವ ಮಾಹಿತಿಯನ್ನು ಸ್ಥಳೀಯ ಪೊಲೀಸರು, ಡಿಸಿಪಿ, ಎಸ್ಪಿ ಹಾಗೂ ಹಿರಿಯ ಅಧಿಕಾರಿಗಳಿಗೆ ರವಾನಿಸಲಾಗುತ್ತದೆ. ಬಳಿಕ ಮಾಹಿತಿ ಪರಿಶೀಲಿಸಿ ಮುಂದಿನ ಕಾನೂನು ಕ್ರಮ ಜರುಗಿಸಲಾಗುತ್ತದೆ ಎಂದು ಇಲಾಖೆ ತಿಳಿಸಿದೆ.

ಜೈಲಲ್ಲಿರುವ ಬಾಸ್ ಸೂಚನೆಯಂತೆ ಪದವೀಧರರಿಂದ ಡ್ರಗ್ಸ್ ಮಾರಾಟ!

ಬೆಂಗಳೂರು: ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲಿರುವ ತಮ್ಮ ಬಾಸ್ ಸೂಚನೆ ಮೇರೆಗೆ ಡ್ರಗ್ ದಂಧೆ ನಡೆಸುತ್ತಿದ್ದ ಬಿಎಸ್ಸಿ ಪದವೀಧರ ಸೇರಿ ಇಬ್ಬರನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ. 
ಕುಮಾರಸ್ವಾಮಿ ಲೇಔಟ್‌ನ ಮಹಮ್ಮದ್ ಪ್ರೇಯಿ ಹಾಗೂ ನಾಗರಬಾವಿಯ ಗೌತಮ್ ಬಂಧಿತರಾಗಿದ್ದು, ಆರೋಪಿಗಳಿಂದ ಎಂಡಿ ಎಂಎ 15 ಗ್ರಾಂ,  ಹಾಶೀಶ್‌ ಆಯಿಲ್‌ ಹಾಗೂ  ಹೈಂಡೋ ಗಾಂಜಾ 505 ಗ್ರಾಂ ಸೇರಿ ದಂತೆ 271 'ಲಕ್ಷ ಮೌಲ್ಯದ ಡ್ರಗ್ಸ್ ಜಪ್ತಿ ಮಾಡಲಾಗಿದೆ. 

ಕೆಲ ದಿನಗಳಿಂದ ನಗರದಲ್ಲಿ ಡ್ರಗ್ ಜಾಲದಲ್ಲಿ ನಿರತರಾಗಿದ್ದ ಫೈಯ್ಲಿ ಹಾಗೂ ಗೌತಮ್ ಕುರಿತು ಬಾತ್ಮೀದಾರರ ಮೂಲಕ ಮಾಹಿತಿ ಸಿಕ್ಕಿತು. ಅಂತೆಯೇ ಕುಮಾರಸ್ವಾಮಿ ಲೇಔಟ್ ಸಮೀಪದ ಚಂದ್ರಾನಗರದಲ್ಲಿದ್ದ ಆರೋಪಿಗಳ ಮನೆ ಮೇಲೆ ಮೇಲೆ ದಾಳಿ ನಡೆಸಿ ಇನ್ಸ್ಪೆಕ್ಟರ್ ಮಹಮ್ಮದ್ ಮುಕ್ರಂ ನೇತೃತ್ವದ ತಂಡ ಬಂಧಿಸಿದೆ.

ಜೈಲಿನಿಂದಲೇ ಬಾಸ್ ಡೀಲ್: 

ಈ ಆರೋಪಿಗಳ ಪೈಕಿ ಫೈಯಿ ಮೂಲತಃ ಕೇರಳ ರಾಜ್ಯದವನಾಗಿದ್ದು, ಬನಶಂಕರಿ ಸಮೀಪ ಮಾಲ್‌ನಲ್ಲಿ ಆತ ಕೆಲಸ ಮಾಡುತ್ತಿದ್ದ. ಇನ್ನು ಬಿಎಸ್ಪಿ ಓದಿದ್ದ ಗೌತಮ್, ಖಾಸಗಿ ಕಂಪನಿಯಲ್ಲಿ ಉದ್ಯೋಗದಲ್ಲಿದ್ದ. ಆದರೆ ಸುಲಭವಾಗಿ ಹಣ ಸಂಪಾದನೆಗೆ ಈ ಇಬ್ಬರು ಡ್ರಗ್ ದಂಧೆಗಿಳಿದಿದರು. 

ಉತ್ತರ ಭಾರತೀಯರಿಂದಾಗಿ ಬೆಂಗಳೂರಿನಲ್ಲಿ ಕ್ರೈಂ ಹೆಚ್ಚಳ: ಫುಡ್ ಡೆಲಿವರಿ ಹೆಸರಿನಲ್ಲಿ ಡ್ರಗ್ಸ್ ಡೆಲಿವರಿ

ಕೆಲ ತಿಂಗಳ ಹಿಂದೆ ಡ್ರಗ್ ಪ್ರಕರಣದಲ್ಲಿ ಆರೋಪಿಗಳ ಬಾಸ್ ಬಂಧಿತನಾಗಿ ಪರಪನ ಅಗ್ರಹಾರ ಕೇಂದ್ರ ಕಾರಾಗೃಹ ಸೇರಿದ್ದಾನೆ. ಬಳಿಕ ಜೈಲಿನಿಂದ ಆತ ನೀಡುತ್ತಿದ್ದ ಸೂಚನೆ ಮೇರೆಗೆ ಕಳೆದ ಮೂರು ತಿಂಗಳಿಂದ ಫೈಯ್ಲಿ ಹಾಗೂ ಗೌತಮ್ ಡ್ರಗ್ ದಂಧೆ ಮುಂದುವ ರೆಸಿದ್ದರು. ಹೊರ ರಾಜ್ಯಗಳಿಂದ ಕಡಿಮೆ ಬೆಲೆಗೆ ಡ್ರಗ್ಸ್ ತಂದು ನಗರದಲ್ಲಿ ದುಬಾರಿ ಬೆಲೆಗೆ ಇಬ್ಬರು ಮಾರುತ್ತಿದ್ದರು. ವಿಚಾರಣೆ ವೇಳೆ ಜೈಲಿನಲ್ಲಿರುವ ತಮ್ಮ ಬಾಸ್ ಕುರಿತು ಆರೋಪಿಗಳು ಬಾಯ್ದಿಟ್ಟಿದ್ದು. ನ್ಯಾಯಾಲಯದ ಅನುಮತಿ ಪಡೆದು ಆತನನ್ನು ವಶಕ್ಕೆ ಪಡೆಯಲಾಗುತ್ತದೆ ಎಂದು ಸಿಸಿಬಿ ಅಧಿಕಾರಿಗಳು ತಿಳಿಸಿದ್ದಾರೆ. ಇನ್ನು ಈ ಆರೋಪಿಗಳು ಕೂಡ ವೃತ್ತಿಪರ ಪೆಡ್ಡರ್ ಗಳಾಗಿದ್ದು, ಈ ಹಿಂದೆ ಗೌತಮ್ ವಿರುದ್ಧ ಜ್ಞಾನಭಾರತಿ ಠಾಣೆಯಲ್ಲಿ ಡ್ರಗ್ಸ್ ಪ್ರಕರಣ ದಾಖಲಾಗಿತ್ತು.

ಕೊಡಿಗೇಹಳ್ಳಿ ಪೊಲೀಸರಿಗೆ ಸಿಕ್ಕಿಬಿದ್ದ ಗಾಂಜಾ ಪೆಡ್ಲರ್ಸ್

ಕೊಡಿಗೇಹಳ್ಳಿ ಪೊಲೀಸರು ನಡೆಸಿದ ಮತ್ತೊಂದು ಕಾರ್ಯಾಚರಣೆಯಲ್ಲಿ ಗಾಂಜಾ ಮಾರುತ್ತಿದ್ದ ನಾಲ್ವರು ಸಿಕ್ಕಿಬಿದ್ದಿದ್ದಾರೆ. ಹೊರ ರಾಜ್ಯದಿಂದ ಕಡಿಮೆ ಬೆಲೆಗೆ ಗಾಂಜಾ ತಂದು ನಗರದಲ್ಲಿ ಆರೋಪಿಗಳು ದುಬಾರಿ ಬೆಲೆಗೆ ಮಾರಾಟ ಮಾಡುತ್ತಿದ್ದರು. ಈ ನಾಲ್ವರಿಂದ ₹8.6 ಲಕ್ಷ ಮೌಲ್ಯದ 8.6 ಕೇಜಿ ಗಾಂಜಾ ಹಾಗೂ ಆಟೋ ಜಪ್ತಿ ಮಾಡಲಾಗಿದೆ ಎಂದು ಅಧಿಕಾರಿಗಳು ವಿವರಿಸಿದ್ದಾರೆ.

click me!