ಕಲಬುರಗಿ: ಪರೀಕ್ಷೆಯಲ್ಲಿ ನಕಲು ಪ್ರಶ್ನಿಸಿದ್ದಕ್ಕೆ ಪ್ರೊಫೆಸರ್ ಮೇಲೆಯೇ ಹಲ್ಲೆ ಮಾಡಿದ ಮೆಡಿಕಲ್ ವಿದ್ಯಾರ್ಥಿ

Published : Feb 20, 2026, 09:42 PM IST
student assaults professor

ಸಾರಾಂಶ

ವೈದ್ಯಕೀಯ ವಿದ್ಯಾರ್ಥಿಗಳ ಅಂತರಿಕ ಪರೀಕ್ಷೆಯಲ್ಲಿ ರಾಜಾರೋಷವಾಗಿ ಮೊಬೈಲ್ ಫೋನ್ ಹಿಡಿದುಕೊಂಡು ನಕಲು ಮಾಡುತ್ತಿದ್ದ ವಿದ್ಯಾರ್ಥಿಯನ್ನು ಪ್ರಶ್ನಿಸಿದ್ದಕ್ಕೆ ಸಿಟ್ಟಿಗೆದ್ದ ವಿದ್ಯಾರ್ಥಿ ಕಾಲೇಜಿನ ಪ್ರೊಫೆಸರ್ ಮೇಲೆಯೇ ಹಲ್ಲೆ ಮಾಡಿದಂತಹ ಘಟನೆ ರಾಜ್ಯದ ಕಲಬುರಗಿ ಜಿಲ್ಲೆಯಲ್ಲಿ ನಡೆದಿದೆ.

ಹೋಮಿಯೋಪತಿ ಮೆಡಿಕಲ್ ವಿದ್ಯಾರ್ಥಿಯಿಂದ ಪರೀಕ್ಷೆಯಲ್ಲಿ ನಕಲು:

ಕಲಬುರಗಿ: ವೈದ್ಯಕೀಯ ವಿದ್ಯಾರ್ಥಿಗಳ ಅಂತರಿಕ ಪರೀಕ್ಷೆಯಲ್ಲಿ ರಾಜಾರೋಷವಾಗಿ ಮೊಬೈಲ್ ಫೋನ್ ಹಿಡಿದುಕೊಂಡು ನಕಲು ಮಾಡುತ್ತಿದ್ದ ವಿದ್ಯಾರ್ಥಿಯನ್ನು ಪ್ರಶ್ನಿಸಿದ್ದಕ್ಕೆ ಸಿಟ್ಟಿಗೆದ್ದ ವಿದ್ಯಾರ್ಥಿ ಕಾಲೇಜಿನ ಪ್ರೊಫೆಸರ್ ಮೇಲೆಯೇ ಹಲ್ಲೆ ಮಾಡಿದಂತಹ ಘಟನೆ ರಾಜ್ಯದ ಕಲಬುರಗಿ ಜಿಲ್ಲೆಯಲ್ಲಿ ನಡೆದಿದೆ. ಇಲ್ಲಿನ ಡಾ. ಮಾಲಕರೆಡ್ಡಿ ಹೋಮಿಯೋಪತಿ ಕಾಲೇಜಿನಲ್ಲಿ ಈ ಘಟನೆ ನಡೆದಿದೆ. ಕಾಲೇಜಿನ ನಿಯಮಿತ ಆಂತರಿಕ ಪರೀಕ್ಷೆ ವೇಳೆ ವಿದ್ಯಾರ್ಥಿಯೋರ್ವ ಮೊಬೈಲ್ ಫೋನ್ ನೋಡಿ ಪರೀಕ್ಷೆ ಬರೆಯುತ್ತಿರುವುದನ್ನು ಪ್ರೊಫೆಸರ್ ಗಮನಿಸಿದ್ದಾರೆ. ಇದನ್ನು ಪ್ರಶ್ನಿಸಿದಾಗ ಆತ ಪ್ರೊಫೆಸರ್ ಮೇಲೆಯೇ ಹಲ್ಲೆ ಮಾಡಿದ್ದಾನೆ.

ಪ್ರಶ್ನಿಸಿದ ಪ್ರೊಫೆಸರ್ ಮೇಲೆ ಹಲ್ಲೆ ಮಾಡಿದ ರೌಡಿ ವಿದ್ಯಾರ್ಥಿ:

ಹೋಮಿಯೋಪತಿಕ್ ಮೆಟೀರಿಯಾ ಮೆಡಿಕಾ ವಿಷಯದ ಪರೀಕ್ಷೆ ನಡೆಯುತ್ತಿದ್ದ ಸಮಯದಲ್ಲಿ ಘಟನೆ ನಡೆದಿದ್ದು, ಘಟನೆಯ ವೀಡಿಯೋ ಪರೀಕ್ಷೆ ನಡೆಯುತ್ತಿದ್ದ ಕಾಲೇಜಿನ ಸಭಾಂಗಣದ ಸಿಸಿಟಿವಿ ಕ್ಯಾಮೆರಾಗಳಲ್ಲಿ ಸೆರೆಯಾಗಿದೆ. ಪ್ರೊಫೆಸರ್ ಮೇಲೆ ಹಲ್ಲೆ ಮಾಡಿದ ವಿದ್ಯಾರ್ಥಿಯನ್ನು ಶಹಬಾಜ್ ಎಂದು ಗುರುತಿಸಲಾಗಿದೆ. ಘಟನೆಯ ವೈರಲ್ ಆದ ಸಿಸಿಟಿವಿ ದೃಶ್ಯಗಳಲ್ಲಿ ಕಾಣುವಂತೆ ಪರೀಕ್ಷಾ ಮೇಲ್ವಿಚಾರಕಾರದ ಸಹಾಯಕ ಪ್ರಾಧ್ಯಾಪಕ ಶಿವರಾಜ್‌ಕುಮಾರ್ ಎಂಬುವವರು ಶಹಬಾಜ್ ಎಂಬ ವಿದ್ಯಾರ್ಥಿ ಮೊಬೈಲ್ ಫೋನ್ ಬಳಸಿ ಉತ್ತರಗಳನ್ನು ನಕಲು ಮಾಡುತ್ತಿರುವುದನ್ನು ರೆಡ್ ಹ್ಯಾಂಡ್ ಆಗಿ ಹಿಡಿದಿದ್ದಾರೆ. ಬಳಿಕ ಆತನನ್ನು ಈ ಬಗ್ಗೆ ಪ್ರಶ್ನೆ ಮಾಡಿದ್ದಾರೆ. ಉತ್ತರ ಪತ್ರಿಕೆಯನ್ನು ವಶಪಡಿಸಿಕೊಂಡು ಶಹಬಾಜ್‌ನನ್ನು ಪರೀಕ್ಷಾ ಕೊಠಡಿಯಿಂದ ಹೊರ ನಡೆಯುವಂತೆ ಹೇಳಿದಾಗ ಕುಪಿತಗೊಂಡ ಆ ವಿದ್ಯಾರ್ಥಿ ಶಿಕ್ಷಕರ ಮೇಲೆಯೇ ಹಲ್ಲೆ ಮಾಡಿದ್ದಾನೆ.

ಇದನ್ನೂ ಓದಿ: ಅಮ್ಮನ ಅಂಬಾರಿ ಮೇಲೆ ಮಗನ ಸವಾರಿ: ಹುಲ್ಲಿನ ಹೊರೆಯಲ್ಲೇ ಮಗನಿಗೆ ಅಂಬಾರಿ ತೋರಿಸಿದ ಹಳ್ಳಿಯ ತಾಯಿ: ವೀಡಿಯೋ ವೈರಲ್

ಕೂಡಲೇ ಅಲ್ಲಿದ್ದ ಇತರ ವಿದ್ಯಾರ್ಥಿಗಳು ಶಹಬಾಜ್‌ನನ್ನು ತಡೆದು ದೂರ ಎಳೆದೊಯ್ಯಲು ಮುಂದಾದರು, ಆದರೆ ಘರ್ಷಣೆ ಅಲ್ಲಿಗೆ ಮುಗಿಯಲಿಲ್ಲ. ಶಹಬಾಜ್ ಸಭಾಂಗಣದ ನಿರ್ಗಮನದ ಬಾಗಿಲಿನ ಕಡೆಗೆ ಸ್ವಲ್ಪ ದೂರ ನಡೆದುಕೊಂಡು ಹೋಗಿದ್ದಾನೆ. ಕೆಲವೇ ಸೆಕೆಂಡುಗಳಲ್ಲಿ ಆತ ಹಿಂತಿರುಗಿ ಬಂದು ಪ್ರಾಧ್ಯಾಪಕರನ್ನು ಹೊಡೆದುರುಳಿಸಿದ್ದಾನೆ. ಈ ದೃಶ್ಯ ಸಿಸಿಟಿವಿಯಲ್ಲಿ ಸೆರೆ ಆಗಿದೆ.

ಇದನ್ನೂ ಓದಿ: ನಾವು ದೇಶಕ್ಕಾಗಿ ಹೋರಾಡಿದೆವು ಆದರೆ ದೇಶ ನಮ್ಮ ಕೈ ಬಿಟ್ಟಿತು: ಬಲೂಚ್‌ ಹೋರಾಟಗಾರರ ಕೈಗೆ ಸಿಕ್ಕಿದ ಪಾಕ್ ಯೋಧರ ಅಳಲು

ಹಲ್ಲೆಯ ನಂತರ, ಕಾಲೇಜು ಆಡಳಿತ ಮಂಡಳಿಯು ಶಹಬಾಜ್‌ನ ಪೋಷಕರಿಗೆ ಘಟನೆ ಬಗ್ಗೆ ಮಾಹಿತಿ ನೀಡಿ ಭವಿಷ್ಯದ ಎಲ್ಲಾ ಪರೀಕ್ಷೆಗಳಿಂದ ಅವನನ್ನು ನಿಷೇಧಿಸುವ ತಕ್ಷಣದ ನಿರ್ಧಾರವನ್ನು ತೆಗೆದುಕೊಂಡಿದೆ. ಸಿಸಿಟಿವಿ ದೃಶ್ಯಾವಳಿಗಳಿಂದ ಸ್ಪಷ್ಟ ಸಾಕ್ಷಿ ಸಿಕ್ಕಿದರೂ ಘಟನೆಗೆ ಸಂಬಂಧಿಸಿದಂತೆ, ಸಹಾಯಕ ಪ್ರಾಧ್ಯಾಪಕ ಶಿವರಾಜ್‌ಕುಮಾರ್ ಇದುವರೆಗೆ ಯಾವುದೇ ಪೊಲೀಸ್ ದೂರು ದಾಖಲಿಸಿಲ್ಲ. ಅದೇನೆ ಇರಲಿ ಬೇರೆ ವಿದ್ಯಾರ್ಥಿಗಳು ನಕಲು ಮಾಡಿ ಪಾಸಾದರೆ ಒಂದು ಸಮಯ ಸಹಿಸಿಕೊಳ್ಳಬಹುದು. ಆದರೆ ಮೆಡಿಕಲ್ ವಿದ್ಯಾರ್ಥಿಗಳು ನಕಲು ಮಾಡಿ ಪಾಸಾಗಿ ವೈದ್ಯರಾದರೆ ರೋಗಿಗಳ ಕತೆ ಏನು?

 

 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಹಳಿ ತಪ್ಪಿತಾ ಕರ್ನಾಟಕದ ಅಷ್ಟೂ ರೈಲ್ವೆ ಯೋಜನೆಗಳು! ಭೂಸ್ವಾಧೀನ ಮಾಡಿಕೊಳ್ಳೋದೇ ದೊಡ್ಡ ಸವಾಲು, ಇಲ್ಲಿದೆ ಲಿಸ್ಟ್
ಬಾಗಲಕೋಟೆ ಶಿವಾಜಿ ಮೆರವಣಿಗೆಗೆ ಕಲ್ಲು ತೂರಿದ ಮುಸ್ಲಿಂ ಮತಾಂಧರಿಗೆ ಪಾಕಿಸ್ತಾನ ನಂಟಿನ ಶಂಕೆ; ಆರ್. ಅಶೋಕ್