Latest Videos

Egg Distribution in Schools: ಮಕ್ಕಳಿಗೆ ಮೊಟ್ಟೆ ಕೊಟ್ಟರೆ ತಪ್ಪಲ್ಲ: ಬಿಜೆಪಿ ಶಾಸಕ ರಘುಪತಿ ಭಟ್

By Suvarna NewsFirst Published Dec 10, 2021, 12:37 PM IST
Highlights

*  ಮೊಟ್ಟೆ ವಿತರಣೆ ಮಾಡದೆ ಇರುವುದು ಸೂಕ್ತ ಅಲ್ಲ
*  ಸಣ್ಣ ವಯಸ್ಸಿಗೆ ಮಕ್ಕಳು ಮೊಟ್ಟೆಗೆ ಪ್ರಭಾವಿತರಾಗುವುದಿಲ್ಲ 
*  ಮಕ್ಕಳಿಗೆ ಮೊಟ್ಟೆ ವಿತರಿಸುವ ಯೋಜನೆ ಕೈಬಿಡಿ

ಉಡುಪಿ(ಡಿ.10): ಮೊಟ್ಟೆ(Egg) ವಿತರಣೆ ಆದರೆ ಎಲ್ಲರೂ ತಿನ್ನಲೇಬೇಕು ಅಂತ ಇಲ್ಲ. ಮೊಟ್ಟೆ ಕೊಟ್ಟರೆ ಅದು ತಪ್ಪು ಎಂದು ನನಗೆ ಅನ್ನಿಸುವುದಿಲ್ಲ. ವೆಜಿಟೇರಿಯನ್(Vegetarian) ಇದ್ದ ಮಕ್ಕಳು(Children) ಮೊಟ್ಟೆ ತಿನ್ನುವುದಿಲ್ಲ. ಮೊಟ್ಟೆ ವಿತರಣೆ ಸಂದರ್ಭ ಪ್ರತ್ಯೇಕ ಟೇಬಲ್ ಪ್ರತ್ಯೇಕ ಕೊಠಡಿ ರಚನೆಯಾಗಲಿ. ಶಾಲೆಯಲ್ಲಿ ಪ್ರತ್ಯೇಕ ವ್ಯವಸ್ಥೆ ಮಾಡಿದರೆ ಸೂಕ್ತ ಅಂತ ಉಡುಪಿ(Udupi) ಶಾಸಕ ರಘುಪತಿ ಭಟ್(Raghupathi Bhat) ಹೇಳಿದ್ದಾರೆ.

ರಾಜ್ಯಾದ್ಯಂತ(Karnataka) ಶಾಲಾ ಮಕ್ಕಳಿಗೆ ಮೊಟ್ಟೆ ವಿತರಣೆ ವಿಚಾರಕ್ಕೆ ಸಂಬಂಧಿಸಿದಂತೆ ಇಂದು(ಶುಕ್ರವಾರ) ನಗರದಲ್ಲಿ ಮಾಧಮದವರೊಂದಿಗೆ ಮಾತನಾಡಿದ ರಘುಪತಿ ಭಟ್, ಮೊಟ್ಟೆ ವಿತರಣೆ ಮಾಡದೆ ಇರುವುದು ಸೂಕ್ತ ಅಲ್ಲ. ಸಣ್ಣ ವಯಸ್ಸಿಗೆ ಮಕ್ಕಳು ಮೊಟ್ಟೆಗೆ ಪ್ರಭಾವಿತರಾಗುವುದಿಲ್ಲ ಅಂತ ಹೇಳಿದ್ದಾರೆ. 

Egg Distribution in School : ಮೊಟ್ಟೆ ವಿತರಣೆ ಕೈ ಬಿಡದಿದ್ದರೆ ಸರ್ಕಾರವನ್ನೇ ಉರುಳಿಸುವ ಎಚ್ಚರಿಕೆ

ಶಾಲೆಯ ಮಕ್ಕಳಿಗೆ ಮೊಟ್ಟೆಬೇಡ: ಪೇಜಾವರ ಶ್ರೀ

ಉಡುಪಿ: ಶಾಲೆಗಳಲ್ಲಿ ಮಕ್ಕಳಿಗೆ ಮೊಟ್ಟೆ ನೀಡುವುದಕ್ಕೆ ಪೇಜಾವರ ಮಠದ ಶ್ರೀ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ(Vishwaprasanna Teertha Swamiji) ಅವರು ವಿರೋಧ ವ್ಯಕ್ತಪಡಿಸಿದ್ದಾರೆ.

ಆಹಾರದ(Food) ವಿಷಯದಲ್ಲಿ ಎಲ್ಲರಿಗೂ ಸ್ವಾತಂತ್ರ್ಯವಿದೆ. ಆದರೆ ತಮ್ಮ ಆಹಾರದ ಸ್ವಾತಂತ್ರ್ಯದ ಬಗ್ಗೆ ಚಿಕ್ಕ ಮಕ್ಕಳಿಗೆ ತಿಳುವಳಿಕೆ ಇರುವುದಿಲ್ಲ. ಸರ್ಕಾರ(Government of Karnataka) ಸಾಮೂಹಿಕವಾಗಿ ಮೊಟ್ಟೆ ನೀಡುವುದರಿಂದ ಸಮಾಜಕ್ಕೆ(Society) ಕೆಟ್ಟ ಸಂದೇಶ ನೀಡಿದಂತಾಗುತ್ತದೆ. ಸರ್ಕಾರ ಮಕ್ಕಳೊಳಗೆ ಬೇಧ ಉಂಟು ಮಾಡಬಾರದು. ಯಾರು ಏನು ಸೇವಿಸುತ್ತಾರೋ ಅದರ ಖರ್ಚುನ್ನು ಸರ್ಕಾರ ನೀಡಲಿ. ಶಾಲೆ ಇರುವುದು ಶಿಕ್ಷಣಕ್ಕಾಗಿ. ಆದರೆ ಅಲ್ಲಿ ಮಕ್ಕಳ ಜೀವನಶೈಲಿಯನ್ನು ಬದಲಿಸುವ ಕೆಲಸವನ್ನು ಸರ್ಕಾರ ಮಾಡಬಾರದು ಎಂದವರು ಅಭಿಪ್ರಾಯಪಟ್ಟಿದ್ದಾರೆ.

ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮತಾಂತರದ(Conversion) ಹಾವಳಿಯನ್ನು ಸರ್ಕಾರ ಕಾಯ್ದೆಯ ಮೂಲಕ ನಿಯಂತ್ರಿಸಬೇಕು ಎಂದರು. ಮಂಗಳೂರಿನಲ್ಲಿ(Mangaluru) ಇಡೀ ಕುಟುಂಬವೇ ಮತಾಂತರದ ಹಾವಳಿಗೆ ಆತ್ಮಹತ್ಯೆ(Suicide) ಮಾಡಿಕೊಂಡಿರುವುದು ನಿಜಕ್ಕೂ ದುರಂತ. ಮನಃಪೂರ್ವಕವಾಗಿ ಯಾರಾದರೂ ಮತಾಂತರವಾದರೆ ನಮ್ಮ ಆಕ್ಷೇಪವಿಲ್ಲ, ಆದರೆ ಒತ್ತಡ ಆಮಿಷ- ಬಲವಂತದಿಂದ ಮತಾಂತರ ಮಾಡಿದರೆ ಅದನ್ನು ಸಹಿಸಲಾಗುವುದಿಲ್ಲ. ಇದು ಸಮಾಜ ಒಡೆಯುವ ಕೃತ್ಯವಾಗಿದೆ. ಇದರಿಂದ ಸಮಾಜದಲ್ಲಿ ವೈಷಮ್ಯ ಸೃಷ್ಟಿಯಾಗುತ್ತದೆ ಎಂದವರು ಅಭಿಪ್ರಾಯಪಟ್ಟರು.

ಮಕ್ಕಳಿಗೆ ಮೊಟ್ಟೆ ವಿತರಿಸುವ ಯೋಜನೆ ಕೈಬಿಡಿ

ಬೆಳಗಾವಿ(Belagavi): ಶಾಲಾ ಮಕ್ಕಳಿಗೆ ಮೊಟ್ಟೆ ವಿತರಿಸುವ ಯೋಜನೆ ರದ್ದುಗೊಳಿಸಬೇಕು ಎಂದು ಆಗ್ರಹಿಸಿ ಸಸ್ಯಾಹಾರಿ ನಾಗರಿಕ ಒಕ್ಕೂಟದ ಪದಾಧಿಕಾರಿಗಳು ಗುರುವಾರ ಬೆಳಗಾವಿ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿದರು.

Egg Scheme : ಶಾಲಾ‌ ಮಕ್ಕಳಿಗೆ ಮೊಟ್ಟೆ ಆದೇಶ ವಾಪಸ್ ಪಡೆಯದಿದ್ದಲ್ಲಿ ಹೋರಾಟ, ಸ್ವಾಮೀಜಿಗಳಿಂದ ಎಚ್ಚರಿಕೆ

ಶಾಲೆಗಳಲ್ಲಿ(Schools) ಏಕರೂಪದ ಸಮವಸ್ತ್ರ, ಏಕರೂಪದ ಪಠ್ಯ ಇದೆ. ಹಾಗಾಗಿ, ಆಹಾರ ವಿಚಾರದಲ್ಲಿ ತಾರತಮ್ಯ ಏಕೆ ಮಾಡಲಾಗುತ್ತಿದೆ. ಮೊಟ್ಟೆವಿತರಣೆಯಿಂದ ವಿದ್ಯಾರ್ಥಿಗಳಲ್ಲಿ(Students) ಬೇಧ, ಭಾವ ಸೃಷ್ಟಿಸುವಂತಾಗಿದೆ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ(Basavaraj Bommai) ಅವರು ಇಂತಹ ಯೋಜನೆ ಕೈಗೊಳ್ಳಬಾರದಿತ್ತು. ಈ ಹಿಂದೆ ವೀರಪ್ಪ ಮೊಯ್ಲಿ ಸರ್ಕಾರ, ಬಿಜೆಪಿ- ಜೆಡಿಎಸ್‌(BJP-JDS) ಮೈತ್ರಿ ಸರ್ಕಾರದ(Allied Government) ಅವಧಿಯಲ್ಲೂ ಇಂತಹ ಕೆಲಸಕ್ಕೆ ಮುಂದಾಗಿತ್ತು. ಆದರೆ, ಇದಕ್ಕೆ ತೀವ್ರ ವಿರೋಧ ವ್ಯಕ್ತವಾದ ಹಿನ್ನೆಲೆಯಲ್ಲಿ ಆ ಯೋಜನೆ ಕೈಬಿಡಲಾಗಿತ್ತು. ಆದರೆ, ಈಗ ಮತ್ತೆ ಮೊಟ್ಟೆ ವಿತರಿಸುವ ಯೋಜನೆ ಹಾಕಿಕೊಳ್ಳಲಾಗಿದೆ. ಸರ್ಕಾರ ಕೂಡಲೇ ಈ ಯೋಜನೆಯನ್ನು ಹಿಂದಕ್ಕೆ ಪಡೆಯಬೇಕು ಎಂದು ಆಗ್ರಹಿಸಿದರು.

ಮನೆಗಳಲ್ಲಿ ಆಹಾರ ಕೊಡುತ್ತಿರುವುದನ್ನು ನಮ್ಮ ವಿರೋಧವಿಲ್ಲ. ಆದರೆ, ಶಾಲೆಗಳಲ್ಲಿ ಸಾರ್ವಜನಿಕವಾಗಿ ಮೊಟ್ಟೆ ವಿತರಿಸುವುದಕ್ಕೆ ನಮ್ಮ ವಿರೋಧವಿದೆ. ಸರ್ಕಾರ ಈ ಯೋಜನೆ ಹಿಂಪಡೆಯದಿದ್ದರೆ ಉಗ್ರ ಹೋರಾಟ ಅನಿವಾರ್ಯವಾಗುತ್ತದೆ ಎಂದು ಎಚ್ಚರಿಕೆ ನೀಡಿದರು. ಬೆಳಗಾವಿ ವಿಶ್ವಗುರು ಬಸವ ಮಂಟಪದ ಅಧ್ಯಕ್ಷ ಬಸವಪ್ರಕಾಶ ಸ್ವಾಮೀಜಿ, ಆನಂದ ಗುಡಸ, ಶಂಕರ ಗುಡಸ, ರಾಜೇಂದ್ರ ಜೈನ್‌, ಕೆ.ಬಸವರಾಜ, ಅಶೋಕ ಬೆಂಡಿಗೇರಿ ಮೊದಲಾದವರು ಪಾಲ್ಗೊಂಡಿದ್ದರು.
 

click me!