Karnataka MLC Elections 2021: ಇಂದು ಮೇಲ್ಮನೆಯ 25 ಸ್ಥಾನಗಳಿಗೆ ಮತದಾನ: 90 ಅಭ್ಯರ್ಥಿಗಳ ಕದನ

By Kannadaprabha NewsFirst Published Dec 10, 2021, 7:05 AM IST
Highlights

*ಬೆಳಗ್ಗೆ 8ರಿಂದ ಸಂಜೆ 4ರವರೆಗೆ ಮತದಾನ, ಡಿ.14ಕ್ಕೆ ಫಲಿತಾಂಶ
*6072 ಒಟ್ಟು ಮತಗಟ್ಟೆಗಳ ಸಂಖ್ಯೆ -ಒಟ್ಟು 99062 ಮತದಾರರು
*47205 ಪುರುಷ ಮತದಾರರು - 51854 ಮಹಿಳಾ ಮತದಾರರು

ಬೆಂಗಳೂರು(ಡಿ. 10): ಆಡಳಿತಾರೂಢ ಬಿಜೆಪಿ (BJP) ಮತ್ತು ಪ್ರತಿಪಕ್ಷ ಕಾಂಗ್ರೆಸ್‌ (Congress), ಜೆಡಿಎಸ್‌ (JDS) ಪಕ್ಷಗಳಿಗೆ ಪ್ರತಿಷ್ಠೆಯ ಕಣವಾಗಿರುವ ವಿಧಾನಪರಿಷತ್‌ ಚುನಾವಣೆಗೆ (Karnataka MLC Elections 2021) ಶುಕ್ರವಾರ ಮತದಾನ ನಡೆಯಲಿದ್ದು, ಶಾಂತಿಯುತವಾಗಿ ಚುನಾವಣೆ ನಡೆಸಲು ಚುನಾವಣಾ ಆಯೋಗವು ಸಕಲ ಸಿದ್ಧತೆ ಕೈಗೊಂಡಿದೆ. 25 ಸ್ಥಾನಗಳಿಗೆ ನಡೆಯುವ ಚುನಾವಣೆಯಲ್ಲಿ ಒಟ್ಟು 90 ಅಭ್ಯರ್ಥಿಗಳ ರಾಜಕೀಯ ಭವಿಷ್ಯ ಶುಕ್ರವಾರ ತೀರ್ಮಾನವಾಗಲಿದೆ. ಬೆಳಗ್ಗೆ 8ರಿಂದ ಸಂಜೆ 4 ಗಂಟೆಯವರೆಗೆ ಮತದಾನ ನಡೆಯಲಿದೆ. 

ಈಗಾಗಲೇ ಚುನಾವಣೆಗೆ ನಿಯೋಜನೆಗೊಂಡ ಸಿಬ್ಬಂದಿಗಳು ತಮ್ಮ ಕಾರ್ಯ ಮತಗಟ್ಟೆಗಳಿಗೆ ತೆರಳಿ ತಯಾರಿ ಕೈಗೊಂಡಿದ್ದಾರೆ. ಕೋವಿಡ್‌ ನಿಯಮಗಳನ್ನು (Covid 19 Guidelines) ಕಡ್ಡಾಯವಾಗಿ ಪಾಲನೆ ಮಾಡಬೇಕು ಎಂದು ಆಯೋಗವು ಕಟ್ಟುನಿಟ್ಟಾಗಿ ಸೂಚನೆ ನೀಡಿದೆ. ಮಾಸ್ಕ್‌ ಧರಿಸುವುದು, ಸ್ಯಾನಿಟೈಸ್‌ ಬಳಕೆ ಮಾಡುವುದು ಮತ್ತು ಮತದಾನ ವೇಳೆ ಅಂತರ ಕಾಯ್ದುಕೊಳ್ಳಬೇಕು ಎಂಬ ನಿರ್ದೇಶನ ನೀಡಲಾಗಿದೆ.

20 ಜಿಲ್ಲಾ ಕೇಂದ್ರದಲ್ಲಿ ಮತ ಎಣಿಕೆ ಕೇಂದ್ರ!

ರಾಜ್ಯದಲ್ಲಿ 6072 ಮತಗಟ್ಟೆಗಳನ್ನು ಸ್ಥಾಪಿಸಲಾಗಿದೆ. ಒಟ್ಟು 99062 ಮತದಾರರಿದ್ದು, ಈ ಪೈಕಿ 47,205 ಪುರುಷರು, 51854 ಮಹಿಳೆಯರು ಮತ್ತು ಮೂವರು ಇತರರು ಇದ್ದಾರೆ. 7073 ಮತಗಟ್ಟೆರಿಟನ್ಸ್‌ರ್‍ ಅಧಿಕಾರಿಗಳು, 9344 ಮತಗಟ್ಟೆಅಧಿಕಾರಿಗಳು ಮತ್ತು 6648 ಸೂಕ್ಷ್ಮ ವೀಕ್ಷಕರನ್ನು ನೇಮಿಸಲಾಗಿದೆ. ಡಿ.14ರಂದು ಮತ ಎಣಿಕೆ ನಡೆಯಲಿದ್ದು, 20 ಜಿಲ್ಲಾ ಕೇಂದ್ರದಲ್ಲಿ ಮತ ಎಣಿಕೆ ಕೇಂದ್ರಗಳನ್ನು ಸ್ಥಾಪಿಸಲಾಗಿದೆ.

Karnataka Politics: 'ಜೆಡಿಎಸ್ ಬೆಂಬಲ ಇಲ್ಲದಿದ್ದರೆ ಡಿಕೆ ಸಹೋದರರು ಗೆಲ್ಲುತ್ತಿರಲಿಲ್ಲ'

ಬಿಜೆಪಿ ಮತ್ತು ಕಾಂಗ್ರೆಸ್‌ನಿಂದ ತಲಾ 20 ಅಭ್ಯರ್ಥಿಗಳು, ಜೆಡಿಎಸ್‌ನಿಂದ ಆರು ಅಭ್ಯರ್ಥಿಗಳು ಸೇರಿದಂತೆ 90 ಅಭ್ಯರ್ಥಿಗಳ ನಡುವೆ ನೇರ ಹಣಾಹಣಿ ಇದೆ. 90 ಅಭ್ಯರ್ಥಿಗಳ ಪೈಕಿ ಮಹಿಳಾ ಅಭ್ಯರ್ಥಿಯು ಒಬ್ಬರೇ ಮಾತ್ರ ಸ್ಪರ್ಧಿಸಿದ್ದಾರೆ. ಎಎಪಿಯಿಂದ 3, ರೈತ ಭಾರತ ಪಕ್ಷ, ಕರ್ನಾಟಕ ರಾಷ್ಟ್ರ ಸಮಿತಿ ಮತ್ತು ಕನ್ನಡ ಚಳವಳಿ ಪಕ್ಷ, ಜನ ಹಿತ ಪಕ್ಷ ಜೆಡಿಯು, ಎಸ್‌ಡಿಪಿಐನಿಂದ ತಲಾ ಒಬ್ಬರು, ಜನತಾ ಪಕ್ಷ ಇಬ್ಬರು ಸ್ಪರ್ಧಿಸಿದ್ದಾರೆ. 33 ಅಭ್ಯರ್ಥಿಗಳು ಪಕ್ಷೇತರರಾಗಿ ಕಣದಲ್ಲಿದ್ದಾರೆ. ಬೀದರ್‌, ಕಲಬುರಗಿ, ವಿಜಯಪುರ, ಬೆಳಗಾವಿ, ಉತ್ತರ ಕನ್ನಡ, ಧಾರವಾಡ, ರಾಯಚೂರು, ಬಳ್ಳಾರಿ, ಚಿತ್ರದುರ್ಗ, ಶಿವಮೊಗ್ಗ, ದಕ್ಷಿಣ ಕನ್ನಡ, ಚಿಕ್ಕಮಗಳೂರು, ಹಾಸನ, ತುಮಕೂರು, ಮಂಡ್ಯ, ಬೆಂಗಳೂರು, ಬೆಂಗಳೂರು ಗ್ರಾಮಾಂತರ, ಕೋಲಾರ, ಕೊಡಗು ಮತ್ತು ಮೈಸೂರು ಕ್ಷೇತ್ರದಲ್ಲಿನ 25 ಸ್ಥಾನಗಳಿಗೆ ಮತದಾನ ನಡೆಯಲಿದೆ.

ಎಲ್ಲೆಲ್ಲಿ ಮತ ಎಣಿಕೆ?

ಬೀದರ್‌ ಮತಕ್ಷೇತ್ರದ ಮತ ಎಣಿಕೆಯು ಬಿವಿಬಿ ಪಿಯು ಕಾಲೇಜಿನಲ್ಲಿ ನಡೆಯಲಿದೆ. ಕಲಬುರ್ಗಿ ಕ್ಷೇತ್ರದ ಮತ ಎಣಿಕೆ ಗುಲ್ಬರ್ಗಾ ವಿಶ್ವವಿದ್ಯಾಲಯ, ವಿಜಯಪುರ ಕ್ಷೇತ್ರದ ಮತ ಎಣಿಕೆ ವಿ.ಬಿ.ದರ್ಬಾರ್‌ ಪ್ರೌಢಶಾಲೆ ಆವರಣದಲ್ಲಿನ ಪಿಯು ಕಾಲೇಜು, ಉತ್ತರ ಕನ್ನಡ ಕ್ಷೇತ್ರದ ಮತ ಎಣಿಕೆ ಸರ್ಕಾರಿ ಕಲಾ ಮತ್ತು ವಿಜ್ಞಾನ ಕಾಲೇಜು (ಕಾರವಾರ), ಧಾರವಾಡ ಕ್ಷೇತ್ರದ ಮತ ಎಣಿಕೆ ಕೃಷಿ ವಿಜ್ಞಾನ ವಿಶ್ವವಿದ್ಯಾಲಯ, ರಾಯಚೂರು ಕ್ಷೇತ್ರದ ಮತ ಎಣಿಕೆ ಎಸ್‌ಆರ್‌ಪಿಎಸ್‌ ಪಿಯು ಕಾಲೇಜು, ಬಳ್ಳಾರಿ ಕ್ಷೇತ್ರದ ಮತ ಎಣಿಕೆ ಸರ್ಕಾರಿ ಪಾಲಿಟೆಕ್ನಿಕ್‌, ಶಿವಮೊಗ್ಗ ಕ್ಷೇತ್ರದ ಮತ ಎಣಿಕೆ ಸಹ್ಯಾದ್ರಿ ಕಲಾ ಕಾಲೇಜಿನಲ್ಲಿ ನಡೆಯಲಿದೆ.

MLC Election: ಬಿಜೆಪಿ ಪಕ್ಷ ಸಂಘಟನೆಗೂ ಸೈ, ಉದ್ಯಮದಲ್ಲೂ ಸೈ, ಮಂಡ್ಯ ಕಣದಲ್ಲಿ ಮಂಜು ಬೂಕಹಳ್ಳಿ

ದಕ್ಷಿಣ ಕನ್ನಡ ಕ್ಷೇತ್ರದ ಮತ ಎಣಿಕೆ ರೊಸಾರಿಯೋ ಪಿಯು-ಪದವಿ ಕಾಲೇಜು (ಮಂಗಳೂರು), ಚಿಕ್ಕಮಗಳೂರು ಕ್ಷೇತ್ರದ ಮತ ಎಣಿಕೆ ಎಸ್‌ಟಿಜೆ ಮಹಿಳಾ ಕಾಲೇಜು, ಹಾಸನ ಕ್ಷೇತ್ರದ ಮತ ಎಣಿಕೆ ಸರ್ಕಾರಿ ಎಂಜಿನಿಯರಿಂಗ್‌ ಕಾಲೇಜು, ತುಮಕೂರು ಕ್ಷೇತ್ರದ ಮತ ಎಣಿಕೆ ಸರ್ಕಾರಿ ಪಾಲಿಟೆಕ್ನಿಕ್‌ ಕಾಲೇಜು, ಮಂಡ್ಯ ಕ್ಷೇತ್ರದ ಮತ ಎಣಿಕೆ ಸರ್ಕಾರಿ ಕಾಲೇಜು, ವಾಣಿಜ್ಯ ಮತ್ತು ಮಾನೇಜ್‌ಮೆಂಟ್‌, ಬೆಂಗಳೂರು ಕ್ಷೇತ್ರದ ಮತ ಎಣಿಕೆಯು ಮಹರಾಣಿ ವಿಜ್ಞಾನ ಕಾಲೇಜು, ಬೆಂಗಳೂರು ಗ್ರಾಮಾಂತರ ಕ್ಷೇತ್ರದ ಮತ ಎಣಿಕೆ ಆಕಾಶ್‌ ಇಂಟರ್‌ನ್ಯಾಷನಲ್‌ ಸ್ಕೂಲ್‌ (ದೇವನಹಳ್ಳಿ), ಕೋಲಾರ ಕ್ಷೇತ್ರದ ಮತ ಎಣಿಕೆಯು ಸರ್ಕಾರಿ ಬಾಲಕಿಯರ ಕಿರಿಯ ಕಾಲೇಜು (ಬಂಗಾರಪೇಟೆ), ಕೊಡಗು ಕ್ಷೇತ್ರದ ಮತ ಎಣಿಕೆಯು ಸೆಂಟ್‌ ಜೋಸೆಫ್‌ ಕನ್ವೆಂಟ್‌ ಮತ್ತು ಮೈಸೂರು ಕ್ಷೇತ್ರದ ಮತ ಎಣಿಕೆಯು ಮಹಾರಾಣಿ ಮಹಿಳೆಯರ ವಾಣಿಜ್ಯ ಮತ್ತು ಮಾನೇಜ್‌ಮೆಂಟ್‌.

ಪಕ್ಷವಾರು ಅಭ್ಯರ್ಥಿಗಳು

ಬಿಜೆಪಿ 20

ಕಾಂಗ್ರೆಸ್‌ 20

ಜೆಡಿಎಸ್‌ 06

ಇತರೆ 44

ಚುನಾವಣೆ ಡಿಟೇಲ್ಸ್‌!

*ಬೆಳಗ್ಗೆ 8ರಿಂದ ಸಂಜೆ 4ರವರೆಗೆ ಮತದಾನ, ಡಿ.14ಕ್ಕೆ ಫಲಿತಾಂಶ

*6072 ಒಟ್ಟು ಮತಗಟ್ಟೆಗಳ ಸಂಖ್ಯೆ -ಒಟ್ಟು 99062 ಮತದಾರರು

*47205 ಪುರುಷ ಮತದಾರರು - 51854 ಮಹಿಳಾ ಮತದಾರರು

*89 ಪುರುಷ ಅಭ್ಯರ್ಥಿಗಳು - 01 ಮಹಿಳಾ ಅಭ್ಯರ್ಥಿ

*7073 ಮತಗಟ್ಟೆರಿಟನ್ಸ್‌ರ್‍ ಅಧಿಕಾರಿಗಳು- 9344 ಮತಗಟ್ಟೆಅಧಿಕಾರಿಗಳು

*6648 ಸೂಕ್ಷ್ಮ ವೀಕ್ಷಕರ ನೇಮಕ

click me!