ಗುಮ್ಮಟನಗರಿಯಲ್ಲಿ ಹೈಟೆಕ್ ತಂತ್ರಜ್ಞಾನ ಬಳಸಿ ಮ್ಯಾರಾಥಾನ್;ಬರದ ನಾಡಲ್ಲಿ ಹಸಿರು ಬೆಳೆಸಲು ಪಣ!

Published : Dec 21, 2024, 11:19 AM IST
ಗುಮ್ಮಟನಗರಿಯಲ್ಲಿ ಹೈಟೆಕ್ ತಂತ್ರಜ್ಞಾನ ಬಳಸಿ ಮ್ಯಾರಾಥಾನ್;ಬರದ ನಾಡಲ್ಲಿ ಹಸಿರು ಬೆಳೆಸಲು ಪಣ!

ಸಾರಾಂಶ

ವಿಜಯಪುರ ಜಿಲ್ಲೆಯಲ್ಲಿ ಹಸಿರೀಕರಣ ಮತ್ತು ಐತಿಹಾಸಿಕ ಸ್ಮಾರಕಗಳ ರಕ್ಷಣೆಗಾಗಿ ವೃಕ್ಷೋತ್ಥಾನ 2024 ಮ್ಯಾರಾಥಾನ್ ಓಟವನ್ನು ಹಮ್ಮಿಕೊಳ್ಳಲಾಗಿದೆ. ಈ ಬಾರಿಯ ಮ್ಯಾರಾಥಾನ್ ಅಂತರಾಷ್ಟ್ರೀಯ ಮಟ್ಟದ ತಂತ್ರಜ್ಞಾನವನ್ನು ಬಳಸಿಕೊಂಡು ಹೈಟೆಕ್ ಆಗಿ ನಡೆಯಲಿದೆ.

- ಷಡಕ್ಷರಿ‌ ಕಂಪೂನವರ್ ಏಷ್ಯಾನೆಟ್ ಸುವರ್ಣ ನ್ಯೂಸ್

ವಿಜಯಪುರ (ಡಿ.20) :ವಿಜಯಪುರ ಜಿಲ್ಲೆ ಎಂದರೆ ಬರದ ನಾಡು ಎನ್ನುವ ಅಪಖ್ಯಾತಿ ಇದೆ. ಅತ್ಯಂತ ಕಡಿಮೆ ಅರಣ್ಯ ಪ್ರದೇಶ ಹೊಂದಿರೋ ಜಿಲ್ಲೆ ಎಂದರೆ ಅದು ವಿಜಯಪುರ. ಇಂಥಹ ಬರದ ನಾಡನ್ನ ಹಸಿರು ನಾಡನ್ನಾಗಿ ಮಾಡಲು ಹಲವು ಸಂಘ ಸಂಸ್ಥೆಗಳು, ಜನಪ್ರತಿನಿಧಿಗಳು ಪಣ ತೊಟ್ಟಿದ್ದಾರೆ. ಹಸಿರೀಕರಣ‌, ಸ್ಮಾರಕಗಳ ರಕ್ಷಣೆಗಾಗಿ 2017ರಿಂದ ಮ್ಯಾರಾಥಾನ್‌ ಹಮ್ಮಿಕೊಳ್ಳುವ ಮೂಲಕ ಸಸಿಗಳನ್ನ ನೆಡುವ ಬಗ್ಗೆ, ಪರಿಸರ ರಕ್ಷಣೆ, ಹಸಿರೀಕರಣ ಬಗ್ಗೆ ಜಾಗೃತಿ ಮೂಡಿಸಲಾಗ್ತಿದೆ. ಈ ಬಾರಿ ನಡೆಯುತ್ತಿರೋ ಮ್ಯಾರಾಥಾನ್‌ ಇಂಟರ್‌ನ್ಯಾಶನ್‌ ಟಚ್‌ ಪಡೆದುಕೊಂಡಿದೆ..

ವೃಕ್ಷೋತ್ಥಾನ ಪಾರಂಪರಿಕ ಓಟ 2024 ನಾಳೆ!

ಹೌದು ವಿಜಯಪುರ ಜಿಲ್ಲೆಯಲ್ಲಿ ಹಸರೀಕರಣ ಹಾಗೂ ಐತಿಹಾಸಿಕ ಸ್ಮಾರಕಗಳ ರಕ್ಷಣೆಗಾಗಿ ಪ್ರವಾಸೋದ್ಯಮ ವೃದ್ದಿಗಾಗಿ ವೃಕ್ಷೋತ್ಥಾನ 2024 ಮ್ಯಾರಾಥಾನ್ ಓಟಗಳನ್ನು ಆಯೋಜಿಸಲಾಗಿದೆ. ಜಿಲ್ಲಾಡಳಿತ ಸೇರಿದಂತೆ ವಿವಿಧ ಇಲಾಖೆಗಳು ಸಂಘ ಸಂಸ್ಥೆಗಳು ಮುಖಂಡರು ಆಯೋಜನೆ ಮಾಡುತ್ತಿದ್ದಾರೆ. ಇಂದು ಬೆಳಗ್ಗೆ ಡಾ. ಬಿ ಆರ್ ಅಂಬೇಡ್ಕರ್ ಕ್ರೀಡಾಂಗಣದಿಂದ ಮ್ಯಾರಥಾನ್ ಓಟಗಳು ಆರಂಭವಾಗಲಿವೆ. ಬೆಳಗ್ಗೆ 5.59 ಗಂಟೆಗೆ ಸರಿಯಾಗಿ 21 ಕಿಲೋ ಮೀಟರ್ ಹಾಫ್ ಮ್ಯಾರಾಥಾನ್ ಸೇರಿದಂತೆ ಇತರೆ ವಿಭಾಗಗಳ ಓಟ ನಡೆಯಲಿವೆ. ಈ ವೇಳೆ ಡಿ ಹೈಡ್ರೇಷನ್ ಪಾಯಿಂಟ್ ಹಾಗೂ ಅದೇ ಪಾಯಿಂಟ್ ಗಳಲ್ಲಿ ಸ್ಥಳಿಯ ಕಲೆಗಳ ಮೂಲಕ ಓಟಗಾರರಿಗೆ ಚಿಯರ್ಸ್ ಮಾಡುವುದು, ಮೆಡಿಕಲ್ ಸೌಲಭ್ಯ, ಓಟಗಳ ಮ್ಯಾಪ್ ರೂಟ್, ಉಪಾಹಾರ, ಊಟ ವಸತಿ ಸೇರಿದಂತೆ ಇತರೆ ವ್ಯವಸ್ಥೆಗಳನ್ನು ಮಾಡಿಕೊಳ್ಳಲಾಗಿದೆ.  ಈ ಬಾರಿ ಒಟ್ಟು ರೂ. 10 ಲಕ್ಷ ಬಹುಮಾನ ನಿಗದಿ ಪಡಿಸಲಾಗಿದ್ದು, ಮೂರು ಕೆಟೆಗರಿಗಳಲ್ಲಿ ಒಟ್ಟು ತಲಾ 38 ಪುರುಷ ಮತ್ತು ಮಹಿಳಾ ವಿಭಾಗಗಳಲ್ಲಿ ಪ್ರಶಸ್ತಿಗಳನ್ನು ನೀಡಲಾಗುತ್ತಿದೆ

ಕೋರ್ಟ್‌ನಲ್ಲಿ ಜಡ್ಜ್ ಮುಂದೆ ಹೋಗುವ ಮೊದಲೇ ಕತ್ತು ಕೊಯ್ದುಕೊಂಡ ಆರೋಪಿ

ಈ ಬಾರಿ ಮ್ಯಾರಾಥಾನ್‌ ಗೆ ಹೈಟೆಕ್‌ ಟಚ್!

ಈ ಬಾರಿ ನಡೆಯುತ್ತಿರೋ ಮ್ಯಾರಾಥಾನ್‌ ಗೆ ಹೈಟೇಕ್‌ ಟಚ್‌ ನೀಡಲಾಗಿದೆ. ಅಂತರಾಷ್ಟ್ರೀಯ ಮಟ್ಟದಲ್ಲಿ ನಡೆಯುವ ಮ್ಯಾರಾಥಾನ್‌ ಗಳಲ್ಲಿ ಬಳಕೆ ಮಾಡುವ ತಂತ್ರಜ್ಞಾನವನ್ನ ಬಳಕೆ ಮಾಡಲಾಗ್ತಿದೆ. ಓಟದಲ್ಲಿ ಪಾಲ್ಗೊಳ್ಳುವ ಸ್ಪರ್ಧಾಳುಗಳಿಗೆ ವಿಶೇಷ ತಂತ್ರಜ್ಞಾನದ ಚಿಪ್‌ ಅಳವಡಿಕೆ ಮಾಡಲಾಗ್ತಿದ್ದು. ಈ ಈ ವಿಶೇಷ ಚಿಪ್‌ ಸ್ಪರ್ಧಾಳುಗಳು ಓಡುವಾಗ ಅವರ ಓಟದ ಅವಧಿಯನ್ನ ಸಂಗ್ರಹಿಸಲಿದೆ. ಅಲ್ಲಲ್ಲಿ ಮ್ಯಾರಾಥಾನ್‌ ದಾರಿಯುದ್ದಕ್ಕೂ ತಂತ್ರಜ್ಞಾನದ ಪ್ಯಾಡ್‌ ಅಳವಡಿಕೆಯಾಗಿರುತ್ತವೆ. ಓಡುವಾಗ ಸ್ಪರ್ಧಾಳುಗಳ ಪೋಟೊಗಳನ್ನ ಕ್ಲಿಕ್ಕಿಸಿ ಅವರದ್ದೆ ಇ-ಮೇಲ್‌ ಗೆ ಕಳುಹಿಸುವ ತಂತ್ರಜ್ಞಾನ ಹೊಂದಿವೆ. ಈ ಮೂಲಕ ಈ ಬಾರಿಯ ಮ್ಯಾರಾಥಾನ್‌ ಅಂತರಾಷ್ಟ್ರೀಯ ಮಟ್ಟದ ಹೈಟೇಕ್‌ ಟಚ್‌ ಪಡೆದುಕೊಂಡಿದೆ

ಮ್ಯಾರಾಥಾನ್ ಓಟದಲ್ಲಿ ಅನಿವಾಸಿ ಭಾರತೀಯರು!

ಇನ್ನೂ ಮ್ಯಾರಾಥಾನ್‌ ನಲ್ಲಿ ವಿದೇಶದಲ್ಲಿ ನೆಲೆಸಿರುವ ಅನಿವಾಸಿ ಭಾರತೀಯರು ಭಾಗವಹಿಸುತ್ತಿದ್ದಾರೆ. ರಾಷ್ಟ್ರೀಯ, ಅಂತರಾಷ್ಟ್ರೀಯ ಮಟ್ಟದಲ್ಲಿ ಮ್ಯಾರಾಥಾನ್‌ ಗಳಲ್ಲಿ ಭಾಗವಹಿಸಿದ ಸ್ಪರ್ಧಾಳುಗಳು ಇಲ್ಲಿ ಭಾಗವಹಿಸುತ್ತಿರೋದು ವಿಶೇಷವಾಗಿದೆ. ವೃದ್ದರು,  ಶಾಲಾ ಮಕ್ಕಳು,  ಅಧಿಕಾರಿಗಳು, ಜನಪ್ರತಿನಿಧಿಗಳು ಸಹ ಮ್ಯಾರಾಥಾನ್‌ ನಲ್ಲಿ ಓಡಲಿದ್ದಾರೆ. 5 ಕಿ.ಮೀ ಓಟಕ್ಕಾಗಿ ಈಗಾಗಲೇ ಆನ್‌ ಲೈನ್‌ ಮೂಲಕ 8621, 10 ಕಿ.ಮೀ ಗಾಗಿ 441, 21 ಕಿ.ಮೀ ಗಾಗಿ 304 ಜನರು ನೋಂದಾಯಿಸಿಕೊಂಡಿದ್ದಾರೆ.

 

ಹೊಸ ವರ್ಷಕ್ಕೆ ಮದ್ಯದ ಪಾರ್ಟಿಗೆ ಪ್ಲಾನ್ ಹಾಕಿರೋರು ಹುಷಾರ್; ನಕಲಿ ಬ್ರಾಂಡೆಡ್ ಮದ್ಯ ತಯಾರಿಸೋ ಗ್ಯಾಂಗ್ ಪತ್ತೆ!

ಹ್ಯಾಪಿ ರನ್‌ ನಲ್ಲಿ ಓಡಲಿದ್ದಾರೆ ಸಚಿವರು, ಶಾಸಕರು!

ಮ್ಯಾರಾಥಾನ್‌ ಗೆ ನಾಳೆ ಸಭಾಪತಿ ಯು ಟಿ ಖಾದರ್‌ ಚಾಲನೆ ನೀಡಲಿದ್ದಾರೆ. ಸಚಿವ ಎಂ ಬಿ ಪಾಟೀಲ್‌, ಸಚಿವ ಶಿವಾನಂದ ಪಾಟೀಲ್‌, ನಗರ ಶಾಸಕ ಬಸನಗೌಡ ಯತ್ನಾಳ್‌ ಮ್ಯಾರಾಥಾನ್‌ ನ ಅಧ್ಯಕ್ಷತೆವಹಿಸಲಿದ್ದಾರೆ. ಇನ್ನು ಕೊನೆಯದಾಗಿ ನಡೆಯುವ ಹ್ಯಾಪಿ ರನ್‌ ನಲ್ಲಿ ಸಚಿವರು, ಶಾಸಕರು, ಅಧಿಕಾರಿಗಳು ಸಹ ಓಡಲಿದ್ದಾರೆ. ಅಂತರ್ ಜಿಲ್ಲೆ ಇತರೆ ರಾಜ್ಯಗಳು ಹಾಗೂ ಬೇರೆ ದೇಶಗಳಿಂದ ಆಗಮಿಸೋ ಸ್ಪರ್ಧಾಳುಗಳಿಗೆ ವಸತಿ ಸೇರಿದಂತೆ ಇತರೆ ಸೌಲಭ್ಯಗಳನ್ನು ಮಾಡಲಾಗಿದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಲೀಚೆಟ್ ಸಂಸ್ಕರಣಾ ಘಟಕ:ಬೆಂಗಳೂರಲ್ಲಿ ಜಟಿಲವಾಗಿರುವ ಕಸದ ಸಮಸ್ಯೆಗೆ ಕೊನೆಗೂ ಮುಕ್ತಿ !
ಇಂಡಿಗೋ ವಿಮಾನ ರದ್ದು, ಬೆಂಗ್ಳೂರು ಏರ್‌ಪೋರ್ಟ್‌ನಲ್ಲಿ ನೂಕು ನುಗ್ಗಲು, ಟಿಕೆಟ್ ಬೆಲೆ 15ರಿಂದ 80,000ಕ್ಕೆ ಏರಿಕೆ