ಸಿಟಿ ರವಿ ಮೇಲೆ ಹಲ್ಲೆ ಮಾಡಿದ ಆರೋಪಿಗಳನ್ನ ಬಿಡುಗಡೆ ಮಾಡಿದ್ದು ಏಕೆ? ಎಲ್ಲದಕ್ಕೂ ಪ್ರಶ್ನೆ ಇರುತ್ತೆ ಎಂದ ಗೃಹ ಸಚಿವ!

By Ravi Janekal  |  First Published Dec 21, 2024, 11:01 AM IST

ಸಿಟಿ ರವಿ ಬಂಧನ ಪ್ರಕರಣದ ಕುರಿತು ಪ್ರತಿಕ್ರಿಯಿಸಿದ ಗೃಹ ಸಚಿವ ಡಾ. ಜಿ ಪರಮೇಶ್ವರ್, ಪ್ರಕರಣವು ನ್ಯಾಯಾಲಯದಲ್ಲಿರುವುದರಿಂದ ಯಾವುದೇ ಹೇಳಿಕೆ ನೀಡಲು ನಿರಾಕರಿಸಿದರು. ಪೊಲೀಸರ ಕ್ರಮವನ್ನು ಸಮರ್ಥಿಸಿಕೊಂಡರೂ, ನ್ಯಾಯಾಲಯದ ತೀರ್ಪಿನ ಮೇಲೆ ಅಂತಿಮ ನಿರ್ಧಾರ ಅವಲಂಬಿತವಾಗಿರುತ್ತದೆ ಎಂದು ಅವರು ಹೇಳಿದರು.


ಬೆಂಗಳೂರು (ಡಿ.21): ಸಿಟಿ ರವಿ ವಿಷಯ ಕೋರ್ಟ್‌ನಲ್ಲಿದೆ. ಆ ಬಗ್ಗೆ ನಾನು ಯಾವುದೇ ಕಾಮೆಂಟ್ ಮಾಡೋಕೆ ಹೋಗಲ್ಲ. ಆ ಕುರಿತು ಯಾವುದೇ ಪ್ರಶ್ನೆಗಳಿಗೆ ಉತ್ತರ ಕೊಡೋಕೆ  ಹೋಗಲ್ಲ ಎಂದು ಗೃಹ ಸಚಿವ ಡಾ ಜಿ ಪರಮೇಶ್ವರ್ ತಿಳಿಸಿದರು.

ಸಿಟಿ ರವಿ ಬಂಧನ ವಿಚಾರವಾಗಿ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಸಚಿವರು, ಪೋಲೀಸ್ ಅವರು ತಾವು ಸರಿ ಮಾಡಿದ್ದೇವೆ ಅಂತ ಅವರ ವಾದ ಇರುತ್ತೆ. ಆದರೆ ಕೋರ್ಟ್‌ನಲ್ಲಿ ಮ್ಯಾಟರ್ ಇದೆ. ಯಾವುದು ಸರಿ, ಯಾವುದು ತಪ್ಪು ಅಂತಾ ಕೋರ್ಟ್‌ನಲ್ಲಿ ತೀರ್ಮಾನ ಆಗುತ್ತೆ. ಬೇರೆ ಬೇರೆ ರೀತಿಯಲ್ಲಿ ಮಾಹಿತಿಗಳನ್ನ ಕೇಳುವ ಸಂದರ್ಭದಲ್ಲಿ ಇವರನ್ನ ಕೇಳದೇ ಜಡ್ಜಮೆಂಟ್ ಆಗಿದೆ ಅಂತಾ ಇದೆ. ಹೀಗಾಗಿ ಅದರ ಬಗ್ಗೆ ಟೀಕೆ ಮಾಡಲು ಆಗೊಲ್ಲ ಎಂದರು.

Tap to resize

Latest Videos

undefined

ಸಿಟಿ ರವಿ ಆ ಪದ ಬಳಕೆ ಮಾಡಿದ್ದಕ್ಕೆ ಯಾವುದೇ ದಾಖಲೆಗಳು ಇಲ್ಲ ಅಂತಾ ಸಭಾಪತಿಗಳು ಹೇಳಿರೋ ವಿಚಾರ ನನಗೆ ಗೊತ್ತಿಲ್ಲ. ಕೆಲವರು ಸದನ ಮುಗಿದ ಮೇಲೆ ಘಟನೆ ನಡೆದಿದೆ ಅಂತಿದ್ದಾರೆ. ಆದ್ದರಿಂದ ಸಭಾಪತಿಗಳಿಗೆ ಇದರಲ್ಲಿ ಏನು ಹೇಳೋಕೆ ಆಗಲ್ಲ ಅಂತ ಕೆಲವರು ವಿಶ್ಲೇಷಣೆ ಮಾಡುತ್ತಾರೆ. ಇನ್ನು ಕೆಲವರು ಸದನ ನಡೆಯುವಾಗಲೇ ಆ ಪದ ಬಳಸಿದ್ರು ಅಂತಾ ಹೇಳ್ತಾ ಇದ್ದಾರೆ. ಅದನ್ನೆಲ್ಲ ಈಗ ನಾನು ಮಾತನಾಡಲು ಹೋಗಲ್ಲ ಎಂದರು.

ಮಾರ್ಷಲ್ಸ್ ಇಲ್ಲದಿದ್ರೆ ರವಿ ಜೀವ ಹೋಗ್ತಿತ್ತು; ಅಸಮರ್ಥ ಗೃಹ ಸಚಿವರಿಂದ ಇನ್ನೇನು ನಿರೀಕ್ಷಿಸಲು ಸಾಧ್ಯ: ರೇಣುಕಾಚಾರ್ಯ ಕಿಡಿ

ಸಿಟಿ ರವಿ ಬಿಡುಗಡೆ ಸರ್ಕಾರಕ್ಕೆ ಕೋರ್ಟ್‌ ಕಪಾಳಮೋಕ್ಷ ಮಾಡಿದಂತಾಗಿದೆ ಎಂಬ ಬಿಜೆಪಿ ಟೀಕೆಗೆ ಪ್ರತಿಕ್ರಿಯಿಸಿದ ಸಚಿವರು, ಬಿಜೆಪಿಯವರು ಅದನ್ನೇ ಹೇಳಬೇಕು. ಬೇರೆ ಏನೂ ಹೇಳೋಕೆ ಆಗೊಲ್ಲ. ಪೊಲೀಸರು ಸಿಟಿ ರವಿ ಅವರನ್ನ ಸುತ್ತಾಡಿಸಿದ್ದೇಕೆ ಎಂಬ ಪ್ರಶ್ನೆ ಮಾಡಿದ್ದಾರೆ. ಆ ಮಾಹಿತಿ ನಾನೂ ಪೊಲೀಸರನ್ನ ಕೇಳ್ತಿದ್ದೇನೆ. ಮಾಹಿತಿ ಬಂದ ಮೇಲೆ ತಿಳಿಸುತ್ತೇನೆ ಎಂದರು. 

ಸಿಟಿ ರವಿ ಮೇಲೆ ಹಲ್ಲೆ ಮಾಡಿದ ಆರೋಪಿಗಳನ್ನು ಬಿಟ್ಟಿದ್ದೇಕೆ?

ಸಿಟಿ ರವಿ ಮೇಲೆ ಹಲ್ಲೆ ಮಾಡಿದ ಆರೋಪಿಗಳ ಬಗ್ಗೆ ಪ್ರಶ್ನಿಸಿದಾಗ, ಹಲ್ಲೆ ಮಾಡಿದ ಪ್ರಕರಣದಲ್ಲಿ 24 ಜನರನ್ನು ಆ ಕ್ಷಣದಲ್ಲೇ ಬಂಧಿಸಲಾಗಿದೆ. ಅನಂತರ ಅವರನ್ನು ಬಿಟ್ಟಿದ್ದಾರೆ. ಅರೆಸ್ಟ್ ಮಾಡದೇ ಇದ್ದಿದ್ರೆ ಇನ್ನೂ ಹೆಚ್ಚು ಘಟನೆಗಳು ಆಗುತ್ತಿತ್ತು ಎಂದ ಗೃಹಸಚಿವರು, ಹಾಗಾದರೆ ಒಬ್ಬ ವಿಧಾನ ಪರಿಷತ್ ಸದಸ್ಯನ ಮೇಲೆ ಹಲ್ಲೆ ಮಾಡಿದ ಆರೋಪಿಗಳನ್ನು ಬಂಧಿಸಿ ಬಿಡುಗಡೆ ಮಾಡಿದ್ದೇಕೆ ಎಂಬ ಪ್ರಶ್ನೆಗೆ ಎಲ್ಲದಕ್ಕೂ ಪ್ರಶ್ನೆ ಇದ್ದೇ ಇರುತ್ತೆ ಎಂದ ಗೃಹ ಸಚಿವರು. ಇದೆ ವೇಳೆ 'ನಮ್ಮ ಸರ್ಕಾರ ಬಂದಾಗ ಎಲ್ಲ ಲೆಕ್ಕ ಚುಕ್ತಾ ಮಾಡ್ತೇವೆ' ಎಂಬ ಬಿಜೆಪಿ ನಾಯಕರ ಹೇಳಿಕೆಗೆ, 'ಆಗಬಹುದು' ಎಂದ ಗೃಹ ಸಚಿವರು.

ಸಿಟಿ ರವಿ ನೀಡಿದ ದೂರಿಗೆ ಎಫ್‌ಐಆರ್ ಏಕಿಲ್ಲ?

ಅವರು ಹೇಳಿಕೆ ಕೊಟ್ಟಿದ್ದಾರೆ. ನಾನು ಗಮನಿಸಿದ್ದೇನೆ. ಮಾಧ್ಯಮಗಳಲ್ಲೂ ಕೂಡ ಪತ್ರಿಕೆಗಳಲ್ಲೂ ಕೂಡ ಬಂದಿದೆ. ವಿಚಾರ ಮಾಡುತ್ತೇವೆ ಎಂದ ಪರಮೇಶ್ವರ್. ಗೃಹ ಇಲಾಖೆ ಓವರ್ ಟೇಕ್ ಮಾಡಿ ಈ ಬೆಳವಣಿಗೆ ಆಯ್ತಾ ಎಂಬ ಪ್ರಶ್ನೆಗೆ 'ಆ ರೀತಿ ಮಾಡಕ್ಕೆ ಆಗುತ್ತಾ? ನಮ್ಮ ಮೇಲೆ ಮುಖ್ಯಮಂತ್ರಿಗಳು ಇದ್ದಾರೆ. ಮುಖ್ಯಮಂತ್ರಿಗಳು ಬಿಟ್ಟರೆ ಬೇರೆ ಯಾರೂ ಇಲ್ಲ. ನನಗೆ ಬೇಕಾದಷ್ಟು ಸ್ವಾತಂತ್ರ್ಯ ಇದೆ ಎಂದರು.'

'ನಿನ್ನ ಹೆಣ ಚಿಕ್ಕಮಗಳೂರಿಗೆ ಹೋಗುತ್ತೆ..' ಆ ಮಂತ್ರಿಗಳಿಂದ ಸಿಟಿ ರವಿಗೆ ಜೀವ ಬೆದರಿಕೆ? ಜಡ್ಜ್‌ ಮುಂದೆ ಹೇಳಿದ್ದೇನು?

ಕಲಾಪದ ವೇಳೆ ಈ ಎಲ್ಲಾ ಗಲಾಟೆಗಳ ನಡುವೆ ಅನೇಕ ಪ್ರತಿಭಟನೆಗಳು ನಡೆದವು. ಅನೇಕ ಸಂಘಟನೆಗಳು ಪ್ರತಿಭಟನೆ ನಡೆಸಿದವು. ಎರಡೂ ಸದನದಲ್ಲಿ ಉತ್ತರ ಕರ್ನಾಟಕ ಭಾಗದ ಸಮಸ್ಯೆ ಬಗ್ಗೆ ಸಂಪೂರ್ಣ ಚರ್ಚೆಯಾಗಿದೆ. ಆದ್ರೆ ಸಿಎಂಗೆ ಉತ್ತರ ಕೊಡಲು ಬಿಡಲಿಲ್ಲ. ವಕ್ಫ್ ವಿಚಾರವಾಗಿ ಚರ್ಚೆಯಾಗಿದೆ. ಅದಕ್ಕೆ ಸಚಿವರು ಸಮಂಜಸವಾಗಿ ಉತ್ತರ ಕೊಟ್ಟಿದ್ದಾರೆ. ಎಲ್ಲಾ ಸಮಯ ವ್ಯರ್ಥ ಆಯ್ತು ಅಂತ ಹೇಳಲು ಆಗಲ್ಲ. ಒಂದಿಷ್ಟು ಸಮಯ ವ್ಯರ್ಥ ಆಗಿರೋದು ನಿಜ. ಆದ್ರೆ ಒಂದಷ್ಟು ಉಪಯೋಗ ಅಂತೂ ಆಗಿದೆ ಎಂದರು.

click me!