
ದಾವಣಗೆರೆ (ಡಿ.21) ಸುವರ್ಣ ಸೌಧದ ಒಳಗೆ ನುಗ್ಗಿದ ಗೂಂಡಾಗಳು ವಿಧಾನ ಪರಿಷತ್ತು ಸದಸ್ಯ ಸಿ.ಟಿ.ರವಿ ಮೇಲೆ ಹಲ್ಲೆ ಮಾಡಿದ್ದಾರೆ. ಆ ಸ್ಥಳದಲ್ಲಿ ಒಂದುವೇಳೆ ಮಾರ್ಷಲ್‌ಗಳು ಇಲ್ಲದೇ ಇದ್ದಿದ್ದರೆ ರವಿಯನ್ನು ಹತ್ಯೆ ಮಾಡಿರುತ್ತಿದ್ದರು ಎಂದು ಬಿಜೆಪಿ ಮಾಜಿ ಸಚಿವ ಎಂ.ಪಿ. ರೇಣುಕಾಚಾರ್ಯ ಆರೋಪಿಸಿದರು.
ನಗರದಲ್ಲಿ ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಗೂಂಡಾಗಳು ಸುವರ್ಣ ಸೌಧದೊಳಗೆ ನುಗ್ಗಿ ಸಿ.ಟಿ.ರವಿ ಮೇಲೆ ಹಲ್ಲೆ ಮಾಡಿದ್ದಾರೆ. ರವಿ ಹತ್ಯೆಗೆ ಗೂಂಡಾಗಳು ಸಂಚು ಮಾಡಿದ್ದರು. ತಲೆಗೆ ತೀವ್ರ ಏಟಾಗಿದ್ದರೂ ಇಡೀ ರಾತ್ರಿಯೆಲ್ಲಾ ಸಿ.ಟಿ.ರವಿ ಅವರನ್ನು ಸುತ್ತಾಡಿಸಿದ್ದಾರೆ. ಗೃಹ ಮಂತ್ರಿ ಡಾ. ಜಿ.ಪರಮೇಶ್ವರ ಅಸಮರ್ಥರಿದ್ದು, ಇಂಥವರಿಂದ ಮತ್ತೇನು ನಿರೀಕ್ಷೆ ಮಾಡಲು ಸಾಧ್ಯ ಎಂದು ಪ್ರಶ್ನಿಸಿದರು.
'ನಿನ್ನ ಹೆಣ ಚಿಕ್ಕಮಗಳೂರಿಗೆ ಹೋಗುತ್ತೆ..' ಆ ಮಂತ್ರಿಗಳಿಂದ ಸಿಟಿ ರವಿಗೆ ಜೀವ ಬೆದರಿಕೆ? ಜಡ್ಜ್ ಮುಂದೆ ಹೇಳಿದ್ದೇನು?
ಸದನದಲ್ಲಿ ಸಿ.ಟಿ.ರವಿ ಅವಹೇಳನಕಾರಿ ಪದ ಬಳಸದಿದ್ದರೂ, ಸುಳ್ಳು ಆರೋಪ ಮಾಡಿರುವ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ತಕ್ಷಣ ಕ್ಷಮೆಯಾಚಿಸಬೇಕು. ಅಧಿವೇಶನದಲ್ಲಿ ರವಿ ವಿರುದ್ಧ ಮಾಡಿರುವ ಆರೋಪಗಳ ಬಗ್ಗೆ ರೆಕಾರ್ಡ್ ಇಲ್ಲ, ಯಾವುದೇ ದಾಖಲೆಯೂ ಇಲ್ಲ. ಪೊಲೀಸ್ ಇಲಾಖೆ ಕಾಂಗ್ರೆಸ್ಸಿನ ಅಡಿಯಾಳಾಗಿ ಕೆಲಸ ಮಾಡದೇ, ಜವಾಬ್ದಾರಿಯುತ ಇಲಾಖೆಯಾಗಿ ಕೆಲಸ ಮಾಡಲಿ ಎಂದು ತಾಕೀತು ಮಾಡಿದರು. ತಕ್ಷಣವೇ ಸಿ.ಟಿ.ರವಿಗೆ ಬಿಡುಗಡೆ ಮಾಡಿ, ಕೇಸ್ ವಾಪಸ್ ಪಡೆಯಬೇಕು ಎಂದು ಮುಖ್ಯಮಂತ್ರಿ, ಗೃಹ ಸಚಿವರಿಗೆ ಅವರು ಒತ್ತಾಯಿಸಿದರು.
ಸಿಟಿ ರವಿಗೆ 41ಎ ಅಡಿಯಲ್ಲಿ ನೋಟಿಸ್ ಕೊಡಬೇಕಿತ್ತು, ಬಂಧನ ಪ್ರಶ್ನಿಸಿದ ಹೈಕೋರ್ಟ್!
ಅತ್ತ ಸಂಸತ್ ಅಧಿವೇಶನದಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಮಾತನ್ನೇ ಕಾಂಗ್ರೆಸ್ಸಿನ ನಾಯಕರು ತಿರುಚಿದ್ದಾರೆ. ಸಂವಿಧಾನಶಿಲ್ಪಿ ಬಾಬಾ ಸಾಹೇಬ್ ಅಂಬೇಡ್ಕರ್ ಅವರನ್ನು ಗೌರವಿಸದವವರು ಕಾಂಗ್ರಸ್ಸಿನವರು. ಚುನಾವಣೆಗೋಸ್ಕರ ಕಾಂಗ್ರೆಸ್‌ನವರು ಅಂಬೇಡ್ಕರ್ ಹೆಸರನ್ನು ಹೇಳುತ್ತಿದ್ದಾರೆ ಎಂದು ರೇಣುಕಾಚಾರ್ಯ ಟೀಕಿಸಿದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ