ಪರಪ್ಪನ ಅಗ್ರಹಾರದಿಂದ ಬಳ್ಳಾರಿ ಜೈಲಿಗೆ ಸ್ಥಳಾಂತರಗೊಂಡಿರುವ ನಟ ದರ್ಶನ್‌ಗೆ ಬಿಗಿ ಭದ್ರತೆಯನ್ನು ಏರ್ಪಡಿಸಲಾಗಿದೆ. 24 ಗಂಟೆಗಳ ಕಾಲ ಸಿಸಿಟಿವಿ ಕಣ್ಗಾವಲು, ಪ್ರತ್ಯೇಕ ಸೆಲ್, ಮತ್ತು ಸೀಮಿತ ಭೇಟಿ ಇತ್ಯಾದಿ ಕಠಿಣ ನಿಯಮಗಳನ್ನು ಜಾರಿಗೊಳಿಸಲಾಗಿದೆ.
ಬೆಂಗಳೂರು (ಆ.29): ಪರಪ್ಪನ ಅಗ್ರಹಾರ ಜೈಲಿನಲ್ಲಿ ರಾಜಾತಿಥ್ಯ ಪಡೆದುಕೊಂಡ ಪರಿಣಾಮವಾಗಿ ಡಿ ಗ್ಯಾಂಗ್ ದಿಕ್ಕಾಪಾಲಾಗಿದೆ. ಡೆವಿಲ್ ಈಗ ಬಳ್ಳಾರಿ ಜೈಲಿಗೆ ಸೇರಿಕೊಂಡಿದ್ದು, ಅಲ್ಲಿ ಭದ್ರತಾ ಸೆಲ್‌ನಲ್ಲಿ ಅವರೀಗ ಒಬ್ಬಂಟಿಯಾಗಿದ್ದಾರೆ. ಹಾಗಾದರೆ, ಬಳ್ಳಾರಿ ಜೈಲಿನಲ್ಲಿ ದರ್ಶನ್‌ಗೆ ಇರುವ ವ್ಯವಸ್ಥೆ ಏನು ಅನ್ನೋದನ್ನ ನೋಡೋದಾದರೆ, ಬಳ್ಳಾರಿ ಭದ್ರತಾ ಸೆಲ್ ನಂಬರ್ 15ರಲ್ಲಿ ನಟ ದರ್ಶನ್ ಇರಲಿದ್ದಾರೆ. ದರ್ಶನ್ ಅಕ್ಕಪಕ್ಕದ ನಾಲ್ಕು ಸೆಲ್ ಅನ್ನು ಖಾಲಿ ಇಡಲಾಗಿದೆ. 16 ಸೆಲ್ಗಳ ಪೈಕಿ ಮೊದಲೆರಡು ಸಾಲಿನಲ್ಲಿ 5 ಕೈದಿಗಳು ಇದ್ದಾರೆ. ಇನ್ನು ಆರೋಪಿ ನಟ ದರ್ಶನ್ ಸೆಲ್ ಬಳಿ ಭಾರೀ ಬಿಗಿಭದ್ರತೆ ವ್ಯವಸ್ಥೆ ಮಾಡಲಾಗಿದೆ. ದರ್ಶನ್ ಸೆಲ್ ಸುತ್ತ 360 ಡಿಗ್ರಿ ಕ್ಯಾಮೆರಾ ಅಳವಡಿಕೆ ಮಾಡಲಾಗಿದೆ. ಜೈಲು ಸಿಬ್ಬಂದಿಗೂ ಮೊಬೈಲ್ ಬಳಕೆಯೂ ನಿಷೇಧ ಮಾಡಲಾಗಿದೆ. ಜೈಲು ಸಿಬ್ಬಂದಿಗೆ ವಾಕಿಟಾಕಿ ಬಳಸಲು ಅವಕಾಶ ಕೊಡಲಾಗಿದೆ. ದರ್ಶನ್ ಸೆಲ್ ಬಳಿ 3 ಪಾಳಿಯಲ್ಲಿ ಸಿಬ್ಬಂದಿ ಕರ್ತವ್ಯ ನಿರ್ವಹಿಸಲಿದ್ದಾರೆ. ಬಾಡಿವೊರ್ನ್ (ದೇಹದ ಮೇಲೆ ಧರಿಸುವ ಕ್ಯಾಮೆರಾ) ಕ್ಯಾಮೆರಾ ಜೊತೆಗೆ ಸಿಬ್ಬಂದಿ ಕೆಲಸ ಮಾಡಲಿದ್ದಾರೆ.
ನಟೋರಿಯಸ್‌ಗಳು ಇದ್ದ ಸೆಲ್: ಬಳ್ಳಾರಿಯ ಭದ್ರತಾ ಸೆಲ್ ನಟೋರಿಯಸ್‌ಗಳು ಇದ್ದ ಸೆಲ್. 3 ದಶಕಗಳ ಹಿಂದೆ ಈ ಭದ್ರತಾ ಸೆಲ್‌ಅನ್ನು ನಿರ್ಮಾಣ ಮಾಡಲಾಗಿತ್ತು. ಪಂಜಾಬ್ ಸಿಎಂ ಬೀಂತ್ ಸಿಂಗ್ ಹತ್ಯೆ ಮಾಡಿದ್ದ ಆರೋಪಿಗಳನ್ನು ಇದೇ ಸೆಲ್‌ನಲ್ಲಿ ಇರಿಸಲಾಗಿತ್ತು. ಇನ್ನು ಬಳ್ಳಾರಿ ಜೈಲಿನಲ್ಲಿರುವ ಇರುವ ರೂಲ್ಸ್‌ಗಳನ್ನು ನೋಡಿಯೇ ದರ್ಶನ್ ಕಂಗಾಲಾಗಿದ್ದಾರೆ. ನಟ ದರ್ಶನ್ ಹೇಗೆ ನೋಡಿಕೊಳ್ಳಬೇಕೆಂದು ಇಲಾಖೆ ಪತ್ರ ಮುಖೇನ ವಿವರಿಸಿದೆ. ಬಳ್ಳಾರಿ ಜೈಲಾಧಿಕಾರಿಗೆ ಬಂಧಿಖಾನೆ ಇಲಾಖೆ ಜ್ಞಾಪನಾಪತ್ರವನ್ನೂ ರವಾನೆ ಮಾಡಿದೆ. ಆರೋಪಿಯ ಮೇಲೆ ಹದ್ದಿನಕಣ್ಣಿಡಲು ಉತ್ತರವಲಯ ಡಿಐಜಿ TP ಶೇಷ ಸೂಚನೆ ನೀಡಿದ್ದಾರೆ.
ಬಳ್ಳಾರಿ ಜೈಲ್ ರೂಲ್, ದರ್ಶನ್ ಕಂಗಾಲ್: ಬಳ್ಳಾರಿ ಜೈಲ್‌ನಲ್ಲಿ ಇರುವ ದರ್ಶನ್‌ಗೆ ಹಾಕಿರುವ ರೂಲ್ಸ್‌ಗಳನ್ನು ನೋಡೋದಾದರೆ, ದರ್ಶನ್ನನ್ನೂ ಭದ್ರತಾ ಸೆಲ್ ಪ್ರತ್ಯೇಕ ಕೊಠಡಿಯಲ್ಲೇ ಇಡಬೇಕು, ನಟ ದರ್ಶನ್ ಕೊಠಡಿಗೆ 24 ಗಂಟೆ ಸಿಸಿ ಕ್ಯಾಮರಾ ಕಣ್ಗಾವಲು ಇರಬೇಕು. ಪ್ರತಿನಿತ್ಯ ಸಿಸಿ ಕ್ಯಾಮರಾ ದೃಶ್ಯಾವಳಿಗಳನ್ನ ಶೇಖರಿಸಬೇಕು, ದರ್ಶನ್ ಸೆಲ್‌ನ ಕರ್ತವ್ಯಕ್ಕೆ ಮುಖ್ಯವೀಕ್ಷಕ ಅಧಿಕಾರಿ ನಿಯೋಜನೆ ಮಾಡಬೇಕು. ದರ್ಶನ್ ಸೆಲ್‌ಗೆ ನಿತ್ಯ ಜೈಲರ್ ಭೇಟಿ ನೀಡಿ ಭದ್ರತೆ ಪರಿಶೀಲನೆ ಮಾಡಬೇಕು. ಹಿರಿಯ ಅಧಿಕಾರಿಗಳ ಸಮ್ಮುಖದಲ್ಲೇ ಬೀಗ ಹಾಕಬೇಕು, ತೆರೆಯಬೇಕು, ಕರ್ತವ್ಯ ನಿರ್ವಹಿಸುವ ಮುನ್ನ ನಿತ್ಯವೂ ದರ್ಶನ್ ಸೆಲ್ ತಪಾಸಣೆ ಆಗಬೇಕು. ದರ್ಶನ್ ಸೆಲ್‌ಗೆ ನಿಯೋಜಿಸಿದ ಸಿಬ್ಬಂದಿ ಬಾಡಿವಾರ್ನ್ ಕ್ಯಾಮರಾ ಧರಿಸಿರಬೇಕು, ದರ್ಶನ ಭೇಟಿಗೆ ಸಂಬಂಧಿಕರು ಹಾಗೂ ವಕೀಲರ ಭೇಟಿಗಷ್ಟೇ ಅವಕಾಶ. ಕಲಾವಿದರು, ಅಭಿಮಾನಿಗಳು, ರಾಜಕೀಯ ನಾಯಕರ ಭೇಟಿಗಿಲ್ಲ ಯಾವುದೇ ಕಾರಣಕ್ಕೂ ಅವಕಾಶ ಇರೋದಿಲ್ಲ. ಸಾಮಾನ್ಯ ಬಂಧಿಯಂತೆ ಪರಿಗಣಿಸಿ, ಸಾಮಾನ್ಯ ಬಂಧಿಗೆ ಕೊಡುವ ಸೌಲಭ್ಯ ನೀಡಿ. ಜೈಲಿನಲ್ಲಿ ಬೇರೆ ಕೈದಿಗಳ ಜೊತೆಗೆ ನಟ ದರ್ಶನ್ ಬೆರೆಯವಂತಿಲ್ಲ. ನಟ ದರ್ಶನ್ ಕೊಠಡಿಗೆ ಅಧಿಕಾರಿಗಳು ಸರ್ಪೈಸ್ ವಿಸಿಟ್ ಮಾಡಬೇಕು ಎಂದು ಉತ್ತರ ವಲಯ ಡಿಐಜಿ ಟಿಪಿ ಶೇಷ ಜ್ಞಾಪನಾ ಪತ್ರ ನೀಡಿದ್ದಾರೆ.
undefined
ದೌಲತ್ತು ಮಾಡಿ ಛಿದ್ರವಾದ ಡಿ ಗ್ಯಾಂಗ್, ಕೈಗೆ ಕೋಳ ಬಂದರೂ ಕರಗಿಲ್ವಾ ನಟ ದರ್ಶನ್ ಕೊಬ್ಬು..?
ಅನುಮಾನ ಮೂಡಿಸಿದ ಆ ಪೊಲೀಸ್ ಅಧಿಕಾರಿ ನಡೆ: ದರ್ಶನ್ ಬಳ್ಳಾರಿ ಜೈಲಿಗೆ ಪ್ರವೇಶಿಸುವಾಗ ಪೊಲೀಸ್ ಅಧಿಕಾರಿಯ ನಡೆ ಅನುಮಾನ ಮೂಡಿಸಿದೆ. ಬಳ್ಳಾರಿ ಜೈಲಿನೊಳಗೆ ಪೊಲೀಸ್ ಅಧಿಕಾರಿಯೊಬ್ಬರು ದರ್ಶನ್ ಬೆನ್ನುತಟ್ಟಿದ್ದಾರೆ. ಕೈಕುಲುಕಿ ಅವರನ್ನು ಒಳಗೆ ಕಳುಹಿಸಿಕೊಟ್ಟಿದ್ದಾರೆ. ನಟ ದರ್ಶನ್‌ಗೆ ಕೈಕುಲುಕಿದ್ದು ಬೆಂಗಳೂರು ಪೊಲೀಸರಾ ಎನ್ನುವ ಅನುಮಾನ ಕಾಡಿದೆ.
ದರ್ಶನ್ ಕೈಗೆ ಕೋಳ ಹಾಕಿದ್ರೂ ಕಣ್ಣಿಗೆ ಮಾತ್ರ ಕೂಲಿಂಗ್ ಗ್ಲಾಸು; ಬೆಂಗಾವಲು ಪಡೆಗೆ ಕೊಟ್ರು ನೋಟೀಸು!