ajith hanumakkanavar News Hour on Darshan Thoogudeepa ನಟ ದರ್ಶನ್ ಅವರನ್ನು ಬೆಂಗಳೂರಿನ ಪರಪ್ಪನ ಅಗ್ರಹಾರ ಜೈಲಿನಿಂದ ಬಳ್ಳಾರಿ ಜೈಲಿಗೆ ವರ್ಗಾಯಿಸಲಾಗಿದೆ. ಪರಪ್ಪನ ಅಗ್ರಹಾರ ಜೈಲಿನಲ್ಲಿ ಅವರು ಐಷಾರಾಮಿ ಜೀವನ ನಡೆಸುತ್ತಿದ್ದಾರೆ ಎಂಬ ಆರೋಪಗಳ ಹಿನ್ನೆಲೆಯಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ.
ಬೆಂಗಳೂರು (ಆ.29): ರೇಣುಕಾಸ್ವಾಮಿ ಕೊಲೆ ಕೇಸ್‌ನಲ್ಲಿ ನಟ ದರ್ಶನ್ ಬಳ್ಳಾರಿ ಜೈಲಿಗೆ ಶಿಫ್ಟ್ ಆಗಿದ್ದಾರೆ. ಅದಕ್ಕೆ ಕಾರಣ, ಪರಪ್ಪನ ಅಗ್ರಹಾರ ಜೈಲಿನಲ್ಲಿ ಎದುರಿಸಿದ ಐಷಾರಾಮಿ ಜೀವನ. ದೌಲತ್ತಿನ ಜೀವನ ಕಂಡ ಬೆನ್ನಲ್ಲಿಯೇ ಡಿಗ್ಯಾಂಗ್ ಇಂದು ಛಿದ್ರಛಿದ್ರವಾಗಿದೆ. ಬೆಂಗಳೂರು ಜೈಲಲ್ಲಿ ದರ್ಬಾರ್ ಮಾಡಿದ್ದ ದರ್ಶನ್ ಇಂದು ಬಳ್ಳಾರಿ ಜೈಲಿನ ಕತ್ತಲೆ ಕೋಣೆಗೆ ಶಿಫ್ಟ್ ಆಗಿದ್ದಾರೆ. ವಿಲ್ಸನ್ ಗಾರ್ಡನ್ ನಾಗನಿಂದ ಪಾರ್ಟಿ ಮಾಡಿದ್ದ ಕಾರಣಕ್ಕೆ ದರ್ಶನ್‌ಗೆ ಈ ಫಜೀತಿ ಎದುರಾಗಿದೆ. ಅದರೊಂದಿಗೆ ಕೈಯಲ್ಲಿ ಕಾಫಿ ಮಗ್ ಹಿಡಿದುಕೊಂಡು ಸಿಗರೇಟ್ ಸೇದಿದ್ದ ಕಾರಣಕ್ಕೆ, ಕೊಲೆ ಪ್ರಕರಣದ ಎ2 ಆರೋಪಿ ಬಳ್ಳಾರಿ ಜೈಲಿಗೆ ಶಿಫ್ಟ್ ಆಗಿದ್ದಾರೆ. ಬರೋಬ್ಬರಿ 69 ದಿನದ ಬಳಿಕ ಬೆಂಗಳೂರು ಸೆಂಟ್ರಲ್ ಜೈಲಿಂದ ಎತ್ತಂಗಡಿ ಆಗಿದ್ದಾರೆ. ಗುರುವಾರ ಬೆಳಗ್ಗೆಯೇ ಅವರನ್ನು ಬೆಂಗಳೂರಿನಿಂದ ಬಳ್ಳಾರಿಗೆ ಶಿಫ್ಟ್ ಮಾಡಲಾಗಿದೆ.
ಸರಿಯಾಗಿ ಬೆಳಗ್ಗೆ 4.30ಕ್ಕೆ ಟೆಂಪೋ ಟ್ರಾವೆಲರ್‌ನಲ್ಲಿ ಬಳ್ಳಾರಿಗೆ ಶಿಫ್ಟ್ ಆಗಿದ್ದಾರೆ. ಮೂರು ಪೊಲೀಸ್ ವಾಹನಗಳ ಭದ್ರತೆ ಈ ವೇಳೆ ನೀಡಲಾಗಿತ್ತು. ಚಿಕ್ಕಬಳ್ಳಾಪುರ, ಬಾಗೇಪಲ್ಲಿ, ಅನಂತಪುರ ಮೂಲಕ ಬಳ್ಳಾರಿಗೆ ಹೋಗಲಾಗಿತ್ತು. ಭದ್ರತೆ ದೃಷ್ಟಿಯಿಂದಾಗಿ ಆಂಧ್ರ ಮೂಲಕ ದರ್ಶನ್ ಪ್ರಯಾಣ ಮಾಡಿದ್ದಾರೆ. ಬೆಳಗ್ಗೆ 10 ಗಂಟೆ ವೇಳೆಗೆ ಬಳ್ಳಾರಿ ಸೆಂಟ್ರಲ್ ಜೈಲಿಗೆ ಅವರು ಪ್ರವೇಶಿಸಿದ್ದಾರೆ. ಇನ್ನು ದರ್ಶನ್ ಬಳ್ಳಾರಿ ಜೈಲಿಗೆ ಹೋಗುತ್ತಿದ್ದ ದೃಶ್ಯಗಳ ವೈರಲ್ ಆಗಿದೆ. 69 ದಿನ ಕಳೆದರೂ ಕಡಿಮೆ ಆಗಿಲ್ವಾ ದರ್ಶನ್ ದೌಲತ್ತು ಒಂಚೂರು ಕಡಿಮೆಯಾಗಿಲ್ಲ. ಸಿನಿಮಾ ಚಿತ್ರೀಕರಣಕ್ಕೆ ಬರುವಂತೆ ಜೈಲಿಗೆ ಪ್ರವೇಶಿಸಿದ್ದಾರೆ. ಈ ವೇಳೆ ಸಿನಿಮಾ ಹಿರೋನಾ? ಕೊಲೆ ಪ್ರಕರಣದ ಅರೋಪಿಯಾ? ಎನ್ನುವ ಅನುಮಾನ ಕಾಡಿದ್ದಂತೂ ಸುಳ್ಳಲ್ಲ. ಐಷಾರಾಮಿ ಬಟ್ಟೆ.. ಕೂಲಿಂಗ್ ಗ್ಲಾಸ್.. ಕೈಯಲ್ಲಿ ಕೋಳದೊಂದಿಗೆ ಜೈಲಿಗೆ ಎಂಟ್ರಿ ಆಗಿದ್ದರು.
ಜೈಲಿಗೂ ರಾಯಲ್ ಎಂಟ್ರಿ: ಕೈಗೆ ಕೋಳ ಬಿದ್ದರೂ ದರ್ಶನ್ ಕೊಬ್ಬು ಕರಗಿಲ್ಲ ಎನ್ನುವುದು ಇದರಿಂದ ಸ್ಪಷ್ಟವಾಗಿದೆ. ಸಿನಿಮಾ ಚಿತ್ರೀಕರಣಕ್ಕೆ ಬಂದಂತೆ ಬಂದ ಕೊಲೆ ಆರೋಪಿ ಜೈಲಿಗೆ ಬಂದಿದ್ದ. ಬ್ರಾಡೆಂಟ್ ಟಿಶರ್ಟ್, ಜೀನ್ಸ್ಪ್ಯಾಂಟ್,ಕೊರಳಲ್ಲಿ ಕೂಲಿಂಗ್ ಗ್ಲಾಸ್ ಹಾಕಿಕೊಂಡು ಬಳ್ಳಾರಿ ಜೈಲಿನ ಮುಂದೆ ದರ್ಶನ್ ಬಂದಿದ್ದರು.
ದರ್ಶನ್ ಕೈಗೆ ಕೋಳ: ಬೆಂಗಳೂರಿನಿಂದ ದರ್ಶನ್ ಎಡಗೈಗೆ ಕೋಳ ಹಾಕಿ ಖಾಕಿ ಕರೆತಂದಿದೆ ಎನ್ನಲಾಗಿದೆ. ಕೋಳ ಯಾರಿಗೂ ಕಾಣದಂತೆ ಬಟ್ಟೆ ಸುತ್ತಿಕೊಂಡು ದರ್ಶನ್ ಜೈಲಿನ ಒಳ ಹೊಕ್ಕಿದ್ದಾರೆ. ಜೈಲು ಒಳ ಹೋಗುತ್ತಿದ್ದಂತೆ ಪೊಲೀಸರು ಕೋಳ ತೆಗೆಸಿದ್ದಾರೆ. ಇದೇ ವೇಳೆ ಕೊರಳಲ್ಲಿ ಇದ್ದ ಚೈನ್‌ಅನ್ನು ಕೂಡ ಪೊಲೀಸರು ತೆಗೆಸಿದ್ದಾರೆ. ಕೈಗೆ ಕಟ್ಟಿದ ಕೆಂಪು ದಾರ,ಬೆಳ್ಳಿ ಕಡಗವನ್ನೂ ಬಿಚ್ಚಿಸಿದ್ದಾರೆ. ದಾರ ಬಿಚ್ಚಲು ಈ ವೇಳೆ ದರ್ಶನ್ ಹಿಂದೇಟು ಹಾಕಿದ್ದಾರೆ. ಆದರೆ, ದಾರ ಬಿಚ್ಚಲೇಬೇಕೆಂದು ಬಳ್ಳಾರಿ ಪೊಲೀಸರಿಂದ ಸ್ಪಷ್ಟ ಸೂಚನೆ ನೀಡಲಾಗಿತ್ತು. ಜೈಲು ರೂಲ್ಸ್ ಫಾಲೋ ಮಾಡಲು ಪೊಲೀಸರಿಂದ ಎಚ್ಚರಿಕೆಯನ್ನೂ ನೀಡಲಾಯಿತು.
ರಿಜಿಸ್ಟರ್ನಲ್ಲಿ ಸಹಿ: ಕೋಳ ತೆಗೆದ ಬಳಿಕ ಜೈಲು ರಿಜಿಸ್ಟರ್ನಲ್ಲಿ ದರ್ಶನ್ ಸಹಿ ಮಾಡಿದ್ದಾರೆ. ಈ ವೇಳೆ ನಗುನಗುತ್ತಲೇ ಬಳ್ಳಾರಿ ಜೈಲಿನೊಳಗೆ ದರ್ಶನ್ ಹೊಕ್ಕಿದ್ದಾರೆ. ಈ ಹಂತದಲ್ಲಿ ಅವರ ಕೊರಳಲ್ಲಿ ಕೂಲಿಂಗ್ ಗ್ಲಾಸ್ ಕೂಡ ಇದ್ದವು. ಇನ್ನು ದರ್ಶನ್ ಬಳ್ಳಾರಿ ಜೈಲಿಗೆ ಎಂಟ್ರಿಯಾದ ದಿನವೇ ಪೊಲೀಸರಿಗೆ ಶಾಕ್ ಸಿಕ್ಕಿದೆ. ದರ್ಶನ್ ಧರಿಸಿದ್ದ ಕೂಲಿಂಗ್ ಗ್ಲಾಸ್‌ನಿಂದ ಸಿಬ್ಬಂದಿಗೆ ಸಂಕಷ್ಟ ಎದುರಾಗಿದೆ. ಹಿರಿಯ ಅಧಿಕಾರಿಗಳಿಂದ ಬೆಂಗಾವಲು ಪಡೆಗೆ ನೋಟಿಸ್ ನೀಡಲಾಗಿದೆ. ದರ್ಶನ್ ಬಂದ ಸ್ಟೈಲ್ ನೋಡಿ ಅಧಿಕಾರಿಗಳು ಪುಲ್ ಗರಂ ಆಗಿದ್ದು 9 ಬೆಂಗಾವಲು ಸಿಬ್ಬಂದಿಗೆ ಡಿಐಜಿ ಟಿ.ಪಿ ಶೇಷ ನೋಟಿಸ್ ನೀಡಿದ್ದಾರೆ. ಕೂಲಿಂಗ್ ಗ್ಲಾಸ್ ಧರಿಸಿ ಕೈದಿ ಜೈಲಿಗೆ ಬರಲು ಅವಕಾಶವಿಲ್ಲ. ನಿಯಮಮೀರಿ ದರ್ಶನ್ ಕೂಲಿಂಗ್ ಗ್ಲಾಸ್ ಧರಿಸಿ ಬಂದಿದ್ದಾರೆ. ಕರ್ತವ್ಯ ಲೋಪ ವರದಿಗೆ ಉತ್ತರ ವಲಯ ಐಜಿಪಿ ನೋಟಿಸ್ ನೀಡಿದ್ದಾರೆ.
ದರ್ಶನ್ ಕೈಗೆ ಕೋಳ ಹಾಕಿದ್ರೂ ಕಣ್ಣಿಗೆ ಮಾತ್ರ ಕೂಲಿಂಗ್ ಗ್ಲಾಸು; ಬೆಂಗಾವಲು ಪಡೆಗೆ ಕೊಟ್ರು ನೋಟೀಸು!
ಖೈದಿ ನಂಬರ್ 511: ಬೆಂಗಳೂರಲ್ಲಿ ಖೈದಿ ನಂಬರ್ 6106 ಆಗಿದ್ದ ದರ್ಶನ್‌ಗೆ ಬಳ್ಳಾರಿಯಲ್ಲಿ 511 ನಂಬರ್ ನೀಡಲಾಗಿದೆ. ಬಳ್ಳಾರಿ ಜೈಲಿನಲ್ಲಿ ರ್ಶನ್ ವಿಚಾರಣಾಧೀನ ಕೈದಿ ನಂ-511 ಹೆಸರಿನಲ್ಲಿ ಗುರುತಿಸಿಕೊಳ್ಳಲಿದ್ದಾರೆ.
ಜೈಲಿನಲ್ಲಿ ರಾಜಾತಿಥ್ಯ ಪ್ರಕರಣ: ಬಳ್ಳಾರಿ ಜೈಲಿನತ್ತ ನಟ ದರ್ಶನ್