ಭಾರೀ ಮಳೆ: ಕಲಬುರಗಿ ಜಿಲ್ಲೆಯ ಕೊಳ್ಳುರ ಗ್ರಾಮ ಜಲಾವೃತ

By Kannadaprabha News  |  First Published Jun 29, 2022, 5:15 AM IST

*  ಕರಾವಳಿ, ಮಲೆನಾಡು ಭಾಗದಲ್ಲಿ ಸಾಧಾರಣ ಮಳೆ 
*  ಎಡೆಬಿಡದೆ ಸುರಿದ ಮಳೆಯಿಂದ ಗ್ರಾಮದ ಪ್ರಮುಖ ರಸ್ತೆಯಲ್ಲಿ ಭಾರಿ ಪ್ರಮಾಣದಲ್ಲಿ ಹರಿದು ನೀರು 
*  ಕೆಲವು ಮನೆಗಳಿಗೆ ನುಗ್ಗಿದ ನೀರು 
 


ಬೆಂಗಳೂರು(ಜೂ.29):  ರಾಜ್ಯದ ಕರಾವಳಿ, ಮಲೆನಾಡು ಭಾಗದಲ್ಲಿ ಸಾಧಾರಣ ಮಳೆ ಮುಂದುವರಿದಿದೆ. ಆದರೆ ಮಂಗಳವಾರ ಕಲಬುರಗಿ ತಾಲೂಕಿನಲ್ಲಿ ಭಾರಿ ಮಳೆಯಾಗಿದೆ. ಕೊಳ್ಳುರ ಗ್ರಾಮದಲ್ಲಿ ಮಂಗಳವಾರ ಸಂಜೆ ಎಡೆಬಿಡದೆ ಸುರಿದ ಮಳೆಯಿಂದ ಗ್ರಾಮದ ಪ್ರಮುಖ ರಸ್ತೆಯಲ್ಲಿ ಭಾರಿ ಪ್ರಮಾಣದಲ್ಲಿ ನೀರು ಹರಿದು ಜನರು ರಸ್ತೆ ದಾಟುವುದಕ್ಕೆ ಹರ ಸಾಹಸ ಪಡುವಂತಾಗಿತ್ತು. ಅಲ್ಲದೇ ಗ್ರಾಮದ ಕೆಲವು ಮನೆಗಳಿಗೆ ನೀರು ನುಗ್ಗಿತ್ತು.

ಇನ್ನು ಮಂಗಳೂರು ಸೇರಿದಂತೆ ದ.ಕ.ಜಿಲ್ಲೆಯಾದ್ಯಂತ ಮಂಗಳವಾರ ಅಲ್ಲಲ್ಲಿ ಸಾಧಾರಣ ಮಳೆಯಾಗಿದ್ದು, ನಗರದ ಪಂಪ್‌ವೆಲ್‌ನಲ್ಲಿ ರಸ್ತೆ ಬದಿ ಕುಸಿದಿದೆ. ಇದರಿಂದಾಗಿ ಮಂಗಳೂರು ನಗರಕ್ಕೆ ನೀರು ಪೂರೈಕೆ ಮಾಡುವ ಪೈಪ್‌ಲೈನ್‌ ಸೋರಿಕೆಯಾಗಿ ನೀರು ಪೂರೈಕೆ ಸ್ಥಗಿತಗೊಂಡಿದೆ. ಜೂ.29ರಂದು ಯೆಲ್ಲೋ ಹಾಗೂ 30ರಂದು ಆರೆಂಜ್‌ ಅಲರ್ಚ್‌ ಘೋಷಿಸಲಾಗಿದೆ.

Tap to resize

Latest Videos

Raichur ಬಾರೋ...ಬಾರೋ ಮಳೆರಾಯ...ನಿತ್ಯ ಮಳೆಗಾಗಿ ಜಪಿಸುತ್ತಿರುವ ಅನ್ನದಾತರು!

ಚಿಕ್ಕಮಗಳೂರು ಜಿಲ್ಲೆಯಲ್ಲೂ ನಗರ ಸೇರಿದಂತೆ ಕೆಲವೆಡೆ ಸಾಧಾರಣ ಮಳೆಯಾಗಿದೆ.
 

click me!