ದಿಢೀರ್‌ ಸಾವಿರದ ಸನಿಹ ಬಂದ ಕೋವಿಡ್‌: ಹಳೆ ಕೇಸಿನ ಎಫೆಕ್ಟ್?

By Kannadaprabha NewsFirst Published Jun 29, 2022, 5:00 AM IST
Highlights

*  1 ವಾರ ಐಸಿಎಂಆರ್‌ ಪೋರ್ಟಲ್‌ ಸಮಸ್ಯೆ
*  39 ಸಾವಿರ ಮಂದಿಗೆ ಲಸಿಕೆ
*  ಬೆಂಗಳೂರು ನಗರದಲ್ಲಿ 887 ಮಂದಿಯಲ್ಲಿ ಸೋಂಕು ಪತ್ತೆ

ಬೆಂಗಳೂರು(ಜೂ.29):  ರಾಜ್ಯದಲ್ಲಿ ಮಂಗಳವಾರ 968 ಜನರಲ್ಲಿ ಕೋರೋನಾ ಸೋಂಕು ಪ್ರಕರಣಗಳು ಪತ್ತೆಯಾಗಿದ್ದು, ಪಾಸಿಟಿವಿಟಿ ದರ ಶೇ. 5.44 ದಾಖಲಾಗಿದೆ. ಆದರೆ, ಜೂನ್‌ 21ರಿಂದ 28ರವರೆಗಿನ ದೈನಂದಿನ ಪ್ರಕರಣಗಳು ಐಸಿಎಂಆರ್‌ ಪೋರ್ಟಲ್‌ನಲ್ಲಿ ನೋಂದಣಿಯಾಗಿರಲಿಲ್ಲ. ಬಾಕಿಯಿದ್ದ ಪ್ರಕರಣಗಳನ್ನು ಸೇರ್ಪಡೆಗೊಳಿಸಿ ಮಂಗಳವಾರ ಕೋವಿಡ್‌ ಪ್ರಕರಣಗಳ ಅಂಕಿ-ಅಂಶ ಬಿಡುಗಡೆ ಮಾಡಲಾಗಿದೆ. ಮಂಗಳವಾರ 337 ಮಂದಿ ಚೇತರಿಸಿಕೊಂಡಿದ್ದಾರೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ 78 ವರ್ಷದ ವ್ಯಕ್ತಿಯೊಬ್ಬರು ಕೋವಿಡ್‌ನಿಂದ ಮೃತಪಟ್ಟ ವರದಿಯಾಗಿದೆ.

17,783 ಮಂದಿ ಕೋವಿಡ್‌ ಪರೀಕ್ಷೆಗೆ ಒಳಗಾಗಿದ್ದಾರೆ. ಬೆಂಗಳೂರು ನಗರದಲ್ಲಿ 887 ಮಂದಿಯಲ್ಲಿ ಸೋಂಕು ಪತ್ತೆಯಾಗಿದೆ. ದಕ್ಷಿಣ ಕನ್ನಡದಲ್ಲಿ 21, ಉಡುಪಿ 17, ಮೈಸೂರು 14, ಧಾರವಾಡ 10, ಬೆಳಗಾವಿ, ಬೆಂಗಳೂರು ಗ್ರಾಮಾಂತರ, ಚಿಕ್ಕಮಗಳೂರಿನಲ್ಲಿ ತಲಾ ಮೂರು ಪ್ರಕರಣಗಳು, ಬೆಳಗಾವಿ, ಬೀದರ್‌, ಹಾಸನದಲ್ಲಿ ತಲಾ ಎರಡು, ಹಾವೇರಿ, ರಾಮನಗರ, ಶಿವಮೊಗ್ಗ ಹಾಗೂ ತುಮಕೂರಿನಲ್ಲಿ ತಲಾ ಒಂದು ಪ್ರಕರಣ ವರದಿಯಾಗಿದೆ. ಉಳಿದ ಜಿಲ್ಲೆಗಳಲ್ಲಿ ಯಾವುದೇ ಸೋಂಕು ಪ್ರಕರಣ ಕಾಣಿಸಿಕೊಂಡಿಲ್ಲ.

COVID CRISIS: ರಾಜ್ಯದಲ್ಲಿ 617 ಕೋವಿಡ್‌ ಕೇಸ್‌ ಪತ್ತೆ, ಶೂನ್ಯ ಸಾವು

ರಾಜ್ಯದಲ್ಲಿ ಈವರೆಗೆ 39.66 ಲಕ್ಷ ಮಂದಿಯಲ್ಲಿ ಕೋವಿಡ್‌ ಪತ್ತೆಯಾಗಿದೆ. 39.21 ಲಕ್ಷ ಮಂದಿ ಚೇತರಿಸಿಕೊಂಡಿದ್ದಾರೆ. ಸಕ್ರಿಯ ಪ್ರಕರಣಗಳ ಸಂಖ್ಯೆ 4,918ಕ್ಕೆ ಏರಿದೆ. 40,073 ಮಂದಿ ಮರಣವನ್ನಪ್ಪಿದ್ದಾರೆ.

39 ಸಾವಿರ ಮಂದಿಗೆ ಲಸಿಕೆ:

ರಾಜ್ಯದಲ್ಲಿ ಮಂಗಳವಾರ 39,216 ಮಂದಿ ಕೋವಿಡ್‌ ಲಸಿಕೆ ಪಡೆದಿದ್ದಾರೆ. 4,127 ಮಂದಿ ಮೊದಲ ಡೋಸ್‌, 19,432 ಮಂದಿ ಎರಡನೇ ಡೋಸ್‌ ಮತ್ತು 18,338 ಮಂದಿ ಮುನ್ನೆಚ್ಚರಿಕೆ ಡೋಸ್‌ ಸ್ವೀಕರಿಸಿದ್ದಾರೆ. ಈವರೆಗೆ 11.17 ಕೋಟಿ ಡೋಸ್‌ ಲಸಿಕೆ ನೀಡಲಾಗಿದೆ.
 

click me!