
ಬಾಗಲಕೋಟೆ (ಏ.6): ರಾಜ್ಯದ ಆಂತರಿಕ ವಿಚಾರಗಳ ಮೇಲೆ ವಿಶ್ವದ ಅತ್ಯಂತ ಕುಖ್ಯಾತ ಭಯೋತ್ಪಾದಕ ಸಂಘಟನೆ (Terror organisatio) ಅಲ್ ಖೈದಾ (Al Qaeda) ಕರಿನೆರಳು ಬಿದ್ದಿದೆ. ಹಿಜಾಬ್ (Hijab) ಗಲಾಟೆಯ ವೇಳೆ ಮಂಡ್ಯದ ಕಾಲೇಜು ವಿದ್ಯಾರ್ಥಿನಿ ಮುಸ್ಕಾನ್ ಖಾನ್ (Bibi Muskan Zainab Khan) ಸಾರ್ವಜನಿಕವಾಗಿ "ಅಲ್ಲಾಹು ಅಕ್ಬರ್ " ಎಂದು ಕೂಗಿದ್ದು ಅಲ್ ಖೈದಾವರೆಗೂ ಮುಟ್ಟಿದೆ. ಇದಕ್ಕೆ ಪ್ರತಿಯಾಗಿ ಅಲ್ ಖೈದಾ ಸಂಘಟನೆಯ ಮುಖ್ಯಸ್ಥ ಅಯ್ಮಾನ್ ಅಲ್-ಜವಾಹಿರಿ (Ayman al Zawahiri), ಒಂದು ಕವಿತೆಯನ್ನು ಬರೆದು ಅದನ್ನು ಮುಸ್ಕಾನ್ ಖಾನ್ ಗೆ ಅರ್ಪಿಸಿದ್ದಾನೆ.
ಇದರ ಬೆನ್ನಲ್ಲಿಯೇ ರಾಜಕೀಯ ಹೇಳಿಕೆಗಳು ಮುಂದುವರಿದಿದ್ದು, ಮಾಜಿ ಮುಖ್ಯಮಂತ್ರಿ ಸಿದ್ಧರಾಮಯ್ಯ (Former Chief minister siddaramaiah ), ಈ ವಿಡಿಯೋಗಳನ್ನು ಕಳಿಸೋದು ಅಲ್ ಖೈದಾ ಅಲ್ಲ, ಆರ್ ಎಸ್ ಎಸ್ (RSS) ನವರೇ ಕಳಿಸೋದು ಎಂದು ಹೇಳಿದ್ದಾರೆ. ಆಲೂರು ಎಸ್ ಕೆ ಗ್ರಾಮದಲ್ಲಿ ಖಾಸಗಿ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಸಿದ್ಧರಾಮಯ್ಯ, ಅಲ್ ಖೈದಾ ಮುಖ್ಯಸ್ಥ, ಮಂಡ್ಯ ಯುವತಿ ಅಲ್ಲಾ ಹೋ ಅಕ್ಬರ್ ಹೇಳಿಕೆಗೆ ಬೆಂಬಲ ನೀಡಿರೋ ವಿಚಾರದ ಬಗ್ಗೆ ತಮ್ಮ ಪ್ರತಿಕ್ರಿಯೆಯನ್ನು ನೀಡಿದರು.
" ಇಲ್ಲ ಇಲ್ಲ ಅದನ್ನೆಲ್ಲ ಬಿಜೆಪಿಗರೇ ಹುಟ್ಟಾಕಿರೋದು. ಎಲ್ಲಿದ್ದಾನೆ ಉಗ್ರ? ಯಾರು ಉಗ್ರ? ನೋಡಪ್ಪ ಇಂಥ ವಿಡಿಯೋಗಳನ್ನೆಲ್ಲಾ ಆರ್ ಎಸ್ಎಸ್ ನವರೇ ಕಳಿಸೋದು. ಸಮಾಜದಲ್ಲಿ ಅಶಾಂತಿ ಉಂಟುಮಾಡಲಿಕ್ಕೆ, ಸಾಮರಸ್ಯ ಹಾಳು ಮಾಡಲಿಕ್ಕೆ , ಮತಗಿಟ್ಟಿಸಿಕೊಳ್ಳೋಕೆ ಹೀಗೆ ಇಂಥ ವಿಡಿಯೋಗಳನ್ನು ಹುಟ್ಟು ಹಾಕಿರ್ತಾರೆ" ಎಂದು ಆರೋಪ ಮಾಡಿದ್ದಾರೆ.
ಮಂಡ್ಯದ ಮುಸ್ಕಾನ್ ಕುರಿತಾಗಿ ಕವನ ಬರೆದು ಶ್ಲಾಘನೆ ಮಾಡಿದ ಅಲ್ ಖೈದಾ ಭಯೋತ್ಪಾದಕ ಸಂಘಟನೆ ಮುಖ್ಯಸ್ಥ!
ಈ ಬಗ್ಗೆ ಸೂಕ್ತವಾಗಿ ತನಿಖೆಯಾಗಲಿ, ತಪ್ಪು ಯಾರೇ ಮಾಡಿರಲಿ ಶಿಕ್ಷೆಯಾಗಲಿ. ಅಯ್ಮಾನ್ ಅಲ್-ಜವಾಹಿರಿ ಬಗ್ಗೆ ಇಂಟಲಿಜೆನ್ಸ್ ಬಳಿ ಕೇಳಿ ಮಾತನಾಡ್ತಾನೆ ಎಂದು ಸಿಎಂ ಬಸವರಾಜ ಬೊಮ್ಮಾಯಿ ಹೇಳುತ್ತಾರೆ. ಇಂಥ ವಿಚಾರಗಳೆನೆಲ್ಲಾ ಇಂಟಲಿಜೆನ್ಸ್ ಬಳಿ ಮಾತಾಡಿ ಏನ್ ಹೇಳೋದು. ದಿನಕ್ಕೆ ಎರಡು ಬಾರಿ ಇಂಟಲಿಜೆನ್ಸ್, ಸಿಎಂಗೆ ರಿಪೋರ್ಟ್ ಮಾಡ್ತಾರೆ ಇದರ ಬಗ್ಗೆ ಗೊತ್ತಿಲ್ಲ ಅಂದ್ರೆ ನಾನೇನ್ ಹೇಳೋದು. ಯಾರೇ ತಪ್ಪು ಮಾಡಿದರು ಶಿಕ್ಷೆ ಆಗಬೇಕು. ನಾನೇ ಆಗಲಿ ಬೇರೆ ಧರ್ಮದವರೇ ಆಗಲಿ ಶಿಕ್ಷೆಯಾಗಬೇಕು ಎಂದು ಸಿದ್ಧರಾಮಯ್ಯ ಹೇಳಿದ್ದಾರೆ.
ಪರೀಕ್ಷೆಗೆ ಗೈರಾದ ಮಂಡ್ಯದ ಮುಸ್ಕಾನ್, ಶಿಕ್ಷಣಕ್ಕಿಂತ ಹೆಚ್ಚಾಯ್ತಾ ಹಿಜಾಬ್?
ಇದೇ ವಿಚಾರವಾಗಿ ಮೈಸೂರಿನಲ್ಲಿ ಮಾತನಾಡಿರುವ ಸಿಎಂ ಇಬ್ರಾಹಿಂ (CM Ibrahim), ಅಲ್ ಖೈದಾಗೂ, ಭಾರತಕ್ಕೂ, ಕರ್ನಾಟಕಕ್ಕೂ ಏನು ಸಂಬಂಧವಿದೆ. ಮುಸ್ಕಾನ್ ಖಾನ್ ಗೆ ಅಲ್ ಖೈದಾ ಎನ್ನುವ ಸಂಘಟನೆ ಇದೇ ಎನ್ನುವುದರ ಬಗ್ಗೆಯೇ ಗೊತ್ತಿರಲಿಕ್ಕಿಲ್ಲ. ಇದೆಲ್ಲಾ ಇವರದೇ ಸೃಷ್ಟಿ. ಅಲ್ ಖೈದಾ, ಪಲ್ ಖೈದಾ ಎನ್ನೋದೇಲ್ಲಾ ಬಿಜೆಪಿಯ ಸೃಷ್ಟಿ ಅಷ್ಟೇ. ಅಲ್ ಖೈದಾ ಇದ್ದರೆ ಅವರನ್ನು ಹುಡುಕಿ ಬಂಧಿಸಿ. ಸುಮ್ಮನೆ ಏನೇನೋ ಮಾತಾಡಬೇಡಿ ಎಂದು ಮುಸ್ಕಾನ್ ಖಾನ್ ಗೆ ಅಲ್ ಖೈದಾ ಸಂಘಟನೆ ಬೆಂಬಲ ನೀಡಿರುವ ವಿಚಾರದ ಬಗ್ಗೆ ಮಾತನಾಡಿದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ