
ವರದಿ: ನರಸಿಂಹ ಮೂರ್ತಿ ಕುಲಕರ್ಣಿ
ಬಳ್ಳಾರಿ (ಏ.6): ಮಾಡಬಾರದ ಕೆಲಸ ಮಾಡಿದ್ರೇ ಆಗಬಾರದು ಆಗುತ್ತದೆ ಅನ್ನೋದಕ್ಕೆ ಈ ಪ್ರಕರಣವೇ ಸಾಕ್ಷಿ. ಸರ್ಕಾರಿ ಕೆಲಸ, ಮುದ್ದಾದ ಹೆಂಡ್ತಿ. ಎರಡು ಮಕ್ಕಳು ಇದ್ರೂ, ಕೂಡ ಪರಸ್ತ್ರಿ ಸಹವಾಸ ಮಾಡಿ ಆಕೆಯನ್ನು ಮದುವೆ ಮಾಡಿಕೊಂಡು ಆಕೆಗೂ ಒಂದು ಮಗು ಕರುಣಿಸೋ ಮೂಲಕ ಇದೀಗ ಈ ಅಧಿಕಾರಿ ವಿವಾದಕ್ಕೆ ಸಿಲುಕಿದ್ದಾನೆ.
ಬಳ್ಳಾರಿ ಸಬ್ ರಿಜಿಸ್ಟ್ರಾರ್ (Bellary Sub Registrar ) ಕಾಮದ ಕಥೆ: ಹೀಗೆ ಪೋಟೋದಲ್ಲಿ ತನ್ನ ಎರಡನೇ ಹೆಂಡ್ತಿ ಜೊತೆಗೆ ಭರ್ಜರಿ ಪೋಸ್ ಕೊಡ್ತಿರೋ ಇವರು ಬಳ್ಳಾರಿ ಸಬ್ ರಿಸ್ಟ್ರರ್ ಉಮೇಶ್. ದಾವಣಗೆರೆ (Davanagere) ಮೂಲದ ಉಮೇಶ್ (Umesh) ಬಳ್ಳಾರಿಯಲ್ಲಿ ಸಬ್ ರಿಜಿಸ್ಟ್ರಾರ್ ಆಗಿ ಹಲವು ವರ್ಷದಿಂದ ಕೆಲಸ ಮಾಡ್ತಿದ್ದಾರೆ. ಭರ್ಜರಿ ಸಂಬಳ ಜೊತೆಗೊಂದಿಷ್ಟು ಗಿಂಬಳ ಇದ್ರೂ ಇವರಿಗೆ ಬೆಂಗಳೂರು, ಮುಂಬೈ ಮತ್ತು ಡೆಲ್ಲಿಯಲ್ಲಿರೋ ಬಾರ್ ಗರ್ಲ್ಸ್ ಗಳ (Bar Girls) ಸಂಪರ್ಕವಿತ್ತು. ಹೀಗೆ ಸಂಪರ್ಕ ಪ್ರೇಮಕ್ಕೆ ತಿರುಗಿದ ಹಿನ್ನೆಲೆ ನಜ್ಮೀನ್ ಖಾನ್ (Nazmeen Khan) ಎನ್ನುವ ಮಹಿಳೆಯ ಜೊತೆಗೆ ಮದುವೆಯಾಗಿದ್ದಾನೆ. ಆಕೆಗೆ ಬಳ್ಳಾರಿಯಲ್ಲೊಂದು ಫ್ಲಾಟ್ ಕೊಟ್ಟು ಎರಡು ವರ್ಷ ಸಂಸಾರ ಮಾಡಿದ ಬಳಿಕ ಇದೀಗ ಕೈಕೊಡಲು ಮುಂದಾಗಿದ್ದಾನೆ. ಹೀಗಾಗಿ ಮಹಿಳಾ ಠಾಣೆಯಲ್ಲಿ ದೂರು ನೀಡಿರೋ ನಜ್ಮಾ ಇದೀಗ ನಿತ್ಯ ಸಬ್ ರಿಜಿಸ್ಟ್ರಾರ್ ಕಚೇರಿ ಅಲೆಯುತ್ತಿದ್ದಾಳೆ..
ಸಬ್ ರಿಜಿಸ್ಟ್ರಾರ್ ಕಚೇರಿಗೆ ಹೆಂಡ್ತಿ ಬರುತ್ತಿದ್ದಂತೆ ಎಸ್ಕೇಪ್ ಆಗ್ತಿರೋ ಉಮೇಶ್: ಇನ್ನೂ ಮದುವೆ ಬಳಿಕ ಒಂದು ಮಗುವನ್ನು ಕರುಣಿಸಿರೋ ಉಮೇಶ್ ಇದೀಗ ವಿಷಯ ಬಹಿರಂಗವಾಗ್ತಿದ್ದಂತೆ ಎರಡನೇ ಹೆಂಡ್ತಿ ಕೈಕೊಡಲು ಮುಂದಾಗಿದ್ದಾನೆ. ಅಲ್ಲದೇ ಡೆಲ್ಲಿ ಮೂಲದ ಯುವತಿಯನ್ನು ಊರಿಗೆ ಹೋಗುವಂತೆ ಉಮೇಶ್ ಗೂಂಡಾಗಳನ್ನ ಮನೆಗೆ ಕಳುಹಿಸಿ ಗಲಾಟೆ ಮಾಡಿಸಿ ಹೆದರಿಸುತ್ತಿದ್ದಾನೆ ಎಂದು ಆರೋಪಿಸಲಾಗ್ತಿದೆ.. ಇನ್ನೂ ಈ ಬಗ್ಗೆ ಈಗಾಗಲೇ ಮಹಿಳಾ ಠಾಣೆಯಲ್ಲಿ ದೂರು ದಾಖಲಾಗಿದ್ದು, ಪ್ರಕರಣ ಕುರಿತಂತೆ ಚಾರ್ಜ್ ಶೀಟ್ ಸಲ್ಲಿಸಲಾಗಿದೆ. ಆದ್ರೇ ಬೆದರಿಕೆ ಬಗ್ಗೆ ಮಾಹಿತಿ ಇಲ್ಲ ಅದರ ಬಗ್ಗೆಯೂ ದೂರು ನೀಡಿದ್ರೇ ಕ್ರಮ ಕೈಗೊಳ್ಳೊದಾಗಿ ಎಸ್ಪಿ ಸೈದುಲ್ ಅಡಾವತ್ ಹೇಳ್ತಿದ್ದಾರೆ..
Suvarna FIR; ದಾವಣಗೆರೆಯಲ್ಲೊಬ್ಬಳು, ಬಳ್ಳಾರಿಯಲ್ಲೊಬ್ಬಳು... ಕೈಗೆ ಮಗು ಕೊಟ್ಟ ಉಮೇಶ!
ಮದುವೆಯಾಗೋವಾಗ ನೂರೆಂಟು ಸುಳ್ಳು: ಮದುವೆಯಾಗೋವಾಗ ನೂರೆಂಟು ಸುಳ್ಳು ಹೇಳಿ ಸ್ನೇಹ, ಪ್ರೀತಿ ನಂತರ, ಲೈಂಗಿಕ ಸಂಬಂಧ ಬೆಳೆಸಿ ಇದೀಗ ಕನ್ನಡ ಭಾಷೆಯೇ ಬಾರದ ಯುವತಿಗೆ ಮೋಸ ಮಾಡ್ತಿರೋ ಈ ರೀತಿಯ ಅಧಿಕಾರಿಗೆ ತಕ್ಕ ಪಾಠ ಕಲಿಸಬೇಕಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ