ಭದ್ರಾವತಿ ಶಾಸಕರ ವಿರುದ್ಧ ಫೇಸ್‌ಬುಕ್‌ ಪೋಸ್ಟ್; ಬಿಜೆಪಿ ಕಾರ್ಯಕರ್ತನ ಕಾರು ಪುಡಿಪುಡಿ!

By Ravi Janekal  |  First Published Dec 11, 2023, 8:16 AM IST

ಫೇಸ್ ಬುಕ್ ನಲ್ಲಿ ಶಾಸಕರ ವಿರುದ್ಧ ಬರೆದುಕೊಂಡಿದ್ದಕ್ಕೆ ಕಿಡಿಗೇಡಿಗಳು ಬಿಜೆಪಿ ಯುವಮೋರ್ಚಾ ಕಾರ್ಯಕರ್ತನ ಕಾರಿನ ಗಾಜುಗಳನ್ನು ಒಡೆದು ಹಾಕಿದ ಘಟನೆ ಭದ್ರಾವತಿಯ ಸಿದ್ದಾಪುರ ಬಡಾವಣೆಯಲ್ಲಿ ನಡೆದಿದ್ದು, ಪ್ರಕರಣ ಸಂಬಂಧ ಮೂವರು ಆರೋಪಿಗಳನ್ನು ಬಂಧಿಸಲಾಗಿದೆ.


ಶಿವಮೊಗ್ಗ (ಡಿ.11) ಫೇಸ್ ಬುಕ್ ನಲ್ಲಿ ಶಾಸಕರ ವಿರುದ್ಧ ಬರೆದುಕೊಂಡಿದ್ದಕ್ಕೆ ಕಿಡಿಗೇಡಿಗಳು ಬಿಜೆಪಿ ಯುವಮೋರ್ಚಾ ಕಾರ್ಯಕರ್ತನ ಕಾರಿನ ಗಾಜುಗಳನ್ನು ಒಡೆದು ಹಾಕಿದ ಘಟನೆ ಭದ್ರಾವತಿಯ ಸಿದ್ದಾಪುರ ಬಡಾವಣೆಯಲ್ಲಿ ನಡೆದಿದ್ದು, ಪ್ರಕರಣ ಸಂಬಂಧ ಮೂವರು ಆರೋಪಿಗಳನ್ನು ಬಂಧಿಸಲಾಗಿದೆ.

ಗಣೇಶ (22 ), ಹರ್ಷ (23),ನಂಜೇಗೌಡ  (22) ಬಂಧಿತರು. ಬಿಜೆಪಿ ಯುವ ಮೋರ್ಚಾ ಕಾರ್ಯಕರ್ತ ಗೋಕುಲ್ ಅವರ ಮನೆಮುಂದೆ ನಿಂತಿದ್ದ ಮಾರುತಿ ಸ್ವಿಫ್ಟ್ ಕಾರಿನ ಗಾಜು ಒಡೆದು ಹಾಕಿದ್ದ ದುಷ್ಕರ್ಮಿಗಳು. ಒಂದೇ ಬೈಕ್‌ನಲ್ಲಿ ಬಂದ ಮೂವರು ಕಿಡಿಗೇಡಿಗಳು ಕಾರಿನ ಗಾಜು ಒಡೆಯುತ್ತಿರುವ ದೃಶ್ಯ ಸಿಸಿಟಿವಿ ಕ್ಯಾಮೆರಾದಲ್ಲಿ ದಾಖಲಾಗಿದೆ.

Tap to resize

Latest Videos

ಬಿಜೆಪಿಗರ ಮೇಲೆ ಐಟಿ ದಾಳಿ ಆದರೂ ದುಡ್ಡು ಸಿಗುತ್ತೆ: ಸಿಎಂ ಸಿದ್ದರಾಮಯ್ಯ ವ್ಯಂಗ್ಯ

ಏನಿದು ಘಟನೆ?

ಕನಕ ಮಂಟಪದಲ್ಲಿ ನಡೆದ ಕಾರ್ಯಕ್ರಮದಲ್ಲಿ  ಸಿದ್ದರಾಮಯ್ಯ, ಡಿಕೆಶಿ ಮತ್ತು ಭದ್ರಾವತಿ ಶಾಸಕರಿಗೆ ಎಂಪಿಎಂ ಆರಂಭಿಸುವುದಾಗಿ ಭರವಸೆ ನೀಡಿದ್ದರು. ಚುನಾವಣೆಯ ವೇಳೆ ಎಂಪಿಎಂ ಕಾರ್ಖಾನೆ ಆರಂಭಿಸುವುದಾಗಿ ಹೇಳಿಕೊಂಡಿದ್ದ ಭದ್ರಾವತಿ ಶಾಸಕರು. ಚುನಾವಣೆ ಗೆದ್ದ ನಂತರ ಕಾರ್ಖಾನೆ ಆರಂಭಿಸದಿದ್ದರೆ ರಾಜಕೀಯ ನಿವೃತ್ತಿ ಘೋಷಿಸುವುದಾಗಿ ಹೇಳಿದ್ದರು. ಆದರೆ ಈ ವಿಚಾರದಲ್ಲಿ ಮಾತುಕೊಟ್ಟಂತೆ ನಡೆಯದಿದ್ದಕ್ಕೆ ಪೋಸ್ಟ್. ಒಸಿ ಮತ್ತು ಮಟ್ಕಾ ನಿಲ್ಲಿಸಿ ಕಾರ್ಖಾನೆ ಆರಂಭಿಸಿ ಎಂದು ಗೋಕುಲ್ ಫೇಸ್ ಬುಕ್ ನಲ್ಲಿ ಪೋಸ್ಟ್ ಹಾಕಿಕೊಂಡಿದ್ದರು. ಇದರಿಂದಾಗಿ ಶಾಸಕನ ಬೆಂಬಲಿಗರು ಬೈಕ್‌ನಲ್ಲಿ ಬಂದು ಕಾರಿನ ಗಾಜು ಒಡೆದು ಕೃತ್ಯವೆಸಗಿದ್ದಾರೆ. ಸದ್ಯ ಆರೋಪಿಗಳನ್ನು ಬಂಧಿಸಿದ್ದು, ಭದ್ರಾವತಿ ನ್ಯೂಟೌನ್ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಅದು ಸಂಸದನ ಮನೆ ಅಲ್ಲ..ಕೋಟಿ ನೋಟಿನ ಕೋಟೆ..! ದುಡ್ಡಿನ ಸಾಮ್ರಾಜ್ಯ ಕಟ್ಟಿದ್ದು ಹೇಗೆ ಕಾಂಗ್ರೆಸ್ ಮುಖಂಡ..?

click me!