ಈಡಿಗ ಸಮುದಾಯದ ಮುಖಂಡ, ವಿಧಾನ ಪರಿಷತ್ ಸದಸ್ಯ ಬಿ.ಕೆ.ಹರಿಪ್ರಸಾದ್ ವಿರುದ್ಧ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೇ ಮಸಲತ್ತು ನಡೆಸುತ್ತಿದ್ದಾರೆ. ಅವರ ವಿರುದ್ಧ ಮಾತನಾಡಲು ತಾಕತ್ತು ಇಲ್ಲದೆ ಹರಿಪ್ರಸಾದ್ ಬಿಜೆಪಿಗೆ ಬಯ್ಯುತ್ತಿದ್ದಾರೆ ಎಂದು ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಆರೋಪಿಸಿದ್ದಾರೆ.
ಹುಬ್ಬಳ್ಳಿ (ಡಿ.11) : ಈಡಿಗ ಸಮುದಾಯದ ಮುಖಂಡ, ವಿಧಾನ ಪರಿಷತ್ ಸದಸ್ಯ ಬಿ.ಕೆ.ಹರಿಪ್ರಸಾದ್ ವಿರುದ್ಧ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೇ ಮಸಲತ್ತು ನಡೆಸುತ್ತಿದ್ದಾರೆ. ಅವರ ವಿರುದ್ಧ ಮಾತನಾಡಲು ತಾಕತ್ತು ಇಲ್ಲದೆ ಹರಿಪ್ರಸಾದ್ ಬಿಜೆಪಿಗೆ ಬಯ್ಯುತ್ತಿದ್ದಾರೆ ಎಂದು ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಆರೋಪಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿ, ರಾಜ್ಯ ಸರ್ಕಾರ ರಾಜ್ಯದಲ್ಲಿ ತನ್ನ ಹಿಡಿತ ಕಳೆದುಕೊಳ್ಳುತ್ತಿದೆ. ರಾಜ್ಯದಲ್ಲಿ ಸರ್ಕಾರ ಅಧಿಕಾರಕ್ಕೆ ಬಂದು 6 ತಿಂಗಳು ಕಳೆದರೂ, ಪರಸ್ಪರ ಕೆಸರೆರಚಾಟ ಮಾತ್ರ ಇಂದಿಗೂ ನಿಲ್ಲುತ್ತಿಲ್ಲ. ಪರಸ್ಪರ ಕೆಸರೆರಚಾಟ, ಗುಂಪುಗಾರಿಕೆಯಿಂದ ಸರ್ಕಾರದ ಆಡಳಿತದ ಮೇಲೆ ದುಷ್ಪರಿಣಾಮ ಬೀರುತ್ತಿದೆ. ಭ್ರಷ್ಟಾಚಾರ ನಡೆಸಲು ಪಕ್ಷದ ಮುಖಂಡರಲ್ಲಿ ಪರಸ್ಪರ ಸ್ಪರ್ಧೆ ಏರ್ಪಟ್ಟಿದೆ. ಇದು ಸಿ.ಸಿ.(ಕರಪ್ಶನ್ ಮತ್ತು ಕಂಪ್ಲೆಂಟ್) ಸರ್ಕಾರವಾಗಿದೆ ಎಂದು ರಾಜ್ಯ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು.
ಮೋದಿ ಬೈಯುವ ಬದಲು ಯತ್ನಾಳ್ ಆರೋಪ ತನಿಖೆ ಮಾಡಿ: ಪ್ರಲ್ಹಾದ್ ಜೋಶಿ
ಮೋದಿ ನೇತೃತ್ವದ ಕೇಂದ್ರ ಸರ್ಕಾರ ನೀಡಿದ್ದ ಐದು ಕೆ.ಜಿ.ಅಕ್ಕಿಯನ್ನೇ ರಾಜ್ಯ ಕಾಂಗ್ರೆಸ್ ಸರ್ಕಾರ ‘ಅನ್ನಭಾಗ್ಯ’ ಯೋಜನೆ ಹೆಸರಲ್ಲಿ ಪ್ರಚಾರ ಪಡೆಯುತ್ತಿದೆ. ಈವರೆಗೆ ರಾಜ್ಯದ ಜನತೆಗೆ ಅದು ಒಂದು ಕಾಳು ಅಕ್ಕಿ ಸಹ ನೀಡಿಲ್ಲ. ಸಾರಿಗೆ ಸಂಸ್ಥೆಗಳ ಬಸ್ಸುಗಳ ಸಂಖ್ಯೆ ಕಡಿಮೆ ಮಾಡಲಾಗಿದೆ, ಸಮರ್ಪಕ ವಿದ್ಯುತ್ ಪೂರೈಕೆಯಾಗುತ್ತಿಲ್ಲ ಎಂದು ಆರೋಪಿಸಿದರು.
ಸಾವರ್ಕರ್ ಫೋಟೊ ತೆಗೆಯುವೆ ಎಂಬುದು ಅಹಂಕಾರ:
ವೀರ ಸಾವರ್ಕರ್ ವಿಚಾರಧಾರೆಗಳನ್ನು ಅನುಸರಿಸುವವರು ಅನೇಕರಿದ್ದಾರೆ. ಅವರ ಫೋಟೋ ತೆಗೆಯುತ್ತೇನೆ ಎನ್ನುವುದು ಅಹಂಕಾರ ಅಲ್ಲವೇ ಎಂದು ಗ್ರಾಮೀಣಾಭಿವೃದ್ಧಿ ಸಚಿವ ಪ್ರಿಯಾಂಕ ಖರ್ಗೆ ಅವರಿಗೆ ಕೇಂದ್ರ ಸಚಿವ ಪ್ರಹ್ಲಾದ ಜೋಶಿ ತಿರುಗೇಟು ನೀಡಿದ್ದಾರೆ.
ನನಗೆ ಅವಕಾಶ ನೀಡಿದರೆ ಸುವರ್ಣ ಸೌಧದಲ್ಲಿರುವ ವೀರ ಸಾರ್ವಕರ್ ಫೋಟೋ ತೆಗೆಯುತ್ತೇನೆ ಎಂಬ ಸಚಿವ ಖರ್ಗೆ ಹೇಳಿಕೆ ಕುರಿತು ಪ್ರತಿಕ್ರಿಯೆ ನೀಡಿದ ಅವರು, ವೀರ ಸಾವರ್ಕರ್ ಅವರ ವಿಚಾರಧಾರೆ ಒಪ್ಪುವುದು, ಬಿಡುವುದು ಅವರಿಗೆ ಬಿಟ್ಟಿದ್ದು. ಆದರೆ, ವೀರ ಸಾವರ್ಕರ್ ವಿಚಾರಧಾರೆಗಳನ್ನು ಅನುಸರಿಸುವವರು ಅನೇಕರಿದ್ದಾರೆ. ಹೀಗಾಗಿ, ದುರಹಂಕಾರದ ಮಾತುಗಳನ್ನಾಡಬೇಡಿ. ನೆಹರೂ ವಿಚಾರಗಳ ಬಗ್ಗೆ ನಮಗೂ ಭಿನ್ನಾಭಿಪ್ರಾಯ ಇದೆ. ಹಾಗಂತ ನಾವು ನೆಹರೂ ಫೋಟೊ ತೆಗೆಯುತ್ತೇವೆ ಎನ್ನಲಾಗುತ್ತದೆಯೇ?. ನೆಹರು ಅವರನ್ನು ಒಪ್ಪುವವರು ಅನೇಕರಿದ್ದಾರೆ. ಹೀಗಾಗಿ, ಫೋಟೋ ತೆಗೆಯುವ ವಿಚಾರ ಸರಿಯಲ್ಲ ಎಂದರು.
ಕಾಂಗ್ರೆಸಿನ ಸುಳ್ಳು ಭರವಸೆಯನ್ನು ಜನರು ತಿರಸ್ಕರಿಸಿದ್ದಾರೆ: ಪ್ರಲ್ಹಾದ್ ಜೋಶಿ
ನಾನು ಕಿತ್ತು ಒಗೆಯಲು ಬಂದಿಲ್ಲ, ಜೋಡಿಸಲು ಬಂದಿದ್ದೇನೆ ಎಂಬ ವಿಧಾನಸಭೆ ಸ್ವೀಕರ್ ಯು.ಟಿ. ಖಾದರ್ ಹೇಳಿಕೆಗೆ ಅಭಿನಂದನೆ ಸಲ್ಲಿಸುತ್ತೇನೆ. ಈ ನಿಲುವು ಹಾಗೆಯೇ ಇರಬೇಕು. ಆಗ ಸದನ ಯಾವುದೇ ವಿವಾದ ಇಲ್ಲದೇ ನಡೆಯುತ್ತದೆ ಎಂದರು.