
ದಾವಣಗೆರೆ: ದಾವಣೆಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರದ ಉಪ ಚುನಾವಣೆಗೆ ಬಿಜೆಪಿ ಅಭ್ಯರ್ಥಿಯಾಗಿ ಶ್ರೀನಿವಾಸ ದಾಸಕರಿಯಪ್ಪ ಅವರಿಗೆ ಟಿಕೆಟ್ ಸಿಕ್ಕಿದ್ದು, ಈ ವಿಚಾರದ ಬಗ್ಗೆ ಅವರು ಏಷ್ಯಾನೆಟ್ ಸುವರ್ಣ ನ್ಯೂಸ್ ಜೊತೆ ಸಂತಸ ವ್ಯಕ್ತಪಡಿಸಿದ್ದಾರೆ. ನಾನು ಯುಗಾದಿ ಹಬ್ಬದ ಪ್ರಯುಕ್ತ ಹೂವು ಖರೀದಿಸಲು ಮಾರುಕಟ್ಟೆಗೆ ಹೋಗಿದ್ದೆ. ನೀವು ಫೋನ್ ಮಾಡಿದಾಗಲೇ ನನಗೆ ನಾನು ಅಭ್ಯರ್ಥಿ ಆಗಿ ಆಯ್ಕೆ ಆಗಿದ್ದು ಗೊತ್ತಾಗಿದ್ದು, ಏಷ್ಯಾನೆಟ್ ಸುವರ್ಣನ್ಯೂಸ್‌ನಿಂದ ನನಗೆ ಮೊದಲ ಮಾಹಿತಿ ಸಿಕ್ಕಿತು ನನಗೆ ಟಿಕೆಟ್ ನೀಡಿದ ವರಿಷ್ಠರಿಗೆ, ಎಲ್ಲರಿಗೂ ಧನ್ಯವಾದಗಳು ಎಂದು ಶ್ರೀನಿವಾಸ ದಾಸಕರಿಯಪ್ಪ ಹೇಳಿದರು.
ಶ್ರೀನಿವಾಸ ದಾಸಕರಿಯಪ್ಪ ಅವರ ತಂದೆ ಟಿ.ದಾಸಕರಿಯಪ್ಪ ಅವರು ಜನತಾ ಪರಿವಾರದ ನಾಯಕರಾಗಿದ್ದರು. ಟಿಕೆಟ್ ಘೋಷಣೆಯಾದ ಹಿನ್ನೆಲೆ ಶ್ರೀನಿವಾಸ್ ಅವರು ತಂದೆ ದಾಸಕರಿಯಪ್ಪ ಅವರನ್ನು ನೆನೆದು ಭಾವುಕರಾದರು. ನನ್ನ ತಂದೆ ಹಮಾಲಿಯಾಗಿದ್ದರು, ಬಡವರ ಸೇವೆ ಮಾಡಲು ರಾಜಕಾರಣಕ್ಕೆ ಬಂದ್ರು, ತಂದೆಯ ಮಾರ್ಗದಲ್ಲಿಯೇ ನಡೀತಿನಿ ಎಂದು ಶ್ರೀನಿವಾಸ್ ದಾಸಕರಿಯಪ್ಪ ಭಾವುಕರಾದರು.
ಜಿ.ಎಂ.ಸಿದ್ದೇಶ್ವರ, ರೇಣುಕಾಚಾರ್ಯ ಎಲ್ಲರೂ ಫೋನ್ ಮಾಡಿ ಅಭಿನಂದನೆ ಸಲ್ಲಿಸಿದರು, ಚುನಾವಣೆ ಗೆಲ್ಲುವುದೊಂದೆ ನಮ್ಮ ಗುರಿ, ಈ ಬಾರಿ ದಾವಣಗೆರೆ ದಕ್ಷಿಣದಲ್ಲಿ ಬಿಜೆಪಿ ಗೆದ್ದೇ ಗೆಲ್ಲುತ್ತೆ ಎಂದ ಶ್ರೀನಿವಾಸ ದಾಸಕರಿಯಪ್ಪ ಅವರು ಹೇಳಿದರು.
ಯುಗಾದಿಗೆ ಶುಭಸುದ್ದಿ, ನನ್ನ ಮಗ ಗೆದ್ದೇ ಗೆಲ್ತಾನೆ ಎಂದ ತಾಯಿ
ಶ್ರೀನಿವಾಸ ದಾಸಕರಿಯಪ್ಪಗೆ ದಾವಣಗೆರೆ ದಕ್ಷಿಣ ಬಿಜೆಪಿ ಟಿಕೆಟ್ ಲಭಿಸಿದ ಹಿನ್ನೆಲೆ ಏಷ್ಯಾನೆಟ್ ಸುವರ್ಣನ್ಯೂಸ್ ಜೊತೆ ಮಾತನಾಡಿದ ಶ್ರೀನಿವಾಸ ದಾಸಕರಿಯಪ್ಪ ತಾಯಿ ರಂಗಮ್ಮ, ನನ್ನ ಮಗ ಗೆದ್ದೇ ಬರ್ತಾನೆ, ನನ್ನ ಪತಿಯು ಜನತಾ ಪರಿವಾರದಲ್ಲಿ ಇದ್ದು ಜನಸೇವೆ ಮಾಡಿದ್ರು, ನನ್ನ ಮಗ ಕಳೆದ 20 ವರ್ಷಗಳಿಂದ ಬಹಳ ಕಷ್ಟಪಡುತ್ತಿದ್ದ ಯುಗಾದಿಗೆ ಶುಭಸುದ್ದಿ ಸಿಕ್ಕಿದೆ, ನನ್ನ ಮಗ ಗೆದ್ದೇ ಗೆಲ್ತಾನೆ ಎಂದ ತಾಯಿ ರಂಗಮ್ಮ ಹೇಳಿದರು.
ಇದನ್ನೂ ಓದಿ: ಅಣ್ಣಾಮಲೈ ಹುಲಿ ಅಭಯಾರಣ್ಯದ ತಪ್ಪಲಲ್ಲಿ ಕಂಡು ಬಂದ ಹಕ್ಕಿಗಳ ಹರಟೆಯ ಅದ್ಭುತ ದೃಶ್ಯ
ಶ್ರೀನಿವಾಸ ದಾಸಕರಿಯಪ್ಪ ಪತ್ನಿ ಸಂಧ್ಯಾ ಮಾತನಾಡಿ, ಪತಿಗೆ ಬಿಜೆಪಿ ಟಿಕೆಟ್ ಸಿಕ್ಕಿದ್ದಕ್ಕೆ ಹರ್ಷ ವ್ಯಕ್ತಪಡಿಸಿದ್ರು, ನನ್ನ ಪತಿ ಪಕ್ಷದಲ್ಲಿ ಸಾಕಷ್ಟು ಕೆಲಸ ಮಾಡಿದ್ದರು ಇಂದು ಪಕ್ಷ ಅವರನ್ನು ಗುರುತಿಸಿದ್ದಕ್ಕೆ ಖುಷಿಯಾಗಿದೆ ಎಂದು ದಾವಣಗೆರೆಯಲ್ಲಿ ಏಷ್ಯಾನೆಟ್ ಸುವರ್ಣನ್ಯೂಸ್‌ಗೆ ಶ್ರೀನಿವಾಸ ದಾಸಕರಿಯಪ್ಪ ಪತ್ನಿ ಸಂಧ್ಯಾ ಹೇಳಿದರು.
ಶ್ರೀನಿವಾಸ ದಾಸಕರಿಯಪ್ಪ ಮನೆ ಬಳಿ ಸಂಭ್ರಮಾಚರಣೆ
ದಾವಣಗೆರೆ ದಕ್ಷಿಣ ಕ್ಷೇತ್ರದ ಬಿಜೆಪಿ ಟಿಕೆಟ್ ಲಭಿಸಿದ ಹಿನ್ನೆಲೆ ಅಭ್ಯರ್ಥಿ ಶ್ರೀನಿವಾಸ ದಾಸಕರಿಯಪ್ಪ ಮನೆ ಬಳಿ ಸಂಭ್ರಮ ಮನೆ ಮಾಡಿದೆ. ಟಿಕೆಟ್ ಘೋಷಣೆಯಾಗುತ್ತಿದ್ದಂತೆ ಅವರ ಮನೆ ಮುಂದೆ ಬೆಂಬಲಿಗರು ಬಂದು ಸೇರಿದ್ದು, ಬಾರಿ ಬಿಜೆಪಿ.. ಈ ಬಾರಿ ಬಿಜೆಪಿ ಎಂದು ಘೋಷಣೆ ಕೂಗುತ್ತಿದ್ದಾರೆ. ಅನೇಕರು ತಂಡೋಪತಂಡವಾಗಿ ಆಗಮಿಸಿ ಶ್ರೀನಿವಾಸ್ ದಾಸಕರಿಯಪ್ಪಗೆ ಅಭಿನಂದನೆ ಸಲ್ಲಿಸಿದ್ದಾರೆ.
ಇದನ್ನೂ ಓದಿ: ಇವರು ನೀರಲ್ಲಿ ಬಿದ್ದು ಸತ್ತ ಪ್ರೇಮಿಗಳಲ್ಲ: ಇದು ಪ್ರೀ ವೆಡ್ಡಿಂಗ್ ಫೋಟೋ ಶೂಟ್ ಭಾರಿ ವೈರಲ್
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ