ವಾಣಿಜ್ಯನಗರಿ ಹುಬ್ಬಳ್ಳಿಯಲ್ಲಿ ಕಳ್ಳತನ ಹಾವಳಿ ಹೆಚ್ಚಾಗಿದೆ. ಮನೆಯಲ್ಲಿ ಯಾರೂ ಇಲ್ಲದ ವೇಳೆಗೆ ಮನೆಗೆ ನುಗ್ಗುತ್ತಿದ್ದ ಕಳ್ಳರು ಈಗ ಮನೆಯಲ್ಲಿದ್ದವರನ್ನ ಕಟ್ಟಿಹಾಕಿ ದರೋಡೆ ಮಾಡಿರುವ ಪ್ರಕರಣವೊಂದು ಬೆಳಕಿಗೆ ಬಂದಿದೆ.
ವರದಿ : ಪರಮೇಶ್ವರ ಅಂಗಡಿ ಏಷ್ಯಾನೆಟ್ ಸುವರ್ಣ ನ್ಯೂಸ್ ಧಾರವಾಡ
ಹುಬ್ಬಳ್ಳಿ (ಸೆ.21) : ವಾಣಿಜ್ಯನಗರಿ ಹುಬ್ಬಳ್ಳಿಯಲ್ಲಿ ಕಳ್ಳತನ ಹಾವಳಿ ಹೆಚ್ಚಾಗಿದೆ. ಮನೆಯಲ್ಲಿ ಯಾರೂ ಇಲ್ಲದ ವೇಳೆಗೆ ಮನೆಗೆ ನುಗ್ಗುತ್ತಿದ್ದ ಕಳ್ಳರು ಈಗ ಮನೆಯಲ್ಲಿದ್ದವರನ್ನ ಕಟ್ಟಿಹಾಕಿ ದರೋಡೆ ಮಾಡಿರುವ ಪ್ರಕರಣವೊಂದು ಬೆಳಕಿಗೆ ಬಂದಿದೆ.
ಹುಬ್ಬಳ್ಳಿ ರಾಣಿ ಚನ್ನಮ್ಮ ಮೈದಾನದಲ್ಲಿ ಗಣಪತಿ ಪ್ರತಿಷ್ಠಾಪನೆ ವಿಚಾರದಲ್ಲಿ ಇಂದು ಮೂರನೇಯ ದಿನ ಗಣಪತಿ ವಿಸರ್ಜನೆ ಇತ್ತು. ಪೋಲಿಸರೆಲ್ಲರೂ ಬಂದೋಬಸ್ತನಲ್ಲಿ ನಿಯೋಜನೆ ಗೊಂಡಿದ್ದರು. ಇದನ್ನೆ ಬಂಡವಾಳ ಮಾಡಿಕೊಂಡ ಕಳ್ಳರು ಮನೆಯವರೆನ್ನೆಲ್ಲ ಗ್ರಿಲ್ ಗೆ ಕಟ್ಟಿ ಹಾಕಿ ಸಿನಿಮಾ ಸ್ಟೈಲ್ ನಲ್ಲಿ ಕಳ್ಳತನ ಮಾಡಿದ್ದಾರೆ..
ಕೋಲಾರ: ಕೇವಲ 10 ಇಂಚು ಜಾಗಕ್ಕೆ ನಡೆದ ಜಗಳ, ಕೊಲೆಯಲ್ಲಿ ಅಂತ್ಯ!
ಮನೆಯ ಸದಸ್ಯರನ್ನು ಕಟ್ಟಿಹಾಕಿ ಬರೋಬ್ಬರಿ ಒಂದೂವರೆ ಕೋಟಿ ರೂಪಾಯಿ ಮೌಲ್ಯದ ಚಿನ್ನಾಭರಣ, ನಗದು ದರೋಡೆ ಮಾಡಿರುವ ಘಟನೆ ಹುಬ್ಬಳ್ಳಿಯ ಬಸವೇಶ್ವರ ನಗರದ ಲಕ್ಷ್ಮೀ ಲೇಔಟ್ ನಲ್ಲಿ ನಡೆದಿದೆ. ಉಲ್ಲಾಸ ದೊಡ್ಡಮನಿ ಎಂಬುವವರ ಮನೆಯಲ್ಲಿ ದರೋಡೆ ನಡೆದಿದ್ದು, ವಿದ್ಯಾ ಮಂದಿರ ಬುಕ್ ಡಿಪೋ ಮಾಲೀಕ ಉಲ್ಲಾಸ ದೊಡ್ಡಮನಿಯವರ ಮನೆಯ ಕಿಟಕಿಯ ಕಬ್ಬಿಣದ ಗ್ರೀಲ್ ಕಟ ಮಾಡಿ ಮನೆಹೊಕ್ಕು 6 ಜನರನ್ನ ಕಟ್ಟಿ ಹಾಕಿ ದರೋಡೆ ಮಾಡಿದ್ದಾರೆ.
ಸುಮಾರು ಎಂಟು ಜನ ಡಕಾಯಿತರಿಂದ ಕೃತ್ಯ ನಡೆದಿದ್ದು, ಈದ್ಗಾ ಮೈದಾನದಲ್ಲಿ ಪ್ರತಿಷ್ಠಾಪನೆಯಾದ ಗಣೇಶನನೇ ಟಾರ್ಗೆಟ್ ಮಾಡಿಕೊಂಡು ಕಳ್ಳತನಕ್ಕೆ ಮುಂದಾಗಿದ್ದು, ಪೊಲೀಸರು ಈದ್ಗಾ ಮೈದಾನದ ಗಣೇಶನ ವಿಸರ್ಜನೆಯಲ್ಲಿ ಬ್ಯೂಶಿ ಆಗಿರುವುದನ್ನು ಬಂಡವಾಳ ಮಾಡಿಕೊಂಡು ದರೋಡೆ ನಡೆಸಿದ್ದಾರೆ.
ಶಿವಮೊಗ್ಗ: ಒಂಟಿ ಮನೆ ದರೋಡೆಗೆ ಯತ್ನ, ಪಶ್ಚಿಮ ಬಂಗಾಳ ವ್ಯಕ್ತಿ ಬಂಧನ
ಗಣೇಶನ ವಿಸರ್ಜನೆಗೆ ಐದು ಸಾವಿರ ಪೊಲೀಸರ ನಿಯೋಜನೆ ಮಾಡಲಾಗಿದ್ದು, ಇದರಿಂದಾಗಿ ಗಸ್ತು ತಿರುಗಲು ಪೊಲೀಸರ ಕೊರತೆ ಉಂಟಾಗಿದೆ. ಇದನ್ನೆ ಬಂಡವಾಳಗಿಟ್ಟುಕೊಂಡ ಡಾಕಾಯಿತರು ದರೋಡೆ ಮಾಡಿದ್ದಾರೆ. ಸ್ಥಳಕ್ಕೆ ಗೋಕುಲ ರೋಡ್ ಪೊಲೀಸರ ಭೇಟಿ ಪರಿಶೀಲನೆ ನಡೆಸುತ್ತಿದ್ದಾರೆ. ಇನ್ನು ಅವಳಿ ನಗರದಲ್ಲಿ ಇಂತಹ ಕಳ್ಳರು ದಿನದಿಂದ ದಿನ್ನಕೆ ಹೆಚ್ಚುತ್ತಿದ್ದಾರೆ..ಪೋಲಿಸ್ ಕಮಿಷನರ್ ಅವರು ಸೂಕ್ತವಾದ ಕ್ರಮವನ್ನ ಕೈಗೊಂಡು ಕಳ್ಳರಿಗೆ ಹೆಡೆಮೂರಿ ಕಟ್ಟಬೇಕಿದೆ..