ಇಂಜಿನಿಯರ್‌ಗಳು ರೈತರಿಗೆ ನ್ಯಾಯ ಒದಗಿಸಬೇಕು: ಸಚಿವ ದರ್ಶನಾಪುರ

By Ravi Janekal  |  First Published Sep 21, 2023, 4:37 PM IST

ಇಂದು ಭಾರತರತ್ನ ಸರ್ ಎಂ.ವಿಶ್ವೇಶ್ವರಯ್ಯ ಅವರ 163 ನೇ ಜನ್ಮದಿನದ ಪ್ರಯುಕ್ತ ಇಂಜಿನಿಯರ್ಸ್ ದಿನಾಚರಣೆಯನ್ನು ಮಾಡಲಾಯಿತು. ಕೃಷ್ಣಾ ಭಾಗ್ಯ ಜಲ ನಿಗಮ ನಿಯಮಿತಿ(KBJNL) ವತಿಯಿಂದ ಯಾದಗಿರಿ ಜಿಲ್ಲೆಯ ಶಹಾಪುರದ ಭೀಮರಾಯನಗುಡಿ ಕೃಷಿ ಮಹಾವಿದ್ಯಾಲಯ ಸಭಾಂಗಣದಲ್ಲಿ ಇಂಜಿನಿಯರ್‌ ದಿನಾಚರಣೆಯನ್ನು ಆಚರಣೆ ಮಾಡಲಾಯಿತು. 


ವರದಿ: ಪರಶುರಾಮ ಐಕೂರ್, ಏಷ್ಯಾನೆಟ್ ಸುವರ್ಣ ನ್ಯೂಸ್

ಯಾದಗಿರಿ (ಸೆ.21): ಇಂದು ಭಾರತರತ್ನ ಸರ್ ಎಂ.ವಿಶ್ವೇಶ್ವರಯ್ಯ ಅವರ 163 ನೇ ಜನ್ಮದಿನದ ಪ್ರಯುಕ್ತ ಇಂಜಿನಿಯರ್ಸ್ ದಿನಾಚರಣೆಯನ್ನು ಮಾಡಲಾಯಿತು. ಕೃಷ್ಣಾ ಭಾಗ್ಯ ಜಲ ನಿಗಮ ನಿಯಮಿತಿ(KBJNL) ವತಿಯಿಂದ ಯಾದಗಿರಿ ಜಿಲ್ಲೆಯ ಶಹಾಪುರದ ಭೀಮರಾಯನಗುಡಿ ಕೃಷಿ ಮಹಾವಿದ್ಯಾಲಯ ಸಭಾಂಗಣದಲ್ಲಿ ಇಂಜಿನಿಯರ್‌ ದಿನಾಚರಣೆಯನ್ನು ಆಚರಣೆ ಮಾಡಲಾಯಿತು. 

Latest Videos

undefined

ದೇವೇಗೌಡರು(HD Devegowda) ಜಲಸಂಪನ್ಮೂಲ ಸಚಿವರಿದ್ದಾಗ ನಾನು ಇಂಜಿನಿಯರ್ ಆಗಿದ್ದೆ: ಸಚಿವ ದರ್ಶನಾಪುರ

ಇಂದು ಶಹಾಪುರದ ಭೀಮರಾಯನಗುಡಿ ಸಭಾಂಗಣದಲ್ಲಿ ನಡೆದ ಇಂಜಿನಿಯರ್ ದಿನಾಚರಣೆ ಯಲ್ಲಿ ಸಣ್ಣ ಕೈಗಾರಿಕೆ ಮತ್ತು ಸಾರ್ವಜನಿಕ ಉದ್ಯಮಿ ಹಾಗೂ ಯಾದಗಿರಿ ಜಿಲ್ಲಾ ಉಸ್ತುವಾರಿ ಸಚಿವ ಶರಣಬಸಪ್ಪ ದರ್ಶನಾಪುರ ಭಾಗವಹಿಸಿದರು. ಈ ವೇಳೆ ಸಚಿವ ದರ್ಶನಾಪುರ ಅವರಿಗೆ ಇಂಜಿನಿಯರ್ ಗಳು ವಿಶೇಷ ಸನ್ಮಾನ ಮಾಡಿದರು. 

ಅಭಿವೃದ್ಧಿ ಅಲ್ಲ, ಭಾವನಾತ್ಮಕ ವಿಷಯದಿಂದ ಚುನಾವಣೆ ಗೆಲ್ಲುವ ತಂತ್ರ ಬಿಜೆಪಿಯದ್ದು: ದರ್ಶನಾಪೂರ

ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು ತಮ್ಮ ಇಂಜಿನಿಯರ್ ನೆನಪುಗಳನ್ನು ಸ್ಮರಿಸಿದರು. ನಾನು 1975 ನೇ ಇಸವಿಯಲ್ಲಿ  ಇಂಜಿನಿಯರಿಂಗ್ ಮುಗಿಯಬೇಕಿತ್ತು. ಆದ್ರೆ ಇಂಜಿನಿಯರ್ ಮುಗಿಯಲು ಒಂದು ವರ್ಷ ತಡವಾಯಿತು. ಯಾಕಂದ್ರೆ, 5 ವರ್ಷದ ಕೋರ್ಸ್ 6 ವರ್ಷವಾಯಿತು. ಆ ಸಂದರ್ಭದಲ್ಲಿ ಜಲಸಂಪನ್ಮೂಲ ಇಲಾಖೆಯಲ್ಲಿ ನೇರ ನೇಮಕಾತಿಗಳಾದವು. ಮಾಜಿ ಪ್ರಧಾನಿ ಹೆಚ್.ಡಿ.ದೇವೆಗೌಡ ಅವರು ಆಗ ಜಲಸಂಪನ್ಮೂಲ ಸಚಿವರಾಗಿದ್ದರು. ಲಿಪ್ಟ್ ಎರಿಗೇಷನ್ ಡಿಪಾಟ್೯ಮೆಂಟ್ ನಲ್ಲಿ ನಾನು ಕೆಲಸ ಮಾಡಿದ್ದೇನೆ ಎಂದು ಇಂಜಿನಿಯರ್ ಗಳ ಮುಂದೆ ತಮ್ಮ ಇಂಜಿನಿಯರ್ ಜೀವನದ ಕ್ಷಣವನ್ನು ನೆನಪಿಸಿಕೊಂಡರು.

ಅನಿವಾರ್ಯವಾಗಿ ರಾಜಕೀಯಕ್ಕೆ ಬಂದೆ: ದರ್ಶನಾಪುರ

ನಾನು ಜಲಸಂಪನ್ಮೂಲ ಇಲಾಖೆಯಲ್ಲಿ ಇಂಜಿನಿಯರ್ ಆಗಿ ಕಾರ್ಯನಿರ್ವಹಿಸುತ್ತಿದೆ. ಕೆಲವು ವರ್ಷ, ಕೆಲವು ಜಿಲ್ಲೆಗಳ ಕೆಲಸ ಮಾಡಿದ್ದೇನೆ. 1988 ರಲ್ಲಿ ನಮ್ಮ ತಂದೆಯವರು ತೀರಿಕೊಂಡರು, ಆಗ ಅನಿವಾರ್ಯವಾಗಿ ನಾನು ರಾಜಕೀಯಕ್ಕೆ ಬರಬೇಕಾಯಿತು. ಜನರ ಮೂಲಕ ಆಯ್ಕೆಯಾದ  ಚುನಾಯಿತ ಪ್ರತಿನಿಧಿಗಳದ್ದು ಕೂಡ ಸಮಾಜದ ಮೇಲೆ ಒಂದು ದೊಡ್ಡ ಜವಾಬ್ದಾರಿ ಇದೆ. ಇವತ್ತು ನಾವೆಲ್ಲರೂ ಸರ್ಕಾರದ ಮೂಲಕ ಜನರಿಗೆ ನ್ಯಾಯ ಒದಗಿಸುವ ಕೆಲಸ ಮಾಡಬೇಕಿದೆ ಎಂದು ಹೇಳಿದರು.

ಇಂಜಿನಿಯರ್ಸ್ ರೈತರಿಗೆ ನ್ಯಾಯ ಒದಗಿಸಬೇಕು: ಸಚಿವ ಶರಣಬಸಪ್ಪ ದರ್ಶನಾಪುರ

ಇಂಜಿನಿಯರ್ಸ್ ಪಾತ್ರ ಸಮಾಜದಲ್ಲಿ ಬಹುಮುಖ್ಯವಾಗಿದೆ. ಯಾಕಂದ್ರೆ ಜಲಸಂಪನ್ಮೂಲ ಇಲಾಖೆಗೂ ರೈತರಿಗೆ ಅವುನಾಭಾವ ಸಂಬಂಧವಿದೆ. ರೈತರು ಉತ್ತಮವಾದ ಬೆಳೆ ಬೆಳೆಯಬೇಕಾದ್ರೆ ನೀರು ಬಹಳ ಮುಖ್ಯ. ರೈತರಿಗೆ ಬೇಕಾದ ನೀರನ್ನು ಸಮರ್ಪಕವಾಗಿ ಪೊರೈಸಲು ಇಂಜಿನಿಯರ್ ಗಳು ಮಾಡುವ ಫ್ಲಾನ್ ಗಳು ಬಹಲಕ ಮುಖ್ಯ. ಅದರಲ್ಲೂ ನಮ್ಮ ಭಾಗದಲ್ಲಿ ಇಂಜಿನಿಯಸ್೯ ಮುಖಾಂತರ ಸರ್ಕಾರದ ಹಣಕಾಸಿನ ಇತಿಮಿತಿಯಲ್ಲಿ ರೈತರಿಗೆ ನ್ಯಾಯ ಒದಗಿಸುವಂತಹ ಕೆಲಸ ಮಾಡಬೇಕಾಗಿದೆ.  

ಇಂಡಿಯಾ ಹೆಸರು ಬದಲಾವಣೆ: ಕೇಂದ್ರದ ವಿರುದ್ಧ ಸಚಿವ ದರ್ಶನಾಪೂರ ವಾಗ್ದಾಳಿ..!

ಸದ್ಯ ನಮ್ಮ ಡ್ಯಾಂ ನಲ್ಲಿ ಎಷ್ಟು ನೀರು ಇದೆ..? ನಮ್ಮಲ್ಲಿರುವ ನೀರಿನ ಮಟ್ಟ ಹೇಗಿದೆ..? ನಾವು ಬಳಸುವ ನೀರು ಜೊತೆಗೆ ಮುಂದೆ ನೀರು ಎಷ್ಟು ಹರಿಸಬಹುದು ಎಂಬ ಸೂಷ್ಮತೆಯನ್ನು ಇಂಜಿನಿಯರ್ಸ್ ಅರಿಯಬೇಕು. ಜಮೀನುಗಳಿಗೆ ಒದಗಿಸಯವ ನೀರು ಪೋಲಾಗದಂತೆ ನೋಡಿ ಮುಂದೆ ನೀರು ಹರಿಸಿದಾಗ ಮಾತ್ರ ಇನ್ನು ಹೆಚ್ಚು ಪ್ರದೇಶಕ್ಕೆ ನೀರು ಒದಗಿಸಲು ಅನುಕೂಲವಾಗುತ್ತದೆ ಎಂದು ಸಚಿವ ಶರಣಬಸಪ್ಪ ದರ್ಶನಾಪುರ ರೈತರು ಹಾಗೂ ಇಂಜಿನಿಯರ್ ಗಳ ನಡುವಿನ ಸಂಬಂಧವನ್ನು ವಿವರಿಸಿದರು.

click me!