
ಹುಬ್ಬಳ್ಳಿ: ಪಾಕಿಸ್ತಾನಕ್ಕೆ ಬಾಂಬ್ ಹಾಕಲು ನಮ್ಮವರೂ ಹೋಗಲ್ಲ, ಬಿಜೆಪಿಯವರು ಹೋಗುವುದಿಲ್ಲ. ಬಾಂಬ್ ಹಾಕಲು ಸೈನಿಕರಿದ್ದಾರೆ ಎಂದು ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ಹೇಳಿದರು.
ಪಾಕಿಸ್ತಾನಕ್ಕೆ ಬಾಂಬ್ ಕಟ್ಟಿಕೊಂಡು ಹೋಗುವುದಾಗಿ ಸಚಿವ ಜಮೀರ್ ಹೇಳಿಕೆ ಕುರಿತಂತೆ ನಗರದಲ್ಲಿ ಪ್ರತಿಕ್ರಿಯೆ ನೀಡಿದ ಅವರು, ಬಾಂಬ್ ಕೊಟ್ಟರೆ ನಾನು ಹಾಕಿ ಬರುತ್ತೇನೆ ಎಂದು ಎಲ್ಲರೂ ಹೇಳುತ್ತಾರೆ. ಹಾಗಂತ ನಮ್ಮವರೂ ಹೋಗುವುದಿಲ್ಲ, ಬಿಜೆಪಿಯವರು ಹೋಗುವುದಿಲ್ಲ. ದೇಶ ರಕ್ಷಣೆಗೆ 22 ಲಕ್ಷ ಸೈನಿಕರಿದ್ದಾರೆ. ಅವರ ಕೆಲಸವನ್ನು ಅವರು ಮಾಡುತ್ತಾರೆ ಎಂದರು.
ಪಹಲ್ಗಾಮ್ ಉಗ್ರರ ದಾಳಿಗೆ ಪ್ರತೀಕಾರವಾಗಿ ಪಾಕಿಸ್ತಾನದ ವಿರುದ್ಧ ಯುದ್ಧ ಮಾಡುವ ವಿಚಾರ ಕೇಂದ್ರಕ್ಕೆ ಬಿಟ್ಟಿದ್ದು, ಯಾವಾಗ ಏನು ಮಾಡಬೇಕು ಅಂತ ಅವರು ನಿರ್ಧಾರ ಮಾಡುತ್ತಾರೆ. ಕೇಂದ್ರ ಸರ್ಕಾರ ಸೂಕ್ತ ಸಮಯದಲ್ಲಿ ಸೂಕ್ತ ನಿರ್ಧಾರ ಕೈಗೊಳ್ಳುತ್ತದೆ ಎಂದರು.
ಜಾತಿ ಗಣತಿಯಲ್ಲಿ ಬಿಜೆಪಿ ಯೂಟರ್ನ್ ಹೊಡೆದಿದೆ. ಏಕಾಏಕಿ ಅವರಿಗೆ ಜಾತಿ ಗಣತಿ ಬಗ್ಗೆ ಪ್ರೀತಿ ಬಂದಿದೆ. ನಾವು ಮಾಡುವಾಗ ವಿರೋಧ ಮಾಡಿದ್ದರು. ಇದೀಗ ದೂರದೃಷ್ಟಿಯಿದೆ ಎಂದು ಹೇಳುತ್ತಿದ್ದಾರೆ ಎಂದರು.
ಇದನ್ನೂ ಓದಿ: 1984ರ ಸಿಖ್ ವಿರೋಧಿ ದಂಗೆ ರಾಹುಲ್ ಗಾಂಧಿ ತಪ್ಪೊಪ್ಪಿಗೆ | ಗಲಭೆಯಲ್ಲಿ ಭಾಗಿಯಾದ ಸ್ಯಾಮ್ ಪಿತ್ರೋಡಾ ಉಚ್ಚಾಟಿಸಿ ನೋಡೋಣ: ಬಿಜೆಪಿ
ಪರಿಹಾರ ಕೊಟ್ಟರೆ ತಪ್ಪೇನು?
ಮಂಗಳೂರಿನಲ್ಲಿ ಮೃತ ವ್ಯಕ್ತಿಗಳಿಗೆ ಪರಿಹಾರ ರಾಜಕೀಯ ವಿಚಾರವಾಗಿ ಪ್ರತಿಕ್ರಿಯಿಸಿ, ಮೃತ ವ್ಯಕ್ತಿಗೆ ಪರಿಹಾರ ಕೊಟ್ಟರೆ ತಪ್ಪೇನು? ಎಂದು ಪ್ರಶ್ನಿಸಿದ ಅವರು, ಸರ್ಕಾರ ಹಿಂದೂ- ಮುಸ್ಲಿಂ ಅಂತ ಬೇಧ- ಭಾವ ಮಾಡುವುದಿಲ್ಲ. ಪೊಲೀಸರಿಗೆ ಫ್ರೀ ಹ್ಯಾಂಡ್ ಕೊಡಬೇಕು ಎಂದಿರುವ ಕೇಂದ್ರ ಸಚಿವ ಹೇಳಿಕೆಗೆ ಪ್ರತಿಕ್ರಿಯಿಸಿ, ಈ ಕುರಿತು ಈಗಾಗಲೇ ಪ್ರಕರಣ ದಾಖಲಿಸಲಾಗಿದ್ದು, ಪೊಲೀಸರು ತನಿಖೆ ಮಾಡುತ್ತಿದ್ದಾರೆ. ಅವರಿಗೆ ಫ್ರೀ ಹ್ಯಾಂಡ್ ಕೊಟ್ಟಿದ್ದರಿಂದಲೇ ಅಷ್ಟು ಬೇಗ ಆರೋಪಿಗಳನ್ನು ಬಂಧಿಸಿದ್ದಾರೆ ಎಂದರು.
ಜಾರಕಿಹೊಳಿ ಕೆಪಿಸಿಸಿ ಅಧ್ಯಕ್ಷ: ಸಚಿವ ಸತೀಶ ಜಾರಕಿಹೊಳಿ ಮುಂದಿನ ಕೆಪಿಸಿಸಿ ಅಧ್ಯಕ್ಷ ಎಂದು ಕಾಂಗ್ರೆಸ್ ಕಾರ್ಯಕರ್ತರು ವಿಮಾನ ನಿಲ್ದಾಣದಲ್ಲಿ ಘೋಷಣೆ ಕೂಗಿದರು. ವಿಮಾನ ನಿಲ್ದಾಣದಿಂದ ಸಚಿವ ಜಾರಕಿಹೊಳಿ ಹೊರಬರುತ್ತಿದ್ದಂತೆ ಕಾಂಗ್ರೆಸ್ ಕಾರ್ಯಕರ್ತರು ಜೋರಾಗಿ ಘೋಷಣೆ ಕೂಗಿದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ