ಭೂಗತ ಪಾತಕಿ ಬನ್ನಂಜೆ ರಾಜಗೆ ತುರ್ತು ಪೆರೋಲ್‌, ತಂದೆಯ ಅಂತ್ಯಕ್ರಿಯೆಗೆ ಉಡುಪಿಗೆ ಆಗಮನ

Published : May 04, 2025, 04:11 PM IST
ಭೂಗತ ಪಾತಕಿ ಬನ್ನಂಜೆ ರಾಜಗೆ ತುರ್ತು ಪೆರೋಲ್‌, ತಂದೆಯ ಅಂತ್ಯಕ್ರಿಯೆಗೆ ಉಡುಪಿಗೆ ಆಗಮನ

ಸಾರಾಂಶ

ತಂದೆ ಸುಂದರ ಶೆಟ್ಟಿ ನಿಧನದ ಹಿನ್ನೆಲೆಯಲ್ಲಿ ಜೀವಾವಧಿ ಶಿಕ್ಷೆ ಅನುಭವಿಸುತ್ತಿರುವ ಭೂಗತ ಪಾತಕಿ ಬನ್ನಂಜೆ ರಾಜ 14 ದಿನಗಳ ಪೆರೋಲ್ ಮೇಲೆ ಉಡುಪಿಗೆ ಆಗಮಿಸಿ, ಮಲ್ಪೆಯಲ್ಲಿ ಅಂತ್ಯಕ್ರಿಯೆ ನೆರವೇರಿಸಿದ್ದಾನೆ. ಬೆಳಗಾವಿ ಹಿಂಡಲಗಾ ಜೈಲಿನಲ್ಲಿದ್ದ ರಾಜನಿಗೆ ಹೈಕೋರ್ಟ್ ಪೆರೋಲ್ ಮಂಜೂರು ಮಾಡಿದೆ. ಕಟ್ಟುನಿಟ್ಟಿನ ಷರತ್ತುಗಳೊಂದಿಗೆ ಮೇ ೧೪ರವರೆಗೆ ಪೆರೋಲ್ ನೀಡಲಾಗಿದೆ.

ಉಡುಪಿ (ಮೇ.4): ಭೂಗತ ಪಾತಕಿ ಬನ್ನಂಜೆ ರಾಜಾ ತಂದೆ ವಿಧಿವಶವಾಗಿರುವ ಹಿನ್ನೆಲೆಯಲ್ಲಿ ಜೈಲಿನಲ್ಲಿದ್ದ ಭೂಗತ ಪಾತಕಿ ಬನ್ನಂಜೆ ರಾಜ ಪೆರೋಲ್ ಮೇಲೆ ತನ್ನ ಹುಟ್ಟೂರಿಗೆ ಬಂದಿದ್ದಾನೆ. ತನ್ನ ತಂದೆ ಸುಂದರ ಶೆಟ್ಟಿಗಾರ್ (86) ಏಪ್ರಿಲ್ 27ರಂದು ಮೃತಪಟ್ಟ ಹಿನ್ನೆಲೆಯಲ್ಲಿ 14 ದಿನಗಳ ಪೆರೋಲ್ ರಜೆಯಲ್ಲಿ  ಉಡುಪಿಗೆ ಆಗಮಿಸಿದ್ದು, ಮಲ್ಪೆ ಬಾಪುತೋಟದಲ್ಲಿ ಸುಂದರ ಶೆಟ್ಟಿಗಾರ್ ಅಂತಿಮ ವಿಧಿ ವಿಧಾನ ನೆರವೇರಿದೆ. ಮಲ್ಪೆ ಹಿಂದೂ ರುದ್ರ ಭೂಮಿಯಲ್ಲಿ ಬನ್ನಂಜೆ ರಾಜಾ ತನ್ನ ತಂದೆಯ ಅಂತ್ಯಸಂಸ್ಕಾರ ನೆರವೇರಿಸಿದ್ದಾನೆ.  ಕುಟುಂಬ ಸದಸ್ಯರು ನೂರಾರು ಆಪ್ತರು ಗ್ರಾಮಸ್ಥರು ಈ ವೇಳೆ ಭಾಗಿಯಾಗಿದ್ದರು.

ಉತ್ತರ ಕನ್ನಡ ಜಿಲ್ಲೆಯ ಅಂಕೋಲಾದ ಉದ್ಯಮಿ ಆರ್‌.ಎನ್‌.ನಾಯಕ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ  ಜೀವಾವಧಿ ಶಿಕ್ಷೆ ಅನುಭವಿಸುತ್ತಿದ್ದ ಬನ್ನಂಜೆ ರಾಜ ಬೆಳಗಾವಿಯಲ್ಲಿ ಹಿಂಡಲಗಾ ಜೈಲಿನಲ್ಲಿದ್ದ. ತಂದೆ ತಂದೆ ಸುಂದರ ಶೆಟ್ಟಿ ಮರಣದ ಹಿನ್ನೆಲೆ  ಅಂತ್ಯಸಂಸ್ಕಾರದಲ್ಲಿ ಭಾಗಿಯಾಗಬೇಕೆಂದು ಹೈಕೋರ್ಟ್‌ಗೆ ಪೆರೋಲ್ ಅರ್ಜಿ ಸಲ್ಲಿಸಿದ್ದ. ಕೋಟ್ ಪೆರೋಲ್ ನೀಡಿದ್ದು, ಬಿಗಿ ಪೊಲೀಸ್ ಭದ್ರತೆಯಲ್ಲಿ ಬನ್ನಂಜೆ ರಾಜಾನನ್ನು ಉಡುಪಿಗೆ ಕರೆತರಲಾಗಿದೆ. ಹೀಗಾಗಿ  ಪೆರೋಲ್ ಮೇಲೆ ಮನೆಯಲಿ ಇರಲಿದ್ದು, ಮೇ.14ರವರೆಗೆ ಇರಲಿದ್ದಾನೆ.  ಈ ಪೆರೋಲ್ ಅವಧಿಯಲ್ಲಿ ಹಲವಾರು ಕಟ್ಟುನಿಟ್ಟಿನ ಷರತ್ತುಗಳನ್ನು ವಿಧಿಸಲಾಗಿದೆ. ಮೊಬೈಲ್ ಫೋನ್ ಬಳಸಲು ಅಥವಾ ಇಂಟರ್ನೆಟ್ ಬಳಸಲು ಅನುಮತಿ ಇಲ್ಲ. ಅಂತ್ಯಕ್ರಿಯೆಯ ಆಚರಣೆಗಳಲ್ಲಿ ಪಾಲ್ಗೊಳ್ಳುವುದನ್ನು ಹೊರತುಪಡಿಸಿ, ಅವರು ತಮ್ಮ ಮನೆಯಿಂದ ಹೊರಗೆ ಹೋಗಲು ಅವಕಾಶವಿಲ್ಲ.

2015ನೇ ಇಸವಿಯಲ್ಲಿ ಭೂಗತ ಪಾತಕಿ ಬನ್ನಂಜೆ ರಾಜನನ್ನು ದಕ್ಷಿಣ ಆಫ್ರಿಕಾದ ಮೊರಾಕೋ ದೇಶದಲ್ಲಿ ಬಂಧಿಸಿದ್ದು, ಬಳಿಕ ಭಾರತಕ್ಕೆ ಹಸ್ತಾಂತರಿಸಲಾಗಿತ್ತು. ಭಾರತಕ್ಕೆ ಹಸ್ತಾಂತರಿಸಿದ ನಂತರ ಆತನ ವಿರುದ್ಧ ದಾಖಲಾದ ಎಲ್ಲ ಪ್ರಕರಣಗಳಲ್ಲಿ ಪೊಲೀಸರು ಹೆಚ್ಚುವರಿ ತನಿಖೆ ನಡೆಸಿ ಹೆಚ್ಚುವರಿ ದೋಷಾರೋಪಣಾ ಪಟ್ಟಿಸಲ್ಲಿಸಿದ್ದರು. ಬನ್ನಂಜೆ ರಾಜಾ ಒಟ್ಟು 23 ಪ್ರಕರಣಗಳಲ್ಲಿ ಜೀವಾವಧಿ ಶಿಕ್ಷೆಗೆ ಒಳಗಾಗಿದ್ದಾನೆ.  ಕೆಲವು ಪ್ರಕರಣವನ್ನು ರದ್ದು ಮಾಡಲಾಗಿದೆ.
 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ನೈಸ್‌ ವಿರುದ್ಧ ಇಳಿವಯಸ್ಸಲ್ಲೂ ಕಾನೂನು ಹೋರಾಟ: ಗೌಡ
ಸಿದ್ದು 2028ರವರೆಗೂ ಸಿಎಂ, ಇಳಿಸಲು ಆಗೋಲ್ಲ: ಜಮೀರ್‌